ಹೀರೋ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳಲ್ಲಿ ಸಿಟಿ ಸ್ಪೀಡ್ ಸೆಗ್ಮೆಂಟ್ ಬಿಡುಗಡೆ

ಹೀರೋ ಎಲೆಕ್ಟ್ರಿಕ್ ಕಂಪನಿಯು ತನ್ನ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳಲ್ಲಿ ಸಿಟಿ ಸ್ಪೀಡ್ ಸೆಗ್ಮೆಂಟ್ ಬಿಡುಗಡೆ ಮಾಡಿದ್ದು, ಹೊಸ ಮಾದರಿಯು ಬೆಸ್ಟ್ ಇನ್ ಕ್ಲಾಸ್ ಫೀಚರ್ಸ್‌ನೊಂದಿಗೆ ಅತ್ಯುತ್ತಮ ಮೈಲೇಜ್ ರೇಂಜ್ ಪಡೆದುಕೊಳ್ಳಲು ಸಹಕಾರಿಯಾಗಿದೆ.

ಹೀರೋ ಇವಿ ಸ್ಕೂಟರ್‌ಗಳಲ್ಲಿ ಸಿಟಿ ಸ್ಪೀಡ್ ಸೆಗ್ಮೆಂಟ್ ಬಿಡುಗಡೆ

ಪ್ರಸ್ತುತ ಮಾರುಕಟ್ಟೆಯಲ್ಲಿರುವ ವಿವಿಧ ಎಲೆಕ್ಟ್ರಿಕ್ ಸ್ಕೂಟರ್ ಆವೃತ್ತಿಗಳಿಗೆ ಪೈಪೋಟಿಯಾಗಿ ಸಿಟಿ ಸೆಗ್ಮೆಂಟ್ ಅಭಿವೃದ್ದಿಪಡಿಸಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಕಂಫರ್ಟ್ ಸ್ಪೀಡ್, ಎಕ್ಸೆಂಡ್ ರೇಂಜ್ ಮಾದರಿಗಳೊಂದಿಗೆ ಇದೀಗ ಸಿಟಿ ಸ್ಪೀಡ್ ಮಾದರಿಗಳನ್ನು ಅಭಿವೃದ್ದಿಗೊಳಿಸಿದೆ. ಸಿಟಿ ಸೆಗ್ಮೆಂಟ್‌ನಲ್ಲಿ ಆಪ್ಟಿಮಾ-ಹೆಚ್ಎಕ್ಸ್, ನೆಕ್ಸ್-ಹೆಚ್ಎಕ್ಸ್ ಮತ್ತು ಫೋಟಾನ್-ಹೆಚ್ಎಕ್ಸ್ ಮಾದರಿಗಳು ಖರೀದಿಗೆ ಲಭ್ಯವಿದ್ದು, ಹೊಸ ಸೆಗ್ಮೆಂಟ್ ಸ್ಕೂಟರ್‌ಗಳು ರೂ. 57,570ರಿಂದ ಆರಂಭಗೊಳ್ಳಲಿವೆ.

ಹೀರೋ ಇವಿ ಸ್ಕೂಟರ್‌ಗಳಲ್ಲಿ ಸಿಟಿ ಸ್ಪೀಡ್ ಸೆಗ್ಮೆಂಟ್ ಬಿಡುಗಡೆ

ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಮಟ್ಟದ ಸಬ್ಸಡಿ, ಶೂನ್ಯ ತೆರಿಗೆ ಮತ್ತು ಉಚಿತ ನೋಂದಣಿಯಿಂದಾಗಿ ಇವಿ ವಾಹನಗಳ ಬೆಲೆ ಇತರೆ ರಾಜ್ಯಗಳಿಂತಲೂ ಅಗ್ಗವಾಗಿದ್ದು, ಇತರೆ ರಾಜ್ಯಗಳಲ್ಲಿ ಇವಿ ವಾಹನ ಖರೀದಿಸುವ ಗ್ರಾಹಕರಿಗೂ ಫೇಮ್ 2 ಯೋಜನೆ ಅಡಿ ಸಬ್ಸಡಿ ಮತ್ತು ಜಿಎಸ್‌ಟಿ ವಿನಾಯ್ತಿ ಲಭ್ಯವಿದೆ.

ಹೀರೋ ಇವಿ ಸ್ಕೂಟರ್‌ಗಳಲ್ಲಿ ಸಿಟಿ ಸ್ಪೀಡ್ ಸೆಗ್ಮೆಂಟ್ ಬಿಡುಗಡೆ

ಇದರಿಂದ ಎಲೆಕ್ಟ್ರಿಕ್ ವಾಹನಗಳ ಬಳಕೆಯು ಹೆಚ್ಚುತ್ತಿದ್ದು, ಹೊಸ ಇವಿ ವಾಹನ ಖರೀದಿ ಕೂಡಾ ಕಳೆದ ವರ್ಷಕ್ಕಿಂತಲೂ ಅಧಿಕವಾಗಿದೆ. ಆದರೆ ಬಜೆಟ್ ಬೆಲೆಯಲ್ಲಿ ಉತ್ತಮ ಮೈಲೇಜ್ ರೇಂಜ್ ವಾಹನಗಳ ಸಂಖ್ಯೆ ಕಡಿಮೆಯಿದೆ.

