ಅನಾವರಣವಾಯ್ತು 2021ರ ಕವಾಸಕಿ ನಿಂಜಾ 400 ಬೈಕ್
ಜನಪ್ರಿಯ ದ್ವಿಚಕ್ರ ವಾಹನ ಕಂಪನಿಯಾದ ಕವಾಸಕಿಯು ತನ್ನ 2021ರ ನಿಂಜಾ 400 ಸೂಪರ್‌ಸ್ಪೋರ್ಟ್ ಬೈಕನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಹೊಸ ಕವಾಸಕಿ ನಿಂಜಾ 400 ಬೈಕನ್ನು ಹೊಸ ಬಣ್ಣಗಳ ಆಯ್ಕೆಯೊಂದಿಗೆ ಅನಾವರಣಗೊಳಿಸಲಾಗಿದೆ.

ಹೊಸ ಕವಾಸಕಿ ನಿಂಜಾ 400 ಬೈಕ್ ಬ್ಲ್ಯಾಕ್, ಗ್ರೇ, ಬ್ಲ್ಯೂ ಮತ್ತು ಕೆಆರ್‌ಟಿ ಬಣ್ಣಗಳ ಆಯ್ಕೆಯಲ್ಲಿ ಅನಾವರಣಗೊಳಿಸಲಾಗಿದೆ. ಹೊಸ ಬಣ್ಣದ ಆಯ್ಕೆಯನ್ನು ಹೊರತಾಗಿ ಇತರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಂಡ ಬೈಕಿನಲ್ಲಿ ವಿನ್ಯಾಸ ಮತ್ತು ಯಾಂತ್ರಿಕ ಅಂಶಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಬ್ಲ್ಯಾಕ್ ಬಣ್ಣದ ಆಯ್ಕೆಯ ಕವಾಸಕಿ ನಿಂಜಾ 400 ಬೈಕ್ ಸೂಕ್ಷ್ಮವಾದ ವೈಟ್ ಡೆಕಲ್‌ಗಳನ್ನು ಹೊಂದಿದ್ದು ಡ್ಯುಯಲ್-ಟೋನ್ ಲುಕ್ ನೀಡುತ್ತದೆ. ಇನ್ನು ಈ ಬೈಕಿನ ಅಲಾಯ್ ವ್ಹೀಲ್ ಗಳಲ್ಲಿ ರೆಡ್ ಟೇಪ್ ಅನ್ನು ಸಹ ಹೊಂದಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

2021ರ ಕವಾಸಕಿ ನಿಂಜಾ 400 ಬೈಕ್ ಸ್ವಲ್ಪಮಟ್ಟಿಗೆ ರೆಟ್ರೊ ಶೈಲಿಯ ಟೀಲ್ ಬ್ಲೂ ಬಣ್ಣದಲ್ಲಿ ಗ್ರಾಫಿಕ್ಸ್ ಅನ್ನು ಹೊಂದಿದೆ. ಇನ್ನು ಈ ಹೊಸ ಗ್ರೇ ಬಣ್ಣದ ಆಯ್ಕೆಯು ಹೋಂಡಾ ಸಿಬಿಆರ್ 250 ಬೈಕಿನಲ್ಲಿರುವ ಬಣ್ಣದ ಆಯ್ಕೆಯಂತೆ ಕಾಣುತ್ತದೆ. ಇನ್ನು ಈ ಹೊಸ ನಿಂಜಾ 400 ಬೈಕ್ ಡೆಕಲ್‌ಗಳನ್ನು ಹೊಂದಿದೆ.

ಇನ್ನು ಈ ಬೈಕ್ ಬ್ಲೂ ಬಣ್ಣದ ಆಯ್ಜೆಯಲ್ಲಿ ವಿಶಿಷ್ಟವಾದ ಲುಕ್ ಅನ್ನು ಹೊಂದಿದೆ. ಈ ಬೈಕಿನ ಮೇಲಿನ ಭಾಗಗಳು ಟರ್ಕಿಷ್ ಬ್ಲೂ ಬಣ್ಣದ ಫಿನಿಶಿಂಗ್ ಅನ್ನು ಹೊಂದಿದೆ. ಮುಂಭಾಗದ ಕೆಲವು ಭಾಗಗಳು ಬ್ಲ್ಯಾಕ್ ಬಣ್ಣದ ಅಂಶಗಳನ್ನು ಹೊಂದಿದೆ. ಇದು ಡ್ಯುಯಲ್ ಟೋನ್ ಲುಕ್ ಅನ್ನು ನೀಡುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಇನ್ನು ಹಿಂದಿನ ಬಿಎಸ್-4 ನಿಂಜಾ 400 ಮಾದರಿಯು ಭಾರತದಲ್ಲಿ ಎಬೊನಿ ಬ್ಲ್ಯಾಕ್ ಮತ್ತು ಲೈಮ್ ಗ್ರೀನ್ ಎರಡು ಬಣ್ಣದ ಆಯ್ಕೆಯಲ್ಲಿ ಲಭ್ಯವಿತ್ತು. ಈ ಬಿಎಸ್-4 ನಿಂಜಾ 400 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.4.99 ಲಕ್ಶಗಳಾಗಿದೆ.

ಹೊಸ ನಿಂಜಾ 400 ಬೈಕಿನಲ್ಲಿ 398 ಸಿಸಿ ಪ್ಯಾರೆಲ್ ಟ್ವಿನ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 47.5 ಬಿಹೆಚ್‌ಪಿ ಪವರ್ ಮತ್ತು 36 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಳಾಗಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

2021ರ ನಿಂಜಾ 400 ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಯುನಿ-ಟ್ರ್ಯಾಕ್ ಮೊನೊಶಾಕ್ ಸೆಟಪ್ ಸಸ್ಪಂಕ್ಷನ್ ಅನ್ನು ಅಳವಡಿಸಲಾಗಿದೆ.

ಇನ್ನು 2021ರ ನಿಂಜಾ 400 ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಡ್ಯುಯಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

ಕವಾಸಕಿ ನಿಂಜಾ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಸ್ಪೋರ್ಟ್ಸ್ ಬೈಕುಗಳಲ್ಲಿ ಒಂದಾಗಿದೆ. ಇನ್ನು ಹೊಸ ನಿಂಜಾ 400 ಬೈಕನ್ನು ಕವಾಸಕಿ ಕಂಪನಿಯು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.


Click it and Unblock the Notifications