India
YouTube

ಗ್ರಾಹಕರ ಬೇಡಿಕೆ ಪೂರೈಸಲು ಹೊಸ ಮಾರಾಟ ವಿಧಾನಕ್ಕೆ ಚಾಲನೆ ನೀಡಿದ ಹೀರೋ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಪ್ರಮುಖ ಮಾದರಿಗಳೊಂದಿಗೆ ಮುಂಚೂಣಿಯಲ್ಲಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಗ್ರಾಹಕರ ಬೇಡಿಕೆ ಪೂರೈಸಲು ಈಗಾಗಲೇ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಮಾರಾಟ ಸೌಲಭ್ಯವನ್ನು ವಿಸ್ತರಿಸುತ್ತಿದ್ದು, ಶೋರೂಂಗಳ ಜೊತೆಗೆ ಕಂಪನಿಯು ಇದೀಗ ಗ್ರಾಹಕರ ಮನೆ ಬಾಗಿಲಿಗೆ ಇವಿ ಸ್ಕೂಟರ್ ವಿತರಣೆಗೆ ಚಾಲನೆ ನೀಡಿದೆ.

ಗ್ರಾಹಕರ ಬೇಡಿಕೆ ಪೂರೈಸಲು ಹೊಸ ಮಾರಾಟ ವಿಧಾನಕ್ಕೆ ಚಾಲನೆ ನೀಡಿದ ಹೀರೋ ಎಲೆಕ್ಟ್ರಿಕ್

ದೇಶಾದ್ಯಂತ ಈಗಾಗಲೇ ಪ್ರಮುಖ ನಗರಗಳಲ್ಲಿ ಮಾರಾಟ ಸೌಲಭ್ಯ ಹೊಂದಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಮಾರಾಟ ಸೌಲಭ್ಯ ಲಭ್ಯವಿಲ್ಲದ ನಗರಗಳಲ್ಲಿನ ಗ್ರಾಹಕರ ಬೇಡಿಕೆ ಪೂರೈಕೆಗೆ ಅನುಕೂಲಕರವಾಗುವಂತೆ ಹೈಬ್ರಿಡ್ ವಿತರಣಾ ಮಾದರಿಯನ್ನು ಅಳವಡಿಸಿಕೊಂಡಿದ್ದು, 2023ರ ಅಂತ್ಯಕ್ಕೆ ವಾರ್ಷಿಕವಾಗಿ 2.50 ಲಕ್ಷ ಯುನಿಟ್ ಮಾರಾಟ ಗುರಿಯೊಂದಿಗೆ ಹೊಸ ಸೌಲಭ್ಯಕ್ಕೆ ಚಾಲನೆ ನೀಡಿದೆ.

ಗ್ರಾಹಕರ ಬೇಡಿಕೆ ಪೂರೈಸಲು ಹೊಸ ಮಾರಾಟ ವಿಧಾನಕ್ಕೆ ಚಾಲನೆ ನೀಡಿದ ಹೀರೋ ಎಲೆಕ್ಟ್ರಿಕ್

ಕೋವಿಡ್ ಸಂದರ್ಭದಲ್ಲಿಯೇ ಹೈಬ್ರಿಡ್ ವಿತರಣಾ ಜಾರಿಗೆ ಮುಂದಾಗಿದ್ದ ಹೀರೋ ಎಲೆಕ್ಟ್ರಿಕ್ ಕಂಪನಿಗೆ ಬಿಡಿಭಾಗಗಳ ಪೂರೈಕೆಯಲ್ಲಿನ ಸಮಸ್ಯೆಯು ಹಿನ್ನಡೆ ಉಂಟುಮಾಡಿತ್ತು. ಹೀಗಾಗಿ ಹೋಂ ಡೆಲಿವರಿ ಆಯ್ಕೆಯನ್ನು ಜಾರಿಯಿಂದ ಹಿಂದೆ ಸರಿದಿದ್ದ ಕಂಪನಿಯು ಇದೀಗ ಅಧಿಕೃತವಾಗಿ ಜಾರಿಗೆ ತಂದಿದೆ.

