ಅನಾವರಣವಾಯ್ತು ಹೊಸ ಸಿಎಫ್‌ಮೊಟೊ 700ಸಿಎಲ್-ಎಕ್ಸ್ ಮಾದರಿಗಳು
ಚೀನಾ ಮೂಲದ ಸಿಎಫ್‌ಮೊಟೊ ಕಂಪನಿಯು ತನ್ನ ಬಹುನಿರೀಕ್ಷಿತ ಸಿಎಫ್‌ಮೊಟೊ 700ಸಿಎಲ್-ಎಕ್ಸ್ ಮಾದರಿಗಳನ್ನು ಚೀನಾ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಹೊಸ ಸಿಎಫ್‌ಮೊಟೊ 700ಸಿಎಲ್-ಎಕ್ಸ್ ಮಾದರಿಗಳು ಮುಂದಿನ ವರ್ಷದ ಆರಂಭದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಸಿಎಫ್‌ಮೊಟೊ 700 ಸಿಎಲ್-ಎಕ್ಸ್ ಬೈಕ್ ಅಡ್ವೆಂಚರ್, ಹೆರಿಟೇಜ್ ಮತ್ತು ಸ್ಪೋರ್ಟ್ ಎಂಬ ಮೂರು ಮಾದರಿಗಳಲ್ಲಿ ಲಭ್ಯವಿದೆ. ಈ ಎಲ್ಲಾ ಮೂರು ಮಾದರಿಗಳು ಒಂದೇ 693ಸಿಸಿ, ಲಿಕ್ವಿಡ್-ಕೂಲ್ಡ್, ಡಿಒಹೆಚ್‌ಸಿ, ಟ್ವಿನ್ ಎಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 73 ಬಿಹೆಚ್‌ಪಿ ಪವರ್ ಮತ್ತು 7,000 ಆರ್‌ಪಿಎಂನಲ್ಲಿ 68 ಎನ್‌ಎಂ ಪೀಕ್ ಟಾರ್ಕ್ ಅನ್ನ ಉತ್ಪಾದಿಸುತ್ತದೆ.

ಈ ಸಿಎಫ್‌ಮೊಟೊ 700 ಸಿಎಲ್-ಎಕ್ಸ್ ಮಾದರಿಗಳಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ 41 ಎಂಎಂ ಕೆವೈಬಿ ಇನ್ವರ್ಡಡ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ 150 ಎಂಎಂ ಪ್ರಿ ಲೋಡ್‌ನೊಂದಿಗೆ ಕೆವೈಬಿ ಮೊನೊಶಾಕ್ ಸೆಟಪ್ ಅನ್ನು ಅಳವಡಿಸಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಇನ್ನು ಈ ಸಿಎಫ್‌ಮೊಟೊ 700 ಸಿಎಲ್-ಎಕ್ಸ್ ಮಾದರಿಗಳ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಜೆ ಜುವಾನ್ ನಾಲ್ಕು-ಪಿಸ್ಟನ್ ರೇಡಿಯಲ್ ಕ್ಯಾಲಿಪರ್‌ಗಳು ಮತ್ತು ಹಿಂಭಾಗದಲ್ಲಿ 260 ಎಂಎಂ ಡಿಸ್ಕ್ ಗಳೊಂದಿಗೆ ಕಾಂಟಿನೆಂಟಲ್‌ನಿಂದ ಎಬಿಎಸ್‌ನೊಂದಿಗೆ ಬ್ರೇಕಿಂಗ್ ಅನ್ನು ನಿರ್ವಹಿಸುತ್ತದೆ.

