ಅಪಾಚೆ ಆರ್‌ಟಿಆರ್ 160 4ವಿ ಬೈಕಿಗೆ ಪೈಪೋಟಿಯಾಗಿ ಹೀರೋ ಎಕ್ಸ್‌ಟ್ರಿಮ್ 160ಆರ್ ಅನಾವರಣ

ವಿಶ್ವದ ಅತಿದೊಡ್ಡ ಬೈಕ್ ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿರುವ ಹೀರೋ ಮೋಟೊಕಾರ್ಪ್ ಸಂಸ್ಥೆಯು ಎಕ್ಸ್‌ಟ್ರಿಮ್ ಬೈಕ್ ಸರಣಿಯಲ್ಲಿ ಮತ್ತೊಂದು ಹೊಸ ಬೈಕ್ ಆವೃತ್ತಿಯನ್ನು ಅನಾವರಣಗೊಳಿಸಿದ್ದು, ಹೊಸ ಬೈಕ್ ಮಾದರಿಯು ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ.

ಅಪಾಚೆ ಆರ್‌ಟಿಆರ್ 160 4ವಿ ಬೈಕಿಗೆ ಪೈಪೋಟಿಯಾಗಿ ಹೀರೋ ಎಕ್ಸ್‌ಟ್ರಿಮ್ 160ಆರ್ ಅನಾವರಣ

ಸದ್ಯ ಮಾರುಕಟ್ಟೆಯಲ್ಲಿರುವ ಎಕ್ಸ್‌ಟ್ರಿಮ್ 200ಆರ್ ಮತ್ತು ಎಕ್ಸ್‌ಟ್ರಿಮ್ 200ಎಸ್ ಬೈಕ್ ಡಿಸೈನ್ ಆಧಾರದ ಮೇಲೆ ಎಕ್ಸ್‌ಟ್ರಿಮ್ 160ಆರ್ ಬೈಕ್ ಮಾದರಿಯನ್ನು ಸಿದ್ದಪಡಿಸಲಾಗಿದ್ದು, 2019 ಇಐಸಿಎಂಎ ಆಟೋ ಎಕ್ಸ್‌ಪೋ ಅನಾವರಣಗೊಳಿಸಲಾಗಿದ್ದ ಎಕ್ಸ್‌ಟ್ರಿಮ್ 1.R ಕಾನ್ಸೆಪ್ಟ್ ಮಾದರಿಯಿಂದಲೂ ಕೆಲವು ತಾಂತ್ರಿಕ ಅಂಶಗಳನ್ನು ಎರವಲು ಪಡೆದುಕೊಳ್ಳಲಾಗಿದೆ.

150 ಸಿಸಿ ಸಾಮಾರ್ಥ್ಯದ ಬೈಕ್‌ಗಳಿಗೆ ಹೆಚ್ಚಿನ ಬೇಡಿಕೆ ಹರಿದುಬರುತ್ತಿರುವುದೇ ಎಕ್ಸ್‌ಟ್ರಿಮ್ 160ಆರ್ ಬಿಡುಗಡೆಗೆ ಪ್ರಮುಖ ಕಾರಣವಾಗಿದ್ದು, ಹೊಸ ಬೈಕ್ ಮುಂದಿನ ತಿಂಗಳು ಮಾರ್ಚ್ ಅಂತ್ಯದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ.