ಗ್ರಾಹಕರ ಬೇಡಿಕೆ ಪೂರೈಸಲು ಹೊಸ ಮಾರಾಟ ವಿಧಾನಕ್ಕೆ ಚಾಲನೆ ನೀಡಿದ ಹೀರೋ ಎಲೆಕ್ಟ್ರಿಕ್

2023ರ ಹಣಕಾಸು ವರ್ಷದ ಅಂತ್ಯಕ್ಕೆ ವಾರ್ಷಿಕವಾಗಿ 2.50 ಲಕ್ಷ ಇವಿ ಸ್ಕೂಟರ್ ಮಾರಾಟ ಗುರಿಹೊಂದಿರುವ ಹೀರೋ ಎಲೆಕ್ಟ್ರಿಕ್ ಕಂಪನಿಗೆ ಹೊಸ ವಿತರಣಾ ಕ್ರಮವು ಸಾಕಷ್ಟು ಅನುಕೂಲಕವಾಗಲಿದ್ದು, ಮುಂದಿನ ಐದು ವರ್ಷಗಳಲ್ಲಿ ಕಂಪನಿಯು ಒಂದು ಮಿಲಿಯನ್ ಅಂದರೆ 10 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟವನ್ನು ನೋಂದಾಯಿಸಬಹುದು ಎಂದು ಅಂದಾಜಿಸಿದೆ.

ಗ್ರಾಹಕರ ಬೇಡಿಕೆ ಪೂರೈಸಲು ಹೊಸ ಮಾರಾಟ ವಿಧಾನಕ್ಕೆ ಚಾಲನೆ ನೀಡಿದ ಹೀರೋ ಎಲೆಕ್ಟ್ರಿಕ್

ಹೀಗಾಗಿ ಕಂಪನಿಯು ತನ್ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಇತ್ತೀಚೆಗೆ ಲೂಧಿಯಾನದಲ್ಲಿ ತನ್ನ ಎರಡನೇ ಉತ್ಪಾದನಾ ಘಟಕವನ್ನು ಸಹ ಆರಂಭಿಸಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಗ್ರಾಹಕರ ಬೇಡಿಕೆ ಪೂರೈಸಲು ಹೊಸ ಮಾರಾಟ ವಿಧಾನಕ್ಕೆ ಚಾಲನೆ ನೀಡಿದ ಹೀರೋ ಎಲೆಕ್ಟ್ರಿಕ್

ಭವಿಷ್ಯದ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿ ಯೋಜನೆಗಾಗಿ ಹೀರೋ ಎಲೆಕ್ಟ್ರಿಕ್ ಕಂಪನಿಯು ಮಹೀಂದ್ರಾ ಗ್ರೂಪ್‌ನೊಂದಿಗೆ ಸಹಭಾಗೀತ್ವ ಯೋಜನೆ ಘೋಷಣೆ ಮಾಡಿದ್ದು, ಹೊಸ ಯೋಜನೆ ಅಡಿಯಲ್ಲಿ ಹೀರೋ ಎಲೆಕ್ಟ್ರಿಕ್ ಕಂಪನಿಯು ಇವಿ ಸ್ಕೂಟರ್ ಉತ್ಪಾದನೆಗೆ ಈಗಾಗಲೇ ಅಧಿಕೃತವಾಗಿ ಚಾಲನೆ ನೀಡಿದೆ.

ಗ್ರಾಹಕರ ಬೇಡಿಕೆ ಪೂರೈಸಲು ಹೊಸ ಮಾರಾಟ ವಿಧಾನಕ್ಕೆ ಚಾಲನೆ ನೀಡಿದ ಹೀರೋ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟದಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಹೊಸ ಮೈಲಿಗಲ್ಲು ಸಾಧಿಸಿದ್ದು, ಇವಿ ಸ್ಕೂಟರ್ ಉತ್ಪಾದನೆಯನ್ನು ಆರಂಭಿಸಿ ಸುಮಾರು 13 ವರ್ಷಗಳನ್ನು ಪೂರೈಸಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಮಾರುಕಟ್ಟೆಯಲ್ಲಿ ಬೇಡಿಕೆ ಪೂರೈಕೆಗಾಗಿ ಉದ್ಯಮ ವಿಸ್ತರಣೆಗಾಗಿ ಮಹತ್ವದ ಯೋಜನೆ ಕೈಗೊಂಡಿದೆ.

