ಬಿ‍ಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಹೀರೋ ಗ್ಲ್ಯಾಮರ್ ಬೈಕ್

ಹೀರೋ ಮೋಟೊಕಾರ್ಪ್ ತನ್ನ ಅತ್ಯಂತ ಜನಪ್ರಿಯ 125ಸಿಸಿಯ ಗ್ಲ್ಯಾಮರ್ ಬೈಕ್ ಅನ್ನು ಬಿಎಸ್-6 ಆವೃತ್ತಿಯಲ್ಲಿ ಬಿಡುಗಡೆಗೊಳಿಸಿದೆ. ಈ ಬೈಕಿನ ಪ್ರಾರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.68,900 ಗಳಾಗಿದೆ.

ಬಿ‍ಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಬಿಎಸ್-6 ಹೀರೋ ಗ್ಲ್ಯಾಮರ್ ಬೈಕ್

ಹೀರೋ ಮೋಟೊಕಾರ್ಪ್ ಕಂಪನಿಯ ಜನಪ್ರಿಯ ಕಮ್ಯೂಟರ್ ಬೈಕ್‍‍ಗಳಲ್ಲಿ ಇದು ಒಂದಾಗಿದೆ. ಹೊಸ ಗ್ರ್ಯಾಮರ್ ಆವೃತ್ತಿಯನ್ನು ಬೇಸ್ ಡ್ರಮ್ ಬೈಕ್ ಮತ್ತು ಡಿಸ್ಕ್ ಬ್ರೇಕ್ ಎಂಬ ಎರಡು ರೂಪಾಂತರದಲ್ಲಿ ಬಿಡುಗಡೆಯಾಗಿದೆ. ಇದರಲ್ಲಿ ಬೇಸ್ ಡ್ರಮ್ ಬ್ರೇಕ್ ರೂಪಾಂತರದ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.68,900ಗಳಾಗಿದೆ. ಇನ್ನು ಡಿಸ್ಕ್ ಬ್ರೇಕ್ ರೂಪಾಂತರದ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.72,400ಗಳಾಗಿದೆ.

ಬಿ‍ಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಬಿಎಸ್-6 ಹೀರೋ ಗ್ಲ್ಯಾಮರ್ ಬೈಕ್

ಬಿಎಸ್-6 ಹೀರೋ ಗ್ಲ್ಯಾಮರ್ ಬೈಕಿನಲ್ಲಿ 1124.7 ಸಿಸಿ ಏರ್-ಕೂಲ್ಡ್, 4-ಸ್ಟ್ರೋಕ್ ಸಿಂಗಲ್ ಸಿಲಿಂಡರ್, ಒಎಚ್‌ಸಿ ಅನ್ನು ಹೊಂದಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 10.73 ಬಿ‍‍ಹೆಚ್‍ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 10.6 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿ‍ಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಬಿಎಸ್-6 ಹೀರೋ ಗ್ಲ್ಯಾಮರ್ ಬೈಕ್

ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಬೈಕ್ 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಈ ಹೊಸ ಬೈಕ್ ಉತ್ತಮ ಸಸ್ಪೆಂಕ್ಷನ್ ಹೊಂದಿರುವುದರಿಂದ ಈ ಬೈಕ್ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ.

ಬಿ‍ಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಬಿಎಸ್-6 ಹೀರೋ ಗ್ಲ್ಯಾಮರ್ ಬೈಕ್

ಹೀರೋ ಬಿಎಸ್-6 ಗ್ಲ್ಯಾಮರ್ ಬೈಕಿನಲ್ಲಿ ಆಟೋ ಸೌಲ್ ತಂತ್ರಜ್ಞಾನವನ್ನು ಅಳವಡಿಸಿದೆ. ಇದು ಟ್ರಾಫಿಕ್‍‍ನಲ್ಲಿ ಈ ಬೈಕ್ ಮುಂದಕ್ಕೆ ಸುಲಭವಾಗಿ ಚಲಿಸಲು ನೆರವಾಗುತ್ತದೆ. ಬಿ‍ಎಸ್-6 ಗ್ಲ್ಯಾಮರ್ ಬೈಕ್ ಐ3 ಎಸ್ ಐಡಲ್ ಸ್ಟಾರ್ಟ್-ಸ್ಟಾಪ್ ಸಿಸ್ಟಂ ಅನ್ನು ಹೊಂದಿದೆ. ಇದು ಅಗತ್ಯವಿಲ್ಲದ್ದಾಗ ಇಂಧನವನ್ನು ಉಳಿಸಲು ಆಟೋಮ್ಯಾಟಿಕ್ ಎಂಜಿನ್ ಅನ್ನು ಸ್ವಿಚ್ ಆಫ್ ಮಾಡುತ್ತದೆ.

