ಬಿಎಸ್ 6 ಬೈಕುಗಳ ಬೆಲೆ ಏರಿಕೆ ಮಾಡಿದ ಹೀರೋ ಮೋಟೊಕಾರ್ಪ್

ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ತನ್ನ ಪ್ಯಾಶನ್ ಪ್ರೊ, ಗ್ಲಾಮರ್ 125, ಎಕ್ಸ್‌ಟ್ರೀಮ್ 160 ಆರ್ ಹಾಗೂ ಎಕ್ಸ್‌ಪಲ್ಸ್ 200 ಬೈಕುಗಳ ಬೆಲೆಯನ್ನು ಹೆಚ್ಚಿಸಿದೆ. ಈ ಮೂಲಕ ಕಂಪನಿಯು ತನ್ನ ಬಿಎಸ್ 6 ಸರಣಿಯ ಬೈಕುಗಳ ಬೆಲೆಯನ್ನು ಏರಿಕೆ ಮಾಡಿದೆ.

ಬಿಎಸ್ 6 ಬೈಕುಗಳ ಬೆಲೆ ಏರಿಕೆ ಮಾಡಿದ ಹೀರೋ ಮೋಟೊಕಾರ್ಪ್

ಹೆಚ್ಚುತ್ತಿರುವ ವೆಚ್ಚದಿಂದಾಗಿ ಬೆಲೆ ಏರಿಕೆ ಮಾಡಿರುವುದಾಗಿ ಕಂಪನಿ ತಿಳಿಸಿದೆ. ಆದರೆ ಈ ಬೆಲೆ ಹೆಚ್ಚಳ ಸಾಧಾರಣವಾಗಿದ್ದು ರೂ.750ರಿಂದ ರೂ.2,050ಗಳವರೆಗೆ ಹೆಚ್ಚಿಸಲಾಗಿದೆ. ಹೀರೋ ಪ್ಯಾಶನ್ ಪ್ರೊನ ಡ್ರಮ್ ಹಾಗೂ ಡಿಸ್ಕ್ ಬ್ರೇಕ್ ಮಾದರಿಗಳ ಬೆಲೆಯನ್ನು ರೂ.760ಗಳವರೆಗೆ ಹೆಚ್ಚಿಸಲಾಗಿದೆ. ಬೆಲೆ ಏರಿಕೆಯ ನಂತರ ಪ್ಯಾಶನ್ ಪ್ರೊ ಡ್ರಮ್‌ ಮಾದರಿಯ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.66,500ಗಳಾದರೆ, ಡಿಸ್ಕ್‌ ಮಾದರಿಯ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.68,700ಗಳಾಗಿದೆ.

ಬಿಎಸ್ 6 ಬೈಕುಗಳ ಬೆಲೆ ಏರಿಕೆ ಮಾಡಿದ ಹೀರೋ ಮೋಟೊಕಾರ್ಪ್

ಹೊಸ ಗ್ಲಾಮರ್ 125 ಬೈಕಿನ ಬೆಲೆಯನ್ನು ರೂ.1,250ಗಳವರೆಗೆ ಹೆಚ್ಚಿಸಲಾಗಿದೆ. ಬೆಲೆ ಏರಿಕೆಯ ನಂತರ ಹೊಸ ಗ್ಲಾಮರ್‌ನ ಡ್ರಮ್ ಮಾದರಿಯ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.71,000ಗಳಾದರೆ, ಡಿಸ್ಕ್ ಮಾದರಿಯ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.74,500ಗಳಾಗಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಬಿಎಸ್ 6 ಬೈಕುಗಳ ಬೆಲೆ ಏರಿಕೆ ಮಾಡಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ಕಂಪನಿಯ ಎಕ್ಸ್‌ಪಲ್ಸ್ 200 ಬೈಕಿನ ಬೆಲೆಯನ್ನು ರೂ.1,940ಗಳವರೆಗೆ ಹೆಚ್ಚಿಸಲಾಗಿದೆ. ಬೆಲೆ ಏರಿಕೆಯ ನಂತರ ಎಕ್ಸ್‌ಪಲ್ಸ್ 200 ಬೈಕಿನ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.1,13,730ಗಳಾಗಿದೆ. ಹಳೆಯ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.1,11,790ಗಳಾಗಿತ್ತು.

