ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭ
ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಡುಕಾಟಿ ತನ್ನ ಪಾನಿಗಲೆ ವಿ2 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದೀಗ ಡುಕಾಟಿ ಕಂಪನಿಯು ಈ ಪಾನಿಗಲೆ ವಿ2 ಬೈಕಿನ ಬುಕ್ಕಿಂಗ್ ಅನ್ನು ಸ್ವೀಕರಿಸಲು ಪ್ರಾರಂಭಿಸಿದ್ದಾರೆ.

ಹೊಸ ಡುಕಾಟಿ ಪಾನಿಗಲೆ ವಿ2 ಬೈಕನ್ನು ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತ ರೂ.1 ಲಕ್ಷ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಇನ್ನು ಹೂಸ ಪಾನಿಗಲೆ ವಿ2 ಬೈಕ್ ಕೆಲವು ಸಣ್ಣ ಬದಲಾವಣೆಯೊಂದಿಗೆ ಬಿಡುಗಡೆಯಾಗಲಿದೆ. ಈ ಹೊಸ ಪಾನಿಗಲೆ ವಿ2 ಬೈಕ್ ಫ್ರಂಟ್ ಫೇರಿಂಗ್, ಮತ್ತು ಸಿಂಗಲ್ ಸೈಡ್ ಸ್ವಿಂಗಾರ್ಮ್ ಅನ್ನು ಒಳಗೊಂಡಿರುತ್ತದೆ. ಈ ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿರಲಿದೆ.

ಪಾನಿಗಲೆ ವಿ4 ಬೈಕಿನಲ್ಲಿರುವಂತಹ ಕೆಲವು ಸ್ಟೈಲಿಂಗ್ ಅಂಶಗಳು ಹೊಸ ಪಾನಿಗಲೆ ವಿ2 ಬೈಕಿನಲ್ಲಿರುತ್ತದೆ. ಈ ಡುಕಾಟಿ ಪಾನಿಗಲೆ ವಿ2 ಬೈಕ್ ಬ್ರ್ಯಾಂಡ್ ಸಿಗ್ನೇಚರ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಏರ್ ಡ್ಯಾಮ್ ಮತ್ತು ವಿ-ಆಕಾರದ ಡಿಆರ್ಎಲ್ ಅನ್ನು ಹೊಂದಿರಲಿದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಡುಕಾಟಿ ಪಾನಿಗಲೆ ವಿ2 ಬೈಕಿನಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಕ್ಲಸ್ಟರ್‌ಗಾಗಿ 4.3-ಇಂಚಿನ ಟಿಎಫ್‌ಟಿ ಡಿಸ್ ಪ್ಲೇಯನ್ನು ಹೊಂದಿರಲಿದೆ. ಈ ಬೈಕಿನಲ್ಲಿ ಸ್ಲಂಗ್ ಅಂಡರ್ ಎಕ್ಸಾಸ್ಟ್ ಅನ್ನು ಹೊಂದಿದೆ.

ಡುಕಾಟಿ ಪಾನಿಗಲೆ ವಿ2 ಬೈಕಿನಲ್ಲಿ ಬ್ರೇಕಿಂಗ್ ಸಿಸ್ಟಂಗಾಗಿ ಬ್ರೆಂಬೊ ಎಂ4.32 ಮೊನೊಬ್ಲೋಕ್ ಕ್ಯಾಲಿಪರ್‌ಗಳು ಮತ್ತು ಮುಂಭಾಗದಲ್ಲಿ ಡ್ಯುಯಲ್ ಡಿಸ್ಕ್ ಹೊಂದಿರುವ ಬ್ರೆಂಬೊ ಮಾಸ್ಟರ್ ಸಿಲಿಂಡರ್‌ಗಳು ಮತ್ತು ಹಿಂಭಾಗದಲ್ಲಿ ಒಂದೇ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಹೂಸ ಡುಕಾಟಿ ಪಾನಿಗಲೆ ವಿ2 ಬೈಕಿನಲ್ಲಿ 955 ಸಿಸಿ ಸೂಪರ್‌ಕ್ವಾಡ್ರೊ ಎಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 155 ಬಿಹೆಚ್‌ಪಿ ಮತ್ತು 104 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಡುಕಾಟಿ ಪಾನಿಗಲೆ ವಿ2 ಬೈಕ್ ತನ್ನ ಸಂಪೂರ್ಣ ಎಲೆಕ್ಟ್ರಾನಿಕ್ಸ್ ಕಿಟ್ ಅನ್ನು 959 ಮಾದರಿಯಿಂದ ಎರವಲು ಪಡೆಯುತ್ತದೆ. ಈ ಹೊಸ ಡುಕಾಟಿ ಪಾನಿಗಲೆ ವಿ2 ಬೈಕಿನಲ್ಲಿ ಟ್ರಾಕ್ಷನ್ ಕಂಟ್ರೋಲ್ ಅನ್ನು ನೀಡಿದೆ.
MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಇನ್ನು ಡುಕಾಟಿ ತನ್ನ ಪಾನಿಗಲೆ ವಿ2 ವೈಟ್ ರೊಸ್ಸೊ ಬೈಕನ್ನು ಇತ್ತೀಚೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿತು. ವಿಶ್ವ ಡುಕಾಟಿ ಪ್ರೀಮಿಯರ್‌ನಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಈ ಬೈಕನ್ನು ಪ್ರದರ್ಶಿಸಲಾಗಿತ್ತು.

ಡುಕಾಟಿ ಪಾನಿಗಲೆ ವಿ2 ಉತ್ತಮ ಕಾರ್ಯಕ್ಷಮತೆ ಬೈಕ್ ಆಗಿದೆ. ಡುಕಾಟಿ ಪಾನಿಗಲೆ ವಿ2 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.


Click it and Unblock the Notifications








