ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಹೆಚ್ಚಳಕ್ಕಾಗಿ ಹೊಸ ಯೋಜನೆಗೆ ಚಾಲನೆ ನೀಡಿದ ಹೀರೋ ಎಲೆಕ್ಟ್ರಿಕ್
ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಹೆಚ್ಚಳಕ್ಕಾಗಿ ಹೊಸ ಯೋಜನೆಯೊಂದಕ್ಕೆ ಚಾಲನೆ ನೀಡಿದ್ದು, ಕ್ರೆಡರ್ ಕಂಪನಿ ಜೊತೆಗೂಡಿ ಎಕ್ಸ್‌ಚೆಂಜ್ ಆಫರ್ ನೀಡುತ್ತಿದೆ.

ಕ್ರೆಡರ್ ಕಂಪನಿಯು ಸೆಕೆಂಡ್ ಹ್ಯಾಂಡ್ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು, ವಿವಿಧ ರಾಜ್ಯಗಳಲ್ಲಿ ಮಾರಾಟ ಮಳಿಗೆಗಳನ್ನು ಹೊಂದಿದೆ. ಇದೀಗ ಹೀರೋ ಎಲೆಕ್ಟ್ರಿಕ್ ಜೊತೆಗೂಡಿ ಹೊಸ ಯೋಜನೆಗೆ ಚಾಲನೆ ನೀಡಿದ್ದು, ಸಾಮಾನ್ಯ ಪೆಟ್ರೋಲ್ ಬೈಕ್ ಮತ್ತು ಸ್ಕೂಟರ್ ಮಾದರಿಗಳನ್ನು ಎಕ್ಸ್‌ಚೆಂಜ್ ಮಾಡುವ ಮೂಲಕ ಎಲೆಕ್ಟ್ರಿಕ್ ಸ್ಕೂಟರ್‌ಗಳ ಖರೀದಿಗೆ ಅವಕಾಶ ನೀಡುತ್ತಿದೆ.

ಹೊಸ ಎಕ್ಸ್‌ಚೆಂಜ್ ಆಫರ್‌ನಲ್ಲಿ ಗ್ರಾಹಕರು ತಮ್ಮ ಹಳೆಯ ಪೆಟ್ರೋಲ್ ದ್ವಿಚಕ್ರಗಳನ್ನು ಅತ್ಯುತ್ತಮ ಬೆಲೆಗೆ ಮರು ಮಾರಾಟ ಮಾಡುವುದರೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗೆ ಬದಲಾಯಿಸಿಕೊಳ್ಳಬಹುದಾಗಿದ್ದು, ಹೀರೋ ಎಲೆಕ್ಟ್ರಿಕ್ ಮಾತ್ರವಲ್ಲದೆ ಬಹುತೇಕ ಇವಿ ಮಾದರಿಗಳ ಮೇಲೆ ಕ್ರೆಡರ್ ಆಫರ್ ನೀಡುತ್ತಿದೆ.

ಇದರೊಂದಿಗೆ ಹೀರೋ ಎಲೆಕ್ಟ್ರಿಕ್ ಕಂಪನಿಯು ದೀಪಾವಳಿ ವಿಶೇಷತೆಗಾಗಿ ಗ್ರಾಹಕರಿಗೆ ಹೊಸ ಆಫರ್‌ಗಳನ್ನು ಘೋಷಣೆ ಮಾಡಿದ್ದು, ಆಯ್ದ ಎಲೆಕ್ಟ್ರಿಕ್ ಸ್ಕೂಟರ್‌ಗಳ ಖರೀದಿ ಮೇಲೆ ಅತ್ಯುತ್ತಮ ಆಫರ್ ನೀಡುತ್ತಿದೆ.

ದೀಪಾವಳಿ ಆಫರ್‌ನಲ್ಲಿ ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿಸುವ ಗ್ರಾಹಕರಿಗೆ ರೂ. 5 ಸಾವಿರ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ. 1 ಸಾವಿರ ಅಮೆಜಾನ್ ಗಿಫ್ಟ್ ವೋಚರ್ ಪಡೆದುಕೊಳ್ಳಬಹುದಾಗಿದ್ದು, ಸಾಮಾನ್ಯ ಸ್ಕೂಟರ್ ಅಥವಾ ಬೈಕ್ ಮಾದರಿಗಳನ್ನು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗಾಗಿ ಎಕ್ಸ್‌ಚೆಂಜ್ ಮಾಡಿಕೊಳ್ಳಬಹುದಾಗಿದೆ. ಹೀರೋ ನಿರ್ಮಾಣದ ಆಪ್ಟಿಮಾ ಎಚ್‌ಎಕ್ಸ್, ಎನ್‌ವೈಎಕ್ಸ್ ಎಚ್‌ಎಕ್ಸ್ ಇವಿ ಸ್ಕೂಟರ್ ಹೊರತುಪಡಿಸಿ ಇನ್ನುಳಿದ ಎಲ್ಲಾ ಇವಿ ಸ್ಕೂಟರ್ ಮಾದರಿಗಳಿಗೂ ಹೊಸ ಆಫರ್ ಅನ್ವಯಿಸುತ್ತದೆ.

