ಬೈಕ್ ರೈಡರ್‍ಗಳಿಗಾಗಿ ಬಂತು ಹೀರೋ ಸ್ಮಾರ್ಟ್ ಸನ್‍ಗ್ಲಾಸ್
ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಗ್ರಾಹಕರಿಗಾಗಿ ಹಲವಾರು ಫೀಚರ್ಸ್‍ಗಳನ್ನು ಹೊಂದಿರುವ ಸ್ಮಾರ್ಟ್ ಸನ್‍ಗ್ಲಾಸ್ ಅನ್ನು ಬಿಡುಗಡೆಗೊಳಿಸಿದೆ. ಹೀರೋ ಕಂಪನಿಯು ಹೆಚ್ಚಿನ ಗ್ರಾಹಕರನ್ನು ಸೆಳೆಯುವ ತಂತ್ರದಿಂದ ಹೊಸ ಸ್ಮಾರ್ಟ್ ಸನ್‍ಗ್ಲಾಸ್ ಅನ್ನು ಬಿಡುಗಡೆಗೊಳಿಸಿದೆ.

ಬೈಕ್ ರೈಡ್ ಮಾಡುವಾಗ ಸ್ಮಾರ್ಟ್ ಗ್ಲಾಸ್ ಧರಿಸಿದರೆ ಉತ್ತಮ ರೈಡಿಂಗ್ ಅನುಭವನ್ನು ನೀಡುತ್ತದೆ. ಮ್ಯೂಸಿಕ್, ರೇಡಿಯೋ ಮತ್ತು ಹ್ಯಾಂಡ್ಸ್ ಫ್ರೀ ಕರೆಗಳಂತಹ ಫೀಚರ್‍ಗಳು ಸ್ಮಾರ್ಟ್ ಸನ್‍ಗ್ಲಾಸ್ ಮೂಲಕ ಸಂಪರ್ಕ ಹೊಂದಿದೆ. ಇದಲ್ಲದೇ ಬೈಕಿನಲ್ಲಿ ತೆರಳುವ ವೇಳೆಯಲ್ಲಿ ದಾರಿ ಗೊತ್ತಿಲ್ಲದಿದ್ದರೆ ಈ ಸ್ಮಾರ್ಟ್ ಸನ್‍ಗ್ಲಾಸ್‍ನಲ್ಲಿ ನ್ಯಾವಿಗೇಷನ್ ಸಿಸ್ಟಂ ಅನ್ನು ಬಳಸಬಹುದು. ನೀವು ಮೊಬೈಲ್ ಪರದೆಯನ್ನು ವೀಕ್ಷಿಸಬೇಕಾದ ಅವಶ್ಯಕತೆ ಇಲ್ಲ. ಇದರಿಂದ ಆಗ ಆಗ ಮೊಬೈಲ್ ಪರದೆ ನೋಡುವ ಕಿರಿಕಿರಿ ತಪ್ಪುತ್ತದೆ.

ಹೀರೋ ಸ್ಮಾರ್ಟ್ ಸನ್‍ಗ್ಲಾಸ್ ಕಣ್ಣಿಗೆ ಯಾವುದೇ ಪರಿಣಾಮ ಬೀರುವುದಿಲ್ಲ. ಏಕೆಂದರೆ ಈ ಗ್ಲಾಸ್ ಅನ್ನು 100% ಯುವಿ ಸಂರಕ್ಷಿತ ಲೆನ್ಸ್ ನಿಂದ ತಯಾರಿಸಲಾಗಿದೆ. ಇದು ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಯುವಿ ಸ್ಟ್ಯಾಂಡರ್ಡ್ ಸನ್‍ಗ್ಲಾಸ್ ನಂತೆ ಇರುತ್ತದೆ.

ಈ ಹೀರೋ ಸ್ಮಾರ್ಟ್ ಸನ್‍ಗ್ಲಾಸ್ ಓಪನ್ ಇಯರ್ ಸೌಂಡ್ ತಂತ್ರಜ್ಞಾನದಿಂದ ಕೊಡಿದೆ. ಈ ಸನ್‍ಗ್ಲಾಸ್ ನಲ್ಲಿ ಉನ್ನತ ಮಟ್ಟದ ಸಿಎನ್‍ಸಿಆರ್ ಬ್ಲೂಟತ್ ಚಿಪ್‍ಸೆಟ್ ಅನ್ನು ಹೊಂದಿದೆ. ಸನ್‍ಗ್ಲಾಸ್ ನಲ್ಲಿ ಇತ್ತೀಚಿನ ಬ್ಲೂಟತ್ 4.1 ಸ್ಪೀಕರ್‍ಗಳನ್ನು ಹೊಂದಿರುವುದರಿಂದ ಗ್ರಾಹಕರು ಉತ್ತಮ ಧ್ವನಿ ಗುಣಮಟ್ಟವನ್ನು ನಿರೀಕ್ಷಿಸಬಹುದು.