ಬಿಎಸ್ 6 ಬೈಕುಗಳ ಬೆಲೆ ಏರಿಕೆ ಮಾಡಿದ ಹೀರೋ ಮೋಟೊಕಾರ್ಪ್

ಇತ್ತೀಚೆಗೆ ಬಿಡುಗಡೆಯಾದ ಹೀರೋ ಎಕ್ಸ್‌ಟ್ರೀಮ್ 160 ಆರ್ ಬೈಕಿನ ಬೆಲೆಯನ್ನೂ ಹೆಚ್ಚಿಸಲಾಗಿದೆ. ಹೀರೋ ಎಕ್ಸ್‌ಟ್ರೀಮ್ 160 ಆರ್ ಡ್ರಮ್ ಮಾದರಿಯ ಬೆಲೆಯನ್ನು ರೂ.2,050 ಹಾಗೂ ಡಿಸ್ಕ್ ಮಾದರಿಯ ಬೆಲೆಯನ್ನು ರೂ.1,550ಗಳವರೆಗೆ ಹೆಚ್ಚಿಸಲಾಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಬಿಎಸ್ 6 ಬೈಕುಗಳ ಬೆಲೆ ಏರಿಕೆ ಮಾಡಿದ ಹೀರೋ ಮೋಟೊಕಾರ್ಪ್

ಬೆಲೆ ಏರಿಕೆಯ ನಂತರ ಹೀರೋ ಎಕ್ಸ್‌ಟ್ರೀಮ್ 160 ಆರ್ ಡ್ರಮ್ ಮಾದರಿಯ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.1,02,000ಗಳಾಗಿದೆ. ಡಿಸ್ಕ್ ಮಾದರಿಯ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.1,05,050ಗಳಾಗಿದೆ.

ಬಿಎಸ್ 6 ಬೈಕುಗಳ ಬೆಲೆ ಏರಿಕೆ ಮಾಡಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ಕಂಪನಿಯು ಹೆಚ್‌ಎಫ್ ಡಿಲಕ್ಸ್ ಹಾಗೂ ಸ್ಪ್ಲೆಂಡರ್ 100 ಸಿಸಿ ಬೈಕ್‌ಗಳ ಬೆಲೆಯನ್ನು ಸಹ ಹೆಚ್ಚಿಸಿದೆ. ಹೀರೋ ಹೆಚ್‌ಎಫ್ ಡಿಲಕ್ಸ್‌ ಕಿಕ್ ಸ್ಟಾರ್ಟ್ ಮಾದರಿ ಬೆಲೆಯನ್ನು ರೂ.950ಗಳವರೆಗೆ ಹಾಗೂ ಸೆಲ್ಫ್ ಸ್ಟಾರ್ಟ್ ಮಾದರಿಯ ಬೆಲೆಯನ್ನು ರೂ.1,300ಗಳವರೆಗೆ ಹೆಚ್ಚಿಸಲಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಬಿಎಸ್ 6 ಬೈಕುಗಳ ಬೆಲೆ ಏರಿಕೆ ಮಾಡಿದ ಹೀರೋ ಮೋಟೊಕಾರ್ಪ್

ಬೆಲೆ ಏರಿಕೆಯ ನಂತರ ಹೆಚ್‌ಎಫ್ ಡಿಲಕ್ಸ್ ಕಿಕ್ ಸ್ಟಾರ್ಟ್‌ನ ಹೊಸ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.48,950ಗಳಾದರೆ, ಸೆಲ್ಫ್ ಸ್ಟಾರ್ಟ್‌ ಮಾದರಿಯ ಹೊಸ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.58,475ಗಳಾಗಿದೆ.

ಬಿಎಸ್ 6 ಬೈಕುಗಳ ಬೆಲೆ ಏರಿಕೆ ಮಾಡಿದ ಹೀರೋ ಮೋಟೊಕಾರ್ಪ್

ಹೀರೋ ಸ್ಪ್ಲೆಂಡರ್, ಸೂಪರ್ ಸ್ಪ್ಲೆಂಡರ್, ಸ್ಪ್ಲೆಂಡರ್ ಐ ಸ್ಮಾರ್ಟ್ 110 ಬೈಕುಗಳ ಬೆಲೆಯನ್ನು ಸಹ ರೂ.460ರಿಂದ ರೂ.1300ಗಳವರೆಗೆ ಹೆಚ್ಚಿಸಲಾಗಿದೆ. ಹೀರೋ ಮೋಟೊಕಾರ್ಪ್ ತನ್ನ ಗ್ರಾಹಕರಿಗೆ ಮೂರು ದಿನಗಳ ಮೆಗಾ ಸರ್ವೀಸ್ ಕ್ಯಾಂಪ್ ಆಯೋಜಿಸುತ್ತಿದೆ. ಅಕ್ಟೋಬರ್ 8ರಿಂದ 10ರವರೆಗೆ ನಡೆಯುವ ಈ ಕ್ಯಾಂಪ್ ನಲ್ಲಿ ಅನೇಕ ರಿಯಾಯಿತಿ ಹಾಗೂ ಕೊಡುಗೆಗಳನ್ನು ನೀಡಲಾಗುವುದು.

Most Read Articles

Kannada
English summary
Hero Motocorp increases price of BS6 range bikes. Read in Kannada.
Story first published: Wednesday, October 7, 2020, 20:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X