ಬಿ‍ಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಹೀರೋ ಸೂಪರ್ ಸ್ಪ್ಲೆಂಡರ್ 125

ದೇಶದ ಅತಿ ದೊಡ್ಡ ದ್ವಿಚಕ್ರ ಉತ್ಪಾದನಾ ಕಂಪನಿಯಾದ ಹೀರೋ ಮೋಟೊಕಾರ್ಪ್ ತನ್ನ ಬಿಎಸ್-6 ಸೂಪರ್ ಸ್ಪ್ಲೆಂಡರ್ 125 ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಬೈಕ್ ಅನ್ನು ಡ್ರಮ್ ಅಲಾಯ್ ವ್ಹೀಲ್ ಮತ್ತು ರೇಂಜ್ ಟಾಪಿಂಗ್ ಡಿಸ್ಕ್ ಅಲಾಯ್ ವ್ಹೀಲ್ ಎಂಬ ಎರಡು ರೂಪಾಂತರದಲ್ಲಿ ಬಿಡುಗಡೆಯಾಗಿದೆ.

ಬಿ‍ಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಸೂಪರ್ ಸ್ಪ್ಲೆಂಡರ್ 125

ಇದರಲ್ಲಿ ಡ್ರಮ್ ಅಲಾಯ್ ವ್ಹೀಲ್ ರೂಪಾಂರದ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.67,300ಗಳಾಗಿದೆ. ಇನ್ನು ರೇಂಜ್-ಟಾಪಿಂಗ್ ಅಲಾಯ್ ರೂಪಾಂತರದ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.70,800 ಗಳಾಗಿದೆ. ಹಿಂದಿನ ಮಾದರಿ ಬಿಎಸ್-4 ಮಾದರಿಗಿಂತ ಬಿಎಸ್-6 ಸೂಪರ್ ಸ್ಪ್ಲೆಂಡರ್ 125 ಮಾದರಿಯ ಬೆಲೆಯನ್ನು ರೂ.5,550 ಹೆಚ್ಚಿಸಲಾಗಿದೆ. ಇತ್ತೀಚೆಗೆ ಹೀರೋ ಮೋಟೊಕಾರ್ಪ್ ಕಂಪನಿಯು ಬಿಎಸ್-6 ಆವೃತ್ತಿಯಲ್ಲಿ ಹೀರೋ ಗ್ಲ್ಯಾಮರ್, ಪ್ಯಾಶನ್ ಪ್ರೊ ಮತ್ತು ಮೆಸ್ಟ್ರೋ ಎಡ್ಜ್ ಅನ್ನು ಬಿಡುಗಡೆಗೊಳಿಸಿದ್ದರು.

ಬಿ‍ಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಸೂಪರ್ ಸ್ಪ್ಲೆಂಡರ್ 125

ಹೀರೋ ಮೋಟಿಕಾರ್ಪ್‍‍ನ ಗ್ಲೋಬಲ್ ಪ್ರೊಡಕ್ಟ್ ಪ್ಲಾನಿಂಗ್ ಮುಖ್ಯಸ್ಥರು ಈ ಬೈಕಿನ ಬಗ್ಗೆ ಮಾತನಾಡಿ, ಸೂಪರ್ ಸ್ಪ್ಲೆಂಡರ್ ಭಾರತದ ಅತ್ಯಂತ ಜನಪ್ರಿಯ ಬೈಕ್‍‍ಗಳಲ್ಲಿ ಒಂದಾಗಿದೆ ಮತ್ತು ಹೊಸ ಸೂಪರ್ ಸ್ಪ್ಲೆಂಡರ್ ಬೈಕ್ ಕೂಡ ಮತ್ತಷ್ಟು ಜನಪ್ರಿಯತೆಗಳಿಸುತ್ತದೆ ಎಂದು ನಂಬುತ್ತೇವೆ ಎಂದರು. ಹೊಸ ಬೈಕ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವುದರ ಜೊತೆಗೆ ಹಿಂದಿನ ಮಾದರಿಗಿಂತ ಹೆಚ್ಚು ಸಾಮಥ್ಯವನ್ನು ಹೊಂದಿದೆ ಎಂದು ಹೇಳಿದರು.

ಬಿ‍ಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಸೂಪರ್ ಸ್ಪ್ಲೆಂಡರ್ 125

ಹೊಸ ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಸೆನ್ಸ್ ತಂತ್ರಜ್ಞಾನದೊಂದಿಗೆ ನವೀಕರಿಸಿದ 125 ಸಿಸಿ ಬಿ‍ಎಸ್-6 ಎಂಜಿನ್ ಸ್ಪೋರ್ಟಿಂಗ್ ಫ್ಯೂಯಲ್ ಇಂಜೆಕ್ಷನ್ ಅನ್ನು ಹೊಂದಿದೆ. ಈ ಎಂಜಿನ್ 7500 ಆರ್‍‍ಪಿ‍ಎಂನಲ್ಲಿ 10.73 ಬಿ‍‍ಹೆಚ್‍‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಬಿ‍ಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಸೂಪರ್ ಸ್ಪ್ಲೆಂಡರ್ 125

ಹಿಂದಿನ ಮಾದರಿಗೆ ಉಳಿಸಿದರೆ ಹೊಸ ಎಂಜಿನ್ ಶೇ.19 ರಷ್ಟು ಹೆಚ್ಚಿನ ಪವರ್ ಅನ್ನು ಉತ್ಪಾದಿಸುತ್ತದೆ. ಬಿ‍ಎಸ್-6 ಎಂಜಿನ್ 6000 ಆರ್‍‍ಪಿ‍ಎಂನಲ್ಲಿ 10.6 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಿಂದಿನ ಬೀಎಸ್-4 ಎಂಜಿನ್‍‍ನೊಂದಿಗೆ 4 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿತ್ತು.

