Just In
- 19 min ago
ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಲು ಹೊಸ ರೂಪದಲ್ಲಿ ಬರುತ್ತಿದೆ ಮಾರುತಿ ಆಲ್ಟೋ ಕೆ10
- 25 min ago
ಹೊಸ ಆಕ್ಟಿವಾ ಟೀಸರ್ ಬಿಟ್ಟು ನಿರೀಕ್ಷೆ ಹೆಚ್ಚಿಸಿದ ಹೋಂಡಾ: ಆಕ್ಟಿವಾ 7G ಆಗಿರಬಹುದೇ?
- 1 hr ago
ಇವಿ ಸ್ಕೂಟರ್‌ಗಳ ಬೆಲೆ ನಿಯಂತ್ರಿಸಲು ಬೃಹತ್ ಯೋಜನೆಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್
- 2 hrs ago
ಹೊಸ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಇಂದು ಬಿಡುಗಡೆ: ಹೇಗರಲಿವೆ ವಿನ್ಯಾಸ, ಬೆಲೆ, ವೈಶಿಷ್ಟ್ಯಗಳು!
Don't Miss!
- Technology
ಸದ್ದಿಲ್ಲದೇ ಮತ್ತೆ ಹೊಸ ಪ್ಲ್ಯಾನ್ ಪರಿಚಯಿಸಿದ 'ಜಿಯೋ'!..180GB ಡೇಟಾ ಪಕ್ಕಾ!
- Movies
ನೇರ ನುಡಿಯ ಸ್ವಾಭಿಮಾನಿ ಗಾಯಕ ಶಿವಮೊಗ್ಗ ಸುಬ್ಬಣ್ಣ: ಗಾಯಕಿ ಬಿ. ಕೆ ಸುಮಿತ್ರಾ ಸಂದರ್ಶನ
- Finance
ತೆರಿಗೆ ದರ ವಿಚಾರದಲ್ಲಿ ಹಿರಿಯ ನಾಗರಿಕರಿಗೆ ಪ್ರಯೋಜನ ನೋಡಿ!
- News
Breaking: ಧರ್ಮಗುರು ರಹೀಮುಲ್ಲಾ ಹಕ್ಕಾನಿ ಹತ್ಯೆ ಹೊಣೆ ಹೊತ್ತ ಐಸಿಸ್
- Sports
Asia Cup 2022: ರಾಹುಲ್ ಅಲ್ಲ, ಈತ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಲಿ; ಪಾಕ್ ಕ್ರಿಕೆಟಿಗ
- Travel
ಮಕ್ಕಳ ಜೊತೆ ಭೇಟಿ ಕೊಡಬಹುದಾದ ಕರ್ನಾಟಕದಲ್ಲಿಯ ಮೋಜಿನ ಸ್ಥಳಗಳು
- Lifestyle
ಹಣ್ಣು ಹೇಗೆ ಸೇವಿಸಬೇಕು? : ಹಣ್ಣು ಸೇವನೆ ವೇಳೆ ಈ ರೀತಿಯ ಮಿಸ್ಟೇಕ್ ನೀವು ಮಾಡುತ್ತಿದ್ದರೆ ಕೂಡಲೇ ನಿಲ್ಲಿಸಿ
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಇವಿ ವಲಯದಲ್ಲಿ ಪ್ರಮಾಣಿತವಾಗಿದ್ದ ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಮೊದಲ ಬಾರಿಗೆ ಬೆಂಕಿ
ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪೆಟ್ರೋಲ್ ಬೆಲೆ ಏರಿಕೆ, ಪೆಟ್ರೋಲ್ ಸ್ಕೂಟರ್ ನಿರ್ವಹಣೆ ವೆಚ್ಚ ಸೇರಿದಂತೆ ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜನರು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುತ್ತಿದ್ದಾರೆ.

