ಫೆಬ್ರವರಿ ತಿಂಗಳಿನಲ್ಲಿ ಮಾರಾಟವಾದ ಹಸ್ಕ್​ವರ್ನಾ ಬೈಕುಗಳೆಷ್ಟು ಗೊತ್ತಾ?

ಹಸ್ಕ್​ವರ್ನಾ ಕಂಪನಿಯು ಫೆಬ್ರವರಿ 25ರಂದು ದೇಶೀಯ ಮಾರುಕಟ್ಟೆಯಲ್ಲಿ ಸ್ವಾರ್ಟ್‌ಪಿಲೆನ್ 250 ಹಾಗೂ ವಿಟ್‌ಪಿಲೆನ್ 250 ಬೈಕ್ ಗಳನ್ನು ಬಿಡುಗಡೆಗೊಳಿಸಿತ್ತು. ಫೆಬ್ರವರಿ ತಿಂಗಳಿನಲ್ಲಿ ಹಸ್ಕ್​ವರ್ನಾದ ಎಷ್ಟು ಬೈಕ್ ಗಳನ್ನು ಮಾರಾಟ ಮಾಡಲಾಗಿತ್ತು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಫೆಬ್ರವರಿ ತಿಂಗಳಿನಲ್ಲಿ ಮಾರಾಟವಾದ ಹಸ್ಕ್​ವರ್ನಾ ಬೈಕುಗಳೆಷ್ಟು ಗೊತ್ತಾ?

ಬೈಕ್ ವಾಲೆ ವರದಿಗಳ ಪ್ರಕಾರ ಫೆಬ್ರವರಿ ತಿಂಗಳಿನಲ್ಲಿ ಹಸ್ಕ್​ವರ್ನಾದ 163 ಯೂನಿಟ್ ಗಳನ್ನು ಮಾರಾಟ ಮಾಡಲಾಗಿದೆ. ಹಸ್ಕ್​ವರ್ನಾ ಕಂಪನಿಯು ಬೈಕ್ ಗಳ ಬಿಡುಗಡೆಗೂ ಒಂದು ತಿಂಗಳ ಮುನ್ನವೇ ಈ ಬೈಕ್ ಗಳ ಪ್ರಿ ಬುಕ್ಕಿಂಗ್ ಗಳನ್ನು ಆರಂಭಿಸಿತ್ತು. ಇದರಿಂದಾಗಿ ಫೆಬ್ರವರಿಯಲ್ಲಿ 163 ಯೂನಿಟ್ ಗಳನ್ನು ಮಾರಾಟ ಮಾಡಲಾಗಿದೆ.

ಫೆಬ್ರವರಿ ತಿಂಗಳಿನಲ್ಲಿ ಮಾರಾಟವಾದ ಹಸ್ಕ್​ವರ್ನಾ ಬೈಕುಗಳೆಷ್ಟು ಗೊತ್ತಾ?

ಹಸ್ಕ್​ವರ್ನಾ ಸ್ವಾರ್ಟ್‌ಪಿಲೆನ್ 250 ಹಾಗೂ ವಿಟ್‌ಪಿಲೆನ್ 250 ಬೈಕ್ ಗಳ ಬೆಳೆಯು ಎಕ್ಸ್ ಶೋ ರೂಂ ದರದಂತೆ ರೂ.1.80 ಲಕ್ಷಗಳಾಗಿದೆ. ಹಸ್ಕ್​ವರ್ನಾ ಕಂಪನಿಯು ಈ ಬೈಕ್ ಗಳನ್ನು ಭಾರತದಲ್ಲಿ ಕೆಟಿಎಂ ಶೋರೂಂಗಳ ಮೂಲಕ ಮಾರಾಟ ಮಾಡುತ್ತದೆ.

ಫೆಬ್ರವರಿ ತಿಂಗಳಿನಲ್ಲಿ ಮಾರಾಟವಾದ ಹಸ್ಕ್​ವರ್ನಾ ಬೈಕುಗಳೆಷ್ಟು ಗೊತ್ತಾ?