ಹೊಸದಾಗಿ ವಿನ್ಯಾಸಗೊಳಿಸಲಾದ ಸ್ಪ್ಲಿಟ್ ಫ್ರೇಮ್ 16.5 ಕೆಜಿ ತೂಕವನ್ನು ಹೊಂದಿದ್ದರೆ, 6.7 ಕೆಜಿ ಅಲ್ಯೂಮಿನಿಯಂ ಅಲಾಯ್ ಸ್ವಿಂಗಾರ್ಮ್ ನೊಂದಿಗೆ 700 ಸಿಎಲ್-ಎಕ್ಸ್ ಹೆರಿಟೇಜ್ ಮಾದರಿಯು 183 ಕೆಜಿ ತೂಕವನ್ನು ಹೊಂದಿದೆ.
MOST READ: ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಈ ಸಿಎಫ್‌ಮೊಟೊ 700 ಸಿಎಲ್-ಎಕ್ಸ್ ಮಾದರಿಗಳಲ್ಲಿ ಆನ್-ಬೋರ್ಡ್ ಕಂಪ್ಯೂಟರ್ ಎಕಾನಮಿ ಮತ್ತು ಸ್ಪೋರ್ಟ್ ಎಂಬ ಎರಡು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಸಿಎಫ್‌ಮೊಟೊ 700 ಸಿಎಲ್-ಎಕ್ಸ್ ಸಹ ಕ್ರೂಸ್ ಕಂಟ್ರೋಲ್ ಜೊತೆಗೆ ಯುಎಸ್‌ಬಿ ಚಾರ್ಜಿಂಗ್ ಪಾಯಿಂಟ್ ಅನ್ನು ನೀಡುತ್ತದೆ.

ಸಿಎಫ್‌ಮೊಟೊ ಕಂಪನಿಯು ತನ್ನ ಬಹುನಿರೀಕ್ಷಿತ 300 ಎಸ್‌ಆರ್ ಬೈಕನ್ನು ಇತ್ತೀಚೆಗೆ ಫಿಲಿಪೈನ್ಸ್‌ನಲ್ಲಿ ಬಿಡುಗಡೆಗೊಳಿಸಿತು. ಹೊಸ 300 ಎಸ್‌ಆರ್ ಬ್ರ್ಯಾಂಡ್‌ನ ಸರಣಿಯಲ್ಲಿರುವ 300 ಎನ್‌ಕೆ ನೇಕೆಡ್ ಫೇರ್ಡ್ ಆವೃತ್ತಿಯ ಅಪ್ಡೇಟ್ ವರ್ಷನ್ ಆಗಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಹೊಸ ಸಿಎಫ್‌ಮೊಟೊ 300 ಎಸ್‌ಆರ್ ಬೈಕಿನಲ್ಲಿ ಹಿಂದಿನ ಮಾದರಿಯಲ್ಲಿದ್ದ ಡಿಒಹೆಚ್‌ಸಿ ಸೆಟಪ್ ಹೊಂದಿರುವ 292.4 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಿದ್ದಾರೆ. ಈ ಎಂಜಿನ್ 8,750 ಆರ್‌ಪಿಎಂನಲ್ಲಿ 30 ಬಿಹೆಚ್‌ಪಿ ಪವರ್ ಮತ್ತು 7,250 ಆರ್‌ಪಿಎಂನಲ್ಲಿ 25.3 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಸಿಎಫ್‌ಮೊಟೊ 700 ಸಿಎಲ್-ಎಕ್ಸ್ ಮಾದರಿಗಳು ನ್ಯೂ-ರೆಟ್ರೊ ವಿನ್ಯಾಸವನ್ನು ಹೊಂದಿದೆ, ಸಿಎಫ್‌ಮೊಟೊ 700 ಸಿಎಲ್-ಎಕ್ಸ್ ಮಾದರಿಗಳು ಸ್ಕ್‌ವರ್ನಾ ಕಂಪನಿಯ ಸ್ವಾರ್ಟ್‍ಪಿಲೆನ್ ಹಾಗೂ ವಿಟ್‍ಪಿಲೆನ್ ಬೈಕ್‍ಗಳ ವಿನ್ಯಾಸವನ್ನು ಎರವಲು ಪಡೆದಿದೆ.


Click it and Unblock the Notifications








