ಕೋವಿಡ್ 19: ಡೀಲರ್ಸ್‌ಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಹೀರೋ ಮೋಟೊಕಾರ್ಪ್

ಕರೋನಾ ವೈರಸ್ ಮಾಹಾಮಾರಿಯಿಂದಾಗಿ ವಿಶ್ವಾದ್ಯಂತ ಬಹುತೇಕ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣವಾಗಿ ನೆಲಕಚ್ಚಿದ್ದು, ಯಾವುದೇ ರೀತಿಯ ವ್ಯಾಪಾರ-ವಹಿವಾಟು ಇಲ್ಲದಿರುವುದು ಉತ್ಪಾದನಾ ಕಂಪನಿಗಳಿಗೆ ಭಾರೀ ಪ್ರಮಾಣದ ನಷ್ಟ ಉಂಟಾಗುತ್ತಿದೆ.

ಡೀಲರ್ಸ್‌ಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಹೀರೋ ಮೋಟೊಕಾರ್ಪ್

ಆದರೆ ಪರಿಸ್ಥಿತಿಗೆ ಅನುಗುಣವಾಗಿ ಲಾಕ್‌ಡೌನ್ ಪಾಲನೆ ಮಾಡಲೇಬೇಕಾದ ಅನಿವಾರ್ಯತೆಗಳಿದ್ದು, ಸಂಕಷ್ಟದಲ್ಲಿರುವ ಆಟೋ ಮಾರಾಟಗಾರರಿಗೆ ಉತ್ಪಾದನಾ ಕಂಪನಿಗಳು ಸಹಾಯಕ್ಕೆ ಮುಂದಾಗಿವೆ. ಹೆಚ್ಚುವರಿ ಲಾಭಾಂಶ ಮತ್ತು ತುರ್ತು ಪರಿಸ್ಥಿತಿಯಲ್ಲಿ ಆರ್ಥಿಕ ಹಿನ್ನಡೆಯನ್ನು ಸರಿಪಡಿಸಿಕೊಳ್ಳಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದ್ದು, ಹೀರೋ ಮೋಟೊಕಾರ್ಪ್ ಸಹ ತನ್ನ ಅಧಿಕೃತ ಬೈಕ್ ಮಾರಾಟಗಾರರಿಗೆ ವಿವಿಧ ಮಾದರಿಯ ಆರ್ಥಿಕ ಬೆಂಬಲವನ್ನು ನೀಡಲಾಗಿದೆ.

ಡೀಲರ್ಸ್‌ಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಹೀರೋ ಮೋಟೊಕಾರ್ಪ್

ಸ್ಟಾಕ್ ಪ್ರಮಾಣದಿಂದಾಗಿ ಆಗುತ್ತಿರುವ ನಷ್ಟ ಮತ್ತು ಲಾಕ್‌ಡೌನ್‌ನಿಂದಾಗಿ ಮಾರ್ಗಮಧ್ಯೆದಲ್ಲೇ ಸಿಲುಕಿರುವ ವಾಹನಗಳ ಸಾರಿಗೆ ವೆಚ್ಚ ಸೇರಿದಂತೆ ಪ್ರಮುಖ ಆರ್ಥಿಕ ಸಹಾಯದ ಪ್ಯಾಕೇಜ್ ನೀಡಿರುವ ಹೀರೋ ಕಂಪನಿಯು ಬಾಕಿ ಇರುವ ಬಿಲ್‌ಗಳ ಮೊತ್ತವನ್ನು ಕೂಡಲೇ ವರ್ಗಾವಣೆ ಮಾಡುವುದಾಗಿ ತಿಳಿಸಿದೆ.

ಡೀಲರ್ಸ್‌ಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಹೀರೋ ಮೋಟೊಕಾರ್ಪ್

ಹಾಗೆಯೇ ಸ್ಟಾಕ್ ಪ್ರಮಾಣದ ಮೇಲೆ ಬಡ್ಡಿ ಕಟ್ಟಬೇಕಿರುವ ಅಧಿಕೃತ ಡೀಲರ್ಸ್‌ಗಳ ಹೊರೆಯನ್ನು ತಗ್ಗಿಸಲಿರುವ ಹೀರೋ ಮೋಟಾಕಾರ್ಪ್ ಕಂಪನಿಯು ಅಧಿಕೃತ ಡೀಲರ್ಸ್‌ಗಳು ಯಾವುದೇ ರೀತಿಯ ಆರ್ಥಿಕ ದಿವಾಳಿಗೆ ಸಿಲುಕದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದಿದೆ.

MOST READ: ಲಾಕ್‌ಡೌನ್ ಸಂಕಷ್ಟ- ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5 ಸಾವಿರ ಪರಿಹಾರ..!

