YouTube

ದ್ವಿಚಕ್ರ ವಾಹನ ಆಂಬ್ಯುಲೆನ್ಸ್‌ಗಳನ್ನು ಆರೋಗ್ಯ ಇಲಾಖೆಗೆ ದಾನ ಮಾಡಿದ ಹೀರೋ ಮೋಟೊಕಾರ್ಪ್

ಭಾರತ ಮೂಲದ ಹೀರೋ ಮೋಟೊಕಾರ್ಪ್ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಗಳಲ್ಲಿ ಒಂದು. ಇದರ ಪ್ರಧಾನ ಕಚೇರಿ ನವದೆಹಲಿಯಲ್ಲಿದೆ. ಹೀರೋ ಮೋಟೊಕಾರ್ಪ್ ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ವಾಹನಗಳನ್ನು ನೀಡುವುದರ ಜೊತೆಗೆ ಸಮಾಜಕ್ಕೂ ಮಹತ್ವದ ಕೊಡುಗೆಗಳನ್ನು ನೀಡುತ್ತಿದೆ.

ದ್ವಿಚಕ್ರ ವಾಹನ ಆಂಬ್ಯುಲೆನ್ಸ್‌ಗಳನ್ನು ಆರೋಗ್ಯ ಇಲಾಖೆಗೆ ದಾನ ಮಾಡಿದ ಹೀರೋ ಮೋಟೊಕಾರ್ಪ್

ಈಗ ಹೀರೋ ಮೋಟೊಕಾರ್ಪ್ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿರುವ ಆರೋಗ್ಯಹಾಗೂ ಕುಟುಂಬ ಕಲ್ಯಾಣ ಇಲಾಖೆಗೆ 4 ದ್ವಿಚಕ್ರ ವಾಹನ ಆಂಬ್ಯುಲೆನ್ಸ್‌ಗಳನ್ನು (ಫಸ್ಟ್ ರೆಸ್ಪಾನ್ಸ್ ವೆಹಿಕಲ್) ದಾನ ಮಾಡಿದೆ. ಹೀರೋ ಎಕ್ಸ್‌ಟ್ರೀಮ್ 200 ಆರ್ ಬೈಕಿನಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ, ಈ ದ್ವಿಚಕ್ರವಾಹನ ಆಂಬ್ಯುಲೆನ್ಸ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ.

ದ್ವಿಚಕ್ರ ವಾಹನ ಆಂಬ್ಯುಲೆನ್ಸ್‌ಗಳನ್ನು ಆರೋಗ್ಯ ಇಲಾಖೆಗೆ ದಾನ ಮಾಡಿದ ಹೀರೋ ಮೋಟೊಕಾರ್ಪ್

ಈ ದ್ವಿಚಕ್ರ ವಾಹನ ಆಂಬ್ಯುಲೆನ್ಸ್‌ಗಳನ್ನು ಗ್ರಾಮೀಣ ಪ್ರದೇಶದಲ್ಲಿರುವ ರೋಗಿಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲು ಬಳಸಲಾಗುತ್ತದೆ. ಇದಕ್ಕಾಗಿ ಈ ದ್ವಿಚಕ್ರ ವಾಹನ ಆಂಬ್ಯುಲೆನ್ಸ್‌ನಲ್ಲಿ ಉದ್ದವಾಗಿರುವ ಸ್ಟ್ರೆಚರ್ ಅನ್ನು ಜೋಡಿಸಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ದ್ವಿಚಕ್ರ ವಾಹನ ಆಂಬ್ಯುಲೆನ್ಸ್‌ಗಳನ್ನು ಆರೋಗ್ಯ ಇಲಾಖೆಗೆ ದಾನ ಮಾಡಿದ ಹೀರೋ ಮೋಟೊಕಾರ್ಪ್

ಇದರ ಜೊತೆಗೆ ಈ ದ್ವಿಚಕ್ರ ವಾಹನ ಆಂಬ್ಯುಲೆನ್ಸ್‌ನಲ್ಲಿ ಅಗತ್ಯ ವೈದ್ಯಕೀಯ ಸಾಧನಗಳಾದ ಫಸ್ಟ್ ಏಡ್ ಕಿಟ್‌ ಹಾಗೂ ಆಕ್ಸಿಜನ್ ಸಿಲಿಂಡರ್‌ಗಳನ್ನು ಒದಗಿಸಲಾಗಿದೆ. ಈ ದ್ವಿಚಕ್ರ ವಾಹನ ಆಂಬ್ಯುಲೆನ್ಸ್‌ನಲ್ಲಿ ಫೈರ್ ಎಕ್ಸ್ ಟೀಂಗ್ಯುಷರ್ ಅನ್ನು ಸಹ ಅಳವಡಿಸಲಾಗಿದೆ.