ಹೀರೋ ಎಲೆಕ್ಟ್ರಿಕ್ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಅತಿದೊಡ್ಡ ಮಾರಾಟಗಾರ. ಈ ಕಂಪನಿಯು ಭಾರತದಲ್ಲಿ ಇದುವರೆಗೆ 4.5 ಲಕ್ಷ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಇದರ ಹೊರತಾಗಿ, ಓಲಾ, ಓಕಿನಾವಾ, ಎಥರ್ ಮತ್ತು ಪ್ಯೂರ್ ಇವಿ ಭಾರತದಲ್ಲಿ ಅತಿ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿರುವ ಕಂಪನಿಗಳು. ಕಳೆದ ಮಾರ್ಚ್‌ನಲ್ಲಿ ವೆಲ್ಲೂರು ಜಿಲ್ಲೆಯಲ್ಲಿ ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್ ರಾತ್ರಿ ವೇಳೆ ಚಾರ್ಜ್ ಮಾಡುವಾಗ ಸ್ಫೋಟಗೊಂಡು ತಂದೆ ಮತ್ತು ಮಗಳು ಸಾವನ್ನಪ್ಪಿದ್ದರು.

ಘಟನೆಯ ನಂತರ ದೇಶದ ಹಲವು ಭಾಗಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಪುಣೆಯಲ್ಲಿ Ola S1 Pro ಸ್ಕೂಟರ್‌ಗೆ ಬೆಂಕಿ, ಆಂಧ್ರಪ್ರದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟಗೊಂಡು 80 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ವಿಜಯವಾಡದ ಬೂಮ್ ಮೋಟಾರ್ಸ್ ನಲ್ಲಿ ಸ್ಕೂಟರ್ ಸ್ಫೋಟಗೊಂಡು 40 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.

ನಾಸಿಕ್‌ನಲ್ಲಿ ಜಿಜೇಂದ್ರ ಇವಿ ಸ್ಕೂಟರ್‌ಗಳನ್ನು ತುಂಬಿದ ಕಂಟೈನರ್‌ಗೆ ಬೆಂಕಿ ಬಿದ್ದು ಘಟನೆಯಲ್ಲಿ ಹಲವು ಸ್ಕೂಟರ್‌ಗಳು ಸುಟ್ಟು ಕರಕಲಾಗಿವೆ. ಇದುವರೆಗೆ ಓಲಾ, ಓಕಿನಾವಾ ಸೇರಿದಂತೆ ಹಲವು ಕಂಪನಿಗಳಲ್ಲಿ ಸ್ಕೂಟರ್‌ಗಳು ಬೆಂಕಿಗೆ ಆಹುತಿಯಾಗಿದ್ದವು. ಆದರೆ ಇಲ್ಲಿಯವರೆಗೆ ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೆಂಕಿ ಬಿದ್ದಿರಲಿಲ್ಲ.

ಈ ಹಿಂದೆ ಬೆಂಕಿ ಹೊತ್ತಿಕೊಂಡ ಸ್ಕೂಟರ್ ಕಂಪನಿಗಳು ಈ ಸ್ಕೂಟರ್‌ಗಳಿಗೆ ಏಕೆ ಬೆಂಕಿ ಹತ್ತಿಕೊಂಡವು ಎಂಬುದರ ಕುರಿತು ಸಂಶೋಧನೆ ನಡೆಸುತ್ತಿವೆ. ಹೀರೋ ಎಲೆಕ್ಟ್ರಿಕ್ ಕಂಪನಿಯ ಸ್ಕೂಟರ್‌ಗಳಿಗೆ ಬೆಂಕಿ ತಗುಲಲಿಲ್ಲ, ಆ ಕಂಪನಿಯ ಸ್ಕೂಟರ್‌ಗಳು ಗುಣಮಟ್ಟದಲ್ಲಿವೆ ಎಂಬ ನಂಬಿಕೆ ಜನರಲ್ಲಿತ್ತು. ಆದರೆ ಇತ್ತೀಚಿಗೆ ಒಡಿಶಾ ರಾಜ್ಯದಲ್ಲಿ ಹೀರೋ ಕಂಪನಿಯ ಬಟನ್ ಎಂಬ ಎಲೆಕ್ಟ್ರಿಕ್ ಸ್ಕೂಟರ್ ಚಾರ್ಜ್ ಮಾಡುವಾಗ ಸ್ಫೋಟಗೊಂಡ ಘಟನೆ ನಡೆದಾಗ ಆ ಭರವಸೆ ಇದೀಗ ಹುಸಿಯಾಗಿದೆ.

