ಹೊಸ ಬಣ್ಣಗಳ ಆಯ್ಕೆಯಲ್ಲಿ ಅನಾವರಣವಾಯ್ತು 2021ರ ಕವಾಸಕಿ ವಲ್ಕನ್ ಎಸ್ ಬೈಕ್

ಕವಾಸಕಿ ಕಂಪನಿಯು 2021ರ ವಲ್ಕನ್ ಎಸ್ ಬೈಕನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಜನಪ್ರಿಯ 2021ರ ಕವಾಸಕಿ ವಲ್ಕನ್ ಎಸ್ ಬೈಕ್ ಹೊಸ ಎರಡು ಬಣ್ಣಗಳ ಆಯ್ಕೆಗಳನ್ನು ಪಡೆದುಕೊಂಡಿದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಅನಾವರಣವಾಯ್ತು 2021ರ ಕವಾಸಕಿ ವಲ್ಕನ್ ಎಸ್ ಬೈಕ್

2021ರ ಕವಾಸಕಿ ವಲ್ಕನ್ ಎಸ್ ಬೈಕ್ ಬ್ಲ್ಯಾಕ್ ಜೊತೆ ಬ್ಲೂ ಮತ್ತು ರೆಡ್ ಸ್ಟ್ರೀಪ್ ಗಳೊಂದಿಗೆ ಗ್ರೇ ಮತ್ತು ಬ್ಲ್ಯಾಕ್ ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಭಾರತದಲ್ಲಿ ಈಗಾಗಲೇ ಬಿಎಸ್ 6 ಆವೃತ್ತಿಯಲ್ಲಿ ರೆಡ್ ಸ್ಟ್ರಿಪ್ ನೊಂದಿಗೆ ಗ್ರೇ ಮತ್ತು ಬ್ಲ್ಯಾಕ್ ಬಣ್ಣಗಳಲ್ಲಿ ಬಿಡುಗಡೆಗೊಳಿಸಿದೆ. 2021ರ ಕವಾಸಕಿ ವಲ್ಕನ್ ಎಸ್ ಬೈಕಿನ ಬೆಲೆಯು ರೂ.5.79 ಲಕ್ಷಗಳಾಗಿದೆ. ಈ ಹೊಸ ಕವಾಸಕಿ ವಲ್ಕನ್ ಎಸ್ ಬೈಕಿನ ಬೆಲೆಯು ಹಿಂದಿನ ಬಿಎಸ್-4 ಮಾದರಿಗಿಂತ ರೂ.30,000 ಹೆಚ್ಚಾಗಿದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಅನಾವರಣವಾಯ್ತು 2021ರ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಕವಾಸಕಿ ವಲ್ಕನ್ ಎಸ್ ಬೈಕಿನಲ್ಲಿ 649ಸಿಸಿ ಪ್ಯಾರೆಲಲ್ ಲಿಕ್ವಿಡ್-ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7500 ಆರ್‌ಪಿಎಂನಲ್ಲಿ 60 ಬಿಹೆಚ್‍ಪಿ ಪವರ್ ಮತ್ತು 7000 ಆರ್‌ಪಿಎಂನಲ್ಲಿ 62.4 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಹೊಸ ಬಣ್ಣಗಳ ಆಯ್ಕೆಯಲ್ಲಿ ಅನಾವರಣವಾಯ್ತು 2021ರ ಕವಾಸಕಿ ವಲ್ಕನ್ ಎಸ್ ಬೈಕ್

ಕವಾಸಕಿ ಝಡ್650 ಮತ್ತು ನಿಂಝಾ 650 ಬೈಕಿನಲ್ಲಿರುವಂತಹ ಅದೇ ಮಾದರಿಯ ಫೀಚರ್ ಗಳನ್ನು ಹೊಸ ವಲ್ಕನ್ ಬೈಕಿನಲ್ಲಿ ಲಭ್ಯವಿದೆ. ಆದರೆ ಬ್ಲೂಟೂತ್ ಕನೆಕ್ಟಿಟ್ ಆಗಿರುವ ಇನ್ಸ್ ಟ್ರೂಮೆಂಟ್ ಕನ್ಸೋಲ್ ಫೀಚರ್ ಈ ಹೊಸ ವಲ್ಕನ್ ಬೈಕಿನಲ್ಲಿ ಲಭ್ಯವಿಲ್ಲ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಅನಾವರಣವಾಯ್ತು 2021ರ ಕವಾಸಕಿ ವಲ್ಕನ್ ಎಸ್ ಬೈಕ್

