ಪೊಲೀಸ್ ಬೈಕ್‍ ಮಾದರಿಯಲ್ಲಿ ಮಿಂಚಿದ ಮಾಡಿಫೈ ಹೀರೋ ಎಕ್ಸ್‌ಪಲ್ಸ್ 200ಟಿ

ದೇಶದ ಪ್ರಮುಖ ಬೀಕನ್ ಲೈಟ್ ತಯಾರಕರಲ್ಲಿ ಒಬ್ಬರಾದ ಶೋಲ್ಫಿನ್ ಇಂಡಿಯಾ, 2020ರ ಆಟೋ ಎಕ್ಸ್ ಪೋದಲ್ಲಿ ಆಕರ್ಷಕ ಬೈಕ್ ಮಾದರಿಯನ್ನು ಪ್ರದರ್ಶಿಸಿದೆ. ಫರಿದಾಬಾದ್ ಮೂಲದ ಎಮರ್ಜನ್ಸಿ ಲೈಟ್ ಸಿಸ್ಟಂ ತಯಾರಕರಾದ ಶೋಲ್ಫಿನ್ ಇಂಡಿಯಾ ಹೀರೋ ಎಕ್ಸ್‌ಪಲ್ಸ್ 200 ಟಿ ಬೈಕನ್ನು ಪೋಲಿಸ್ ಬೈಕ್ ಆಗಿ ಮಾರ್ಪಡಿಸಿದ್ದಾರೆ.

ಪೊಲೀಸ್ ಬೈಕ್‍ ಮಾದರಿಯಲ್ಲಿ ಮಿಂಚಿದ ಮಾಡಿಫೈ ಹೀರೋ ಎಕ್ಸ್‌ಪಲ್ಸ್ 200ಟಿ

ಹೀರೋ ಮೋಟೊಕಾರ್ಪ್ ತನ್ನ ಎಕ್ಸ್‌ಪಲ್ಸ್ 200 ಮತ್ತು 200 ಟಿ ಸರಣಿಯ ಬೈಕ್‍‍ಗಳನ್ನು 2019ರ ಏಪ್ರಿಲ್ ತಿಂಗಳಲ್ಲಿ ರೂ.94,000 ಆರಂಭಿಕ ಬೆಲೆಯಲ್ಲಿ ಬಿಡುಗಡೆಗೊಳಿಸಿತು. ಈ ಅಡ್ವೆಂಚರ್ ಬೈಕ್‍‍ಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಆರಂಭದಲ್ಲಿ ಜನಪ್ರಿಯತೆಯನ್ನು ಗಳಿಸಿತು. ದಿನಗಳ ಕಳದಂತೆ ಈ ಬೈಕ್‍‍ಗಳ ಜನಪ್ರಿಯತೆಯು ಕಡಿಮೆಯಾಯ್ತು. ಹೀರೋ ಎಕ್ಸ್‌ಪಲ್ಸ್ 200 ಟಿ ಮತ್ತು 200 ಅಡ್ವೆಂಚರ್ ಬೈಕ್‍‍ಗಳು 200 ಸಿಸಿಯ ಸರಣಿಯಲ್ಲಿ ಉತ್ತಮ ಬೈಕ್‍‍ಗಳಾಗಿದೆ.

ಪೊಲೀಸ್ ಬೈಕ್‍ ಮಾದರಿಯಲ್ಲಿ ಮಿಂಚಿದ ಮಾಡಿಫೈ ಹೀರೋ ಎಕ್ಸ್‌ಪಲ್ಸ್ 200ಟಿ

ಪ್ರಯಾಣಿಕರ ಬೈಕ್ ಆದ ಎಕ್ಸ್‌ಪಲ್ಸ್ 200 ಟಿ ಬೈಕ್ ಅನ್ನು ಶೋಲ್ಪಿನ್ ಇಂಡಿಯಾ ಎಮರ್ಜನ್ಸಿ ಲೈಟ್ ಸಿಸ್ಟಂ ಅಳವಡಿಸಿ ಪೋಲಿಸ್ ಬೈಕ್‍ನಂತೆ ಮಾಡಿಫೈ ಪಡಿಸಿದ್ದಾರೆ. ಈ ಬೈಕ್ ಅನ್ನು ಆಕರ್ಷಕವಾಗಿ ಮಾಡಿಫೈ ಮಾಡಿದ್ದಾರೆ.

