Just In
Don't Miss!
- News
ಎಂಇಎಸ್, ಉದ್ಧಟವ್ ಠಾಕ್ರೆ ಇಷ್ಟು ಬೆಳೆಯಲು ಕಾರಣ ಬಿಜೆಪಿಯ ಸಲುಗೆ
- Sports
ಅಡಿಲೇಡ್ ಸೋಲಿನ ನಂತರ ಗೆಲುವಿನ ಹಾದಿ ಹಿಡಿದ ರೋಚಕ ಸಂಗತಿ ವಿವರಿಸಿದ ಹನುಮ ವಿಹಾರಿ
- Movies
Breaking: ನಟಿ ರಾಗಿಣಿಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್
- Finance
ಕಾನ್ ಸ್ಟೇಬಲ್ ಡೆಬಿಟ್ ಕಾರ್ಡ್ ನಿಂದ 40 ಸಾವಿರ ರು. ಎಗರಿಸಿದ ದುಷ್ಕರ್ಮಿ
- Lifestyle
ನೀವು ರಾತ್ರಿ ಭಾರೀ ಭೋಜನ ಮಾಡೋರಾದ್ರೆ ಈ ಸ್ಟೋರಿ ಓದಲೇಬೇಕು...!
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅನಾವರಣವಾಯ್ತು 120 ಕಿ.ಮೀ ಮೈಲೇಜ್ ನೀಡುವ ಕಿಮ್ಕೋ ಎಫ್9 ಸ್ಪೋರ್ಟ್ ಎಲೆಕ್ಟ್ರಿಕ್ ಸ್ಕೂಟರ್
ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಉತ್ತಮ ಬೇಡಿಕೆಯನ್ನು ಪಡೆಯುತ್ತದೆ. ಪೆಟ್ರೋಲ್ ದರಗಳು ಗಗನಕ್ಕೇರುವುದರಿಂದ ಹೆಚ್ಚಿನ ಜನರು ಎಲೆಕ್ಟ್ರಿಕ್ ಸ್ಕೂಟರ್‌ಗಳ ಕಡೆ ಮುಖ ಮಾಡುತ್ತಿದ್ದಾರೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ವೇಳೆ, ಕಿಮ್ಕೋ ತನ್ನ ಹೊಸ ಎಫ್9 ಸ್ಪೋರ್ಟ್ ಇ-ಸ್ಕೂಟರ್ ಅನ್ನು ಅನಾವರಣಗೊಳಿಸಿದೆ. ಕಿಮ್ಕೋ ಸ್ಕೂಟರ್ ಸ್ಪೋರ್ಟಿ ಸ್ಟೈಲಿಂಗ್ ನೊಂದಿಗೆ ಆಕರ್ಷಕ ಲುಕ್ ಅನ್ನು ಹೊಂದಿದ. ಕಿಮ್ಕೋ ಎಫ್9 ಸ್ಪೋರ್ಟ್ ಇ-ಸ್ಕೂಟರ್ ಮುಂಭಾಗ ಏಪ್ರನ್ ಸ್ವೆಲ್ಟೆ ಎಲ್ಇಡಿ ಬ್ಲಿಂಕರ್ ಗಳೊಂದಿಗೆ ಎಲ್ಇಡಿ ಹೆಡ್ ಲ್ಯಾಂಪ್ ಗಳನ್ನು ಹೊಂದಿದೆ. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಬೋಲ್ಡ್ ಲೈನ್ ಗಳನ್ನು ಹೊಂದಿವೆ.

