ಹೊಸ ಬಜಾಜ್ ಪ್ಲಾಟಿನಾ 100 ಇಎಸ್ ಬೈಕಿನ ವಿತರಣೆ ಆರಂಭ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ಆಟೋ ತನ್ನ ಪ್ಯಾಸೆಂಜರ್ ಬೈಕ್ ಸೆಗ್ ಮೆಂಟ್ ಅನ್ನು ಮತ್ತಷ್ಟು ವಿಸ್ತರಿಸುತ್ತಿದೆ. ಈ ಕಾರಣಕ್ಕೆ ಕಂಪನಿಯು ತನ್ನ ಬಜಾಜ್ ಪ್ಲಾಟಿನಾ 100 ಬೈಕ್ ಸರಣಿಯಲ್ಲಿ ಮತ್ತೊಂದು ಬೈಕ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು.

ಹೊಸ ಬಜಾಜ್ ಪ್ಲಾಟಿನಾ 100 ಇಎಸ್ ಬೈಕಿನ ವಿತರಣೆ ಆರಂಭ

ಬಜಾಜ್ ಕಂಪನಿಯು ಹೊಸದಾಗಿ ಬಿಡುಗಡೆಗೊಳಿಸಿದ ಡಿಸ್ಕ್ ಬ್ರೇಕ್ ಮಾದರಿಯಲ್ಲಿ ಯಾವುದೇ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ವರ್ಷದ ಆರಂಭದಲ್ಲಿ ಬಜಾಜ್ ಆಟೋ ಕಂಪನಿಯು 13 ಬದಲಾವಣೆಗಳೊಂದಿಗೆ ಹೊಸ ಪ್ಲಾಟಿನಾ 100 ಬೈಕ್ ಅನ್ನು ಬಿಡುಗಡೆಗೊಳಿಸಿತ್ತು. ಬಜಾಜ್ ಪ್ಲಾಟಿನಾ 100 ಇಎಸ್ (ಎಲೆಕ್ಟ್ರಿಕ್ ಸ್ಟಾರ್ಟ್) ಡಿಸ್ಕ್ ರೂಪಾಂತರ ಬೆಲೆಯು ರೂ 59,373ಗಳಾಗಿದೆ. ಇನ್ನು ಬಜಾಜ್ ಪ್ಲಾಟಿನಾ 100 ಇಎಸ್ ಬೈಕಿನ ಡ್ರಮ್ ರೂಪಾಂತರದ ಬೆಲೆಯು ರೂ.58,477 ಗಳಾಗಿದೆ.

ಹೊಸ ಬಜಾಜ್ ಪ್ಲಾಟಿನಾ 100 ಇಎಸ್ ಬೈಕಿನ ವಿತರಣೆ ಆರಂಭ

ಈ ಬೈಕಿನ ಕಿಕ್ ಸ್ಟಾರ್ಟ್ ರೂಪಾಂತರದ ಬೆಲೆಯು ರೂ.50,464ಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋರೂಂ ಪ್ರಕಾರವಾಗಿದೆ. ಹೊಸ ಸುರಕ್ಷತಾ ನಿಯಮಗಳಿಗೆ ಅನುಸಾರವಾಗಿ ಕಂಪನಿಯು ಈ ಬೈಕಿನಲ್ಲಿ ಕಾಂಬಿ ಬ್ರೇಕಿಂಗ್ ಸಿಸ್ಟಂ ಅನ್ನು ಅಳವಡಿಸಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಹೊಸ ಬಜಾಜ್ ಪ್ಲಾಟಿನಾ 100 ಇಎಸ್ ಬೈಕಿನ ವಿತರಣೆ ಆರಂಭ

ಗಮನಿಸಬೇಕಾದ ಸಂಗತಿಯೆಂದರೆ ಯಾವುದೇ ಕಂಪನಿಯು 100 ಸಿಸಿ ಸೆಗ್ ಮೆಂಟಿನಲ್ಲಿ ಹಾಗೂ ಪ್ಯಾಸೆಂಜರ್ ಬೈಕ್ ಸೆಗ್ ಮೆಂಟಿನಲ್ಲಿ ಡಿಸ್ಕ್ ಬ್ರೇಕ್ ಮಾದರಿಯನ್ನು ಬಿಡುಗಡೆಗೊಳಿಸಿಲ್ಲ. ಇನ್ನು ಈ ಹೊಸ ಬಜಾಜ್ ಪ್ಲಾಟಿನಾ 100 ಇಎಸ್ ಬೈಕಿನ ವಿತರಣೆಯನ್ನು ಪ್ರಾರಂಭಿಸಿದೆ.