ದ್ವಿಚಕ್ರ ವಾಹನ ಆಂಬ್ಯುಲೆನ್ಸ್‌ಗಳನ್ನು ಆರೋಗ್ಯ ಇಲಾಖೆಗೆ ದಾನ ಮಾಡಿದ ಹೀರೋ ಮೋಟೊಕಾರ್ಪ್

ಈ ದ್ವಿಚಕ್ರ ವಾಹನ ಆಂಬ್ಯುಲೆನ್ಸ್‌ ಎಲ್ಇಡಿ ಫ್ಲ್ಯಾಷ್ ಲೈಟ್ ಹಾಗೂ ಸೈರನ್ ಗಳನ್ನು ಹೊಂದಿದೆ. ಹೀರೋ ಮೋಟೊಕಾರ್ಪ್ ಕಂಪನಿಯು ಈ ದ್ವಿಚಕ್ರ ವಾಹನ ಆಂಬ್ಯುಲೆನ್ಸ್‌ನಲ್ಲಿ ಎಮರ್ಜೆನ್ಸಿ ವೈರ್‌ಲೆಸ್ ಪಬ್ಲಿಕ್ ನೋಟಿಸ್ ಸಿಸ್ಟಂ ಅನ್ನು ಸಹ ನೀಡಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ದ್ವಿಚಕ್ರ ವಾಹನ ಆಂಬ್ಯುಲೆನ್ಸ್‌ಗಳನ್ನು ಆರೋಗ್ಯ ಇಲಾಖೆಗೆ ದಾನ ಮಾಡಿದ ಹೀರೋ ಮೋಟೊಕಾರ್ಪ್

ಕರೋನಾ ವೈರಸ್ ಪ್ರಸ್ತುತ ಭಾರತದಲ್ಲಿ ವೇಗವಾಗಿ ಹರಡುತ್ತಿದೆ. ಹೆಚ್ಚಿನ ಜನರು ಕರೋನಾ ವೈರಸ್‌ನಿಂದ ಸೋಂಕಿಗೆ ಒಳಗಾಗುತ್ತಿದ್ದು, ಆಂಬ್ಯುಲೆನ್ಸ್‌ಗಳ ಕೊರತೆ ಎದುರಾಗಿದೆ. ರೋಗಿಗಳು ಆಂಬ್ಯುಲೆನ್ಸ್‌ಗಳಿಗಾಗಿ ಕಾಯಬೇಕಾದ ಪರಿಸ್ಥಿತಿ ಈಗ ಹೆಚ್ಚಿನ ಪ್ರದೇಶಗಳಲ್ಲಿ ಕಂಡುಬರುತ್ತಿದೆ.

ದ್ವಿಚಕ್ರ ವಾಹನ ಆಂಬ್ಯುಲೆನ್ಸ್‌ಗಳನ್ನು ಆರೋಗ್ಯ ಇಲಾಖೆಗೆ ದಾನ ಮಾಡಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ಒದಗಿಸುವ ಈ ದ್ವಿಚಕ್ರ ವಾಹನ ಆಂಬ್ಯುಲೆನ್ಸ್‌ಗಳ ಮೂಲಕ ಪರಿಸ್ಥಿತಿಯು ಕೆಲ ಮಟ್ಟಿಗೆ ಸುಧಾರಿಸುವ ಸಾಧ್ಯತೆಗಳಿವೆ. ಹೀರೋ ಮೋಟೊಕಾರ್ಪ್ ಕಂಪನಿಯು ಎಕ್ಸ್ಟ್ರೀಮ್ 200 ಆರ್ ಬೈಕ್ ಆಧಾರಿತ ದ್ವಿಚಕ್ರ ಆಂಬ್ಯುಲೆನ್ಸ್‌ಗಳನ್ನು ಆರೋಗ್ಯ ಸೇವೆಗಾಗಿ ನೀಡುತ್ತಿರುವುದು ಇದೇ ಮೊದಲಲ್ಲ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ದ್ವಿಚಕ್ರ ವಾಹನ ಆಂಬ್ಯುಲೆನ್ಸ್‌ಗಳನ್ನು ಆರೋಗ್ಯ ಇಲಾಖೆಗೆ ದಾನ ಮಾಡಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ಇದುವರೆಗೂ ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಆಂಧ್ರಪ್ರದೇಶ ಹಾಗೂ ಹಿಮಾಚಲ ಪ್ರದೇಶದ ರಾಜ್ಯಗಳಿಗೆ 25 ದ್ವಿಚಕ್ರ ವಾಹನ ಆಂಬ್ಯುಲೆನ್ಸ್‌ಗಳನ್ನು ದಾನ ಮಾಡಿದೆ.

ದ್ವಿಚಕ್ರ ವಾಹನ ಆಂಬ್ಯುಲೆನ್ಸ್‌ಗಳನ್ನು ಆರೋಗ್ಯ ಇಲಾಖೆಗೆ ದಾನ ಮಾಡಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಚಟುವಟಿಕೆಗಳ ಭಾಗವಾಗಿ ಈ ಕಾರ್ಯಗಳನ್ನು ಮಾಡುತ್ತಿದೆ. ಆರೋಗ್ಯ ಇಲಾಖೆಗೆ ದ್ವಿಚಕ್ರ ವಾಹನ ಆಂಬ್ಯುಲೆನ್ಸ್‌ಗಳನ್ನು ಒದಗಿಸುವುದರ ಜೊತೆಗೆ ಹೀರೋ ಮೋಟೊಕಾರ್ಪ್ ಕಂಪನಿಯು ವಿಶೇಷ ಪರಿಕರಗಳನ್ನು ಹೊಂದಿರುವ ದ್ವಿಚಕ್ರ ವಾಹನಗಳನ್ನು ಪೊಲೀಸ್ ಇಲಾಖೆಗೆ ನೀಡಿದೆ.

Most Read Articles
 
Kannada
English summary
Hero Motocorp donates bike ambulance to health department. Read in Kannada.
Story first published: Thursday, October 15, 2020, 14:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X