ಅಪಾಚೆ ಆರ್‌ಟಿಆರ್ 160 4ವಿ ಬೈಕಿಗೆ ಪೈಪೋಟಿಯಾಗಿ ಹೀರೋ ಎಕ್ಸ್‌ಟ್ರಿಮ್ 160ಆರ್ ಅನಾವರಣ

ಹೊಸ ಬೈಕ್ ಮಾದರಿಯು ವಿನೂತನ ಹೊರ ವಿನ್ಯಾಸಗಳನ್ನು ಪಡೆದುಕೊಂಡಿದ್ದು, ಫುಲ್ ಎಲ್ಇಡಿ ಹೆಡ್‌ಲ್ಯಾಂಪ್, ಡಿಆರ್‌ಎಲ್ಎಸ್ ಮತ್ತು ಟೈಲ್‌ಲೈಟ್ಸ್, ಎಲ್ಇಡಿ ಟರ್ನ್ ಇಂಡಿಕೇಟರ್, ಸಿಂಗಲ್ ಪೀಸ್ ಸೀಟು, ಪೂರ್ಣ ಪ್ರಮಾಣದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸ್ಪೋರ್ಟಿ ಬಾಡಿ ಗ್ರಾಫಿಕ್ಸ್ ಬಳಕೆ ಮಾಡಲಾಗಿದೆ.

ಇದರ ಜೊತೆಗೆ ಹೊಸ ಬೈಕಿನಲ್ಲಿ ಸವಾರರ ಸುರಕ್ಷತೆಗಾಗಿ ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್ ಆಫ್ ಸಿಸ್ಟಂ ಜೋಡಣೆ ಮಾಡಲಾಗಿದ್ದು, ಈ ಸೌಲಭ್ಯದಿಂದಾಗಿ ಸ್ಟ್ಯಾಂಡ್ ಸಮೇತ ಬೈಕ್ ಚಾಲನೆ ಮಾಡುವುದನ್ನು ತಡೆಯಲು ಸಹಕಾರಿಯಾಗಿದೆ.

ಅಪಾಚೆ ಆರ್‌ಟಿಆರ್ 160 4ವಿ ಬೈಕಿಗೆ ಪೈಪೋಟಿಯಾಗಿ ಹೀರೋ ಎಕ್ಸ್‌ಟ್ರಿಮ್ 160ಆರ್ ಅನಾವರಣ

ಕೆಲವೊಂದು ಬಾರಿ ಬೈಕ್ ಸವಾರಿಗೆ ಹೊರಡುವ ಮುನ್ನ ಯಾವುದೋ ಅವಸರದಲ್ಲಿ ಬೈಕ್ ಸ್ಟ್ಯಾಂಡ್ ತೆಗೆಯುವುದನ್ನ ಮರೆತುಬಿಡುತ್ತೆವೆ. ಈ ವೇಳೆ ರೋಡ್ ಹಂಪ್‌ಗಳಿಂದ ಸ್ಕೀಡ್ ಆಗಿ ಬೀಳಬಹುದು ಅಥವಾ ಗಾಯಗಳಾಗಬಹುದು.

ಇದನ್ನು ತಪ್ಪಿಸಲು ಈಗಾಗಲೇ ಬಹುತೇಕ ಪ್ರೀಮಿಯಂ ಬೈಕ್‌ಗಳಲ್ಲಿ ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್ ಆಫ್ ಸಿಸ್ಟಂ ಜೋಡಣೆ ಮಾಡುತ್ತಿದ್ದು, ಈ ಸೌಲಭ್ಯವಿದ್ದಲ್ಲಿ ಸೈಡ್ ಸ್ಟ್ಯಾಂಡ್ ತೆಗೆಯದ ಹೊರತು ಎಂಜಿನ್ ಆನ್ ಆಗುವುದೇ ಇಲ್ಲ.

ಅಪಾಚೆ ಆರ್‌ಟಿಆರ್ 160 4ವಿ ಬೈಕಿಗೆ ಪೈಪೋಟಿಯಾಗಿ ಹೀರೋ ಎಕ್ಸ್‌ಟ್ರಿಮ್ 160ಆರ್ ಅನಾವರಣ

ಇದೀಗ ಹೀರೋ ಸಂಸ್ಥೆಯು ಕೂಡಾ ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್ ಆಫ್ ಸಿಸ್ಟಂ ಅನ್ನು ತನ್ನ ಹೊಸ ಬೈಕ್ ಮಾದರಿಯಾದ ಎಕ್ಸ್‌ಟ್ರಿಮ್ 160ಆರ್ ಬೈಕಿನಲ್ಲೂ ಜೋಡಣೆ ಮಾಡಿದ್ದು, ಇದು ಬೈಕ್ ಸವಾರರಿಗೆ ಗರಿಷ್ಠ ಭದ್ರತೆ ನೀಡಲಿದೆ ಎನ್ನಬಹುದು.

