ಬಿಡುಗಡೆಯಾಯ್ತು ಬಹುನಿರೀಕ್ಷಿತ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್

ಈ ಹಿಂದೆ ಭಾರತೀಯರನ್ನು ಮೋಡಿ ಮಾಡಿದ್ದ ಬಜಾಜ್ ಕಂಪನಿಯ ಚೇತಕ್ ಸ್ಕೂಟರ್ ಇಂದು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಯಾಗಿದೆ. ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಭಾರತೀಯರಲ್ಲಿ ಬಹುನಿರೀಕ್ಷೆಯನ್ನು ಹುಟ್ಟು ಹಾಕಿದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್

ಬಜಾಜ್‌ ಚೇತಕ್‌ ಹಲವರಿಗೆ ಬರೀ ಒಂದು ಸ್ಕೂಟರ್ ಮಾತ್ರವಲ್ಲ. ಅದರೊಂದಿಗೆ ಭಾವನತ್ಮಕ ಸಂಬಂಧವನ್ನು ಹೊಂದಿದ್ದಾರೆ. ಹಲವು ವರ್ಷಗಳ ಕಾಲ ಭಾರತೀಯ ಮಾರುಕಟ್ಟೆಯನ್ನು ಆಳಿದ್ದ ಚೇತಕ್ ನಂತರ ತೆರೆಮರೆಗೆ ಸರಿದಿತ್ತು. ಬಜಾಜ್ ಚೇತಕ್ ತನ್ನ ಹಳೆಯ ಗತವೈಭವನ್ನು ಮರಳಿ ಪಡೆಯಲು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಲಾಗಿದೆ. ಬಜಾಜ್ ಚೇತಕ್ ಸ್ಕೂಟರ್ ಅನ್ನುಅರ್ಬೈನ್ ಮತ್ತು ಲೆಕ್ಟಿಕ್ ಪ್ರೀಮಿಯಂ ಎಂಬ ಎರಡು ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್

ಬಜಾಜ್ ಚೇತಕ್ ಎಲೆಕ್ಟ್ರಿಕ್ ಅರ್ಬೈನ್ ಸ್ಕೂಟ್‍‍ರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1 ಲಕ್ಷಗಳಾದರೆ, ಚೇತಕ್ ಎಲೆಕ್ಟಿಕ್ ಪ್ರೀಮಿಯಂ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.15ಲಕ್ಷಗಳಾಗಿದೆ. ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹಂತ ಹಂತವಾಗಿ ಬಿಡುಗಡೆಗೊಳಿಸಲಾಗುವುದು.

ಬಿಡುಗಡೆಯಾಯ್ತು ಬಹುನಿರೀಕ್ಷಿತ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್

ಮೊದಲ ಹಂತದಲ್ಲಿ ಬೆಂಗಳೂರು ಮತ್ತು ಪುಣೆ ನಗರಗಳಲ್ಲಿ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲಾಗಿದೆ. ನಾಳೆಯಿಂದ ಅಧಿಕೃತವಾಗಿ ಮಾರಾಟವಾಗುತ್ತದೆ.ಚೇತಕ್ ಎಂಟ್ರಿ ಲೆವೆಲ್ ಅರ್ಬೈನ್ ಸ್ಕೂಟರ್ ಸಿಟ್ರಶ್ ರಶ್ ಮತ್ತು ಸೈಬರ್ ವೈಟ್ ಬಣ್ಣಗಳಲ್ಲಿ ಲಭ್ಯವಿದೆ. ಇನ್ನು ಪ್ರೀಮಿಯಂ ರೂಪಾಂತರವು ಹ್ಯಾಝಲ್ನಟ್, ಬ್ರೂಕ್ಲಿನ್ ಬ್ಲ್ಯಾಕ್, ಸಿಟ್ರಸ್ ರಶ್, ವೆಲುಟ್ಟೊ ರೊಸ್ಸೊ ಮತ್ತು ಇಂಡಿಗೊ ಮೆಟಾಲಿಕ್ ಬಣ್ಣಗಳಲ್ಲಿ ಲಭ್ಯವಿದೆ.ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ 4ಕೆ ಡಬ್ಲ್ಯು ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್

ಇಕೋ‌ ಮೋಡ್‍ನಲ್ಲಿ ಪ್ರತಿ ಚಾರ್ಜ್‌ಗೆ 95ಕಿ.ಮೀ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ ಪ್ರತಿ ಚಾರ್ಜ್‌ಗೆ 85 ಕಿ.ಮೀ ಚಲಿಸುತ್ತದೆ. ಎಲೆಕ್ಟ್ರಿಕ್ ಸ್ಕೂಟರ್ ರಿರ್ವಸ್ ಅಸಿಸ್ಟ್ ಮೋಡ್ ಅನ್ನು ಹೊಂದಿದೆ.ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‍‍‍ನ ಬುಕ್ಕಿಂಗ್ ಜ.15ರಿಂದ ಪ್ರಾರಂಭವಾಗಲಿದೆ. ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆಯು ಫೆಬ್ರವರಿ ಕೊನೆಯಲ್ಲಿ ಪ್ರಾರಂಭವಾಗಲಿದೆ. ರೂ.2000 ಕ್ಕೆ ಬಜಾಜ್ ಚೇತಕ್ ಎಲೆಕ್ಟ್ರಿಕ್‍ ಸ್ಕೂಟರ್ ಅನ್ನು ಬುಕ್ಕಿಂಗ್ ಮಾಡಬಹುದಾಗಿದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್

