ಹೊಸ ವಿನ್ಯಾಸದೊಂದಿಗೆ ಬಿಡುಗಡೆಯಾಗಲಿದೆ ಕವಾಸಕಿ ನಿಂಜಾ ಝಡ್‍ಎಕ್ಸ್ 25ಆರ್
ಜನಪ್ರಿಯ ದ್ವಿಚಕ್ರ ವಾಹನಾ ಉತ್ಪಾದನಾ ಕಂಪನಿಯಾದ ಕವಾಸಕಿ ನಿಂಜಾ ಝಡ್‍ಎಕ್ಸ್ 25ಆರ್ ಬೈಕ್ ಅನ್ನು ಆನ್‍ಲೈನ್ ನಲ್ಲಿ ಇತ್ತೀಚೆಗೆ ಅನಾವರಣಗೊಳಿಸಿತ್ತು. ಈ ಹೊಸ ನಿಂಜಾ ಝಡ್‍ಎಕ್ಸ್ 25ಆರ್ ಬೈಕ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 25ಆರ್ ಬೈಕನ್ನು ಪರಿಣಾಮಕಾರಿಯಾದ ಸಾಮಾಜಿಕ ಜಾಲತಾಣದ ಮೂಲಕ ಅನಾವರಣಗೊಳಿಲಾಗಿತ್ತು. ಈ ಕವಾಸಕಿ ಬೈಕ್ ಟ್ರ್ಯಾಕ್-ಫೋಕಸ್ಡ್, ಟ್ರ್ಯಾಕ್-ಬ್ರೀಡ್ ಮತ್ತು ಟ್ರ್ಯಾಕ್-ಓನ್ಲಿ ಎಂಬ ಮೂರು ವೆರಿಯೆಂಟ್‍ಗಳನ್ನು ಒಳಗೊಂಡಿದೆ. ಇದೀಗ ಹೊಸದಾಗಿ ಕಂಪನಿಯು ಫೈಬರ್ ಬಾಡಿ ಪ್ಯಾನೆಲ್ ಅಳವಡಿಸುವ ವೀಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಈ ವೀಡಿಯೋ ಹಿಂದಿನ ಸೀಟ್ ಕೌಲ್ ಅನ್ನು ಬದಲಿಸುವ ಮೂಲಕ ಮತ್ತು ಹೆಡ್‌ಲೈಟ್ ಜೋಡಣೆಯೊಂದಿಗೆ ಪ್ರಾರಂಭವಾಗುತ್ತದೆ.

ಕಿಟ್ ಟ್ರ್ಯಾಕ್ ಬಳಕೆಗಾಗಿ ಮತ್ತು ರೇಸ್-ಸ್ಪೆಕ್ ಆವೃತ್ತಿಯಂತೆಯೇ ಹೊಸ ಕಾರ್ಬನ್-ಫೈಬರ್ ಹೆಡ್‌ಲೈಟ್ ಜೋಡಿಸಲಾಗಿದೆ. ನಂತರ, ಕಾರ್ಬನ್-ಫೈಬರ್ ಫ್ರಂಟ್ ಫೇರಿಂಗ್, ಫ್ಯೂಯಲ್ ಟ್ಯಾಂಕ್, ಚೈನ್ ಕವರ್ ಮತ್ತು ಫ್ರಂಟ್ ಫೆಂಡರ್ ಅನ್ನು ಬೈಕಿಗೆ ಅಳವಡಿಸಲಾಗಿದೆ.
MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಕಂಪನಿಯು 2019ರ ಟೋಕಿಯೊ ಮೋಟಾರ್ ಶೋನಲ್ಲಿ ಸಂಪೂರ್ಣ ಫೇರ್ಡ್ ನಿಂಜಾ ಝಡ್‍ಎಕ್ಸ್ 25ಆರ್ ಬೈಕನ್ನು ಮೊದಲ ಬಾರಿಗೆ ಪ್ರದರ್ಶಿಸಿತ್ತು. ಈ ಬೈಕ್ ತನ್ನ ಆಗ್ರೆಸಿವ್ ಸ್ಟೈಲಿಂಗ್ ಮತ್ತು ಇನ್-ಲೈನ್ ನಾಲ್ಕು ಎಂಜಿನ್ ನಿಂದ ಗ್ರಾಹಕರ ಗಮನಸೆಳೆಯಿತು.