ಡೀಲರ್ಸ್‌ಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಹೀರೋ ಮೋಟೊಕಾರ್ಪ್

ಜೊತೆಗೆ ವೈರಸ್ ಹರಡದಂತೆ ಎಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿರುವ ಹೀರೋ ಕಂಪನಿಯು ಆನ್‌ಲೈನ್ ಮೂಲಕ ಬೈಕ್ ಮಾರಾಟವನ್ನು ಮುಂದುವರಿಸುವ ಸಿದ್ದತೆಯಲ್ಲಿದ್ದು, ಗ್ರಾಹಕರ ಸೇವೆಯಲ್ಲಿ ಸುರಕ್ಷತೆ ಕಾಯ್ದಕೊಳ್ಳಲು ಎಲ್ಲಾ ಅಗತ್ಯ ಕ್ರಮಗಳನ್ನು ಸಿದ್ದತೆ ಮಾಡಿಕೊಳ್ಳುತ್ತಿದೆ.

ಡೀಲರ್ಸ್‌ಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಹೀರೋ ಮೋಟೊಕಾರ್ಪ್

ಸಂಕಷ್ಟದ ಸಮಯದಲ್ಲಿ ವ್ಯವಹಾರ ಅಭಿವೃದ್ದಿಯ ಜೊತೆ ಜೊತೆಗೆ ಉದ್ಯೋಗಿಗಳಿಗಳು ಗರಿಷ್ಠ ಸುರಕ್ಷತೆ ನೀಡಲು ನಾವು ಬದ್ದ ಎಂದಿರುವ ಹೀರೋ ಕಂಪನಿಯು ಲಾಕ್‌ಡೌನ್ ತೆರವು ನಂತರ ಬೈಕ್ ಮಾರಾಟದಲ್ಲಿ ಹಲವಾರು ಹೊಸ ಸುರಕ್ಷಾ ಕ್ರಮಗಳೊಂದಿಗೆ ವ್ಯವಹಾರ ಕೈಗೊಳ್ಳಲು ಸಿದ್ದವಾಗಿದೆ.

MOST READ: ಲಾಕ್‌ಡೌನ್ ವೇಳೆ ಕಾರು ಚಾಲನೆ ಮಾಡಿ ಸಿಕ್ಕಿಬಿದ್ದ ಮಹಿಳೆಯಿಂದ ಹೈಡ್ರಾಮಾ..

ಡೀಲರ್ಸ್‌ಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಹೀರೋ ಮೋಟೊಕಾರ್ಪ್

ಇನ್ನು ಕಾರ್ಪೋರೆಟ್ ಸಾಮಾಜಿಕ ಹೊಣೆಗಾರಿಕೆ ನೀಡಿ ಅಡಿ ಸಂಕಷ್ಟದಲ್ಲಿರುವ ಸರ್ಕಾರದ ಜೊತೆ ಕೈಜೋಡಿಸಿರುವ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ದೇಣಿಗೆ ಜೊತೆಗೆ ವೈದ್ಯಕೀಯ ಉಪಕರಣಗಳನ್ನು ಸಹ ಉತ್ಪಾದನೆ ಮಾಡಿ ಒದಗಿಸುತ್ತಿದ್ದು, ಹೀರೋ ಕಂಪನಿಯು ಕೂಡಾ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದೆ.

ಡೀಲರ್ಸ್‌ಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಹೀರೋ ಮೋಟೊಕಾರ್ಪ್

ಮಹಾಮಾರಿ ಕರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಈ ವೇಳೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನಕ್ಕೆ ಆಟೋ ಉತ್ಪಾದನಾ ಕಂಪನಿಗಳು ತಮ್ಮ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ಬೆನ್ನಲುಬಾಗಿ ಸರ್ಕಾರದ ಜೊತೆ ಕೈಜೋಡಿಸಿವೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಡೀಲರ್ಸ್‌ಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಹೀರೋ ಮೋಟೊಕಾರ್ಪ್

ಕರೋನಾ ವಿರುದ್ದ ಹೋರಾಟಕ್ಕೆ ರೂ.100 ಕೋಟಿ ದೇಣಿಗೆ ನೀಡಿರುವ ಹೀರೋ ಕಂಪನಿಯು ರೂ.50 ಕೋಟಿ ಹಣಕಾಸು ನೆರವು ನೀಡಿದ್ದು, ಇನ್ನುಳಿದ ರೂ.50 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಉಪಕರಣಗಳನ್ನು ನೀಡುವ ಮೂಲಕ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದೆ.

Article Published On: Saturday, April 25, 2020, 21:03 [IST]
English summary
Hero Motocorp gives financial package to dealer partners. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+