ಸ್ಥಗಿತವಾಗಲಿದೆ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಬೈಕುಗಳು
ಅಮೆರಿಕ ಮೂಲದ ಜನಪ್ರಿಯ ಮತ್ತು ದುಬಾರಿ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹಾರ್ಲೆ ಡೇವಿಡ್ಸನ್ ಕಂಪನಿಯು 'ದಿ ರಿವೈರ್' ತಂತ್ರದ ಭಾಗವಾಗಿ ಭಾರತದಲ್ಲಿ ತನ್ನ ಮಾರಾಟ ಮತ್ತು ಉತ್ಪಾದನಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ಹಾರ್ಲೆ ಡೇವಿಡ್ಸನ್ ಕಂಪನಿಯು ಹರಿಯಾಣದ ಬವಾಲ್‌ನಲ್ಲಿ ತನ್ನ ಉತ್ಪಾದನಾ ಘಟಕಕ್ಕೆ ಬೀಗ ಜಡಿಯಲು ಯೋಜಿಸಿದೆ. ಇನ್ನು ಹಾರ್ಲೆ ಡೇವಿಡ್ಸನ್ ಕಂಪನಿಯು ತನ್ನ ಸ್ಟ್ರೀಟ್ 750 ಮತ್ತು ಹಾರ್ಲೆ-ಡೇವಿಡ್ಸನ್ ಸ್ಟ್ರೀಟ್ ರಾಡ್ ಬೈಕುಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ ಎಂದು ವರದಿಗಳಾಗಿದೆ. ವರದಿಯ ಪ್ರಕಾರ ಹಾರ್ಲೆ ಡೇವಿಡ್ಸನ್ ಕಂಪನಿಯು ಈ ನಿರ್ಧಾರವನ್ನು ತಿಂಗಳುಗಳ ಹಿಂದೆ ತೆಗೆದುಕೊಳ್ಳಲಾಗಿದೆ, ಇದೇ ಕಾರಣಗಳಿಂದಾಗಿ ಈ ಮಾದರಿಗಳನ್ನು ಹಾರ್ಲೆ ಡೇವಿಡ್ಸನ್ ಕಂಪನಿಯು ಭರ್ಜರಿ ರಿಯಾಯಿತಿಗಳನ್ನು ಘೋಷಿಸಿದ್ದರು.

ಮೇಡ್ ಇನ್ ಇಂಡಿಯಾ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಭಾರತೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‌ನ ಎಂಟ್ರಿ ಲೆವೆಲ್ ಕ್ರೂಸರ್ ಬೈಕ್ ಆಗಿದೆ. ಕೆಳೆದು ತಿಂಗಳು ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಲಿಮಿಟೆಡ್ ಎಡಿಷನ್ ಬೈಕಿನ ಮೇಲೆ ರೂ.65,000 ಗಳವರೆಗೆ ಭರ್ಜರಿ ರಿಯಾಯಿತಿ ನೀಡಲಾಗಿತ್ತು.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ರಿಯಾಯಿತಿ ಘೋಷಿಸಿದ ಬಳಿಕ ಈ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಬೈಕಿನ ಬೆಲೆಯು ರೂ.4.69 ಲಕ್ಷಗಳಾಗಿದೆ. ಹಾರ್ಲೆ-ಡೇವಿಡ್ಸನ್ ಸ್ಟ್ರೀಟ್ 750 ಭಾರತದ ಹೆಚ್ಚು ಮಾರಾಟವಾದ ಮಾದರಿಗಳಲ್ಲಿ ಒಂದಾಗಿದೆ.