ಈ ಹೊಸ ಕಿಮ್ಕೋ ಎಫ್9 ಸ್ಪೋರ್ಟ್ ಇ-ಸ್ಕೂಟರ್ ನಲ್ಲಿ ಗೋಲ್ಡನ್ 14-ಇಂಚಿನ ಅಲಾಯ್ ವ್ಹೀಲ್, ಸ್ಪ್ಲಿಟ್ ಸೀಟ್ ಸೆಟಪ್ ಮತ್ತು ಹಿಂಭಾಗದ ಟೈರ್ ಹಗ್ಗರ್, ಹೊಂದಿದ್ದು, ಇವುಗಳಿಗೆ ಈ ಎಲೆಕ್ಟ್ರಿಕ್ ಸ್ಕೂಟರಿಗೆ ಪ್ರೀಮಿಯಂ ಲುಕ್ ಅನ್ನು ನೀಡುತ್ತದೆ.
MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಹೊಸ ಕಿಮ್ಕೋ ಎಫ್9 ಸ್ಪೋರ್ಟ್ ಇ-ಸ್ಕೂಟರಿನ ಕಾರ್ಯಕ್ಷಮತೆಯ ಬಗ್ಗೆ ಹೇಳುವುದಾದರೆ, ಈ ಸ್ಕೂಟರಿನಲ್ಲಿ 9.4 ಕಿ.ವ್ಯಾಟ್ ಮೋಟರ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 30 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಈ ಹೊಸ ಕಿಮ್ಕೋ ಎಫ್9 ಸ್ಪೋರ್ಟ್ ಎಲೆಕ್ಟ್ರಿಕ್ ಸ್ಕೂಟರ್ 110 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇದು ಸಾಮಾನ್ಯವಾಗಿ ದಿನನಿತ್ಯ ಬಳಕೆ ಮಾಡುವಂತೆ ಈ ಸ್ಪೋರ್ಟ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅಭಿವೃದ್ದಿ ಪಡಿಸಿದ್ದಾರೆ.
MOST READ: ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಟೀಸರ್ ಚಿತ್ರ ಬಿಡುಗಡೆ

ಹೊಸ ಕಿಮ್ಕೋ ಎಫ್9 ಸ್ಪೋರ್ಟ್ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಕಿಮ್ಕೋ ಎಫ್9 ಸ್ಪೋರ್ಟ್ ಎಲೆಕ್ಟ್ರಿಕ್ ಸ್ಕೂಟರ್ ಬರೊಬ್ಬರಿ 120 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಇನ್ನು ಈ ಹೊಸ ಕಿಮ್ಕೋ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಫಾಸ್ಟ್ ಚಾರ್ಜರ್ ಮೂಲಕ ಎರಡು ಗಂಟೆಗಳಲ್ಲಿ ಚಾರ್ಜ್ ಮಾಡಬಹುದಾಗಿದೆ. ಹೊಸ ಕಿಮ್ಕೋ ಎಲೆಕ್ಟ್ರಿಕ್ ಸ್ಕೂಟರ್ ಆಸಕ್ತಿದಾಯಕ ಫೀಚರ್ ಎಂದರೆ ಎರಡು-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ನೀಡಲಾಗಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಈ ಫೀಚರ್ ಕಾಂಪ್ಯಾಕ್ಟ್ ಫ್ರೇಮ್ ಅನ್ನು ಆಧರಿಸಿದೆ. ಈ ಕಿಮ್ಕೂ ಎಫ್9 ಸ್ಪೋರ್ಟ್ ಎಲೆಕ್ಟ್ರಿಕ್ ಸ್ಕೂಟರ್ 107 ಕೆಜಿ ತೂಕವನ್ನು ಹೊಂದಿದೆ. ಕಿಮ್ಕೋ ತನ್ನ ಎಫ್9 ಸ್ಪೋರ್ಟ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹಲವಾರು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಎಫ್ 9 ಅನ್ನು ಬಿಡುಗಡೆ ಮಾಡಲಿದ್ದರೆ.

ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಈ ಹೊಸ ಕಿಮ್ಕೋ ತನ್ನ ಎಫ್9 ಸ್ಪೋರ್ಟ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗುವುದಿಲ್ಲ. ಆದರೆ ಕಿಮ್ಕೋ ಕಂಪನಿಯು 2018ರಲ್ಲಿ ಭಾರತೀಯ ಬ್ರ್ಯಾಂಡ್ 22 ಮೋಟಾರ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಭಾರತದಲ್ಲಿ ಕಿಮ್ಕೋ ಸ್ಕೂಟರ್ ಗಳು ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ.