ಹಲವು ಬಗೆಯ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಬಿಡುಗಡೆಗೊಳಿಸಿದ ಹೀರೋ

ಭಾರತದ ಆಟೋ ಮೊಬೈಲ್ ಉದ್ಯಮವು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸುವತ್ತ ಹೆಚ್ಚು ಗಮನ ಹರಿಸುತ್ತಿದೆ. ಬಹುತೇಕ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳನ್ನು ತಯಾರಿಸಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿವೆ.

ಹಲವು ಬಗೆಯ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಬಿಡುಗಡೆಗೊಳಿಸಿದ ಹೀರೋ

ಭಾರತೀಯ ಗ್ರಾಹಕರು ಸಹ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿದ್ದಾರೆ. ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು, ಖ್ಯಾತ ಸೈಕಲ್ ತಯಾರಕ ಕಂಪನಿಯಾದ ಹೀರೋ ತನ್ನ ಎಲೆಕ್ಟ್ರಿಕ್ ಸೈಕಲ್ ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಕಂಪನಿಯು ಎಲೆಕ್ಟ್ರಿಕ್ ಸೈಕಲ್ ಗಳನ್ನು ವಿಶ್ವ ಎಲೆಕ್ಟ್ರಿಕ್ ವಾಹನಗಳ ದಿನವಾದ ಸೆಪ್ಟೆಂಬರ್ 9ರಂದು ಬಿಡುಗಡೆಗೊಳಿಸಿದೆ.

ಹಲವು ಬಗೆಯ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಬಿಡುಗಡೆಗೊಳಿಸಿದ ಹೀರೋ

ಹೀರೋ ಕಂಪನಿಯು ತನ್ನ ಹೀರೋ ಲೆಕ್ಟ್ರೋ ಸೈಕಲ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಸೈಕಲ್‌ಗಳ ಬೆಲೆ ರೂ.24,999ಗಳಿಂದ ರೂ.1,35,000ಗಳಾಗಿದೆ. ಲೆಕ್ಟ್ರೋ, ಹೀರೋ ಸೈಕಲ್‌ನ ಎಲೆಕ್ಟ್ರಿಕ್ ಸೈಕಲ್ ಬ್ರಾಂಡ್ ಆಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಹಲವು ಬಗೆಯ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಬಿಡುಗಡೆಗೊಳಿಸಿದ ಹೀರೋ

ಕರೋನಾ ವೈರಸ್ ಅವಧಿಯಲ್ಲಿ ಭಾರತದ ಗ್ರಾಹಕರಲ್ಲಿ ಉಂಟಾದ ಬದಲಾವಣೆಯನ್ನು ಕಂಡು ಕೊಂಡ ನಂತರ ಹೀರೋ ಕಂಪನಿಯು ಇ-ಸೈಕಲ್ ಗಳನ್ನು ಅಭಿವೃದ್ಧಿಪಡಿಸಿದೆ. ಕಂಪನಿಯು ಇದರಿಂದ ಲಾಭ ಪಡೆಯುವ ಭರವಸೆಯನ್ನು ಹೊಂದಿದೆ. ಹೀರೋದ ಈ ಎಲೆಕ್ಟ್ರಿಕ್ ಸೈಕಲ್ ಗಳ ಸರಣಿಯನ್ನು ಬ್ರಿಟನ್ ನ ಮ್ಯಾಂಚೆಸ್ಟರ್‌ನಲ್ಲಿರುವ ಗ್ಲೋಬಲ್ ಡಿಸೈನ್ ಸೆಂಟರ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ.

ಹಲವು ಬಗೆಯ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಬಿಡುಗಡೆಗೊಳಿಸಿದ ಹೀರೋ

ಈ ಎಲೆಕ್ಟ್ರಿಕ್ ಸೈಕಲ್ ಗಳ ಹೊಸ ಸರಣಿಯನ್ನು ಕಮ್ಯೂಟರ್ (ಪ್ರಯಾಣಿಕ), ಫಿಟ್‌ನೆಸ್ ಹಾಗೂ ಲೀಷರ್ (ವಿರಾಮ) ಎಂದು ಮೂರು ಭಾಗಗಳಾಗಿ ವರ್ಗೀಕರಿಸಲಾಗಿದೆ. ಈ ಸೈಕಲ್‌ನಲ್ಲಿ ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಫೀಚರ್ ಅನ್ನು ಸಹ ನೀಡಲಾಗಿದೆ. ಹೀರೋ ಸೈಕಲ್ಸ್ ಅಂಡ್ ಲೆಕ್ಟ್ರೋ ಇ-ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕಿ ಆದಿತ್ಯ ಮುಂಜಾಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಹಲವು ಬಗೆಯ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಬಿಡುಗಡೆಗೊಳಿಸಿದ ಹೀರೋ

ಈ ಬಗ್ಗೆ ಮಾತನಾಡಿರುವ ಅವರು ಪ್ರಯಾಣಿಕರ ಸೈಕಲ್, ಫಿಟ್‌ನೆಸ್ ಸೈಕಲ್ ಹಾಗೂ ವಿರಾಮದ ಸೈಕಲ್ ಗಳಂತಹ ಪೂರ್ಣ ಸರಣಿಯ ಕೊಡುಗೆಗಳ ಮೂಲಕ, ಹೊಸ ಲೆಕ್ಟ್ರೋ ಸರಣಿಯು ವಿಭಿನ್ನ ಬಳಕೆದಾರರ ಅಗತ್ಯಗಳನ್ನು ಪೂರೈಸಲಿದೆ ಎಂದು ಹೇಳಿದರು.

ಹಲವು ಬಗೆಯ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಬಿಡುಗಡೆಗೊಳಿಸಿದ ಹೀರೋ

ಹೀರೋ ಲೆಕ್ಟ್ರೊ ಸೈಕಲ್ ಗಳ ವ್ಯಾಪ್ತಿಯು ಸಣ್ಣ ಹಾಗೂ ಮಧ್ಯಮ ದೂರದ ಪ್ರಯಾಣಕ್ಕೆ ಸೂಕ್ತವಾಗಿದೆ. ಲೀಷರ್ ಸರಣಿಯ ಸೈಕಲ್ ಗಳನ್ನು ವಿರಾಮದ ಸವಾರಿಗಾಗಿ ಹಾಗೂ ಫಿಟ್‌ನೆಸ್ ಸರಣಿಯ ಸೈಕಲ್ ಗಳನ್ನು ದೂರ ಸಾಗುವ ಫಿಟ್‌ನೆಸ್ ಉತ್ಸಾಹಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.

Most Read Articles

Kannada
English summary
Hero launches Lectro Electric bicycle range in India. Read in Kannada.
Story first published: Thursday, September 10, 2020, 19:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X