ಬಿ‍ಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಸೂಪರ್ ಸ್ಪ್ಲೆಂಡರ್ 125

ಹೊಸ ಬಿಎಸ್-6 ಎಂಜಿನ್‍‍ನೊಂದಿಗೆ 5 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಹೀರೋ ಮೊಟೊಕಾರ್ಪ್ ತನ್ನ ಐ 3 ಎಸ್ ಐಡಲ್ ಸ್ಟಾರ್ಟ್-ಸ್ಟಾಪ್ ಸಿಸ್ಟಂ ಅನ್ನು ಸಹ ಈ ಬೈಕಿನಲ್ಲಿ ಅಳವಡಿಸಿದೆ.

ಬಿ‍ಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಸೂಪರ್ ಸ್ಪ್ಲೆಂಡರ್ 125

2020ರ ಹೀರೋ ಸೂಪರ್ ಸ್ಪ್ಲೆಂಡರ್ 125 ಬಿಎಸ್-6 ವಿನ್ಯಾಸದಲ್ಲಿ ಕೆಲವು ನವೀಕರಣಗಳನ್ನು ಮಾಡಲಾಗಿದೆ. ಇದರೊಂದಿಗೆ ಹೊಸ ಬೈಕಿನಲ್ಲಿ ಡೈಮೆಂಡ್ ಫ್ರೇಮ್ ಅನ್ನು ಕೂಡ ಅಳವಡಿಸಲಾಗಿದೆ. ಹೊಸ ಬೈಕ್ 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಹಳೆ ಬಿಎಸ್-4 ಮಾದರಿಗೆ ಹೋಲಿಸದರೆ 30 ಎಂಎಂ ಹೆಚ್ಚಾಗಿದೆ. ಈ ಹೊಸ ಬೈಕಿನಲ್ಲಿ ಫ್ರೇಮ್ ಮತ್ತು ಟೆಲಿಸ್ಕೋಪಿಕ್ ಫೋರ್ಕ್‍‍ಗಳನ್ನು ಒಳಗೊಂಡಿದೆ. ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾಬರ್ ಅನ್ನು ಹೊಂದಿದೆ.

ಬಿ‍ಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಸೂಪರ್ ಸ್ಪ್ಲೆಂಡರ್ 125

ಹೊಸ ಸೂಪರ್ ಸ್ಪ್ಲೆಂಡರ್ 125 ಬೈಕಿನ 240 ಎಂಎಂ ಡಿಸ್ಕ್ ಬ್ರೇಕ್ ಮತ್ತು ಬೇಸ್ ರೂಪಾಂತರದ ಎರಡು ತುದಿಯಲ್ಲಿ 130 ಎಂಎಂ ಡ್ರಮ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದೆ. ಈ ಹೊಸ ಬೈಕಿನಲ್ಲಿ ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮಂ (ಸಿಬಿಎಸ್) ಅನ್ನು ಅಳವಡಿಸಲಾಗಿದೆ.

ಬಿ‍ಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಸೂಪರ್ ಸ್ಪ್ಲೆಂಡರ್ 125

ಈ ಹೊಸ ಹೀರೋ ಸೂಪರ್ ಸ್ಪ್ಲೆಂಡರ್ ಬೈಕ್ ಹೊಸ ಗ್ರಾಫಿಕ್ಸ್ ಮತ್ತು ಕ್ರೋಮ್ ಅಂಶಗಳೊಂದಿಗೆ ಹೊಸ ಡ್ಯುಯಲ್ ಟೋನ್ ಬಣ್ಣದ ಆಯ್ಕೆಯನ್ನು ಹೊಂದಿದೆ. ಈ ಬೈಕ್ ಹೊಸ ಮೆಟಾಲಿಕ್ ನೆಕ್ಸಸ್ ಬ್ಲೂ ಬಣ್ಣದೊಂದಿಗೆ ಗ್ಲೇಜ್ ಬ್ಲ್ಯಾಕ್, ಹೆವಿ ಗ್ರೇ ಮತ್ತು ಕ್ಯಾಂಡಿ ಬ್ಲೇಜಿಂಗ್ ರೆಡ್ ಎಂಬ ಮೂರು ಬಣ್ಣಗಳ ಆಯ್ಕೆಯನ್ನು ಹೊಂದಿದೆ.

More from DriveSpark

Article Published On: Friday, February 28, 2020, 12:33 [IST]
English summary
2020 Hero Super Splendor 125 BS6 Launched In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+