ಆಪ್ಟಿಮಾ ಸ್ಕೂಟರಿನ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಇಳಿಸಿದ ಹೀರೊ ಎಲೆಕ್ಟ್ರಿಕ್
ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯಾದ ಹೀರೊ ಎಲೆಕ್ಟ್ರಿಕ್ ತನ್ನ ಆಪ್ಟಿಮಾ ಹೆಚ್‌ಎಕ್ಸ್ ಸಿಟಿ ಸ್ಪೀಡ್ ಇ-ಸ್ಕೂಟರಿನ ಬೆಲೆಯನ್ನು ರೂ.14,390ಗಳಷ್ಟು ಇಳಿಸಿದೆ. ಈ ಎಲೆಕ್ಟ್ರಿಕ್ ಸ್ಕೂಟರಿನ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.71,950ಗಳಾಗಿತ್ತು.

ಬೆಲೆ ಇಳಿಕೆಯ ನಂತರ ಈ ಎಲೆಕ್ಟ್ರಿಕ್ ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.57,560ಗಳಾಗಿದೆ. ಇದರಿಂದಾಗಿ ಹೀರೋ ಆಪ್ಟಿಮಾ ಹೆಚ್‌ಎಕ್ಸ್ ಸಿಟಿ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಭಾರತದ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಒಂದಾಗಿದೆ. ಈ ಬೆಲೆ ಇಳಿಕೆಯು ಸೀಮಿತ ಅವಧಿಯವರೆಗೆ ಮಾತ್ರ ಇರಲಿದೆ.

ಹೀರೋ ಆಪ್ಟಿಮಾ ಹೆಚ್‌ಎಕ್ಸ್ ಸಿಟಿ ಸ್ಪೀಡ್ ಇ-ಸ್ಕೂಟರ್ 550 ವ್ಯಾಟ್ ಎಲೆಕ್ಟ್ರಿಕ್ ಮೋಟರ್ ಹಾಗೂ 51.2 ವೋಲ್ಟ್ ನ / 30 ಆಂಪಿಯರ್ ಲಿಥಿಯಂ-ಐರನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಈ ಎಲೆಕ್ಟ್ರಿಕ್ ಸ್ಕೂಟರ್ ಗರಿಷ್ಠ 42 ಕಿ.ಮೀ ವೇಗದಲ್ಲಿ ಚಲಿಸುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ. ಈ ಸ್ಕೂಟರಿನಲ್ಲಿರುವ ಬ್ಯಾಟರಿಯು 5 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ. ಬ್ಯಾಟರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ ಈ ಸ್ಕೂಟರ್ ಸುಮಾರು 82 ಕಿ.ಮೀಗಳವರೆಗೆ ಚಲಿಸುತ್ತದೆ.

73 ಕೆ.ಜಿ ತೂಕವನ್ನು ಹೊಂದಿರುವ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವೈಟ್, ಗ್ರೇ ಹಾಗೂ ಸಯಾನ್ ಎಂಬ ಮೂರು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಹೀರೋ ಎಲೆಕ್ಟ್ರಿಕ್ ಕಂಪನಿಯು ಆಪ್ಟಿಮಾ ಹೆಚ್‌ಎಕ್ಸ್ ಸಿಟಿ ಸ್ಪೀಡ್ ಇ-ಸ್ಕೂಟರಿನ ಮೇಲೆ ಮೂರು ವರ್ಷಗಳ ವಾರಂಟಿಯನ್ನು ನೀಡುತ್ತದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ತಿಂಗಳಿಗೆ ರೂ.2,999ಗಳ ಚಂದಾದಾರಿಕೆ ಯೋಜನೆಯ ಮೂಲಕ ಖರೀದಿಸಬಹುದು. ಈ ಯೋಜನೆಗಾಗಿ ಕಂಪನಿಯು ಆಟೋವರ್ಡ್ ಟೆಕ್ನಾಲಜೀಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ.

ಇದರ ಜೊತೆಗೆ ಹೀರೋ ಎಲೆಕ್ಟ್ರಿಕ್ ಕಂಪನಿಯು ಮುಂಬೈ ಮೂಲದ ಹಣಕಾಸು ಸಂಸ್ಥೆಯಾದ ಒಡಿಒ ಕ್ಯಾಪಿಟಲ್ ಜೊತೆಗೆ ಪಾಲುದಾರಿಕೆಯನ್ನು ಹೊಂದಿದ್ದು, ತನ್ನ ಉತ್ಪನ್ನಗಳನ್ನು ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಮಾರಾಟ ಮಾಡುತ್ತದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹೀರೋ ಎಲೆಕ್ಟ್ರಿಕ್ ಕಂಪನಿಯ ಪ್ರಕಾರ, ಈ ಪಾಲುದಾರಿಕೆಯು ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಣಕಾಸಿನ ಆಯ್ಕೆಗಳಿಗಿಂತ 30%ನಷ್ಟು ಹೆಚ್ಚಿನ ಹಣವನ್ನು ಆಪ್ಟಿಮಾ ಹೆಚ್‌ಎಕ್ಸ್ ಸಿಟಿ ಸ್ಪೀಡ್ ಇ-ಸ್ಕೂಟರ್‌ನಲ್ಲಿ ಉಳಿಸುತ್ತದೆ.


Click it and Unblock the Notifications








