Just In
- 2 hrs ago ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- 4 hrs ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 5 hrs ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
- 6 hrs ago ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Movies ನಿರಂತರ ಪ್ಲಾಫ್ ಸಿನಿಮಾಳನ್ನ ನೀಡಿದ ಈ ವಿಶ್ವಸುಂದರಿ ಯಾರು ಗೊತ್ತಾ...?
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೂತನ ಫೀಚರ್ಗಳೊಂದಿಗೆ ಬಿಡುಗಡೆಯಾಗಲಿದೆ ಈ ರಾಯಲ್ ಎನ್ಫೀಲ್ಡ್ ಬೈಕ್
ಚೆನ್ನೈ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್ಫೀಲ್ಡ್ ಕಂಪನಿಯು ತನ್ನ ಹೊಸ ಮೆಟಿಯೋರ್ 350 ಫೈರ್ಬಾಲ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ರಾಯಲ್ ಎನ್ಫೀಲ್ಡ್ ಮೆಟಿಯೋರ್ 350 ಫೈರ್ಬಾಲ್ ಬೈಕ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ರಾಯಲ್ ಎನ್ಫೀಲ್ಡ್ ಕಂಪನಿಯು ಉತ್ಪಾದನೆಯನ್ನು ಇತ್ತೀಚೆಗೆ ಪ್ರಾರಂಭಿಸಿರುವುದರಿಂದ ಈ ಹೊಸ ರಾಯಲ್ ಎನ್ಫೀಲ್ಡ್ ಮೆಟಿಯೋರ್ 350 ಫೈರ್ಬಾಲ್ ಬೈಕನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಬಹುದು. ಹೊಸ ರಾಯಲ್ ಎನ್ಫೀಲ್ಡ್ ಮೆಟಿಯೋರ್ 350 ಫೈರ್ಬಾಲ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.65 ಲಕ್ಷಗಳಾಗಿರಲಿದೆ. ಹೊಸ ರಾಯಲ್ ಎನ್ಫೀಲ್ಡ್ ಕಂಪನಿಯ ಬೈಕುಗಳ ಸರಣಿಯಲ್ಲಿ ಮೊದಲ ಬಾರಿಗೆ ಮೆಟಿಯೋರ್ 350 ಫೈರ್ಬಾಲ್ ಬೈಕಿನಲ್ಲಿ ಬ್ಲೂಟೂತ್ ಕನೆಕ್ಟಿವಿಟಿ, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಫೀಚರ್ ಗಳು ಹೊಂದಿರಬಹುದು ಎಂದು ವರದಿಗಳು ಪ್ರಕಟವಾಗಿದೆ.
ಇತ್ತೀಚೆಗೆ ರಾಯಲ್ ಎನ್ಫೀಲ್ಡ್ ಮೆಟಿಯೋರ್ 350 ಫೈರ್ಬಾಲ್ ಬೈಕ್ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿತ್ತು. ಹೊಸ ಮೆಟಿಯೋರ್ 350 ಬೈಕಿನ ಹಲವು ಮಾಹಿತಿಗಳು ಬಹಿರಂಗವಾಗಿದೆ. ಈ ಹೂಸ ಬೈಕಿನಲ್ಲಿ ಟ್ವಿನ್ ಪೊಡ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಸೈಡ್ ಪ್ಯಾನೆಲ್ ನಲ್ಲಿ ಮಾನಿಕರ್ ಅನ್ನು ಅಳವಡಿಸಿರುವುದು ಸ್ಪಾಟ್ ಟೆಸ್ಟ್ ಬಹಿರಂಗವಾಗಿದೆ. ಹೊಸ ರಾಯಲ್ ಎನ್ಫೀಲ್ಡ್ ಮೆಟಿಯೋರ್ 350 ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್
ಹೊಸ ರಾಯಲ್ ಎನ್ಫೀಲ್ಡ್ ಮೆಟಿಯೋರ್ 350 ಫೈರ್ಬಾಲ್ ಬೈಕಿನ ಚಿತ್ರಗಳು ಇತ್ತೀಚೆಗೆ ಆನ್ಲೈನ್ನಲ್ಲಿ ಬಹಿರಂಗವಾಗಿವೆ. ರಾಯಲ್ ಎನ್ಫೀಲ್ಡ್ ಮೆಟಿಯೋರ್ 350 ಫೈರ್ಬಾಲ್ ಬೈಕಿನಲ್ಲಿ ವೃತ್ತಕಾರದ ಹೆಡ್ ಲ್ಯಾಂಪ್, ಅಲಾಯ್ ವ್ಹೀಲ್ ಮತ್ತು ಬ್ಲ್ಯಾಕ್ ಔಟ್ ಎಕ್ಸಾಟ್ ಅನ್ನು ಹೊಂದಿದೆ. ರಾಯಲ್ ಎನ್ಫೀಲ್ಡ್ ಕಂಪನಿಯು ಥಂಡರ್ಬರ್ಡ್ ಎಕ್ಸ್ 350 ಬೈಕಿನ ಬದಲಾಗಿ ಹೊಸ ಮೆಟಿಯೋರ್ 350 ಬೈಕನ್ನು ಬಿಡುಗಡೆಗೊಳಿಸುತ್ತಿದೆ.