ಇದರಿಂದಾಗಿ ಈ ಬೈಕ್ ಗಳ ಮಾರಾಟ ಪ್ರಮಾಣವು ಇನ್ನೂ ಹೆಚ್ಚಾಗಬಹುದು. ಕರೋನಾ ವೈರಸ್ ನಿಂದಾಗಿ ಈ ಬೈಕ್ ಗಳ ಮಾರಾಟವು ಸ್ತಗಿತಗೊಂಡಿದೆ. ಮುಂಬರುವ ತಿಂಗಳುಗಳಲ್ಲಿ ಈ ಬೈಕುಗಳ ಮಾರಾಟ ಪ್ರಮಾಣವು ಹೆಚ್ಚಾಗುವ ಸಾಧ್ಯತೆಗಳಿವೆ.

ಫೆಬ್ರವರಿ ತಿಂಗಳಿನಲ್ಲಿ ಮಾರಾಟವಾದ ಹಸ್ಕ್​ವರ್ನಾ ಬೈಕುಗಳೆಷ್ಟು ಗೊತ್ತಾ?

ಹೊಸದಾಗಿ ಬಿಡುಗಡೆಯಾಗಿದ್ದರೂ ಈ ಬೈಕುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಸ್ಕ್​ವರ್ನಾ ವಿಟ್‌ಪಿಲೆನ್ 250 ಹಾಗೂ ಸ್ವಾರ್ಟ್‌ಪಿಲೆನ್ 250 ಬೈಕುಗಳಲ್ಲಿ 248.8 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದ್ದು, ಈ ಎಂಜಿನ್ 27 ಬಿಹೆಚ್‌ಪಿ ಪವರ್ ಹಾಗೂ 24 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಫೆಬ್ರವರಿ ತಿಂಗಳಿನಲ್ಲಿ ಮಾರಾಟವಾದ ಹಸ್ಕ್​ವರ್ನಾ ಬೈಕುಗಳೆಷ್ಟು ಗೊತ್ತಾ?

ಈ ಎಂಜಿನ್ ಗಳಲ್ಲಿ 6-ಸ್ಪೀಡಿನ ಗೇರ್‌ಬಾಕ್ಸ್ ಅಳವಡಿಸಲಾಗಿದೆ. ವಿಟ್‌ಪಿಲೆನ್ 250 ಹಾಗೂ ಸ್ವಾರ್ಟ್‌ಪಿಲೆನ್ 250 ಬೈಕುಗಳ ವಿನ್ಯಾಸವು 401 ಬೈಕಿನ ವಿನ್ಯಾಸವನ್ನು ಹೋಲುತ್ತದೆ.

ಫೆಬ್ರವರಿ ತಿಂಗಳಿನಲ್ಲಿ ಮಾರಾಟವಾದ ಹಸ್ಕ್​ವರ್ನಾ ಬೈಕುಗಳೆಷ್ಟು ಗೊತ್ತಾ?

ಈ ಬೈಕುಗಳಲ್ಲಿರುವ ಬಹುತೇಕ ಬಿಡಿಭಾಗಗಳನ್ನು ಕೆಟಿಎಂ ಡ್ಯೂಕ್ 250 ಬೈಕಿನಿಂದ ಪಡೆಯಲಾಗಿದೆ. ದೇಶಿಯ ಮಾರುಕಟ್ಟೆಯ 250 ಸಿಸಿ ಬೈಕ್ ಸೆಗ್ ಮೆಂಟ್ ನಲ್ಲಿ ಹಸ್ಕ್​ವರ್ನಾ ಕಂಪನಿಯು ಪ್ರಾಬಲ್ಯವನ್ನು ಹೊಂದಲು ಮುಂದಾಗಿದೆ. ಇದರಲ್ಲಿ ಯಶಸ್ವಿಯಾಗುವುದೇ ಇಲ್ಲವೇ ಎಂಬುದನ್ನು ಮುಂಬರುವ ತಿಂಗಳುಗಳಲ್ಲಿ ಕಾದು ನೋಡಬೇಕಿದೆ.

More from DriveSpark

Article Published On: Friday, March 27, 2020, 16:26 [IST]
English summary
Husqvarna sales report for February 2020. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+