ಹೀರೋ ಎಲೆಕ್ಟ್ರಿಕ್ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಕಂಫರ್ಟ್ ಸ್ಪೀಡ್, ಸಿಟಿ ಸ್ಪೀಡ್ ಮತ್ತು ಎಕ್ಸೆಂಡ್ ಎಂಬ ಮೂರು ಮಾದರಿಗಳಲ್ಲಿ 11 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಅತಿ ಕಡಿಮೆ ಬೆಲೆಯೊಂದಿಗೆ ಗ್ರಾಹಕರ ಪ್ರಮುಖ ಆಕರ್ಷಣೆಯಾಗಿವೆ.
MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಪ್ರಸ್ತುತ ಮಾರುಕಟ್ಟೆಯಲ್ಲಿರುವ ವಿವಿಧ ಎಲೆಕ್ಟ್ರಿಕ್ ಸ್ಕೂಟರ್ ಆವೃತ್ತಿಗಳಿಗೆ ಪೈಪೋಟಿಯಾಗಿ ಸಿಟಿ ಸೆಗ್ಮೆಂಟ್ ಅಭಿವೃದ್ದಿಪಡಿಸಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಕಂಫರ್ಟ್ ಸ್ಪೀಡ್, ಎಕ್ಸೆಂಡ್ ರೇಂಜ್ ಮಾದರಿಗಳೊಂದಿಗೆ ಇದೀಗ ಸಿಟಿ ಸ್ಪೀಡ್ ಮಾದರಿಗಳನ್ನು ಹೊಸದಾಗಿ ಅಭಿವೃದ್ದಿಗೊಳಿಸಿದೆ.

ಸಿಟಿ ಸೆಗ್ಮೆಂಟ್‌ನಲ್ಲಿ ಆಪ್ಟಿಮಾ-ಹೆಚ್ಎಕ್ಸ್, ನೆಕ್ಸ್-ಹೆಚ್ಎಕ್ಸ್ ಮತ್ತು ಫೋಟಾನ್-ಹೆಚ್ಎಕ್ಸ್ ಮಾದರಿಗಳು ಖರೀದಿಗೆ ಲಭ್ಯವಿದ್ದು, ಹೊಸ ಸೆಗ್ಮೆಂಟ್ ಸ್ಕೂಟರ್‌ಗಳು ರೂ. 57,570ರಿಂದ ಆರಂಭಗೊಳ್ಳಲಿವೆ. ಮಾರುಕಟ್ಟೆಯಲ್ಲಿ ಸದ್ಯ ದುಬಾರಿ ಬೆಲೆಗೆ ಮಾತ್ರವೇ ಉತ್ತಮ ಫೀಚರ್ಸ್‌ನೊಂದಿಗೆ ಹೆಚ್ಚು ಮೈಲೇಜ್ ರೇಂಜ್ ಇವಿ ವಾಹನಗಳು ಮಾರಾಟವಾಗುತ್ತಿದ್ದರೆ ಮತ್ತು ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಇವಿ ವಾಹನಗಳು ಕಡಿಮೆ ವೇಗದೊಂದಿಗೆ ಸಾಧಾರಣ ಮೈಲೇಜ್ ರೇಂಜ್ ಹೊಂದಿವೆ.
MOST READ: ಹೊಸ ಅವತಾರದಲ್ಲಿ ಬಿಡುಗಡೆಯಾಗಲಿದೆ ಟಿವಿಎಸ್ ಫಿಯರೊ 125 ಕಮ್ಯುಟರ್ ಬೈಕ್

ಈ ಕುರಿತು ಹಲವಾರು ಮಾರುಕಟ್ಟೆ ಅಧ್ಯಯನ ಮಾಡಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಬಜೆಟ್ ಬೆಲೆಯಲ್ಲಿಯೇ ಉತ್ತಮ ಮೈಲೇಜ್ ರೇಂಜ್ ಒದಗಿಸುವ ಪ್ರಯತ್ನದೊಂದಿಗೆ ಹೊಸದಾಗಿ ಸಿಟಿ ಸೆಗ್ಮೆಂಟ್ ಪರಿಚಯಿಸಿದ್ದು, ಸಿಟಿ ಸೆಗ್ಮೆಂಟ್‌ನಲ್ಲಿರುವ ಇವಿ ಸ್ಕೂಟರ್‌ಗಳು 70 ಕಿ.ಮೀ ನಿಂದ 210 ಕಿ.ಮೀ ಮೈಲೇಜ್ ಹೊಂದಿರಲಿವೆ.


Click it and Unblock the Notifications