ಬಿ‍ಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಬಿಎಸ್-6 ಹೀರೋ ಗ್ಲ್ಯಾಮರ್ ಬೈಕ್

ಇದಲ್ಲದೆ ಹೊಸ ಗ್ಲ್ಯಾಮರ್ ಬೈಕಿನಲ್ಲಿ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಸಹ ಅಳವಡಿಸಲಾಗಿದೆ. ಈ ಹೊಸ ಬೈಕಿನಲ್ಲಿ ಸಿಗ್ನೇಚರ್ ಹೆಚ್-ಆಕಾರದ ಎಲ್‍ಇಡಿ ಟೇಲ್‍ ಲ್ಯಾಂಪ್, ಡ್ಯುಯಲ್ ಟೋನ್ ಗ್ರಾಫಿಕ್ಸ್, ಸ್ಪ್ಲಿಟ್ ಅಲಾಯ್ ವ್ಹೀಲ್ ಮತ್ತು ಹೊಸ ಗ್ರ್ಯಾಬ್ ರೈಲ್ಅನ್ನು ಹೊಂದಿದೆ.

ಬಿ‍ಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಬಿಎಸ್-6 ಹೀರೋ ಗ್ಲ್ಯಾಮರ್ ಬೈಕ್

ಬಿಎಸ್-6 ಹೀರೋ ಗ್ಲ್ಯಾಮರ್ ಬೈಕ್ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಮಾರಾಟವಾಗುತ್ತದೆ. ಇದರಲ್ಲಿ ಸ್ಪೋರ್ಟ್ಸ್ ರೆಡ್, ಟೆಕ್ನೋ ಬ್ಲೂ, ಟೂರೆಂಟೊ ಗ್ರೇ ಮತ್ತು ಕ್ಯಾಂಡಿ ರೆಡ್ ಬಣ್ಣಗಳಾಗಿವೆ.

ಬಿ‍ಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಬಿಎಸ್-6 ಹೀರೋ ಗ್ಲ್ಯಾಮರ್ ಬೈಕ್

ಬಿಎಸ್-6 ಗ್ಲ್ಯಾಮರ್ ಬೈಕ್ ಜೊತೆಯಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಇನ್ನೊಂದು ಜನಪ್ರಿಯ ಮಾದರಿಯಾದ ಹೀರೋ ಪ್ಯಾಶನ್ ಪ್ರೊ ಬೈಕ್ ಅನ್ನು ಕೂಡ ಬಿಡುಗಡೆಗೊಳಿಸಲಿದೆ. ಈ ಹೊಸ ಪ್ಯಾಶನ್ ಪ್ರೊ ಬೈಕಿನ ಪ್ರಾರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.64,990ಗಳಾಗಿದೆ.

ಬಿ‍ಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಬಿಎಸ್-6 ಹೀರೋ ಗ್ಲ್ಯಾಮರ್ ಬೈಕ್

ಬಿಎಸ್-6 ಗ್ಲ್ಯಾಮರ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ಎಸ್‍‍ಪಿ 125 ಮತ್ತು ಬಜಾಜ್ ಪಲ್ಸರ್ 125 ಬೈಕ್‍‍ಗಳಿಗೆ ಪೈಪೋಟಿಯನ್ನು ನೀಡುತ್ತದೆ. ಹೊಸ ಗ್ಲ್ಯಾಮರ್ ಬೈಕ್ ತನ್ನ ಗ್ರಾಹಕರಿಗಾಗಿ ಆಕರ್ಷಕ ಫೀಚರ್ಸ್‍‍ಗಳೊಂದಿಗೆ ಬಿಡುಗಡೆಗೊಳಿಸಿದೆ.

Article Published On: Tuesday, February 18, 2020, 19:30 [IST]
English summary
BS6 Hero Glamour FI Launched From Rs 64,990. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+