ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಅಗ್ರಸ್ಥಾನಕ್ಕೇರಿದ ಹೀರೊ ಎಲೆಕ್ಟ್ರಿಕ್

ಹೀರೊ ಎಲೆಕ್ಟ್ರಿಕ್ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ 1,113 ಯುನಿಟ್‌ಗಳ ಮಾರಾಟದೊಂದಿಗೆ 36%ನಷ್ಟು ಪಾಲನ್ನು ಹೊಂದಿ ಮುಂಚೂಣಿಯಲ್ಲಿದೆ. 2020-21ನೇ ಸಾಲಿನ ಮೊದಲ ನಾಲ್ಕು ತಿಂಗಳ ಅವಧಿಯಲ್ಲಿ ಹೀರೊ ಎಲೆಕ್ಟ್ರಿಕ್ ನ ಒಟ್ಟು 3,088 ಯುನಿಟ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಮಾರಾಟವಾಗಿವೆ.

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಅಗ್ರಸ್ಥಾನಕ್ಕೇರಿದ ಹೀರೊ ಎಲೆಕ್ಟ್ರಿಕ್

ಮಾಹಿತಿಯ ಪ್ರಕಾರ ಓಕಿನಾವಾ ಹಾಗೂ ಎಥೆರ್ ಕಂಪನಿಗಳು ಹೀರೊ ಎಲೆಕ್ಟ್ರಿಕ್ ನಂತರದ ಸ್ಥಾನದಲ್ಲಿವೆ. ಈ ಅವಧಿಯಲ್ಲಿ ಓಕಿನಾವಾದ 878 ಯುನಿಟ್ ಹಾಗೂ ಎಥೆರ್ ನ 438 ಯುನಿಟ್‌ಗಳು ಮಾರಾಟವಾಗಿವೆ. ಈ ಮೂಲಕ ಹೀರೊ ಎಲೆಕ್ಟ್ರಿಕ್, ಓಕಿನಾವಾ ಆಟೋ ಟೆಕ್ ಹಾಗೂ ಎಥೆರ್ ಎನರ್ಜಿ ಕಂಪನಿಗಳು 2020ರ ಏಪ್ರಿಲ್-ಜುಲೈ ಅವಧಿಯಲ್ಲಿ ಭಾರತದ ಮೂರು ಅತಿದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ ಎಂದು ವಾಹನ ಪೋರ್ಟಲ್ ಅಂಕಿಅಂಶಗಳು ತಿಳಿಸಿವೆ.

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಅಗ್ರಸ್ಥಾನಕ್ಕೇರಿದ ಹೀರೊ ಎಲೆಕ್ಟ್ರಿಕ್

ಕಡಿಮೆ ವೇಗದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಸೆಗ್ ಮೆಂಟಿನಲ್ಲಿ ಹೀರೊ ಎಲೆಕ್ಟ್ರಿಕ್ 45%ನಷ್ಟು ಪಾಲನ್ನು ಹೊಂದಿದೆ. ಈ ಮೂಲಕ ಒಟ್ಟಾರೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರುಕಟ್ಟೆಯಲ್ಲಿ ಪ್ರಮುಖ ಪಾಲನ್ನು ಹೊಂದಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಅಗ್ರಸ್ಥಾನಕ್ಕೇರಿದ ಹೀರೊ ಎಲೆಕ್ಟ್ರಿಕ್

ಹೊಸ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಗ್ರಾಹಕರು ಸೇರ್ಪಡೆಯಾಗಿದ್ದಾರೆ ಎಂದು ಕಂಪನಿ ಹೇಳಿದೆ. ಇದರ ಪರಿಣಾಮವಾಗಿ ಹಿಂದಿನ ಹಣಕಾಸು ವರ್ಷಕ್ಕಿಂತ ಈ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಕಂಪನಿಯ ಆನ್‌ಲೈನ್ ಮಾರಾಟವು ಆರು ಪಟ್ಟು ಹೆಚ್ಚಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಅಗ್ರಸ್ಥಾನಕ್ಕೇರಿದ ಹೀರೊ ಎಲೆಕ್ಟ್ರಿಕ್

ಈ ಬಗ್ಗೆ ಮಾತನಾಡಿರುವ ಹೀರೊ ಎಲೆಕ್ಟ್ರಿಕ್ ಸಿಇಒ ಸೊಹಿಂದರ್ ಗಿಲ್ ರವರು ನಮ್ಮ ತ್ವರಿತ ಚಿಂತನೆ, ಅಪಾಯಗಳನ್ನು ಎದುರಿಸುವ ಇಚ್ಛಾಶಕ್ತಿ ಹಾಗೂ ಲಾಕ್‌ಡೌನ್‌ನ ಪರಿಣಾಮವನ್ನು ಎದುರಿಸುವ ಸಾಮರ್ಥ್ಯವು ಕಂಪನಿಯನ್ನು ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿಯನ್ನಾಗಿ ಮಾಡಿದೆ ಎಂದು ಹೇಳಿದರು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಅಗ್ರಸ್ಥಾನಕ್ಕೇರಿದ ಹೀರೊ ಎಲೆಕ್ಟ್ರಿಕ್

2020ರ ಏಪ್ರಿಲ್ - ಜುಲೈ ನಡುವೆ ಎಲ್ಲಾ ಸೆಗ್ ಮೆಂಟ್ ಗಳಲ್ಲಿ ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಕಂಪನಿಯು ಅಗ್ರಸ್ಥಾನದಲ್ಲಿದೆ ಎಂದು ಅವರು ಹೇಳಿದ್ದಾರೆ. ಇದು ನಮ್ಮ ಕಠಿಣ ಪರಿಶ್ರಮ ಹಾಗೂ ಅಚಲ ಸಂಕಲ್ಪಕ್ಕೆ ಸಾಕ್ಷಿಯಾಗಿದೆ. 2020ರ ದ್ವಿತೀಯಾರ್ಧದಲ್ಲಿ ನಮ್ಮಲ್ಲಿ ಇನ್ನೂ ಉತ್ತಮವಾದ ಯೋಜನೆಗಳಿವೆ ಎಂದು ಅವರು ಹೇಳಿದ್ದಾರೆ.

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಅಗ್ರಸ್ಥಾನಕ್ಕೇರಿದ ಹೀರೊ ಎಲೆಕ್ಟ್ರಿಕ್

ಹೀರೊ ಎಲೆಕ್ಟ್ರಿಕ್ ಇತ್ತೀಚೆಗೆ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಗಳಿಗಾಗಿ ಚಂದಾದಾರಿಕೆ ಯೋಜನೆಯನ್ನು ಪರಿಚಯಿಸಿದೆ. ಇದರಡಿಯಲ್ಲಿ ಹೀರೊ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ತಿಂಗಳಿಗೆ ರೂ.2,999 ಪಾವತಿಸುವ ಮೂಲಕ ಖರೀದಿಸಬಹುದು. ಈ ಮೊತ್ತದಲ್ಲಿ ಸ್ಕೂಟರ್‌ನ ವಿಮೆ, ಸರ್ವೀಸ್ ಹಾಗೂ ಮೆಂಟೆನೆನ್ಸ್ ವೆಚ್ಚಗಳು ಸಹ ಸೇರಿವೆ.

Most Read Articles

Kannada
English summary
Hero electric releases sales report for April July period. Read in Kannada.
Story first published: Saturday, August 8, 2020, 14:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X