ಹೊಸ ಬಜಾಜ್ ಪ್ಲಾಟಿನಾ 100 ಇಎಸ್ ಬೈಕಿನ ವಿತರಣೆ ಆರಂಭ

ಬಜಾಜ್ ಪ್ಲಾಟಿನಾ 100 ಸರಣಿಯ ಬೈಕಿನಲ್ಲಿ 102 ಸಿಸಿಯ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 7.7 ಬಿಹೆಚ್‌ಪಿ ಪವರ್ ಹಾಗೂ 8.34 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 4-ಸ್ಪೀಡಿನ ಗೇರ್‌ಬಾಕ್ಸ್ ಹೊಂದಿರುವ ಈ ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 90 ಕಿ.ಮೀಗಳಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ಬಜಾಜ್ ಪ್ಲಾಟಿನಾ 100 ಇಎಸ್ ಬೈಕಿನ ವಿತರಣೆ ಆರಂಭ

ಈ ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಹೊಸ ಪ್ಲಾಟಿನಾ 100 ಬೈಕ್ ಇಇಎಸ್ ಹ್ಯಾಲೊಜೆನ್ ಹೆಡ್‌ಲೈಟ್‌ನೊಂದಿಗೆ ಎಲ್‌ಇಡಿ ಟೇಲ್‌ಲೈಟ್ ಹಾಗೂ ಹೆಡ್‌ಲೈಟ್‌ನಲ್ಲಿ ಉದ್ದವಾದ ವೈಸರ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಕ್ವಿಲ್ಟೆಡ್ ಸೀಟ್ ಹಾಗೂ ಆರಾಮದಾಯಕ ಸವಾರಿಗಾಗಿ ನೈಟ್ರಾಕ್ಸ್ ಸಸ್ಪೆಂಷನ್ ಅಳವಡಿಸಲಾಗಿದೆ.

ಹೊಸ ಬಜಾಜ್ ಪ್ಲಾಟಿನಾ 100 ಇಎಸ್ ಬೈಕಿನ ವಿತರಣೆ ಆರಂಭ

ಈ ಬೈಕಿನಲ್ಲಿ ಪಿಲಿಯನ್ ರೈಡರ್ ಗಳಿಗಾಗಿ ರಬ್ಬರ್ ಫುಟ್‌ಪ್ಯಾಡ್‌ಗಳನ್ನು ನೀಡಲಾಗಿದೆ. ಪ್ಲಾಟಿನಾ ಬೈಕ್ ಇತರ 100 ಸಿಸಿ ಬೈಕ್‌ಗಳಿಗಿಂತ ಹೆಚ್ಚಿನ ಆರಾಮದಾಯಕ ರೈಡಿಂಗ್ ಅನುಭವವನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಪ್ಲಾಟಿನಾ 100 ಬೈಕ್ ಪ್ರತಿ ಲೀಟರ್ ಪೆಟ್ರೋಲಿಗೆ 75-100 ಕಿ.ಮೀವರೆಗಿನ ಮೈಲೇಜ್ ನೀಡುತ್ತದೆ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಹೊಸ ಬಜಾಜ್ ಪ್ಲಾಟಿನಾ 100 ಇಎಸ್ ಬೈಕಿನ ವಿತರಣೆ ಆರಂಭ

2020 ಬಜಾಜ್ ಪ್ಲಾಟಿನಾ 100 ಬೈಕ್ ಗಾತ್ರದಲ್ಲಿ ಬದಲಾಗಿಲ್ಲ ಎಂಬುದನ್ನೂ ಗಮನಿಸಬೇಕಾದ ಸಂಗತಿ. ಬಜಾಜ್ ಪ್ಲಾಟಿನಾ 100 ಬೈಕ್ 2003 ಎಂಎಂ ಉದ್ದ, 713 ಎಂಎಂ ಅಗಲ ಮತ್ತು 1100 ಎಂಎಂ ಎತ್ತರವನ್ನು ಹೊಂದಿದೆ. ಈ ಹೊಸ ಬೈಕ್ 1,255 ಎಂಎಂ ಉದ್ದದ ವ್ಹೀಲ್ ಬೇಸ್‌ ಅನ್ನು ಹೊಂದಿದೆ.

ಹೊಸ ಬಜಾಜ್ ಪ್ಲಾಟಿನಾ 100 ಇಎಸ್ ಬೈಕಿನ ವಿತರಣೆ ಆರಂಭ

ಹೂಸ ಬಜಾಜ್ ಪ್ಲಾಟಿನಾ 100 ಬೈಕ್ 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಇನ್ನು ಈ ಹೊಸ ಬಜಾಜ್ ಪ್ಲಾಟಿನಾ 100 ಬೈಕಿನ ಕಿಕ್‌ಸ್ಟಾರ್ಟ್ ರೂಪಾಂತರವು 116 ಕೆಜಿ ಮತ್ತು ಎಲೆಕ್ಟ್ರಿಕ್ ಸ್ಟಾರ್ಟ್ ಮಾದರಿಯು 117.5 ಕೆಜಿ ತೂಕವಿದೆ.

Most Read Articles

Kannada
English summary
New Bajaj Platina 100 ES Disc Arrives At Showroom – Deliveries Start. Read In Kannada.
Story first published: Tuesday, August 18, 2020, 13:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X