ಇದರೊಂದಿಗೆ ಹೊಸ ಬೈಕಿನಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ, ಸ್ಪೋರ್ಟಿ ಅಲಾಯ್ ವೀಲ್ಹ್, ಹೊಳೆಯುವ ಸೈಡ್ ಸ್ಟ್ರೀಪ್, ಕನ್ವರ್ಷನಲ್ 37ಎಂಎಂ ಫೋರ್ಕ್ಸ್, ಏಳು ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಮೊನೊ ಶಾರ್ಕ್ ಸೆಟ್ಅಪ್ ಹೊಂದಿದೆ. ಹೊಸ ಬೈಕಿನಲ್ಲಿ ಸಿಂಗಲ್ ಚಾನೆಲ್ ಎಬಿಎಸ್ ಕೂಡಾ ಜೋಡಣೆ ಮಾಡಲಾಗಿದ್ದು, ಮುಂಭಾಗದ ಚಕ್ರದಲ್ಲಿ 276-ಎಂಎಂ ಮತ್ತು ಹಿಂಭಾಗದ ಚಕ್ರದಲ್ಲಿ 220-ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ನೀಡಲಾಗಿದೆ.

ಅಪಾಚೆ ಆರ್‌ಟಿಆರ್ 160 4ವಿ ಬೈಕಿಗೆ ಪೈಪೋಟಿಯಾಗಿ ಹೀರೋ ಎಕ್ಸ್‌ಟ್ರಿಮ್ 160ಆರ್ ಅನಾವರಣ

ಖರೀದಿಗೆ ಲಭ್ಯವಿರುವ ಬಣ್ಣ ಮತ್ತು ವೆರಿಯೆಂಟ್

ಸಿಂಗಲ್ ಡಿಸ್ಕ್ ಮತ್ತು ಡ್ಯುಯಲ್ ಡಿಸ್ಕ್ ವೆರಿಯೆಂಟ್‌ಗಳನ್ನು ಹೊಂದಿರುವ ಎಕ್ಸ್‌ಟ್ರಿಮ್ 160ಆರ್ ಬೈಕ್ ಮಾದರಿಯು ಮೂರು ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ಹೊಂದಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ವೈಟ್/ಗ್ರೇ, ಬ್ಲೂ/ಗ್ರೇ ಮತ್ತು ಸ್ಪೋರ್ಟ್ ರೆಡ್/ಗ್ರೇ ಬಣ್ಣಗಳನ್ನು ಹೊಂದಿದೆ.

ಅಪಾಚೆ ಆರ್‌ಟಿಆರ್ 160 4ವಿ ಬೈಕಿಗೆ ಪೈಪೋಟಿಯಾಗಿ ಹೀರೋ ಎಕ್ಸ್‌ಟ್ರಿಮ್ 160ಆರ್ ಅನಾವರಣ

ಬಿಡುಗಡೆ ಮತ್ತು ಬೆಲೆ(ಅಂದಾಜು)

ಹೊಸ ಎಕ್ಸ್‌ಟ್ರಿಮ್ 160ಆರ್ ಬೈಕ್ ಮಾದರಿಯು ಮುಂದಿನ ತಿಂಗಳು ಮಾರ್ಚ್ ಅಂತ್ಯಕ್ಕೆ ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿದ್ದು, ಹೊಸ ಬೈಕ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 95 ಸಾವಿರದಿಂದ ರೂ.1.05 ಲಕ್ಷ ಹೊಂದಿರಬಹುದೆಂದು ಅಂದಾಜಿಸಲಾಗಿದೆ.

Article Published On: Tuesday, February 18, 2020, 17:43 [IST]
English summary
Hero Xtreme 160R Unveiled Ahead Of India Launch. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+