ಸನ್‍ಗ್ಲಾಸ್ ಅನ್ನು ಹೆಚ್ಚಾಗಿ ಬೈಕ್ ರೈಡರ್‍ಗಳು ಬಳಸುವುದರಿಂದ ಈ ಸ್ಮಾರ್ಟ್ ಸನ್‍ಗ್ಲಾಸ್ ಅನ್ನು ಟ್ರೆಂಡಿಯಾಗಿ ಅಭಿವೃದ್ದಿಪಡಿಸಿದ್ದಾರೆ. ಆಕರ್ಷಕವಾದ ವಿನ್ಯಾಸವನ್ನು ಈ ಸ್ಮಾರ್ಟ್ ಸನ್‍ಗ್ಲಾಸ್ ಹೊಂದಿದೆ. ಹೀರೋ ಸ್ಮಾರ್ಟ್ ಸನ್‍ಗ್ಲಾಸ್ ಯುವ ಬೈಕ್ ರೈಡರ್‍ಗಳನ್ನು ಸೆಳೆಯುವಂತೆ ಅಭಿವೃದ್ಧಿಪಡಿಸಿದ್ದಾರೆ.

ಕ್ಲಾಸಿಕ್ ಸನ್‍ಗ್ಲಾಸ್‍ಗಳಿಗೆ ಹೋಲಿಸಿದರೆ ಈ ಸ್ಮಾರ್ಟ್ ಸನ್‍ಗ್ಲಾಸ್‍ನ ವಿಸ್ತಾರವಾದ ಮತ್ತು ದಪ್ಪವಾಗಿರುವ ಟೆಂಪಲ್‍ನಲ್ಲಿ ಮಾತ್ರ ಬದಲಾವಣೆಯನ್ನು ಕಾಣಬಹುದು. ಟೆಂಪ್‍ಲ್‍ನಲ್ಲಿ ಸ್ಪೀಕರ್ ಮತ್ತು ಬ್ಲೂಟತ್ ಸಿಸ್ಟಂ ಅನ್ನು ಹೊಂದಿದೆ.

ಹೀರೋ ಸ್ಮಾರ್ಟ್ ಗ್ಲಾಸ್‍ನ ಪ್ಲಸ್ ಪಾಯಿಂಟ್ ಅಂದರೆ ಈ ಸ್ಮಾರ್ಟ್ ಗ್ಲಾಸ್ ಅನ್ನು ಸುಲಭವಾಗಿ ಧರಿಸಬಹುದು ಮತ್ತು ತೆಗೆಯಬಹುದಾಗಿದೆ. ಬೈಕ್ ರೈಡರ್‍ಗಳಿಗೆ ಈ ಸ್ಮಾರ್ಟ್ ಸನ್‍ಗ್ಲಾಸ್ ಉತ್ತಮ ಆಯ್ಕೆಯಾಗಿದೆ.

ಹೀರೋ ಸ್ಮಾರ್ಟ್ ಸನ್‍ಗ್ಲಾಸ್ ಧರಿಸುವ ಮೂಲಕ ಹೆಚ್ಚಿನ ಲಾಭವು ಕೂಡ ಇದೆ. ಬೈಕ್ ರೈಡ್ ಮಾಡುವಾಗ ಸ್ಟೈಲ್ ಆಗಿರುವ ಸನ್‍ಗ್ಲಾಸ್ ಮತ್ತು ಇಯರ್‍ಪೋನ್‍ಗಳಂತಹ ವಸ್ತುಗಳ ಅಗತ್ಯವಿರುವುದಿಲ್ಲ. ಹೀರೋ ಸ್ಮಾರ್ಟ್ ಸನ್‍ಗ್ಲಾಸ್ ಹೆಚ್ಚು ತೆರದ ಮುಖದ ಹೆಲ್ಮೆಟ್‍ಗಳೊಂದಿಗೆ ಬಳಸಲು ಹೆಚ್ಚು ಸೂಕ್ತವಾಗಿದೆ.

ಹೀರೋ ಸ್ಮಾರ್ಟ್ ಸನ್‍ಗ್ಲಾಸ್ ಅನ್ನು ರೂ.2,999 ಬೆಲೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೀರೋ ಸ್ಮಾರ್ಟ್ ಸನ್‍ಗ್ಲಾಸ್ ತುಸು ದುಬಾರಿ ಎನಿಸಿದರು ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ಹೀರೋ ಸ್ಮಾರ್ಟ್ ಸನ್‍ಗ್ಲಾಸ್ ಹೀರೋ ಡೀಲರ್‍ಗಳ ಬಳಿ ಅಥವಾ ಆನ್‍ಲೈನ್ ಮೂಲಕ ಖರೀದಿಸಬಹುದು.


Click it and Unblock the Notifications