ಈ ಹೊಸ ಕವಾಸಕಿ ವಲ್ಕನ್ ಎಸ್ ಬೈಕಿನಲ್ಲಿ ರೆಟ್ರೋ ವಿನ್ಯಾಸದ ಹೆಡ್‌ಲ್ಯಾಂಪ್ ಅನ್ನು ಹೊಂದಿದೆ. ಇದರೊಂದಿಗೆ ಬ್ಲ್ಯಾಕ್ ಕೌಲ್, ಎರಡು ತುದಿಗಳಲ್ಲಿ ದುಂಡಗಿನ ಆಕಾರದ ಫೆಂಡರ್‌ಗಳು ಮತ್ತು ಹಿಂಭಾಗದಲ್ಲಿ ಸೆಟ್ ಟರ್ನ್ ಸಿಗ್ನಲ್ ಇಂಡಿಕೇಟರ್ ಗಳನ್ನು ಹೊಂದಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ಬಣ್ಣಗಳ ಆಯ್ಕೆಯಲ್ಲಿ ಅನಾವರಣವಾಯ್ತು 2021ರ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಕವಾಸಕಿ ವಲ್ಕನ್ ಎಸ್ ಬೈಕ್ 1575 ಎಂಎಂ ಉದ್ದದ ವ್ಹೀಲ್ ಬೇಸ್ ಅನ್ನು ಹೊಂದಿದೆ. ಈ ಹೊಸ ಕವಾಸಕಿ ವಲ್ಕನ್ ಎಸ್ ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ 130 ಎಂಎಂ ಪ್ರಿ-ಲೋಡ್ ಆಫ್-ಸೆಟ್ ಮಾದರಿಯ ಮೊನೊ-ಶಾಕ್ ಸೆಟಪ್ ಅನ್ನು ಒಳಗೊಂಡಿದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಅನಾವರಣವಾಯ್ತು 2021ರ ಕವಾಸಕಿ ವಲ್ಕನ್ ಎಸ್ ಬೈಕ್

ಇನ್ನು ಹೊಸ ಕವಾಸಕಿ ವಲ್ಕನ್ ಎಸ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಡ್ಯುಯಲ್ 300 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಒಂದೇ 250 ಎಂಎಂ ಯುನಿಟ್ ಅನ್ನು ನೀಡಲಾಗಿದೆ. ಇದರೊಂದಿಗೆ ಸ್ಟ್ಯಾಂಡರ್ಡ್ ಆಗಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ನೀಡಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ಬಣ್ಣಗಳ ಆಯ್ಕೆಯಲ್ಲಿ ಅನಾವರಣವಾಯ್ತು 2021ರ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಕವಾಸಕಿ ವಲ್ಕನ್ ಎಸ್ ಬೈಕಿನಲ್ಲಿ 14-ಲೀಟರ್ ಫೇರ್ಡ್ ಫ್ಯೂಯಲ್ ಟ್ಯಾಂಕ್, ಅಪ್-ರೈಟ್ ಹ್ಯಾಂಡಲ್‌ಬಾರ್ ಮತ್ತು ಫಾರ್ವರ್ಡ್-ಸೆಟ್ ಫುಟ್‌ಪೆಗ್‌ಗಳನ್ನು ಹೊಂದಿವೆ. ಇನ್ನು ಈ ಬೈಕಿನಲ್ಲಿ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಹೊಂದಿದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಅನಾವರಣವಾಯ್ತು 2021ರ ಕವಾಸಕಿ ವಲ್ಕನ್ ಎಸ್ ಬೈಕ್

ಇನ್ನು ಕವಾಸಕಿ ನಿಂಜಾ 650 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಲೈಮ್ ಗ್ರೀನ್ ಎಬೊನಿ ಮತ್ತು ಪರ್ಲ್ ಫ್ಲಾಟ್ ಸ್ಟಾರ್‌ಡಸ್ಟ್ ವೈಟ್ ಎರಡು ಬಣ್ಣಗಳ ಆಯ್ಕೆಗಳನ್ನು ಹೊಂದಿದೆ. ಇದೀಗ ಲೈಮ್ ಗ್ರೀನ್ ಆವೃತ್ತಿಯಲ್ಲಿ ಪ್ಯಾಲೆಟ್‌ ಬಣ್ಣವನ್ನು ಸೇರಿಸಲಾಗಿದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಅನಾವರಣವಾಯ್ತು 2021ರ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಕವಾಸಕಿ ವಲ್ಕನ್ ಎಸ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಮತ್ತು ಸ್ಟ್ರೀಟ್ ರಾಡ್ ಬೈಕುಗಳಿಗೆ ಪೈಪೋಟಿ ನೀಡುತ್ತದೆ. ಕವಾಸಕಿ ಕಂಪನಿಯು ತನ್ನ ಜನಪ್ರಿಯ ಮಾದರಿಗಳನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಲಾಗುತ್ತಿದೆ.

Article Published On: Wednesday, September 23, 2020, 9:36 [IST]
English summary
2021 Kawasaki Vulcan S Unveiled In New Colour Schemes. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+