ಪೊಲೀಸ್ ಬೈಕ್‍ ಮಾದರಿಯಲ್ಲಿ ಮಿಂಚಿದ ಮಾಡಿಫೈ ಹೀರೋ ಎಕ್ಸ್‌ಪಲ್ಸ್ 200ಟಿ

ಈ ಬೈಕಿನ ಮುಂಭಾಗದಲ್ಲಿ ಜೋಡಿ ಕೆಂಪು/ನೀಲಿ ಬೀಕನ್ ಲೈಟ್‍‍ಗಳನ್ನು ಅಳವಡಿಸಿದ್ದಾರೆ. ಹಿಂಭಾಗದಲಿಯು ಬೀಕನ್ ಲೈಟ್‍‍ಗಳನ್ನು ಅಳವಡಿಸಿದ್ದಾರೆ. ಕ್ರ್ಯಾಶ್ ಗಾರ್ಡ್‍‍ನಲ್ಲಿ ಎಲ್‍ಇಡಿ ಲೈಟ್‍‍ಗಳನ್ನು ಅಳವಡಿಸಲಾಗಿದೆ.

ಪೊಲೀಸ್ ಬೈಕ್‍ ಮಾದರಿಯಲ್ಲಿ ಮಿಂಚಿದ ಮಾಡಿಫೈ ಹೀರೋ ಎಕ್ಸ್‌ಪಲ್ಸ್ 200ಟಿ

ಹೀರೋ ಎಕ್ಸ್‌ಪಲ್ಸ್ 200 ಟಿ ಕಾರ್ಬ್ಯುರೆಟೆಡ್ ಅವತಾರದಲ್ಲಿ ಮಾತ್ರ ಬರುತ್ತದೆ. ಇದು ಕಾರ್ಬ್ ಮತ್ತು ಎಫ್‍ಐ ಎಂಬ ಎರಡು ಮಾದರಿಗಳಲ್ಲಿ ಇರಲಿದೆ. ಮಾಡಿಫೈ ಬೈಕಿನ ಮಾಹಿತಿಯನ್ನು ರಶ್ಲೇನ್ ಬಹಿರಂಗಪಡಿಸಿದೆ.

ಪೊಲೀಸ್ ಬೈಕ್‍ ಮಾದರಿಯಲ್ಲಿ ಮಿಂಚಿದ ಮಾಡಿಫೈ ಹೀರೋ ಎಕ್ಸ್‌ಪಲ್ಸ್ 200ಟಿ

ಈ ಬೈಕಿನಲ್ಲಿ ಬಿಎಸ್-4 200 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 18 ಬಿ‍‍ಹೆಚ್‍‍ಪಿ ಪವರ್ ಮತ್ತು 17 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಹೊಂದಿದೆ.

ಪೊಲೀಸ್ ಬೈಕ್‍ ಮಾದರಿಯಲ್ಲಿ ಮಿಂಚಿದ ಮಾಡಿಫೈ ಹೀರೋ ಎಕ್ಸ್‌ಪಲ್ಸ್ 200ಟಿ

ಈ ಬೈಕ್ ಸದ್ಯ ಮಾರುಕಟ್ಟೆಯಲ್ಲಿ ನಾಲ್ಕು ಬಣ್ಣಗಳಲ್ಲಿ ಲಭ್ಯವಿರಲಿದೆ. ಇದು ಕ್ಯಾಂಡಿ ರೆಡ್, ಬ್ಲ್ಯಾಕ್, ಮ್ಯಾಟ್ ಗೋಲ್ಡ್ ಮತ್ತು ಮ್ಯಾಟ್ ಗ್ರೇ ಬಣ್ಣಗಳಾಗಿದೆ. ಈ ಬೈಕಿನಲ್ಲಿ 17 ಇಂಚಿನ ಅಲಾಯ್ ವ್ಹೀಲ್‍‍ಗಳನ್ನು ಅಳವಡಿಸಿದೆ. ಎಕ್ಸ್‌ಪಲ್ಸ್ 200 ಅಡ್ವೆಂಚರ್ ಬೈಕಿನಲ್ಲಿ 18 ಇಂಚಿನ ಸ್ಪೋಕ್ ವ್ಹೀಲ್‍‍ಗಳನ್ನು ಮುಂಭಾಗ ಮತ್ತು ಹಿಂಭಾಗದಲ್ಲಿ ಇರಿಸಲಾಗಿದೆ.

ಪೊಲೀಸ್ ಬೈಕ್‍ ಮಾದರಿಯಲ್ಲಿ ಮಿಂಚಿದ ಮಾಡಿಫೈ ಹೀರೋ ಎಕ್ಸ್‌ಪಲ್ಸ್ 200ಟಿ

ಹೀರೋ ಮೋಟೊಕಾರ್ಪ್ ತನ್ನ ಹೊಸ ಎಕ್ಸ್‌ಪಲ್ಸ್ 200 ರ‍್ಯಾಲಿ ಕಿಟ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದೆ. ಹೊಸ ಎಕ್ಸ್‌ಪಲ್ಸ್ 200 ರ‍್ಯಾಲಿ ಕಿಟ್‍‍ನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.38,000ಗಳಾಗಿದೆ. ರ‍್ಯಾಲಿ ಕಿಟ್‍‍ಗಾಗಿ ಹೊಸ ಎಕ್ಸ್‌ಪಲ್ಸ್ 200 ಬೈಕ್‍‍ಗಳಲ್ಲಿ ಆಯ್ಕೆ ಮಾಡಬಹುದು ಅಥವಾ ಈಗಾಗಲೇ ಖರೀದಿಸಿರುವ ಗ್ರಾಹಕರು ತಮ್ಮ ಬೈಕ್‍‍ಗಳಲ್ಲಿ ಮರುಹೊಂದಿಸಬಹುದಾಗಿದೆ.

ಪೊಲೀಸ್ ಬೈಕ್‍ ಮಾದರಿಯಲ್ಲಿ ಮಿಂಚಿದ ಮಾಡಿಫೈ ಹೀರೋ ಎಕ್ಸ್‌ಪಲ್ಸ್ 200ಟಿ

ಹೀರೋ ಮೋಟೊಕಾರ್ಪ್ ಕಂಪನಿಯ ಎಕ್ಸ್‌ಪಲ್ಸ್ 200 ಟಿ ಪ್ರಯಾಣಿಕರ ಬೈಕ್ ಆಗಿದೆ. ಪ್ರಯಾಣಿಕರ ಎಕ್ಸ್‌ಪಲ್ಸ್ 200 ಟಿ ಬೈಕನ್ನು ಶೋಲ್ಫಿನ್ ಇಂಡಿಯಾದವರು ಆಕರ್ಷಕವಾಗಿ ಮಾಡಿಫೈ ಮಾಡಲಾಗಿದೆ. ಈ ಬೈಕ್ ಪೊಲೀಸರಿಗೆ ಉತ್ತಮ ಆಯ್ಕೆಯಾಗಿದೆ. ಪೊಲೀಸರಿಗೆ ತಮ್ಮ ಕಾರ್ಯಚರಣೆಯನ್ನು ಬಳಸಲು ಇದು ಉತ್ತಮ ಬೈಕ್ ಆಗಿದೆ.

Article Published On: Monday, February 24, 2020, 19:43 [IST]
English summary
Hero Xpulse 200 T modified as a police motorcycle. Read in Kananda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+