ಯಾವುದೇ ಬಡ್ಡಿ ಇಲ್ಲದೆ ಖರೀದಿಸಿ ಹೊಸ ಕವಾಸಕಿ ನಿಂಜಾ 650 ಬೈಕ್
ಜನಪ್ರಿಯ ದ್ವಿಚಕ್ರ ವಾಹನ ಕಂಪನಿಯಾದ ಕವಾಸಕಿ ತನ್ನ ಬಿಎಸ್-6 ನಿಂಜಾ 650 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದೀಗ ಈ ಹೊಸ ನಿಂಜಾ 650 ಬೈಕುಗಳನ್ನು ಖರೀದಿಸಲು ಬಯಸುವವರಿಗೆ ಕವಾಸಕಿ ಕಂಪನಿಯು ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಕವಾಸಕಿ ಕಂಪನಿಯು ಬಿಎಸ್-6 ನಿಂಜಾ 650 ಬೈಕಿನ ಮಾರಾಟವನ್ನು ಹೆಚ್ಚಿಸಲು ಗ್ರಾಹಕರಿಗೆ ಭರ್ಜರಿ ಆಫರ್ ಅನ್ನು ಘೋಷಿಸಿದೆ. ಶೂನ್ಯ ಶೇಕಡಾ ಬಡ್ಡಿದರದಲ್ಲಿ ಈ ಹೊಸ ಬೈಕನ್ನು ಖರೀದಿಸಬಹುದಾಗಿದೆ. ಬೈಕ್ ಅನ್ನು ಖರೀದಿಸಲು ಮೊದಲು ರೂ.1,70,720 ಡೌನ್ ಪೇಮೆಂಟ್ ಪಾವತಿಸಿ ನಂತರ ಮಾಸಿಕ ಇಎಂಐ ಕಟ್ಟಬೇಕಾಗುತ್ತದೆ. ಆದರೆ ಗ್ರಾಹಕರು ಗಮನಿಸಬೇಕಾದ ಅಂಶವಿಂದರೆ ಕೇವಲ ಒಂದು ವರ್ಷ ಮಾತ್ರ ಈ ಆಫರ್ ಅನ್ವಯಿಸುತ್ತದೆ.

ಒಂದು ವರ್ಷದ ನಂತರದಲ್ಲಿ ಗ್ರಾಹಕರು ಬಡ್ಡಿ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಈ ಆಫರ್ ಕೇವಲ ಈ ತಿಂಗಳ 15 ರವರೆಗೆ ಮಾತ್ರ ಲಭ್ಯವಿರುತ್ತದೆ. ಈ ಸೂಪರ್ ಬೈಕನ್ನು ಖರೀದಿಸಲು ಬಯಸುವವರರಿಗೆ ಕಂಪನಿಯು ಭರ್ಜರಿ ಆಫರ್ ಅನ್ನು ನೀಡಿದೆ.
MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ ಕವಾಸಕಿ ನಿಂಜಾ 650 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.6.24 ಲಕ್ಷಗಳಾಗಿದೆ. 2020ರ ಕವಾಸಕಿ ನಿಂಜಾ 650 ಬೈಕನ್ನು ಹಲವಾರು ಬದಲಾವಣೆಗಳೊಂದಿಗೆ ಬಿಡುಗಡೆಗೊಳಿಸಲಾಗಿತ್ತು. ಹೊಸ ಕವಾಸಕಿ ನಿಂಜಾ 650 ಬೈಕ್ ಆಗ್ರೇಸಿವ್ ಲುಕ್ ಅನ್ನು ಹೊಂದಿದೆ.

ಹೊಸ ಝಡ್ 650 ಬೈಕಿನಲ್ಲಿ 649 ಸಿಸಿಯ ಲಿಕ್ವಿಡ್ ಕೂಲ್ಡ್ ಟ್ವಿನ್ ಬಿಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8,000 ಆರ್‍ಪಿಎಂನಲ್ಲಿ 68 ಬಿಹೆಚ್‍ಪಿ ಪವರ್ ಹಾಗೂ 6,700 ಆರ್‍ಪಿಎಂನಲ್ಲಿ 65.7 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6 ಸ್ಪೀಡಿನ ಗೇರ್‍ಬಾಕ್ಸ್ ಅಳವಡಿಸಲಾಗಿದೆ.
MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಈ ಬೈಕಿನಲ್ಲಿ ಎಲ್‍ಇಡಿ ಹೆಡ್‍ಲೈಟ್, 4.3 ಇಂಚಿನ ಟಿಎಫ್‍ಟಿ ಕಲರ್ ಇನ್ಸ್ ಟ್ರೂಮೆಂಟೆಷನ್, ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಹಾಗೂ ಡನ್‍ಲಪ್ ಸ್ಪೋರ್ಟ್ಸ್ ಮ್ಯಾಕ್ಸ್ ರೋಡ್‍ಸ್ಪೋರ್ಟ್ ಟಯರ್‍ಗಳಿವೆ.

ಈ ಬೈಕಿನಲ್ಲಿರುವ ಎಲ್‍ಇಡಿ ಹೆಡ್‍ಲೈಟ್ ಹಾಗೂ ಟಿಎಫ್‍ಟಿ ಇನ್ಸ್ ಟ್ರೂಮೆಂಟೆಷನ್ ಸ್ಕ್ರೀನ್‍ಗಳು ಈ ಬೈಕಿನ ಲುಕ್ ಅನ್ನು ಮತ್ತಷ್ಟು ಹೆಚ್ಚಿಸುತ್ತವೆ. ಈ ಬೈಕಿನಲ್ಲಿ ಕಡಿಮೆ ತೂಕದ ಚಾಸೀಸ್ ಹಾಗೂ ಆರಾಮದಾಯಕವಾದ ಸೀಟುಗಳನ್ನು ಅಳವಡಿಸಲಾಗಿದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಸಸ್ಪೆಂಷನ್‍ಗಳಿಗಾಗಿ ಈ ಬೈಕಿನಲ್ಲಿ ಮುಂಭಾಗದಲ್ಲಿ 41 ಎಂಎಂನ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್‍ಗಳಿವೆ. ಬ್ರೇಕಿಂಗ್‍ಗಳಿಗಾಗಿ ಮುಂಭಾಗದಲ್ಲಿ 300 ಎಂಎಂನ ಪೆಟಲ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ 200 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿರಲಿದೆ.

2020ರ ಕವಾಸಕಿ ನಿಂಜಾ 650 ಬೈಕಿನ ಮೈಲೇಜ್ ಅಂಕಿ ಅಂಶ ಕೂಡ ಹೆಚ್ಚಾಗಿದೆ. ಕವಾಸಕಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಇತರ ಜನಪ್ರಿಯ ಸೂಪರ್ ಬೈಕುಗಳ ಬುಕ್ಕಿಂಗ್ ಅನ್ನು ಕೂಡ ಪ್ರಾರಂಭಿಸಲಾಗಿದೆ.


Click it and Unblock the Notifications