ಕವಾಸಕಿ ನಿಂಜಾ ಝಡ್‍ಎಕ್ಸ್ 25ಆರ್ ಬೈಕ್ 249 ಸಿಸಿ, ಲಿಕ್ವಿಡ್-ಕೂಲ್ಡ್, ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಬಿಹೆಚ್‍ಪಿ ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳು ಇನ್ನು ಕೂಡ ಬಹಿರಂಗಗೊಂಡಿಲ್ಲ. ಈ ಎಂಜಿನ್ ಸುಮಾರು 40 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ ಎಂದು ನಿರೀಕ್ಷಿಸುತ್ತೇವೆ. ಈ ಎಂಜಿನ್ ನೊಂದಿಗೆ 6 ಸ್ಪೀಡ್ ಗೇರ್‌ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಸ್ಲಿಪ್ಪರ್ ಅಸಿಸ್ಟ್ ಕ್ಲಚ್ ಮತ್ತು ಕ್ವಿಕ್‌ಶಿಫ್ಟರ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.
MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಕವಾಸಕಿ ನಿಂಜಾ ಝಡ್‍ಎಕ್ಸ್ 25ಆರ್ ಟ್ವಿನ್ ಪಾಡ್ ಹೆಡ್ ಲ್ಯಾಂಪ್, ಫುಲ್ ಫೇರಿಂಗ್ ಮತ್ತು ಡ್ಯುಯಲ್ ಟೋನ್ ಬಣ್ಣದ ಆಯ್ಕೆಯನ್ನು ಹೊಂದಿದೆ. ಈ ಬೈಕ್ ಮಸ್ಕ್ಯುಲರ್ ಟ್ಯಾಂಕ್, ಅಂಡರ್ಬೆಲ್ಲಿ ಎಕ್ಸಾಸ್ಟ್ ಮತ್ತು ಕಡಿಮೆ ಸೆಟ್ ಕ್ಲಿಪ್-ಆನ್ ಹ್ಯಾಂಡಲ್‌ಬಾರ್ ಅನ್ನು ಹೊಂದಿದೆ.

ಈ ಬೈಕಿನ ಮುಂಭಾಗದಲ್ಲಿ 37 ಎಂಎಂ ಅಪ್‌ಸೈಡ್-ಡೌನ್ ಶೋವಾ ಪ್ರತ್ಯೇಕ ಫಂಕ್ಷನ್ ಫೋರ್ಕ್ ಅನ್ನು ಹೊಂದಿದೆ. ಈ ಬೈಕಿನ ಹಿಂಭಾಗದಲ್ಲಿ ಬ್ಯಾಕ್-ಲಿಂಕ್ ಸಂಸೆಕ್ಷನ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಸುರಕ್ಷತೆಗಾಗಿ ಮುಂಭಾಗ ಮತ್ತು ಹಿಂಭಾಗದ ಟಯರ್‍ಗಳಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಅಳವಡಿಸಲಾಗಿದೆ.
MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್
ಕವಾಸಕಿ ನಿಂಜಾ ಝಡ್‍ಎಕ್ಸ್ 25ಆರ್ ಕಿನಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಅನಲಾಗ್ ಟ್ಯಾಕೋಮೀಟರ್ ಮತ್ತು ಸೆಮಿ ಡಿಜೆಟಲ್ ಯುನಿಟ್ ಸಿಸ್ಟಂ ಅನ್ನು ಹೊಂದಿರಲಿದೆ. ಕವಾಸಕಿ ಝಡ್‍ಎಕ್ಸ್ 25ಆರ್ ಎಲೆಕ್ತ್ರಾನಿಕ್ ರೈಡರ್ ಅನ್ನು ಕೂಡ ಒಳಗೊಂಡಿದೆ. ಇವುಗಳೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಮತ್ತು ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಹೊಂದಿದೆ.

ಕವಾಸಕಿ ನಿಂಜಾ ಝಡ್‍ಎಕ್ಸ್ 25ಆರ್ ರೇಸರ್ ಕಸ್ಟಮ್ ಬೈಕ್ ಭಾರತದಲ್ಲಿ ಬಿಡುಗಡೆಯಾದ ಬಳಿಕ ಹೋಂಡಾ ಸಿಬಿಆರ್ 250 ಆರ್ಆರ್ ಬೈಕಿಗೆ ನೇರ ಪೈಪೋಟಿಯನ್ನು ನೀಡುತ್ತದೆ. ಈ ಎರಡು ಬೈಕುಗಳು ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವುದರಿಂದ ಪರಸ್ಪರ ಪ್ರಬಲ ಪೈಪೋಟಿಯನ್ನು ನೀಡುತ್ತದೆ.


Click it and Unblock the Notifications