ಆರಂಭವಾಯ್ತು ಹಸ್ಕ್ವರ್ನಾ ಬೈಕ್‍ಗಳ ಬುಕ್ಕಿಂಗ್
ಸ್ವೀಡನ್ ಮೂಲದ ಹಸ್ಕ್ವರ್ನಾ ಕೆಟಿಎಂ ಕಂಪನಿಯ ಭಾಗವಾಗಿದೆ. ಕೆಟಿಎಂ ಭಾರತದಲ್ಲಿ ಬಜಾಜ್ ಆಟೋದೊಂದಿಗೆ ಸಹಭಾಗಿತ್ವವನ್ನು ಹೊಂದಿದೆ. ಈಗ ಕೆಟಿಎಂ ಭಾರತದಲ್ಲಿ ಹಸ್ಕ್ವರ್ನಾ ಬೈಕ್‍ಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ.

ಹಸ್ಕ್ವರ್ನಾ ಕಂಪನಿಯ ಸ್ವಾರ್ಟ್‍ಪಿಲೆನ್ 250 ಹಾಗೂ ವಿಟ್‍ಪಿಲೆನ್ 250 ಬೈಕ್‍ಗಳನ್ನು ಗೋವಾದಲ್ಲಿ ನಡೆದ ಇಂಡಿಯಾ ಬೈಕ್ ವೀಕ್‍ನಲ್ಲಿ ಪ್ರದರ್ಶಿಸಲಾಗಿತ್ತು. ಪ್ರದರ್ಶನಗೊಂಡ ನಂತರ ಈ ಎರಡೂ ಬೈಕ್‍ಗಳು ಸಾಕಷ್ಟು ಜನಪ್ರಿಯವಾಗಿವೆ. ಬಜಾಜ್ ಆಟೋ ಈ ಎರಡು ಬೈಕ್‍ಗಳ ಬಿಡುಗಡೆಯ ಬಗ್ಗೆ ಘೋಷಿಸಿದೆ.

ಈ ಎರಡೂ ಬೈಕ್‍ಗಳನ್ನು ಭಾರತದ 45 ನಗರಗಳಲ್ಲಿರುವ 100ಕ್ಕೂ ಹೆಚ್ಚು ಕೆಟಿಎಂ ಬೈಕ್ ಶೋರೂಂಗಳ ಮೂಲಕ ಮಾರಾಟ ಮಾಡಲಾಗುವುದು. ಮುಂದಿನ ದಿನಗಳಲ್ಲಿ 275 ನಗರಗಳ 400ಕ್ಕೂ ಹೆಚ್ಚು ಕೆಟಿಎಂ ಶೋರೂಂಗಳ ಮೂಲಕ ಮಾರಾಟ ಮಾಡುವ ಗುರಿಯನ್ನು ಹೊಂದಲಾಗಿದೆ.

ಹಸ್ಕ್ವರ್ನಾದ ಸ್ವಾರ್ಟ್‍ಪಿಲೆನ್ 250 ಹಾಗೂ ವಿಟ್‍ಪಿಲೆನ್ 250 ಬೈಕ್‍ಗಳನ್ನು ಕೆಟಿಎಂ ಡ್ಯೂಕ್ 250 ಬೈಕಿನ ಆಧಾರದ ಮೇಲೆ ತಯಾರಿಸಲಾಗಿದೆ. ಈ ಎರಡೂ ಬೈಕ್‍ಗಳಲ್ಲಿ ಡ್ಯೂಕ್ 250 ಬೈಕಿನಲ್ಲಿರುವಂತಹ ಬಿಡಿಭಾಗ ಹಾಗೂ ಎಂಜಿನ್‍ಗಳನ್ನು ಅಳವಡಿಸಲಾಗಿದೆ.

ಇದರ ಜೊತೆಗೆ ಎರಡು ಬೈಕ್‍ಗಳು ಕೆಟಿಎಂ ಬೈಕ್‍ಗಳಂತೆ ವಿಶಿಷ್ಟವಾದ ಡಿಸೈನ್ ಫೀಚರ್‍ಗಳನ್ನು ಹೊಂದಿವೆ. ಸ್ವಾರ್ಟ್‍ಪಿಲೆನ್ 250 ಬೈಕ್ ಸ್ಕ್ರಾಂಬ್ಲರ್‍ನಂತಿದ್ದರೆ, ವಿಟ್‍ಪಿಲೆನ್ ಕೆಫೆ ರೇಜರ್ ಬೈಕಿನಂತಿದೆ. ಸ್ವಾರ್ಟ್‍ಪಿಲೆನ್ 250 ಬೈಕಿನಲ್ಲಿ ಡ್ಯುಯಲ್ ಪರ್ಪಸ್ ಟಯರ್‍ಗಳನ್ನು ಅಳವಡಿಸಲಾಗಿದೆ.

ವಿಭಿನ್ನವಾದ ಕೆಫೆ ರೇಜರ್ ಬೈಕ್ ಆದ ವಿಟ್‍ಪಿಲೆನ್ 250 ಬೈಕ್, ಹ್ಯಾಂಡಲ್‍ಬಾರ್ ಮೇಲೆ ಕ್ಲಿಪ್ ಹಾಗೂ ಮುಂಭಾಗಕ್ಕೆ ಬಾಗಿರುವ ಸೀಟಿಂಗ್ ಸಿಸ್ಟಂಗಳನ್ನು ಹೊಂದಿದೆ. ಈ ಬೈಕ್‍ಗಳಲ್ಲಿ ಕೆಟಿಎಂ ಡ್ಯೂಕ್ 250 ಬೈಕಿನಲ್ಲಿರುವಂತಹ 248.8 ಸಿಸಿಯ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ.