ಸ್ಕೂಟರಿನ ಫೀಚರ್ಸ್

ಈ ಸ್ಕೂಟರ್‍‍ನಲ್ಲಿರುವ ಬಜಾಜ್ ಅಪ್ಲಿಕೇಶನ್ ಹೆಚ್ಚು ಅನುಕೂಲಕವಾಗಿದೆ. ಈ ಆ್ಯಪ್‍‍ನಲ್ಲಿ ಲೈವ್ ಟ್ರ್ಯಾಕಿಂಗ್ ಜೊತೆಗೆ ಟ್ರಿಪ್ ಅಂಕಿ ಅಂಶಗಳು, ಬಳಕೆದಾರರ ಮಾಹಿತಿ ಮತ್ತು ಹಲವಾರು ಸುರಕ್ಷತಾ ಮತ್ತು ಅನುಕೂಲಕರ ಫೀಚರ್ಸ್‍‍ಗಳಿವೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್

ಸ್ಕೂಟರ್‌ನಲ್ಲಿ ರೌಂಡ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್, ಶಾರ್ಪ್ ಡಿಸೈನ್, ರೆಟ್ರೋ ಸ್ಟೈಲ್ ಬಾಡಿ ಡಿಸೈನ್, ಹಾರ್ನ್ ಮತ್ತು ಇಂಡಿಕೇಟರ್ ಸ್ವಿಚ್‍, ಎಲ್ಇಡಿ ಇಂಡಿಕೇಟರ್, ದೊಡ್ಡದಾದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಇದರೊಂದಿಗೆ ಮೊಬಿಲಿಟಿ ಸಾಫ್ಟ್ ವೇರ್, ಸುರಕ್ಷತಾ ಫೀಚರ್‍‍ಗಳನ್ನು ಹೊಂದಿದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್

ಸ್ಕೂಟರಿನ ಕಾರ್ಯಕ್ಷಮತೆ

ಚೇತಕ್ ಸ್ಕೂಟರ್ ಮೊದಲ ನೋಟದಲ್ಲಿ ವೆಸ್ಪಾ ಸ್ಕೂಟರ್‍‍ನಂತೆ ಕಾಣುತ್ತದೆ. ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‍‍ನಲ್ಲಿ ಬಳಕೆ ಮಾಡಲಾಗಿರುವ ಬ್ಯಾಟರಿ ಬರೋಬ್ಬರಿ 70 ಸಾವಿರ ಕಿ.ಮೀ ನಷ್ಟು ಕಾರ್ಯಕ್ಷಮತೆ ಹೊಂದಿದೆ. ಬಜಾಜ್ ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರಿನ ಮೇಲೆ 50 ಸಾವಿರ ಕಿ.ಮೀ ಅಥವಾ 3 ವರ್ಷಗಳ ವಾರಂಟಿ ನೀಡಲಿದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್

ಜೊತೆಗೆ ಪ್ರತಿ 15 ಸಾವಿರ ಕಿ.ಮೀ ಗೆ ಕಡ್ಡಾಯವಾಗಿ ಸರ್ವೀಸ್ ಒದಗಿಸಲಿದ್ದು, ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಸೌಲಭ್ಯಗಳನ್ನು ಅಪ್‌ಡೇಟ್ ಮಾಡಲಿದೆ. ಹೊಸ ಸ್ಕೂಟರ್‌ನಲ್ಲಿ ಸವಾರರ ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್, ಜೀಯೊ ಫೆನ್ಸಿಂಗ್, ವೆಹಿಕಲ್ ಟ್ರಾಕಿಂಗ್ ಸೌಲಭ್ಯಗಳನ್ನು ನೀಡಲಾಗಿದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್

ಬಜಾಜ್ ಚೇತಕ್ ಭಾರತೀಯರ ಮೆಚ್ಚಿನ ಸಾರಥಿಯಾಗಿತ್ತು. ಇದು 80ರ ದಶಕದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಿದ್ದ ಸ್ಕೂಟರ್. ಇದೀಗ ದೇಶಿಯ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸಂಚಲನವನ್ನು ಮೂಡಿಸಲು ಚೇತಕ್ ಅನ್ನು ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಗೊಳಿಸಲಾಗಿದೆ.

Article Published On: Tuesday, January 14, 2020, 12:41 [IST]
English summary
bajaj chetak electric launched tommorrow details. Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+