ಕರ್ನಾಟಕ ಪೊಲೀಸ್ ಪಡೆಗೆ ಸೇರ್ಪಡೆಯಾದ ಹೀರೋ ಗ್ಲಾಮರ್ ಬೈಕ್

ಭಾರತದ ಅತಿದೊಡ್ಡ ಬೈಕ್ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್, 751 ಗ್ಲಾಮರ್ ಬಿಎಸ್ 6 ಬೈಕ್'ಗಳನ್ನು ಕರ್ನಾಟಕ ಪೊಲೀಸ್ ಇಲಾಖೆಗೆ ವಿತರಿಸಿದೆ. ಈ ಬೈಕುಗಳ ಸೇವೆಗೆ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಚಾಲನೆ ನೀಡಿದರು.

ಕರ್ನಾಟಕ ಪೊಲೀಸ್ ಪಡೆಗೆ ಸೇರ್ಪಡೆಯಾದ ಹೀರೋ ಗ್ಲಾಮರ್ ಬೈಕ್

ಈ ಕಾರ್ಯಕ್ರಮದಲ್ಲಿ ಗೃಹ ಸಚಿವರಾದ ಬಸವರಾಜ್ ಬೊಮ್ಮಾಯಿ ಸಹ ಭಾಗಿಯಾಗಿದ್ದರು. ಅವರೊಂದಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಜರಿದ್ದರು. ಹೀರೋ ಮೋಟೊಕಾರ್ಪ್ ಕಂಪನಿಯು ವಿತರಿಸಿರುವ ಈ ಎಲ್ಲಾ ಬೈಕುಗಳು ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಲಿವೆ.

ಕರ್ನಾಟಕ ಪೊಲೀಸ್ ಪಡೆಗೆ ಸೇರ್ಪಡೆಯಾದ ಹೀರೋ ಗ್ಲಾಮರ್ ಬೈಕ್

ಈ ಬೈಕುಗಳ ಸೇವೆಗೆ ವಿಧಾನಸೌಧದಲ್ಲಿ ಚಾಲನೆ ನೀಡಲಾಯಿತು. ಹೀರೋ ಮೋಟೊಕಾರ್ಪ್ ಕಂಪನಿಯು 125 ಸಿಸಿ ಪ್ರಯಾಣಿಕರ ಬೈಕ್‌ ಸೆಗ್ ಮೆಂಟಿನಲ್ಲಿ ಗ್ಲಾಮರ್ ಬೈಕ್ ಅನ್ನು ಬಿಡುಗಡೆಗೊಳಿಸಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕರ್ನಾಟಕ ಪೊಲೀಸ್ ಪಡೆಗೆ ಸೇರ್ಪಡೆಯಾದ ಹೀರೋ ಗ್ಲಾಮರ್ ಬೈಕ್

ಕಂಪನಿಯು ಈ ಬೈಕ್ ಅನ್ನು ಇತ್ಥಿಚಿಗಷ್ಟೇ ಅಪ್ ಡೇಟ್ ಗೊಳಿಸಿತ್ತು. ಹೀರೋ ಮೋಟೊಕಾರ್ಪ್ ಕಂಪನಿಯು ಗ್ಲಾಮರ್ 125 ಬೈಕಿನಲ್ಲಿ ಅಪ್ ಡೇಟ್ ಮಾಡಲಾದ ಗೇರ್‌ಬಾಕ್ಸ್ ಅನ್ನು ಅಳವಡಿಸಿದೆ.