ಹೀರೋ ಇವಿ ಸ್ಕೂಟರ್‌ಗಳಲ್ಲಿ ಸಿಟಿ ಸ್ಪೀಡ್ ಸೆಗ್ಮೆಂಟ್ ಬಿಡುಗಡೆ

ಮಾರುಕಟ್ಟೆಯಲ್ಲಿ ಸದ್ಯ ದುಬಾರಿ ಬೆಲೆಗೆ ಮಾತ್ರವೇ ಉತ್ತಮ ಫೀಚರ್ಸ್‌ನೊಂದಿಗೆ ಹೆಚ್ಚು ಮೈಲೇಜ್ ರೇಂಜ್ ಇವಿ ವಾಹನಗಳು ಮಾರಾಟವಾಗುತ್ತಿದ್ದರೆ ಮತ್ತು ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಇವಿ ವಾಹನಗಳು ಕಡಿಮೆ ವೇಗದೊಂದಿಗೆ ಸಾಧಾರಣ ಮೈಲೇಜ್ ರೇಂಜ್ ಹೊಂದಿವೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಹೀರೋ ಇವಿ ಸ್ಕೂಟರ್‌ಗಳಲ್ಲಿ ಸಿಟಿ ಸ್ಪೀಡ್ ಸೆಗ್ಮೆಂಟ್ ಬಿಡುಗಡೆ

ಈ ಕುರಿತು ಹಲವಾರು ಮಾರುಕಟ್ಟೆ ಅಧ್ಯಯನ ಮಾಡಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಬಜೆಟ್ ಬೆಲೆಯಲ್ಲಿಯೇ ಉತ್ತಮ ಮೈಲೇಜ್ ರೇಂಜ್ ಒದಗಿಸುವ ಪ್ರಯತ್ನದೊಂದಿಗೆ ಹೊಸದಾಗಿ ಸಿಟಿ ಸೆಗ್ಮೆಂಟ್ ಪರಿಚಯಿಸಿದ್ದು, ಸಿಟಿ ಸೆಗ್ಮೆಂಟ್‌ನಲ್ಲಿರುವ ಇವಿ ಸ್ಕೂಟರ್‌ಗಳು 70 ಕಿ.ಮೀ ನಿಂದ 200 ಕಿ.ಮೀ ಮೈಲೇಜ್ ಹೊಂದಿರಲಿವೆ.

ಹೀರೋ ಇವಿ ಸ್ಕೂಟರ್‌ಗಳಲ್ಲಿ ಸಿಟಿ ಸ್ಪೀಡ್ ಸೆಗ್ಮೆಂಟ್ ಬಿಡುಗಡೆ

ಹಾಗೆಯೇ ಹೊಸ ಸೆಗ್ಮೆಂಟ್ ಸ್ಕೂಟರ್‌ಗಳನ್ನು ನಗರ ಪ್ರದೇಶಗಳಲ್ಲಿನ ಏರಿತಗಳಲ್ಲಿ ಸುಲಭವಾಗಿ ರೈಡ್‌ ಒದಗಿಸಲು ಎಂಜಿನ್ ದಕ್ಷತೆಯನ್ನು ಹೆಚ್ಚಿಸಲಾಗಿದ್ದು, ಇವು ಎಲೆಕ್ಟ್ರಿಕ್ ಸ್ಕೂಟರ್ ಖರೀದಿದಾರರ ಪ್ರಮುಖ ಆಕರ್ಷಣೆಯಾಗಲಿದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಹೀರೋ ಇವಿ ಸ್ಕೂಟರ್‌ಗಳಲ್ಲಿ ಸಿಟಿ ಸ್ಪೀಡ್ ಸೆಗ್ಮೆಂಟ್ ಬಿಡುಗಡೆ

ಹೀರೋ ಎಲೆಕ್ಟ್ರಿಕ್ ಕಂಪನಿಯು ಅಭಿವೃದ್ದಿಪಡಿಸಿರುವ ಹೊಸ ಸಿಟಿ ಸೆಗ್ಮೆಂಟ್ ಮಾದರಿಗಳು ಇದೀಗ ದೇಶದ ಪ್ರಮುಖ ನಗರಗಳಲ್ಲಿ 200ಕ್ಕೂ ಡೀಲರ್ಸ್ ಬಳಿ ಖರೀದಿಗೆ ಲಭ್ಯವಿದ್ದು, ಬಜೆಟ್ ಬೆಲೆಯಲ್ಲಿ ಉತ್ತಮ ಫೀಚರ್ಸ್‌ಗಳೊಂದಿಗೆ ಹೆಚ್ಚು ಮೈಲೇಜ್ ರೇಂಜ್ ಮಾದರಿಗಳನ್ನು ಬಯಸುವ ಗ್ರಾಹಕರಿಗೆ ಇವು ಅತ್ಯುತ್ತಮ ಆಯ್ಕೆ ಎನ್ನಬಹುದು.

More from DriveSpark

Article Published On: Monday, October 19, 2020, 12:26 [IST]
English summary
Hero Electric Introduces New ‘City Speed’ Segment With Three Electric Scooters. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+