ಈ ಎಂಜಿನ್ 29.5 ಬಿಹೆಚ್‍ಪಿ ಪವರ್ ಹಾಗೂ 24 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕ್‍ಗಳಲ್ಲಿ ಕೆಟಿಎಂ ಬೈಕ್‍ಗಳಲ್ಲಿರುವಂತಹ ಟ್ರೆಲ್ಲಿಸ್ ಫ್ರೇಂ ಸಿಸ್ಟಂ ನೀಡಲಾಗಿದೆ. ಈ ಸಿಸ್ಟಂನಿಂದಾಗಿ ಬೈಕಿನ ಲುಕ್ ಹೆಚ್ಚುವುದರ ಜೊತೆಗೆ ಹ್ಯಾಂಡ್ಲಿಂಗ್ ಸಹ ಸುಧಾರಿಸಲಿದೆ.

ಸಸ್ಪೆಂಷನ್‍ಗಳಿಗಾಗಿ ಈ ಬೈಕ್‍ಗಳ ಮುಂಭಾಗದಲ್ಲಿ 43 ಎಂಎಂ ಡಬ್ಲ್ಯುಪಿ ಅಪೆಕ್ಸ್ ಅಪ್‍ಸೈಡ್ ಡೌನ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಡಬ್ಲ್ಯುಪಿ ಅಪೆಕ್ಸ್ ಮೊನೊ ಶಾಕ್ ಅಬ್ಸರ್ವರ್‍ಗಳನ್ನು ನೀಡಲಾಗಿದೆ. ಈ ಬೈಕ್‍ಗಳಲ್ಲಿ 17 ಇಂಚಿನ ವ್ಹೀಲ್‍ಗಳನ್ನು ಅಳವಡಿಸಲಾಗಿದೆ.

ಮುಂಭಾಗದಲ್ಲಿ 320 ಎಂಎಂನ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ 230 ಎಂಎಂನ ಡಿಸ್ಕ್ ಬ್ರೇಕ್‍ಗಳಿವೆ. ಬಾಷ್ ಕಂಪನಿಯ ಡ್ಯುಯಲ್ ಚಾನೆಲ್ ಎಬಿಎಸ್ ಬ್ರೇಕಿಂಗ್ ಟೆಕ್ನಾಲಜಿಯನ್ನು ಈ ಬೈಕ್‍ಗಳಲ್ಲಿ ಅಳವಡಿಸಲಾಗಿದೆ. ಈ ಬೈಕ್‍ಗಳು 9.5 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಹೊಂದಿವೆ.

ಸೀಟುಗಳು ಫ್ಲೋರ್‍ನಿಂದ 835 ಎಂಎಂ ಎತ್ತರದಲ್ಲಿವೆ. 145 ಎಂಎಂನ ಗ್ರೌಂಡ್ ಕ್ಲಿಯರೆನ್ಸ್ ನೀಡಲಾಗಿದೆ. ಸ್ವಾರ್ಟ್‍ಪಿಲೆನ್ 250 ಹಾಗೂ ವಿಟ್‍ಪಿಲೆನ್ 250 ಬೈಕ್‍ಗಳ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.80 ಲಕ್ಷಗಳಾಗಿದೆ. ಎಲ್ಲಾ ತೆರಿಗೆಗಳನ್ನು ಪಾವತಿಸಿದ ನಂತರ ಈ ಬೈಕ್‍ಗಳ ಆನ್‍ರೋಡ್ ಬೆಲೆಯು ರೂ.2.30 ಲಕ್ಷದಿಂದ ರೂ.2.50 ಲಕ್ಷಗಳಾಗುವ ಸಾಧ್ಯತೆಗಳಿವೆ.

ಇವು ಆರಂಭಿಕ ಬೆಲೆಗಳಾಗಿದ್ದು, ನಂತರದ ದಿನಗಳಲ್ಲಿ ಈ ಬೈಕ್‍ಗಳ ಬೆಲೆಗಳು ಹೆಚ್ಚುವ ಸಾಧ್ಯತೆಗಳಿವೆ. ಈ ಬೈಕ್‍ಗಳನ್ನು ಮಾರ್ಚ್ ತಿಂಗಳಿನಿಂದ ಮಾರಾಟ ಮಾಡಲಾಗುವುದು. ಹೊಸ ಹಸ್ಕ್ವರ್ನಾ 250 ಬೈಕ್‍ಗಳನ್ನು ಪ್ರೀಮಿಯಂ ಸೆಗ್‍ಮೆಂಟ್‍ನಲ್ಲಿ ಮಾರಾಟ ಮಾಡಲಾಗುವುದು. ಈ ಬೈಕ್‍ಗಳು ಕೆಟಿಎಂ 250 ಬೈಕ್‍ಗಳಿಗೆ ಪೈಪೋಟಿ ನೀಡಲಿವೆ.


Click it and Unblock the Notifications








