ಹೊಸ ಬಿಎಂಡಬ್ಲ್ಯು ಆರ್18 ಕ್ರೂಸರ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಬಿಎಂಡಬ್ಲ್ಯು ಮೋಟರ್‌ರಾಡ್ ಇಂಡಿಯಾ ಹೊಸ ಆರ್18 ಕ್ರೂಸರ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಬಿಎಂಡಬ್ಲ್ಯು ಕಂಪನಿಯು ಹೊಸ ಆರ್18 ಕ್ರೂಸರ್ ಬೈಕಿನ ಬಿಡುಗಡೆಯ ದಿನಾಂಕವನ್ನು ಟೀಸರ್ ಮೂಲಕ ಬಹಿರಂಗಪಡಿಸಿದೆ.

ಹೊಸ ಬಿಎಂಡಬ್ಲ್ಯು ಆರ್18 ಕ್ರೂಸರ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಹೊಸ ಬಿಎಂಡಬ್ಲ್ಯು ಆರ್18 ಕ್ರೂಸರ್ ಬೈಕ್ ಇದೇ ತಿಂಗಳ 19ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಜರ್ಮನ್ ಬ್ರ್ಯಾಂಡ್‍ನ ಹೊಸ ಬಿಎಂಡಬ್ಲ್ಯು ಆರ್18 ಕ್ರೂಸರ್ ಅನ್ನು ಕಾನ್ಸೆಪ್ಟ್ ಮಾದರಿಯಾಗಿ ಕಳೆದ ವರ್ಷ ಪ್ರದರ್ಶಿಸಲಾಗಿತ್ತು. ಹೊಸ ಬಿಎಂಡಬ್ಲ್ಯೂ ಆರ್18 ಕ್ರೂಸರ್ ಪ್ರೊಡಕ್ಷನ್ ಸ್ಪೆಕ್ ಆವೃತ್ತಿಯು ಬ್ರ್ಯಾಂಡ್‍ನ ಕ್ಲಾಸಿಕ್ ಆರ್ 5 ಬೈಕಿನ ವಿನ್ಯಾಸದಿಂದ ಸ್ಪೋರ್ತಿ ಪಡೆದಿದೆ. ಹೊಸ ಬಿಎಂಡಬ್ಲ್ಯೂ ಆರ್18 ಕ್ರೂಸರ್ ಡೊಡ್ಡ ಟಿಯರ್ ಡ್ರಾಪ್ ಫ್ಯೂಯಲ್ ಟ್ಯಾಂಕ್‌ನೊಂದಿಗೆ ರೆಟ್ರೊ-ಮಾರ್ಡನ್ ವಿನ್ಯಾಸವನ್ನು ಹೊಂದಿದೆ.

ಹೊಸ ಬಿಎಂಡಬ್ಲ್ಯು ಆರ್18 ಕ್ರೂಸರ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಬಿಎಂಡಬ್ಲ್ಯು ಆರ್18 ಕ್ರೂಸರ್ ಬೈಕ್ ರೆಟ್ರೂ ಲುಕ್ ಅನ್ನು ಹೊರತುಪಡಿಸಿ ಉಳಿದಂತೆ ಎಲ್ಲವೂ ಮಾರ್ಡನ್ ಫೀಚರ್‍ಗಳನ್ನು ಒಳಗೊಂಡಿದೆ. ಇನ್ನು ಈ ಬೈಕಿನಲ್ಲಿ ಹಲವಾರು ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ಬಿಎಂಡಬ್ಲ್ಯು ಆರ್18 ಕ್ರೂಸರ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಹೊಸ ಬಿಎಂಡಬ್ಲ್ಯು ಆರ್18 ಕ್ರೂಸರ್ ಅನ್ನು ಸ್ಟ್ಯಾಂಡರ್ಡ್ ಮತ್ತು ಫಸ್ಟ್ ಎಡಿಷನ್ ಎಂಬ ಎರಡು ರೂಪಾಂತರಗಳಲ್ಲಿ ನೀಡಲಾಗುತ್ತದೆ.ಇದರಲ್ಲಿ ಫಸ್ಟ್ ಎಡಿಷನ್ ಬೈಕ್ ಆರ್ 5 ಕ್ಲಾಸಿಕ್ ಮಾದರಿಯಂತಿದೆ. ಈ ಬೈಕಿನಲ್ಲಿ ಸ್ಟೈಪಿಂಗ್, ಲೆದರ್ ಬೆಲ್ಟ್ ಮತು ಸ್ಲಾಟ್ಡ್ ಸ್ಕ್ರೂಗಳು ಒಳಗೊಂಡಿದೆ.

ಹೊಸ ಬಿಎಂಡಬ್ಲ್ಯು ಆರ್18 ಕ್ರೂಸರ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಬಿಎಂಡಬ್ಲ್ಯೂ ಆರ್18 ಕ್ರೂಸರ್ 1,731 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಇದು ದೊಡ್ಡ ಗಾತ್ರದ ಬೈಕ್ ಆಗಿದೆ. ಬಿಎಂಡಬ್ಲ್ಯು ಆರ್18 ಕ್ರೂಸರ್ ಬೈಕ್ ಹೋಂಡಾ ಗೋಲ್ಡ್ ವಿಂಗ್ ಮಾದರಿಗಿಂತ ಉದ್ದವಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಬಿಎಂಡಬ್ಲ್ಯು ಆರ್18 ಕ್ರೂಸರ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಈ ಬೈಕಿನಲ್ಲಿ ಎಲೆಕ್ಟ್ರಾನಿಕ್ಸ್ ಫೀಚರ್‍ಗಳನ್ನು ಅಳವಡಿಸಿದ್ದಾರೆ. ಇದರಲ್ಲಿ ಮೂರು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಈ ಹೊಸ ಬೈಕ್ ಆಟೋಮ್ಯಾಟಿಕ್ ಸ್ಟೆಬಿಲಿಟಿ ಕಂಟ್ರೋಲ್, ಮೋಟಾರ್ ಸ್ಲಿಪ್ ರೆಗ್ಯೋಲೆಷನ್ ಮತ್ತು ಎಬಿಎಸ್ ಆಗಿದೆ.

ಹೊಸ ಬಿಎಂಡಬ್ಲ್ಯು ಆರ್18 ಕ್ರೂಸರ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಹೊಸ ಬಿಎಂಡಬ್ಲ್ಯು ಆರ್18 ಕ್ರೂಸರ್ ಬೈಕಿನಲ್ಲಿ ಹೆಡ್ ಲ್ಯಾಂಪ್, ಟೇಲ್ ಲೈಟ್, ಡಿಆರ್‌ಎಲ್‌ ಸೇರಿದಂತೆ ಎಲ್‌ಇಡಿ ಲೈಟಿಂಗ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಸಣ್ಣ ಡಿಜೆಟಲ್ ಡಿಸ್‍ಪ್ಲೇ ದೊಡ್ಡ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಹೊಸ ಬಿಎಂಡಬ್ಲ್ಯು ಆರ್18 ಕ್ರೂಸರ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಹೊಸ ಬಿಎಂಡಬ್ಲ್ಯು ಆರ್18 ಕ್ರೂಸರ್‍ನಲ್ಲಿ 1802 ಸಿಸಿ ಬಾಕ್ಸರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 4,750 ಆರ್‌ಪಿಎಂನಲ್ಲಿ 91 ಬಿಹೆಚ್‌ಪಿ ಪವರ್ ಮತ್ತು 2000 ರಿಂದ 4000 ಆರ್‌ಪಿಎಂ ನಡುವೆ 149 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.

ಹೊಸ ಬಿಎಂಡಬ್ಲ್ಯು ಆರ್18 ಕ್ರೂಸರ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಆರ್ 5 ಕ್ಲಾಸಿಕ್‌ನಿಂದ ಸ್ಫೂರ್ತಿ ಪಡೆದ ಹೊಸ ಬಿಎಂಡಬ್ಲ್ಯು ಆರ್18 ಕ್ರೂಸರ್ ಸಹ ಎಕ್ಸ್‌ಪೋಸ್ಡ್ ಶಾಫ್ಟ್ ಡ್ರೈವ್‌ನೊಂದಿಗೆ ಬರುತ್ತದೆ. ಬಿಎಂಡಬ್ಲ್ಯು ಆರ್18 ಜರ್ಮನ್ ಬ್ರಾಂಡ್‌ನಿಂದ ಪೂರ್ಣ ಪ್ರಮಾಣದ ಹೆವಿವೇಯ್ಟ್ ಕ್ರೂಸರ್ ಮಾದರಿಯಾಗಿದೆ.

More from DriveSpark

Article Published On: Saturday, September 12, 2020, 13:25 [IST]
English summary
BMW R 18 Launch Date Revealed. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+