ಭಾರತದಲ್ಲಿ ಅಧಿಕ ಸಾಮರ್ಥ್ಯದ ಬೈಕುಗಳ ಬಿಡುಗಡೆಗೆ ಮುಂದಾದ ಬೆನೆಲ್ಲಿ

ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬೆನೆಲ್ಲಿ ತನ್ನ ಇಂಪೀರಿಯಲ್ 400 ಬೈಕನ್ನು ಮಾತ್ರ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಭಾರತದಲ್ಲಿ ಬಿಡುಗಡೆಗೊಳಿಸಲಾಗಿದೆ. ಬೆನೆಲ್ಲಿ ಸರಣಿಯಲ್ಲಿರುವ ಇಂಪೀರಿಯಲ್ 400 ಬೈಕನ್ನು ಹೊರತುಪಡಿಸಿ ಉಳಿದ ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿಲ್ಲ.

ಭಾರತದಲ್ಲಿ ಅಧಿಕ ಸಾಮರ್ಥ್ಯದ ಬೈಕುಗಳ ಬಿಡುಗಡೆಗೆ ಮುಂದಾದ ಬೆನೆಲ್ಲಿ

ಕೆಲವು ವರದಿಗಳ ಪ್ರಕಾರ, ಬೆನೆಲ್ಲಿ ಕಂಪನಿಯು ತನ್ನ ಜನಪ್ರಿಯ ಟಿಎನ್‌ಟಿ 600ಐ ಬೈಕನ್ನು ಮುಂದಿನ ವರ್ಷದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈ ಟಿಎನ್‌ಟಿ 600ಐ ಜೊತೆಗೆ ಇನ್ನು ಕೆಲವು ಕೆಲವು ಹೆಚ್ಚಿನ ಸಾಮರ್ಥ್ಯದ ಬೈಕುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಟಿಎನ್‌ಟಿ 600ಐ ಬೈಕಿನ ಜೊತೆಗೆ ಲಿಯೊನ್ಸಿನೊ 800 ಮತ್ತು ಟಿಆರ್‌ಕೆ 251 ಎಂಟ್ರಿ ಲೆವೆಲ್ ಅಡ್ವೆಂಚರ್ ಟೂರರ್ ಮಾದರಿಯನ್ನು ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ಅಧಿಕ ಸಾಮರ್ಥ್ಯದ ಬೈಕುಗಳ ಬಿಡುಗಡೆಗೆ ಮುಂದಾದ ಬೆನೆಲ್ಲಿ

ಇನ್ನು ಬೆನೆಲ್ಲಿ ಕಂಪನಿಯು ಟಿಆರ್‌ಕೆ 502, ಟಿಆರ್‌ಕೆ 502ಎಕ್ಸ್ ಮತ್ತು ಲಿಯೊನ್ಸಿನೊ 500 ಬೈಕುಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈ ಹೊಸ ಬೆನೆಲ್ಲಿ ಟಿಆರ್‌ಕೆ 502, ಟಿಆರ್‌ಕೆ 502ಎಕ್ಸ್ ಮತ್ತು ಲಿಯೊನ್ಸಿನೊ 500 ಬೈಕುಗಳು ಈ ವರ್ಷದ ನವೆಂಬರ್‌ ತಿಂಗಳಲ್ಲಿ ಬಿಡುಗಡೆಯಾಗಬಹುದೆಂದು ನಿರೀಕ್ಷಿಸುತ್ತೇವೆ.

MOST READ: ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಭಾರತದಲ್ಲಿ ಅಧಿಕ ಸಾಮರ್ಥ್ಯದ ಬೈಕುಗಳ ಬಿಡುಗಡೆಗೆ ಮುಂದಾದ ಬೆನೆಲ್ಲಿ

ಬೆನೆಲ್ಲಿ ಕಂಪನಿಯು ಚೀನಾದ ಮಾರುಕಟ್ಟೆಯಲ್ಲಿ ಹೊಸ ಕ್ಯೂಚೆ ಎಸ್‌ಆರ್‌ಕೆ 600 ಎಂಬ ಹೊಸ 600 ಸಿಸಿ ಬೈಕನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಬೆನೆಲ್ಲಿ ಕ್ಯೂಜೆ ಎಸ್‌ಆರ್‌ಕೆ 600 ಬೈಕನ್ನು ಟಿಎನ್‌ಟಿ 600ಐ ಎಂಬ ಹೆಸರಿನಲ್ಲಿ ಮುಂದಿನ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಭಾರತದಲ್ಲಿ ಅಧಿಕ ಸಾಮರ್ಥ್ಯದ ಬೈಕುಗಳ ಬಿಡುಗಡೆಗೆ ಮುಂದಾದ ಬೆನೆಲ್ಲಿ

ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಕ್ಯೂಚೆ ಎಸ್‌ಆರ್‌ಕೆ 600 ಬೈಕ್ ಅನ್ನು ಸ್ಟ್ಯಾಂಡರ್ಡ್, ಮೀಡಿಯಂ ಮತ್ತು ಹೈ ಎಂಬ ಮೂರು ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತದೆ. ಹೊಸ ಬೆನೆಲ್ಲಿ ಕ್ಯೂಚೆ ಎಸ್‌ಆರ್‌ಕೆ 600 ಬೈಕನ್ನು ಕೆಂಪು, ಕಪ್ಪು, ಬಿಳಿ ಮತ್ತು ನೀಲಿ ಎಂಬ ನಾಲ್ಕು ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಳಿಸಲಾಗಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಭಾರತದಲ್ಲಿ ಅಧಿಕ ಸಾಮರ್ಥ್ಯದ ಬೈಕುಗಳ ಬಿಡುಗಡೆಗೆ ಮುಂದಾದ ಬೆನೆಲ್ಲಿ

ಹೊಸ ಬೆನೆಲ್ಲಿ ಕ್ಯೂಚೆ ಎಸ್‌ಆರ್‌ಕೆ 600 ಬೈಕಿನಲ್ಲಿ ಹಿಂದಿನ ಬಿಎಸ್-4 ಮಾದರಿಯಲ್ಲಿದ್ದ 600 ಸಿಸಿ ಇನ್-ಲೈನ್ ನಾಲ್ಕು ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 11,000 ಆರ್‌ಪಿಎಂನಲ್ಲಿ 81 ಬಿಹೆಚ್‌ಪಿ ಪವರ್ ಮತ್ತು 8,000 ಆರ್‌ಪಿಎಂನಲ್ಲಿ 55 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಭಾರತದಲ್ಲಿ ಅಧಿಕ ಸಾಮರ್ಥ್ಯದ ಬೈಕುಗಳ ಬಿಡುಗಡೆಗೆ ಮುಂದಾದ ಬೆನೆಲ್ಲಿ

ಎಂಟ್ರಿ ಲೆವೆಲ್ ಸ್ಟ್ಯಾಂಡರ್ಡ್ ರೂಪಾಂತರವು ಬೆನೆಲ್ಲಿಯಿಂದ ಸಂಸ್ಪೆಕ್ಷನ್ ಮತ್ತು ಬ್ರೇಕ್ ಸೆಟಪ್ ಅನ್ನು ಹೊಂದಿದ್ದರೆ, ಮಿಡ್-ಸ್ಪೆಕ್ ಮೀಡಿಯಂ ರೂಪಾಂತರವು ಕ್ರಮವಾಗಿ ಕೆವೈಬಿ ಮತ್ತು ಕ್ಸಿಹು ತಯಾರಿಸಿದ ಸಂಸ್ಪೆಕ್ಷನ್ ಮತ್ತು ಬ್ರೇಕ್‌ಗಳನ್ನು ಒಳಗೊಂಡಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಭಾರತದಲ್ಲಿ ಅಧಿಕ ಸಾಮರ್ಥ್ಯದ ಬೈಕುಗಳ ಬಿಡುಗಡೆಗೆ ಮುಂದಾದ ಬೆನೆಲ್ಲಿ

ಈ ಹೊಸ ಬೈಕಿನಲ್ಲಿ ಹೊಸ ಎಲ್ಇಡಿ ಹೆಡ್ ಲೈಟ್, ಮರುವಿನ್ಯಾಸಗೊಳಿಸಲಾದ ಫ್ಯೂಯಲ್ ಟ್ಯಾಂಕ್, ಗೋಲ್ಡನ್-ಪೇಂಟೆಡ್ ಯುಎಸ್ಡಿ ಫೋರ್ಕ್ಸ್ ಮತ್ತು ಸೈಡ್-ಮೌಂಟೆಡ್ ಎಕ್ಸಾಸ್ಟ್ ಅನ್ನು ಒಳಗೊಂಡಿದೆ. ಬೆನೆಲ್ಲಿ ಟಿಎನ್‌ಟಿ 600ಐ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕವಾಸಕಿ ಝಡ್ 650 ಮತ್ತು ಸಿಎಫ್‌ಮೊಟೊ 600 ಎನ್‌ಕೆ ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.

ಭಾರತದಲ್ಲಿ ಅಧಿಕ ಸಾಮರ್ಥ್ಯದ ಬೈಕುಗಳ ಬಿಡುಗಡೆಗೆ ಮುಂದಾದ ಬೆನೆಲ್ಲಿ

ಬೆನೆಲ್ಲಿ ಕಂಪನಿಯು ತನ್ನ ಜನಪ್ರಿಯ ಮಾದರಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ. ಬೆನೆಲ್ಲಿ ಕಂಪನಿಯು ಜನಪ್ರಿಯ ಮಾದರಿಗಳನ್ನು ಬಿಡುಗಡೆಗೊಳಿಸಿ ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ.

More from DriveSpark

Article Published On: Thursday, August 20, 2020, 20:19 [IST]
English summary
New Benelli TNT 600i & Other Bigger Capacity Motorcycles To Launch Next Year In India Details. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+