ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಮೆಸ್ಟ್ರೋ ಎಡ್ಜ್ 125

ಬಿ‍ಎಸ್ 6 ಮಾಲಿನ್ಯ ನಿಯಮಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿವೆ. ಏಪ್ರಿಲ್ 1ರ ನಂತರ ಬಿ‍ಎಸ್ 4 ಎಂಜಿನ್ ಹೊಂದಿರುವ ವಾಹನಗಳನ್ನು ರಿಜಿಸ್ಟರ್ ಮಾಡಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲಾ ವಾಹನ ತಯಾರಕ ಕಂಪನಿಗಳೂ ತಮ್ಮ ವಾಹನಗಳನ್ನು ಬಿಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಳಿಸುತ್ತಿವೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಮೆಸ್ಟ್ರೋ ಎಡ್ಜ್ 125

ಈಗ ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಮೆಸ್ಟ್ರೋ ಎಡ್ಜ್ 125 ಸ್ಕೂಟರ್ ಅನ್ನು ಬಿಎಸ್ 6 ಎಂಜಿನ್‍‍ನೊಂದಿಗೆ ಬಿಡುಗಡೆಗೊಳಿಸಿದೆ. ಮೆಸ್ಟ್ರೋ ಎಡ್ಜ್ 125 ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.67,950ಗಳಾಗಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಮೆಸ್ಟ್ರೋ ಎಡ್ಜ್ 125

ಹೀರೊ ಮೋಟೊಕಾರ್ಪ್ ಕಂಪನಿಯು ಮೆಸ್ಟ್ರೋ ಎಡ್ಜ್ 125 ಸ್ಕೂಟರ್ ಅನ್ನು ಮೂರು ಮಾದರಿಗಳಲ್ಲಿ ಬಿಡುಗಡೆಗೊಳಿಸಿದೆ. ಅಲಾಯ್ ವ್ಹೀಲ್ ಹಾಗೂ ಡ್ರಮ್ ಬ್ರೇಕ್ ಹೊಂದಿರುವ ಸ್ಕೂಟರಿನ ಬೆಲೆ ರೂ.67,950ಗಳಾದರೆ, ಅಲಾಯ್ ವ್ಹೀಲ್ ಹೊಂದಿರುವ ಡಿಸ್ಕ್ ಬ್ರೇಕ್ ಸ್ಕೂಟರಿನ ಬೆಲೆ ರೂ.70,150ಗಳಾಗಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಮೆಸ್ಟ್ರೋ ಎಡ್ಜ್ 125

ಡಿಸ್ಕ್ ಬ್ರೇಕ್ ವಿತ್ ಅಲಾಯ್ ವೀಲ್ಸ್ ಹಾಗೂ ಪ್ರಿಸ್ಮ್ಯಾಟಿಕ್ ಕಲರ್ ಟೆಕ್ನಾಲಜಿ ಹೊಂದಿರುವ ಮೆಸ್ಟ್ರೋ ಸ್ಕೂಟರಿನ ಮತ್ತೊಂದು ಮಾದರಿಯ ಬೆಲೆ ರೂ.70,650ಗಳಾಗಿದೆ. ಇವೆರಡೂ ಸ್ಕೂಟರ್‍‍ಗಳು 125 ಸಿಸಿಯ ಬಿ‍ಎಸ್ 6 ಎಂಜಿನ್ ಹೊಂದಿವೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಮೆಸ್ಟ್ರೋ ಎಡ್ಜ್ 125

ಈ ಎಂಜಿನ್‌ನಲ್ಲಿ ಕಂಪನಿಯು ಫ್ಯೂಯಲ್ ಇಂಜೆಕ್ಷನ್ ಟೆಕ್ನಾಲಜಿಯ ಜೊತೆಗೆ ಎಕ್ಸ್‌ಸೆನ್ಸ್ ಟೆಕ್ನಾಲಜಿಯನ್ನೂ ಬಳಸಿದೆ. ಈ ಎಂಜಿನ್ 7,000 ಆರ್‌ಪಿಎಂನಲ್ಲಿ 9 ಬಿಹೆಚ್‌ಪಿ ಪವರ್ ಹಾಗೂ 5,500 ಆರ್‌ಪಿಎಂನಲ್ಲಿ 10.4 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಮೆಸ್ಟ್ರೋ ಎಡ್ಜ್ 125

ಹೊಸ ಬಿಎಸ್ 6 ಎಂಜಿನ್ 11%ನಷ್ಟು ಹೆಚ್ಚು ಇಂಧನ ಉಳಿತಾಯ ಹಾಗೂ 10%ನಷ್ಟು ಆಕ್ಸೆಲರೇಷನ್ ಒದಗಿಸುತ್ತದೆ ಎಂದು ಹೀರೋ ಮೋಟೊಕಾರ್ಪ್ ಹೇಳಿದೆ. ಹೀರೋ ಮೋಟೊಕಾರ್ಪ್ ಕಂಪನಿಯ ಐ3 ಎಸ್ ತಂತ್ರಜ್ಞಾನವನ್ನು ಈ ಸ್ಕೂಟರ್‌ನಲ್ಲಿ ಅಳವಡಿಸಲಾಗಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಮೆಸ್ಟ್ರೋ ಎಡ್ಜ್ 125

ಈ ಸ್ಕೂಟರ್‌ನಲ್ಲಿ ಬಿಎಸ್ 4 ಸ್ಕೂಟರಿನಲ್ಲಿರುವಂತಹ ವಿನ್ಯಾಸವನ್ನು ಅಳವಡಿಸಲಾಗಿದೆ. ಈ ಸ್ಕೂಟರ್‌‍‍ನಲ್ಲಿ ಹಲವು ನವೀಕರಣಗಳನ್ನು ಮಾಡಲಾಗಿದೆ. ಮೆಸ್ಟ್ರೋ 125 ಸ್ಕೂಟರಿನಲ್ಲಿ ಹೊಸ ಎಲ್ಇಡಿ ಇಂಡಿಕೇಟರ್‍‍ಗಳನ್ನು ಅಳವಡಿಸಲಾಗಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಮೆಸ್ಟ್ರೋ ಎಡ್ಜ್ 125

ಈ ಹೊಸ ಸ್ಕೂಟರ್ ಅನ್ನು ಹೊಸ ಮೇಟ್ ಗ್ರೇ ಸಿಲ್ವರ್ ಬಣ್ಣದಲ್ಲಿ ಮಾರಾಟ ಮಾಡಲಾಗುವುದು. ಬಿಎಸ್ 6 ಎಂಜಿನ್ ಹೊಂದಿರುವ ಹೀರೋ ಮೆಸ್ಟ್ರೋ ಎಡ್ಜ್ 125 ಸ್ಕೂಟರ್ ಅನ್ನು ಹೊಸದಾದ ಹಾಗೂ ವಿಭಿನ್ನವಾದ ಪ್ರಿಸ್ಮಾಟಿಕ್ ಪರ್ಪಲ್ ಬಣ್ಣದೊಂದಿಗೆ ಬಿಡುಗಡೆಗೊಳಿಸಲಾಗಿದೆ.

Most Read Articles

Kannada
English summary
Hero Maestro Edge 125 BS6 launched. Read in Kannada.
Story first published: Saturday, February 15, 2020, 16:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X