ಇನ್ನು ಹಾರ್ಲೆ-ಡೇವಿಡ್ಸನ್ ಸ್ಟ್ರೀಟ್ ರಾಡ್ ಬೈಕಿನ ಮೇಲೆ ರೂ.77,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಿದ್ದರು. ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ರಾಡ್ ಬೈಕಿನಲ್ಲಿ 749 ಸಿಸಿ ವಿ ಟ್ವಿನ್ ಲಿಕ್ವಿಡ್ ಕೂಲ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಈ ಎಂಜಿನ್ 3,750 ಆರ್‌ಪಿಎಂನಲ್ಲಿ 65 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ಗೆ ಆರು ಸ್ಪೀಡಿನ ಗೇರ್‌ಬಾಕ್ಸ್ ಜೋಡಿಸಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಈ ಹೊಸ ಸ್ಟ್ರೀಟ್ ರಾಡ್ ಬೈಕಿನಲ್ಲಿ ವಿಶಾಲವಾದ ಹ್ಯಾಂಡಲ್‌ಬಾರ್, ಟಿಯರ್-ಡ್ರಾಪ್ ಆಕಾರದ ಉದ್ದವಾದ ಫ್ಯೂಯಲ್ ಟ್ಯಾಂಕ್, ದೈತ್ಯ ರೇಡಿಯೇಟರ್, ದುಂಡಗಿನ ಆಕಾರದ ಎಲ್ಇಡಿ ಹೆಡ್‌ಲ್ಯಾಂಪ್, ಟೈಲ್-ಲ್ಯಾಂಪ್ ಮತ್ತು ಟರ್ನ್ ಇಂಡಿಕೇಟರ್ಸ್ ಅನ್ನು ಹೊಂದಿದೆ.

ಇನ್ನು ಈ ಹೊಸ ಹಾರ್ಲೆ ಡೇವಿಡ್ಸನ್ ಬೈಕಿನಲ್ಲಿ ಲಾಂಗ್ ಎಕ್ಸಾಸ್ಟ್, ಫ್ರಂಟ್-ಸೀಟ್ ಫುಟ್‌ಪೆಗ್ಸ್ ಮತ್ತು ಉತ್ತಮವಾದ ಮೆತ್ತನೆಯ ರೈಡರ್ ಮತ್ತು ಪಿಲಿಯನ್ ಸೀಟುಗಳನ್ನು ಒಳಗೊಂಡಿದೆ . ಇದರಿಂದ ಈ ಬೈಕ್ ಅನ್ನು ಆರಾಮದಾಯಕವಾಗಿ ರೈಡ್ ಮಾಡಬಹುದು.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಈ ಹೊಸ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ರಾಡ್ ಬೈಕಿನ ಮುಂಭಾಗದಲ್ಲಿ ಯುಎಸ್ಡಿ ಫೋರ್ಕ್ ಗಳು ಮತ್ತು ಹಿಂಭಾಗದಲ್ಲಿ ಗ್ಯಾಸ್-ಚಾರ್ಜ್ಡ್ ರಿಯರ್ ಸಂಸ್ಪೆಕ್ಷನ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಬ್ರೇಕಿಂಗ್ ಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ನೊಂದಿಗೆ ಎರಡೂ ತುದಿಗಳಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಹಾಗೂ ಇಂಟರ್‌ಸೆಪ್ಟರ್ 650 ಬೈಕುಗಳಿಗೆ ಪೈಪೋಟಿ ನೀಡುತ್ತಿತ್ತು.

ಕಂಪನಿಯು ತನ್ನ ಡೀಲರ್ ನೆಟ್ವರ್ಕ್ ಗುತ್ತಿಗೆ ಅವಧಿಯ ಮೂಲಕ ಗ್ರಾಹಕರಿಗೆ ಸೇವೆ ನೀಡುವುದನ್ನು ಮುಂದುವರಿಸುತ್ತದೆ ಎಂದು ಹೇಳಿದೆ. ಈ ರಿವೈರ್ ಕಾರ್ಯತಂತ್ರವನ್ನು 2020ರ ಅಂತ್ಯದವರೆಗೂ ಮುಂದುವರಿಸಲು ಯೋಜಿಸಲಾಗಿದೆ. ಇದು 2021 - 2025ರ ಹೊಸ ಕಾರ್ಯತಂತ್ರದ ಯೋಜನೆಗೆ ಕಾರಣವಾಗಲಿದೆ, ಇದನ್ನು ‘ದಿ ಹಾರ್ಡ್‌ವೈರ್' ಎಂದು ಕರೆಯಲಾಗುತ್ತದೆ, ಇದರಲ್ಲಿ ಕಂಪನಿಯ ಬೆಳವಣಿಗೆ ಮತ್ತು ಹೊಸ ಮಾದರಿಗಳನ್ನು ತಯಾರಿಸುವ ಗುರಿಯನ್ನು ಹೊಂದಿದೆ.


Click it and Unblock the Notifications








