ಹೊಸ ಬಿಎಂಡಬ್ಲ್ಯು ಬೈಕುಗಳ ಟೀಸರ್ ಬಿಡುಗಡೆ
ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು 2021ರ ಜಿ 310ಆರ್ ನೇಕೆಡ್ ಸ್ಟ್ರೀಟ್ ಫೈಟರ್ ಮತ್ತು ಜಿ310 ಜಿಎಸ್ ಬೈಕುಗಳನ್ನು ಬೈಕುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಬಿಎಂಡಬ್ಲ್ಯು ಕಂಪನಿಯು ಈ ವರ್ಷದ ಆರಂಭದಲ್ಲಿ ಹೊಸ ಜಿ310 ಆರ್ ಮತ್ತು ಜಿ310 ಜಿಎಸ್ ಬೈಕುಗಳನ್ನು ಯುರೋಪಿನಲ್ಲಿ ಬಿಡುಗಡೆಗೊಳಿಸಿದ್ದರು.

ಭಾರತದಲ್ಲಿ ಈ ಬಿಎಂಡಬ್ಲ್ಯು ಜಿ310 ಆರ್ ಮತ್ತು ಜಿ310 ಜಿಎಸ್ ಬೈಕುಗಳ ಉತ್ಪಾದನೆಯನ್ನು ಪ್ರಾರಂಭಿಸಲಿದೆ. ಆದರೆ ಭಾರತದಲ್ಲಿ ಕೊರೊನಾ ಭೀತಿ ಇರುವುದರಿಂದ ಭಾರತದಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಲು ವಿಳಂಬವಾಗಿದೆ. ಭಾರತದಲ್ಲಿ ಕೆಲವು ಬದಲಾವಣೆಗಳನ್ನು ನಡೆಸಿ ಬಿಡುಗಡೆಗೊಳಿಸಬಹುದು. ಭಾರತದಲ್ಲಿ ಇತ್ತೀಚೆಗೆ ಹೊಸ ಬಿಎಂಡಬ್ಲ್ಯು ಜಿ 310 ಆರ್ ನೇಕೆಡ್ ಸ್ಟ್ರೀಟ್ ಫೈಟರ್ ಮತ್ತು ಜಿ 310 ಜಿಎಸ್ ಬೈಕುಗಳು ಭಾರತದಲ್ಲಿ ಸ್ಪಾಟ್ ಟೆಸ್ಟ್ ಅನ್ನು ನಡೆಸಲಾಗಿತ್ತು.

ಇದೀಗ ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಹೊಸ ಬಿಎಂಡಬ್ಲ್ಯು ಜಿ310 ಟ್ವಿನ್ ಬೈಕುಗಳ ಟೀಸರ್ ಚಿತ್ರವನ್ನು ಬಿಡುಗಡೆಗೊಳಿಸಿದೆ. ಟೀಸರ್ ಚಿತ್ರದಲ್ಲಿ ಈ ಹೊಸ ಬಿಎಂಡಬ್ಲ್ಯು ಜಿ310 ಬೈಕುಗಳ ಅಲಾಯ್ ವ್ಹೀಲ್ ಮತ್ತು ಫ್ರೇಮ್ ಭಾಗಗಳು ಆರೇಂಜ್ ಬಣ್ಣಗಳಿಂದ ಕೂಡಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಈ ಹೊಸ ಬಿಎಂಡಬ್ಲ್ಯು ಜಿ310 ಆರ್ ಬೈಕಿನ ಹಿಂಭಾಗದ ಫೆಂಡರ್ ಕೆಟಿಎಂ ಮಾದರಿಗಳಿಂದ ಸ್ಪೂರ್ಟಿ ಪಡೆದಿರುವ ರೀತಿ ಕಂಡು ಬಂದಿದೆ. ಈ ಹೊಸ ಬೈಕಿನ ಹಿಂಭಾಗವು ಕೆಟಿಎಂ ಮಾದರಿಗಳ ರೀತಿ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.

ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಹೊಸ ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕುಗಳ ಬುಕ್ಕಿಂಗ್ ಅನ್ನು ಮುಂದಿನ ತಿಂಗಳು ಪ್ರಾರಂಭಿಸಲಿದೆ. ಈ ಎರಡು ಬೈಕುಗಳು ಆಕರ್ಷಕ ಲುಕ್ ಅನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಈ ಬಿಎಸ್-6 ಬಿಎಂಡಬ್ಲ್ಯು ಜಿ310 ಆರ್ ಮತ್ತು ಜಿ310 ಜಿಎಸ್ ಬೈಕುಗಳು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ತಿಂಗಳು ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಬೈಕುಗಳ ವಿತರಣೆಯನ್ನು 2020ರ ಅಕ್ಟೋಬರ್ ತಿಂಗಳಲ್ಲಿ ಪ್ರಾರಂಭಿಸಬಹುದು.

ಇದರಲ್ಲಿ ಹೊಸ ಬಿಎಂಡಬ್ಲ್ಯು ಜಿ310 ಆರ್ ಬೈಕ್ ನವೀಕರಿಸಿದ ಫ್ಯೂಯಲ್ ಟ್ಯಾಂಕ್ ಮತ್ತು ರೇಡಿಯೇಟರ್ ಜೊತೆಗೆ ಹೊಸ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಒಳಗೊಂಡಿದೆ. ಒಟ್ಟಾರೆಯಾಗಿ ಹೊಸ ಬಿಎಂಡಬ್ಲ್ಯು ಜಿ 310 ಆರ್ ಬೈಕ್ ಹೆಚ್ಚಿನ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಈ ಹೊಸ ಬಿಎಂಡಬ್ಲ್ಯು ಜಿ310 ಆರ್ ಬೈಕ್ ಕೆಟಿಎಂ 390 ಡ್ಯೂಕ್ ಬೈಕಿಗೆ ಪೈಪೋಟಿಯನ್ನು ನೀಡುತ್ತದೆ. ಇನ್ನು 2021 ಬಿಎಂಡಬ್ಲ್ಯು ಜಿ 310 ಜಿಎಸ್ ಅಡ್ವೆಂಚರ್ ಟೂರರ್ ಬೈಕ್ ಕೂಡ ಹೊಸ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಹೊಂದಿದೆ.

ಹೊಸ ಬಿಎಂಡಬ್ಲ್ಯು ಜಿ310 ಆರ್ ಮತ್ತು ಜಿ310 ಜಿಎಸ್ ಬೈಕುಗಳು 313 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಬಹುದು. ಹೊಸ ಟ್ವಿನ್ ಬೈಕುಗಳು ತನ್ನ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚಿನ ಪವರ್ ಫುಲ್ ಆಗಿರುತ್ತದೆ ಎಂದು ನಿರೀಕ್ಷಿಸುತ್ತೇವೆ.


Click it and Unblock the Notifications