ಹೊಸ ಫೀಚರ್ಸ್ಗಳನ್ನು ಹೊರತುಪಡಿಸಿ ಈ ರಾಯಲ್ ಎನ್ಫೀಲ್ಡ್ ಮೆಟಿಯೋರ್ 350 ಫೈರ್ಬಾಲ್ ಬೈಕನ್ನು ಕೂಡ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ. ಈ ಬೈಕಿನಲ್ಲಿ 346 ಸಿಸಿ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಫ್ರಿ ಕ್ಯಾಟಲಿಕ್ ಕರ್ನವಾಟರ್ ಅನ್ನು ಎಕ್ಸಾಸ್ಟ್ ಸಿಸ್ಟಂನೊಂದಿಗೆ ಜೋಡಿಸಲಾಗಿದೆ.
MOST READ: ಬಿಎಸ್-6 ಎಂಜಿನ್ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್
ಈ ಎಂಜಿನ್ ಉತ್ತಮ ಇಂಧನ ಧಕ್ಷತೆಯನು ಹೊಂದಿದೆ. ಪ್ರಸ್ತುತ ಟ್ಯಾಪೆಟ್-ವಾಲ್ವ್ ಯುಸಿಇ 346 ಸಿಸಿ ಎಂಜಿನ್ಗಳಿಗಿಂತ ಹೆಚ್ಚಿನ ಕಾರ್ಯಕ್ಷಮತೆಯನ್ನು ನೀಡುತ್ತದೆ. ಪ್ರಸ್ತುತ ಬಿಎಸ್-4 ಪ್ರೇರಿತ 346 ಸಿಸಿ ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಎಂಜಿನ್ 19.1 ಬಿಹೆಚ್ಪಿ ಪವರ್ ಮತ್ತು 28 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ರಾಯಲ್ ಎನ್ಫೀಲ್ಡ್ ಮೆಟಿಯೋರ್ 350 ಫೈರ್ಬಾಲ್ ಬೈಕಿನ ಮುಂಭಾಗಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಗಳನ್ನು ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಸೆಟಪ್ ಅನ್ನು ಒಳಗೊಂಡಿದೆ.ಈ ಬೈಕಿನಲ್ಲಿ ಸವಾರರ ಸುರಕ್ಷತೆಗಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಸುರಕ್ಷತೆಗಾಗಿ ಬೈಕಿನ ಮುಂಭಾಗದಲ್ಲಿ ಮತ್ತು ಹಿಂಭಾಗ ಟಯರ್ಗಳಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಅಳವಡಿಸಲಾಗಿದೆ.
MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ
ಇದರೊಂದಿಗೆ ಈ ಬೈಕಿನಲ್ಲಿ ಕಂಪನಿಯು ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸುವ ಸಾಧ್ಯತೆಗಳಿದೆ. ಮಾರುಕಟ್ಟೆಯಲ್ಲಿರುವ ಥಂಡರ್ಬರ್ಡ್ನಲ್ಲಿರುವ ಎಂಜಿನ್ ಹೆಚ್ಚಿನ ಪ್ರಮಾಣದ ವೈಬ್ರೆಷನ್ ಅನ್ನು ಹೊಂದಿದೆ. ಹೊಸ ಬೈಕಿನಲ್ಲಿ ಅಳವಡಿಸಲಾಗುವ ಎಂಜಿನ್ ಹೊಸ ಟೆಕ್ನಾಲಜಿಯನ್ನು ಹೊಂದಿರಲಿದ್ದು, ವೈಬ್ರೆಷನ್ ಸಮಸ್ಯೆಯನ್ನು ಹೋಗಲಾಡಿಸಲಿದೆ.
ರಾಯಲ್ ಎನ್ಫೀಲ್ಡ್ ಮೆಟಿಯೋರ್ 350 ಫೈರ್ಬಾಲ್ ಬೈಕ್ ಥಂಡರ್ಬರ್ಡ್ ಎಕ್ಸ್ 350 ಮಾದರಿಯ ರೆಟ್ರೂ-ಅರ್ಬನ್ ಕ್ರೂಸರ್ ವಿನ್ಯಾಸವನ್ನು ಹೊಂದಿದೆ. ಹೊಸ ರಾಯಲ್ ಎನ್ಫೀಲ್ಡ್ ಮೆಟಿಯೋರ್ 350 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.