ಹೊಸ ಕವಾಸಕಿ ನಿಂಜಾ ಬೈಕುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಕವಾಸಕಿ ಇಂಡಿಯಾ ಕಂಪನಿಯು ತನ್ನ ಹೊಸ ನಿಂಜಾ 1000 ಮತ್ತು ಝಡ್‍900 ಬೈಕುಗಳಿಗಾಗಿ ದೇಶಾದ್ಯಂತ ಬುಕ್ಕಿಂಗ್ ಅನ್ನು ಆರಂಭಿಸಿದ್ದಾರೆ. ಬಿಎಸ್-6 ಮಾಲಿನ್ಯ ನಿಯಮಕ್ಕೆ ತಕ್ಕಂತೆ ನವೀಕರಿಸಿ ಬಿಡುಗಡೆಗೊಳಿಸಿದ ಮೊದಲ ಪ್ರೀಮಿಯಂ ಬೈಕ್ ಝಡ್‍900 ಆಗಿದೆ.

ಹೊಸ ಕವಾಸಕಿ ನಿಂಜಾ ಬೈಕುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಮುಂಬೈ ಮೂಲದ ಡೀಲರ್ ಪ್ರಕಾರ ಹೊಸ ನಿಂಜಾ 1000 ಮತ್ತು ಝಡ್‍900 ಬೈಕುಗಳಿಗಾಗಿ ರೂ. 2.5 ಲಕ್ಷ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಮುಂದಿನ ಕೆಲವು ತಿಂಗಳಲ್ಲಿ ಈ ಎರಡು ಬೈಕುಗಳು ಭಾರತಕ್ಕೆ ಬರಬಹುದು. ದೇಶದಲ್ಲಿ ಕರೋನಾ ಭೀತಿಯಿರುವುದರಿಂದ ಈ ಬೈಕುಗಳು ಡೀಲರ್ ಗಳ ಬಳಿ ತಲುಪಲು ತಡವಾಗಬಹುದು. ಕವಾಸಕಿ ಇಂಡಿಯಾ ಹೊಸ ಬಿಎಸ್-6 ಝಡ್‍900 ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಹೊಸ ಬಿಎಸ್-6 ಕವಾಸಕಿ ಝಡ್900 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.8.50 ಲಕ್ಷಗಳಿಂದ ರೂ.9 ಲಕ್ಷಗಳಾಗಿದೆ.

ಹೊಸ ಕವಾಸಕಿ ನಿಂಜಾ ಬೈಕುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಕವಾಸಕಿ ನಿಂಜಾ 1000 ಬೈಕಿನ ಬೆಲೆಯು ಇನ್ನು ಬಹಿರಂಗಪಡಿಸಲಿಲ್ಲ. ಇನ್ನು ಹೊಸ ಕವಾಸಕಿ ಝಡ್‍900 ಬೈಕ್ 948 ಸಿಸಿ ಇನ್‍-ಲೈನ್ ನಾಲ್ಕು ಲಿಕ್ವಿಡ್ ಕೂಲ್ಡ್ ಬಿಎಸ್-6 ಎಂಜಿನ್ ಹೊಂದಿದೆ. ಈ ಎಂಜಿನ್ 9,500 ಆರ್‍‍‍ಪಿಎಂನಲ್ಲಿ 123 ಬಿ‍‍ಹೆಚ್‍‍ಪಿ ಪವರ್ ಮತ್ತು 7,700 ಆರ್‍‍ಪಿಎಂನಲ್ಲಿ 98.4 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍‍ನೊಂದಿಗೆ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಹೊಸ ಕವಾಸಕಿ ನಿಂಜಾ ಬೈಕುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ ಬಿಎಸ್-6 ಕವಾಸಕಿ ಝಡ್900 ಬೈಕ್ ಹಲವಾರು ಹೊಸ ಫೀಚರ್ಸ್‍‍ಗಳನ್ನು ಹೊಂದಿದೆ. ಇದರಲ್ಲಿ ಹೆಡ್‍‍ಲ್ಯಾಂಪ್ ಮತ್ತು ಟೇಲ್‍‍ಲೈ‍‍ಟ್‍, ಎಲ್‍ಇಡಿ ಲೈಟ್‍ಗಳು ಮತ್ತು ಎರಡು ತುದಿಯಲ್ಲಿ ನವೀಕರಿಸಿದ ಸಸ್ಪೆಂಕ್ಷನ್ ಸೆಟ್ಟಿಂಗ್‍‍ಗಳು ಮತ್ತು ರೈಡಿಯಾಲಜಿ ಎಂಬ ಆ್ಯಪ್ ಮೂಲಕ ಸ್ಮಾರ್ಟ್‍‍ಫೋನ್ ಕನೆಕ್ಟಿವಿಟಿ ಹೊಂದಿರುವ ಹೊಸ 4.3 ಇಂಚಿನ ಟಿಎ‍ಫ್‍ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ.