ಗ್ರಾಹಕರ ಬೇಡಿಕೆ ಪೂರೈಸಲು ಹೊಸ ಮಾರಾಟ ವಿಧಾನಕ್ಕೆ ಚಾಲನೆ ನೀಡಿದ ಹೀರೋ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಸಕಾಲದಲ್ಲಿ ಪೂರೈಸಲು ಬ್ರ್ಯಾಂಡ್‌ನ ವಿಸ್ತರಣೆ ಯೋಜನೆಗಳ ಭಾಗವಾಗಿ ಹೀರೋ ಎಲೆಕ್ಟ್ರಿಕ್ ಕಂಪನಿಯು ಮಹೀಂದ್ರಾ ಗ್ರೂಪ್‌ ಜೊತೆಗೆ ಹೊಸ ಪಾಲುದಾರಿಕೆ ಮಾಡಿಕೊಂಡಿದ್ದು, ಪಾಲುದಾರಿಕೆಯ ಭಾಗವಾಗಿ ಹೀರೋ ಎಲೆಕ್ಟ್ರಿಕ್ ಕಂಪನಿಯು ಮಧ್ಯಪ್ರದೇಶದ ಪಿಥಮ್‌ಪುರ್‌ದಲ್ಲಿರುವ ಮಹೀಂದ್ರಾ ಕಂಪನಿಯ ವಾಹನ ಉತ್ಪಾದನಾ ಘಟಕದಲ್ಲಿ ಇವಿ ಸ್ಕೂಟರ್ ಉತ್ಪಾದನೆ ಮಾಡುತ್ತಿದೆ.

ಗ್ರಾಹಕರ ಬೇಡಿಕೆ ಪೂರೈಸಲು ಹೊಸ ಮಾರಾಟ ವಿಧಾನಕ್ಕೆ ಚಾಲನೆ ನೀಡಿದ ಹೀರೋ ಎಲೆಕ್ಟ್ರಿಕ್

ಹೀರೋ ಎಲೆಕ್ಟ್ರಿಕ್ ಈಗಾಗಲೇ ಲುಧಿಯಾನದಲ್ಲಿರುವ ತನ್ನ ಇವಿ ವಾಹನ ಉತ್ಪಾದನಾ ಘಟಕದಲ್ಲಿ ಇವಿ ವಾಹನಗಳ ಉತ್ಪಾದನೆ ಕೈಗೊಳ್ಳುತ್ತಿದ್ದು, 2022ರ ಅಂತ್ಯದ ವೇಳೆಗೆ ವಾರ್ಷಿಕವಾಗಿ 1 ಮಿಲಿಯನ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಉತ್ಪಾದಿಸುವ ಗುರಿ ಯೋಜನೆಗಾಗಿ ಮಹೀಂದ್ರಾ ವಾಹನ ಉತ್ಪಾದನಾ ಘಟಕವನ್ನು ಇದೀಗ ಇವಿ ಸ್ಕೂಟರ್ ಉತ್ಪಾದನಾ ಘಟಕವಾಗಿ ಮಾರ್ಪಡಿಸಿದೆ.

ಗ್ರಾಹಕರ ಬೇಡಿಕೆ ಪೂರೈಸಲು ಹೊಸ ಮಾರಾಟ ವಿಧಾನಕ್ಕೆ ಚಾಲನೆ ನೀಡಿದ ಹೀರೋ ಎಲೆಕ್ಟ್ರಿಕ್

ಪಾಲುದಾರಿಕೆ ಯೋಜನೆ ಅಡಿ ಹೀರೋ ಎಲೆಕ್ಟ್ರಿಕ್ ಕಂಪನಿಯು ತನ್ನ ಬಹುಬೇಡಿಕೆಯ ಅಪ್ಟಿಮಾ ಇವಿ ಸ್ಕೂಟರ್ ಮಾದರಿಯನ್ನು ಅಧಿಕೃತವಾಗಿ ಉತ್ಪಾದನೆ ಕೈಗೊಳ್ಳುವ ಮೂಲಕ ಹೊಸ ಯೋಜನೆಗೆ ಚಾಲನೆ ನೀಡಿತು.

ಗ್ರಾಹಕರ ಬೇಡಿಕೆ ಪೂರೈಸಲು ಹೊಸ ಮಾರಾಟ ವಿಧಾನಕ್ಕೆ ಚಾಲನೆ ನೀಡಿದ ಹೀರೋ ಎಲೆಕ್ಟ್ರಿಕ್

ಹೊಸ ಪಾಲುದಾರಿಕೆಯ ಯೋಜನೆ ಅಡಿಯಲ್ಲಿ ಹೀರೋ ಎಲೆಕ್ಟ್ರಿಕ್ ಕಂಪನಿಗೆ ಮಹೀಂದ್ರಾ ಗ್ರೂಪ್ ತಮ್ಮ ಉತ್ಪಾದನಾ ಘಟಕದಲ್ಲಿ ಉತ್ಪಾದನೆ ಹೆಚ್ಚಳಕ್ಕೆ ಅನುವು ಮಾಡಿಕೊಟ್ಟರೆ ಹೀರೋ ಎಲೆಕ್ಟ್ರಿಕ್ ಕಂಪನಿ ಮಹೀಂದ್ರಾ ಒಡೆತನದ ಪ್ಯೂಜೊ ಮೋಟಾರ್‌ಸೈಕಲ್‌ಗಳ ಇವಿ ಮಾದರಿಗಳ ಅಭಿವೃದ್ದಿಗಾಗಿ ತಾಂತ್ರಿಕವಾಗಿ ಸಹಾಯ ಮಾಡಲಿದೆ.

