ಬಿಎಸ್-6 ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬೈಕ್ ಬಿಡುಗಡೆ

ಹಾರ್ಲೆ ಡೇವಿಡ್ಸನ್ ಕಂಪನಿಯು ತನ್ನ ಬಿಎಸ್-6 1200 ಕಸ್ಟಮ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗಿದೆ. ಹೊಸ ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.10.77 ಲಕ್ಷಗಳಾಗಿದೆ.

ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬೈಕ್ ಬಿಡುಗಡೆ

ಬಿಎಸ್-6 ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ರೆಟ್ರೊ ಲುಕಿಂಗ್ ಹೆಡ್‌ಲ್ಯಾಂಪ್ ಮತ್ತು ಟರ್ನ್ ಸಿಗ್ನಲ್ ಇಂಡಿಕೇಟರ್‍ಗಳನ್ನು ಹೊಂದಿವೆ. ಈ ಬೈಕಿನ ಎಂಜಿನ್‍ ನಲ್ಲಿ ಡಯಾಗ್ನೋಸ್ಟಿಕ್ಸ್ ಮತ್ತು ಈ ಬೈಕಿನಲ್ಲಿ ಇಂಧನ ಕಡಿಮೆಯಾದಾಗ ಎಚ್ಚರಿಸುವ ಪಾರ್ಟ್ ಡಿಜೆಟಲ್ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಲ್ಲಿ ಇರುವ ಇತರ ಫೀಚರ್ಸ್‍ಗಳು ಓಡೋಮೀಟರ್, ದಿನದ ಸಮಯ ಸೂಚಿಸುವ ಕ್ಲಾಕ್, ಡ್ಯುಯಲ್ ಟ್ರಿಪ್ ಮೀಟರ್, ಎಲ್ಇಡಿ ಲೈಟನ್ನು ಹೊಂದಿದೆ.

ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬೈಕ್ ಬಿಡುಗಡೆ

ಬಿಎಸ್-6 ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬೈಕಿನಲ್ಲಿ 1200 ಸಿಸಿ, ಏರ್-ಕೂಲ್ಡ್ ಎವಲ್ಯೂಷನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 97 ನ್ಯೂಟನ್-ಮೀಟರ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಅನ್ನು ಅಳವಡಿಸಲಾಗಿದೆ.

ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬೈಕ್ ಬಿಡುಗಡೆ

ಬಿಎಸ್-6 ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬೈಕಿನ ಬಿಹೆಚ್‍ಪಿ ಪವರ್ ಎಷ್ಟು ಉತ್ಪಾದಿಸುತ್ತದೆ ಎಂಬ ಮಾಹಿತಿಯು ಬಹಿರಂಗವಾಗಿಲ್ಲ. ಈ ಎಂಜಿನ್ ಆಲ್-ಬ್ಲ್ಯಾಕ್ ರಾಕರ್ಸ್ ಮತ್ತು ಏರ್ ಕ್ಲೀನರ್ ಕವರ್‌ಗಳನ್ನು ಹೊಂದಿದೆ.

ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬೈಕ್ ಬಿಡುಗಡೆ

ಇದರೊಂದಿಗೆ ಆಲ್-ಕ್ರೋಮ್ ಡ್ಯುಯಲ್-ಟ್ಯಾಪರ್ಡ್ ಎಕ್ಸಾಸ್ಟ್ ಸಿಸ್ಟಂ ಅನ್ನು ಸಹ ಒಳಗೊಂಡಿದೆ. 1200 ಕಸ್ಟಮ್ ಬಿಎಸ್ 6 ಮಾದರಿಯು ಕ್ಲೋಸ್ಡ್-ಲೂಪ್ ಎಕ್ಸಾಸ್ಟ್ ಸಿಸ್ಟಂ ಅನ್ನು ಹೊಂದಿದೆ. ಹಾರ್ಲೆ-ಡೇವಿಡ್ಸನ್ 1200 ಕಸ್ಟಮ್ ಬೈಕನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಅಭಿವೃದ್ದಿಪಡಿಸಲಾಗಿದೆ.

ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬೈಕ್ ಬಿಡುಗಡೆ

ಈ ಬೈಕಿನಲ್ಲಿ ಸವಾರರ ಸುರಕ್ಷತೆಗಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಸುರಕ್ಷತೆಗಾಗಿ ಈ ಬೈಕಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

MOST READ: 100ರ ಗಡಿ ದಾಟಿದ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬೈಕ್ ಬಿಡುಗಡೆ

ಇದರೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಈ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಡ್ಯುಯಲ್ ಸಂಸೆಕ್ಷೆನ್ ಯುನಿಟ್ ಅನ್ನು ಅಳವಡಿಸಲಾಗಿದೆ.

MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಬಿಎಸ್-6 ರಾಯಲ್ ಎನ್‍‍ಫೀಲ್ಡ್ ಹಿಮಾಲಯನ್ ಬೈಕ್

ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬೈಕ್ ಬಿಡುಗಡೆ

ಬಿಎಸ್-6 ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬೈಕ್ ಮಿಡ್ನೈಟ್ ಬ್ಲೂ, ರಿವರ್ ರಾಕ್ ಗ್ರೇ, ವಿವಾರ್ಡ್ ಬ್ಲ್ಯಾಕ್ನೊಂದಿಗೆ ಬಿಲ್ಲಾರ್ಡ್ ರೆಡ್ ಮತ್ತು ವಿವಿದ್ ಬ್ಲ್ಯಾಕ್ನೊಂದಿಗೆ ರಿವರ್ ರಾಕ್ ಗ್ರೇ ಬಣ್ಣದಲ್ಲಿ ಲಭ್ಯವಿದೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಮಾರುತಿ ಸುಜುಕಿ ಸೆಲೆರಿಯೊ ಎಕ್ಸ್

ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬೈಕ್ ಬಿಡುಗಡೆ

ಬಿಎಸ್-6 ಹಾರ್ಲೆ ಡೇವಿಡ್ಸನ್ 1200 ಕಸ್ಟಮ್ ಬೈಕ್ ಆಕರ್ಷಕ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಈ ಬೈಕ್ ಹೆಚ್ಚಾಗಿ ಯುವ ಗ್ರಾಹಕರನ್ನು ಸೆಳೆಯಬಹುದು. ಪ್ರಸ್ತುತ ಕರೋನಾ ವೈರಸ್ ಭೀತಿ ಮತ್ತು ಆರ್ಧಿಕ ಹಿಂಜರಿತವು ಈ ಬೈಕಿನ ಮಾರಾಟದ ಮೇಲೆ ಪರಿಣಾಮವನ್ನು ಬೀರುತ್ತದೆ.

More from DriveSpark

Article Published On: Monday, March 30, 2020, 15:54 [IST]
English summary
Harley Davidson 1200 Custom BS6 Models Launched. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+