ಹೊಸ ಕವಾಸಕಿ ನಿಂಜಾ ಬೈಕುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ ಕವಾಸಕಿ ಝಡ್900 ಬೈಕ್‍‍ನಲ್ಲಿ ಹೊಸ ಪವರ್ ಮೋಡ್‍ನೊಂದಿಗೆ ಇತರ ರೈಡಿಂಗ್ ಮೋಡ್‍‍ಗಳನ್ನು ನೀಡಲಾಗಿದೆ. ಇದರೊಂದಿಗೆ ಟ್ರಾಕ್ಷನ್ ಕಂಟ್ರೂಲ್, ಸ್ಟ್ರಾಂಗ್ ಫ್ರೇಮ್ ಮತ್ತು ಡನ್‍‍ಲಾಪ್ ಸ್ಪೋರ್ಟ್ಸ್‌ಮ್ಯಾಕ್ಸ್ ರೋಡ್ಸ್‌ಪೋರ್ಟ್ 2 ಟಯರ್‍‍ಗಳನ್ನು ಅಳವಡಿಸಲಾಗಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ ಕವಾಸಕಿ ನಿಂಜಾ ಬೈಕುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ ಕವಾಸಕಿ ಝಡ್900 ಬೈಕ್ ಅನ್ನು ಎರಡು ಡ್ಯುಯಲ್ ಟೋನ್ ಬಣ್ಣಗಳನ್ನು ಹೊಂದಿದೆ. ಇದರಲ್ಲಿ ಮೆಟಾಲಿಕ್ ಗ್ರ್ಯಾಫೈಟ್ ಗ್ರೇ ಅಥವಾ ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್ ಮತ್ತು ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್ ಅಥವಾ ಮೆಟಾಲಿಕ್ ಫ್ಲಾಟ್ ಸ್ಪಾರ್ಕ್ ಬ್ಲ್ಯಾಕ್ ಬಣ್ಣಗಳಾಗಿದೆ.

ಹೊಸ ಕವಾಸಕಿ ನಿಂಜಾ ಬೈಕುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ ಕವಸಾಕಿ ಝಡ್900 ಬೈಕ್ ಇತರ ಬದಲಾವಣೆಗಳನ್ನು ಮಾಡಲಾಗಿಲ್ಲ. ಉಳಿದಂತೆ ಸಸ್ಪೆಂಕ್ಷನ್ ಸೆಟಪ್‍ ಅನ್ನು ಸುಧಾರಿಸಲಾಗಿದ್ದರೂ,ಇನ್ನೂ ಮುಂಭಾಗದಲ್ಲಿ ಅದೇ 41 ಎಂಎಂ ಯು‍ಎಸ್‍‍ಡಿ ಫೋರ್ಕ್‍‍ಗಳನ್ನು ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಅನ್ನು ಅಳವಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಹೊಸ ಕವಾಸಕಿ ನಿಂಜಾ ಬೈಕುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಬ್ರೇಕಿಂಗ್ ಸಿಸ್ಟಂನಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಮುಂಭಾಗದಲ್ಲಿ ಡ್ಯುಯಲ್ 300 ಎಂಎಂ ಪೆಟಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ ಒಂದೇ 250 ಎಂಎಂ ಪೆಟಲ್ ಡಿಸ್ಕ್ ಅನ್ನು ಹೊಂದಿದೆ. ಇದರೊಂದಿಗೆ ಡ್ಯುಯಲ್ ಚಾನೆಲ್ ಎಬಿ‍ಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಹೊಸ ಕವಾಸಕಿ ನಿಂಜಾ ಬೈಕುಗಳ ಖರೀದಿಗೆ ಬುಕ್ಕಿಂಗ್ ಆರಂಭ

ಕವಾಸಕಿ ಝಡ್900 ದೇಶದ ಮೊದಲ ಪ್ರೀಮಿಯಂ ಬಿಎಸ್-6 ಸೂಪರ್‍‍ನೇಕಡ್ ಬೈಕ್ ಆಗಿದೆ. ಹೊಸ ನಿಂಜಾ 1000 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.10.29 ಲಕ್ಷಗಳಾಗಿರಬಹುದು ಎಂದು ನಿರೀಕ್ಷಿಸಬಹುದು.

Article Published On: Saturday, May 9, 2020, 12:28 [IST]
English summary
Kawasaki Ninja 1000 & Z900 BS6 Bookings Open. Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+