ಬೆಂಕಿ ಅವಘಡಗಳಿಗೆ ಕಾರಣ?
ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಹಿಂದಿನ ಘಟನೆಗಳ ಬಗ್ಗೆ ಭಾರತೀಯ ಸೇನೆ DRDO ಕೇಂದ್ರದ ಅಗ್ನಿಶಾಮಕ ಮತ್ತು ಪರಿಸರ ಸಂರಕ್ಷಣಾ ಏಜೆನ್ಸಿ ತನಿಖೆ ನಡೆಸಿ ವರದಿ ನೀಡಿದೆ. ಈ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್ ಅಪಘಾತಗಳು ಬ್ಯಾಟರಿ ವಿನ್ಯಾಸ ಮತ್ತು ಬ್ಯಾಟರಿಯ ಇತರ ಸಮಸ್ಯೆಗಳಿಂದ ಉಂಟಾಗಿದೆ ಎಂದು ಕಂಡುಹಿಡಿದಿದೆ.

ಇದರ ನಂತರ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳಿಗೆ ಬ್ಯಾಟರಿಗಳಿಗಾಗಿ ಹೊಸ ನಿಯಮಗಳನ್ನು ರೂಪಿಸಲು ಪ್ರಾರಂಭಿಸಿದೆ. ಸದ್ಯ ಈ ಕುರಿತು ಅಧ್ಯಯನಗಳು ನಡೆಯುತ್ತಿವೆ. ಈ ವೇಳೆ ಒಡಿಶಾದಲ್ಲಿ ಹೀರೋ ಎಲೆಕ್ಟ್ರಿಕ್ ಬೈಕ್‌ಗೆ ಬೆಂಕಿ ಹೊತ್ತಿಕೊಂಡಿರುವುದು ಹೀರೋ ಕಂಪನಿಗೆ ತಲೆ ಕೆಡಿಸಿದೆ. ಏಕೆಂದರೆ ಕಂಪನಿಯ ಬೈಕ್‌ಗೆ ಬೆಂಕಿ ತಗುಲಿರುವುದು ಇದೇ ಮೊದಲು.

ಈ ಮಾಹಿತಿ ತಿಳಿದ ಹೀರೋ ಎಲೆಕ್ಟ್ರಿಕ್ ಸಂಬಂಧಪಟ್ಟವರನ್ನು ಸಂಪರ್ಕಿಸಿದೆ. ಸಂತ್ರಸ್ತ ತಾನು 8 ತಿಂಗಳಿನಿಂದ ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಬಳಸುತ್ತಿದ್ದು, ಘಟನೆಯ ಸಮಯದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಚಾರ್ಜ್ ಮಾಡುತ್ತಿದ್ದಾಗ ಪ್ಲಗ್‌ನಿಂದ ಏನೋ ವಿಚಿತ್ರ ಶಬ್ದ ಬಂದಿದೆ. ನಂತರ ಹೊಗೆ ಮತ್ತು ಕಿಡಿಗಳು ಹೊರಹೊಮ್ಮಿರುವುದಾಗಿ ಹೇಳಿಕೊಂಡಿದ್ದಾನೆ.

ತಕ್ಷಣ ವಾಹನದ ಮಾಲೀಕರು ನೋಡಲು ಹೋದಾಗ ಸ್ವಿಚ್‌ಬೋರ್ಡ್‌ನಿಂದ ಬೆಂಕಿ ಬಂದಿದೆ. ಅವರು ತಕ್ಷಣ ಮೈನ್ ಆಫ್ ಮಾಡಲು ಪ್ರಯತ್ನಿಸಿದರು. ಆದರೆ ಅಷ್ಟರಲ್ಲಾಗಲೇ ಬೆಂಕಿ ಸ್ಕೂಟರ್‌ಗೆ ವ್ಯಾಪಿಸಿ ಸ್ಕೂಟರ್‌ನ ಹಿಂಭಾಗ ಸುಟ್ಟು ಕರಕಲಾಗಿತ್ತು. ಬೆಂಕಿ ನಂದಿಸಲು ಯತ್ನಿಸುವಷ್ಟರಲ್ಲಿ ಸ್ಕೂಟರ್ ಹಿಂಭಾಗ ಸಂಪೂರ್ಣ ಸುಟ್ಟು ಹೋಗಿತ್ತು. ಅದೃಷ್ಟವಶಾತ್ ಮನೆಯಲ್ಲಿ ಯಾರಿಗೂ ಇದರಿಂದ ತೊಂದರೆಯಾಗಿಲ್ಲ.