ಗ್ರಾಹಕರ ಬೇಡಿಕೆ ಪೂರೈಸಲು ಹೊಸ ಮಾರಾಟ ವಿಧಾನಕ್ಕೆ ಚಾಲನೆ ನೀಡಿದ ಹೀರೋ ಎಲೆಕ್ಟ್ರಿಕ್

ಇವಿ ವಾಹನಗಳ ಅಭಿವೃದ್ದಿ ಮತ್ತು ಉತ್ಪಾದನೆಗಾಗಿ ಎರಡು ಕಂಪನಿಗಳ ಒಗ್ಗೂಡಿಸುವಿಕೆಯು ವಾಹನಗಳ ಉತ್ಪಾದನೆ, ಬೆಲೆ ಮತ್ತು ಅಭಿವೃದ್ಧಿಯಲ್ಲಿ ಗಮನಾರ್ಹ ಲಾಭಗಳಿಗೆ ಕಾರಣವಾಗಬಹುದು ಎಂದು ಹೀರೋ ಎಲೆಕ್ಟ್ರಿಕ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಗ್ರಾಹಕರ ಬೇಡಿಕೆ ಪೂರೈಸಲು ಹೊಸ ಮಾರಾಟ ವಿಧಾನಕ್ಕೆ ಚಾಲನೆ ನೀಡಿದ ಹೀರೋ ಎಲೆಕ್ಟ್ರಿಕ್

ಜೊತೆಗೆ ಹೊಸ ಪಾಲುದಾರಿಕೆ ಯೋಜನೆಯು ಭವಿಷ್ಯದ ಉತ್ಪನ್ನಗಳಿಗೆ ಕಾರಣವಾಗುವುದಲ್ಲದೆ ಅದು ದೇಶೀಯ ಮಾರುಕಟ್ಟೆಯಲ್ಲಿನ ಬೇಡಿಕೆಯನ್ನು ಮಾತ್ರವಲ್ಲದೆ ಜಾಗತಿಕ ಅಗತ್ಯತೆಗಳನ್ನೂ ಸಹ ಪೂರೈಸಲಿದ್ದು, ಪಾಲುದಾರಿಕೆಯು ಉದ್ಯಮದಲ್ಲಿ ಗುಣಮಟ್ಟವನ್ನು ಹೊಂದಲು ಸಹಕಾರಿಯಾಗಲಿದೆ ಕಂಪನಿಯು ಮಾಹಿತಿ ಹಂಚಿಕೊಂಡಿದೆ.

ಗ್ರಾಹಕರ ಬೇಡಿಕೆ ಪೂರೈಸಲು ಹೊಸ ಮಾರಾಟ ವಿಧಾನಕ್ಕೆ ಚಾಲನೆ ನೀಡಿದ ಹೀರೋ ಎಲೆಕ್ಟ್ರಿಕ್

ಈ ಮೂಲಕ ಹೊಸ ಪಾಲುದಾರಿಕೆಯೊಂದಿಗೆ ಎರಡು ಕಂಪನಿಗಳು ಮುಂದಿನ ಐದು ವರ್ಷಗಳಲ್ಲಿ ವಾರ್ಷಿಕವಾಗಿ ಐದು ಮಿಲಿಯನ್ ಇವಿ ವಾಹನಗಳ ಉತ್ಪಾದನಾ ಗುರಿಹೊಂದಿದ್ದು, ಹೊಸ ಯೋಜನೆಗಾಗಿ ಶೀಘ್ರದಲ್ಲೇ ಭಾರೀ ಪ್ರಮಾಣ ಹೂಡಿಕೆ ಘೋಷಣೆ ಮಾಡಲು ಸಿದ್ದವಾಗುತ್ತಿವೆ.

Most Read Articles

Kannada
English summary
Hero electric adapting hybrid sale model for its electric vehicles
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X