ಕರ್ನಾಟಕ ಪೊಲೀಸ್ ಪಡೆಗೆ ಸೇರ್ಪಡೆಯಾದ ಹೀರೋ ಗ್ಲಾಮರ್ ಬೈಕ್

ಈ ಬೈಕ್ 125 ಸಿಸಿ ಸೆಗ್ ಮೆಂಟಿನಲ್ಲಿ ಹೊಸ ಗೇರ್‌ಬಾಕ್ಸ್ ಹೊಂದಿರುವ ಹೀರೋ ಮೋಟೊಕಾರ್ಪ್ ಕಂಪನಿಯ ಎಂಟ್ರಿ ಲೆವೆಲ್ ಬೈಕ್ ಆಗಿದೆ. ಈ ಬೈಕಿನಲ್ಲಿ ಕಂಪನಿಯು ತನ್ನ ಐ 3ಎಸ್ - ಐಡಲ್, ಸ್ಟಾರ್ಟ್, ಸ್ಟಾಪ್ ಸಿಸ್ಟಂಗಳನ್ನು ಅಳವಡಿಸಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕರ್ನಾಟಕ ಪೊಲೀಸ್ ಪಡೆಗೆ ಸೇರ್ಪಡೆಯಾದ ಹೀರೋ ಗ್ಲಾಮರ್ ಬೈಕ್

ಈ ಟೆಕ್ನಾಲಜಿಯಿಂದ ಬೈಕಿನ ಮೈಲೇಜ್ ಹೆಚ್ಚಾಗುತ್ತದೆ. ಹೊಸ ಹೀರೋ ಗ್ಲಾಮರ್‌ ಬೈಕಿನಲ್ಲಿ 125 ಸಿಸಿ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್‌ನೊಂದಿಗೆ ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಹೊಸ ಆಕ್ಸೆನ್ಸ್ ಪ್ರೋಗ್ರಾಮ್ ಮಾಡಿದ ಫ್ಯೂಯಲ್ ಇಂಜೆಕ್ಷನ್ ಟೆಕ್ನಾಲಜಿಯನ್ನು ಅಳವಡಿಸಿದೆ.

ಕರ್ನಾಟಕ ಪೊಲೀಸ್ ಪಡೆಗೆ ಸೇರ್ಪಡೆಯಾದ ಹೀರೋ ಗ್ಲಾಮರ್ ಬೈಕ್

ಈ ಎಂಜಿನ್ 7,500 ಆರ್‌ಪಿಎಂನಲ್ಲಿ 10.73 ಬಿಹೆಚ್‌ಪಿ ಪವರ್ ಹಾಗೂ 6,000 ಆರ್‌ಪಿಎಂನಲ್ಲಿ 10.6 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರಿಂದಾಗಿ ಈ ಎಂಜಿನ್ ವೇಗವಾದ ಹಾಗೂ ಬಲಶಾಲಿಯಾದ ಥ್ರೊಟಲ್ ರೆಸ್ಪಾನ್ಸ್ ಪಡೆಯುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕರ್ನಾಟಕ ಪೊಲೀಸ್ ಪಡೆಗೆ ಸೇರ್ಪಡೆಯಾದ ಹೀರೋ ಗ್ಲಾಮರ್ ಬೈಕ್

ಕಂಪನಿಯು ಈ ಬೈಕಿನಲ್ಲಿ ರಿಫೈನ್ ಮಾಡಿದ ಎಂಜಿನ್ ಹಾಗೂ ಉತ್ತಮವಾದ ಸೌಂಡ್ ಎಕ್ಸಾಸ್ಟ್ ನೋಟ್ ಅನ್ನು ಅಳವಡಿಸಿದೆ. ಹೊಸ ಹೀರೋ ಗ್ಲಾಮರ್ ಬೈಕ್ ಸಿಟಿಯೊಳಗೆ ಪ್ರತಿ ಲೀಟರ್ ಪೆಟ್ರೋಲಿಗೆ 62.56 ಕಿ.ಮೀ ಹಾಗೂ ಹೈ-ವೇಗಳಲ್ಲಿ 74.6 ಕಿ.ಮೀ ಮೈಲೇಜ್ ನೀಡುತ್ತದೆ.

Most Read Articles

Kannada
English summary
Hero Glamour bikes added to Karnataka police fleet. Read in Kannada.
Story first published: Thursday, November 12, 2020, 16:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X