ಘಟನೆಯ ಬಗ್ಗೆ ತಿಳಿದ ನಂತರ, ಹೀರೋ ಎಲೆಕ್ಟ್ರಿಕ್ ತನ್ನ ಇಂಜಿನಿಯರ್‌ಗಳನ್ನು ತನಿಖೆಗಾಗಿ ಘಟನಾ ಸ್ಥಳಕ್ಕೆ ಕಳುಹಿಸಿದೆ. ನಂತರ ಬೆಂಕಿ ಅನಾಹುತಕ್ಕೆ ಕಾರಣವೇನು ಎಂದು ತನಿಖೆ ನಡೆಸಿದಾಗ ಎಸಿ ಸರ್ಕ್ಯೂಟ್ ಹಾಗೂ ಸ್ವಿಚ್ ಬೋರ್ಡ್‌ನಲ್ಲಿನ ಅರ್ಥ್ ವೈರ್‌ಗೆ ಸರ್ಕ್ಯೂಟ್ ದೋಷದಿಂದ ಬೆಂಕಿ ತಗುಲಿರಬಹುದು ಎಂದು ತಿಳಿದುಬಂದಿದೆ.

ಸುಟ್ಟ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬದಲಾಯಿಸಲು ಹೀರೋ ಸಿದ್ಧವಾಗಿದೆ. ಸ್ಕೂಟರ್ ಮಾಲೀಕರಿಂದ ವೆಚ್ಚವನ್ನು ಭರಿಸಲಾಗುವುದು ಮತ್ತು ಸ್ಕೂಟರ್ ಅನ್ನು ಬದಲಾಯಿಸಿದರೆ ಎಲ್ಲಾ ಭಾಗಗಳನ್ನು ಮರು ಪರೀಕ್ಷೆ ಮಾಡಿ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೀರೋ ಎಲೆಕ್ಟ್ರಿಕ್ ಕಂಪನಿಯ ಬೋಟಾನ್ ಸ್ಕೂಟರ್ 1.9kWh ಲಿಥಿಯಂ ಐಯಾನ್ ಬ್ಯಾಟರಿಯನ್ನು ಹೊಂದಿದ್ದು, ಗಂಟೆಗೆ ಗರಿಷ್ಠ 45 ಕಿ.ಮೀ ವೇಗವನ್ನು ತಲುಪುತ್ತದೆ. ಈ ಸ್ಕೂಟರ್ ಸಂಪೂರ್ಣ ಚಾರ್ಜ್ ಮಾಡಿದರೆ 90 ಕಿ.ಮೀ. ಮೈಲೇಜ್ ನೀಡುತ್ತದೆ. 80,490 ಎಕ್ಸ್ ಶೋರೂಂ ಬೆಲೆಯಲ್ಲಿ ಸ್ಕೂಟರ್ ಮಾರಾಟಕ್ಕೆ ಲಭ್ಯವಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ನಿರಂತರವಾಗಿ ಬೆಂಕಿ ಕಾಣಿಸಿಕೊಳ್ಳುತ್ತಿರುವುದರಿಂದ ಜನರಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಗ್ಗೆ ಭಯ ಮೂಡಿಸಿದೆ. ಅನೇಕ ಜನರು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಹಿಂಜರಿಯುತ್ತಾರೆ. ಈ ಘಟನೆಗಳು ಎಲೆಕ್ಟ್ರಿಕ್ ವಾಹನಗಳ ಮಾರಾಟದ ಮೇಲೆ ಪರಿಣಾಮ ಬೀರದಿದ್ದರೂ ಮಾರಾಟದ ಬೆಳವಣಿಗೆಗೆ ಅಡ್ಡಿಯಾಗುತ್ತಿವೆ ಎಂದು ಹೇಳಲಾಗುತ್ತದೆ.