ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಹಸ್ಕ್​ವರ್ನಾ ಬೈಕುಗಳು

ಸ್ವೀಡಿಷ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹಸ್ಕ್​ವರ್ನಾ ತನ್ನ ಹೊಸ ಬೈಕುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹಸ್ಕ್​ವರ್ನಾ ತನ್ನ ಜನಪ್ರಿಯ ಸ್ವಾರ್ಟ್‍‍ಪಿಲೆನ್ 401 ಮತ್ತು ವಿಟ್‌ಪಿಲೆನ್ 401 ಬೈಕ್‍‍ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಹಸ್ಕ್​ವರ್ನಾ ಬೈಕುಗಳು

ಹಸ್ಕ್​ವರ್ನಾ ಸ್ವಾರ್ಟ್‍‍ಪಿಲೆನ್ 401 ಮತ್ತು ವಿಟ್‌ಪಿಲೆನ್ 401 ಬೈಕ್‍‍ಗಳನ್ನು ಇದೇ ವರ್ಷದಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ ಎಂದು ವರದಿಗಳು ಪ್ರಕಟವಾಗಿತ್ತು. ಅದರೆ ಹೊಸ ವರದಿಗಳ ಪ್ರಕಾರ, ಭಾರತೀಯ ಮಾರುಕಟ್ಟೆಯಲ್ಲಿ ಹಸ್ಕ್​ವರ್ನಾ ಸ್ವಾರ್ಟ್‍‍ಪಿಲೆನ್ 401 ಮತ್ತು ವಿಟ್‌ಪಿಲೆನ್ 401 ಬೈಕ್‍‍ಗಳು ಮುಂದಿನ ವರ್ಷದ ಮಧ್ಯಾಂತರ ಅವಧಿಯಲ್ಲಿ ಬಿಡುಗಡೆಯಾಗಬಹುದು.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಹಸ್ಕ್​ವರ್ನಾ ಬೈಕುಗಳು

ಇದರೊಂದಿಗೆ ಹಸ್ಕ್​ವರ್ನಾ ತನ್ನ ಸ್ವಾರ್ಟ್‍‍ಪಿಲೆನ್ 200 ಬೈಕನ್ನು ಕೂಡ ಬಿಡುಗಡೆಗೊಳಿಸಲಿದೆ. ಈ ಹೊಸ ಹಸ್ಕ್​ವರ್ನಾ ಸ್ವಾರ್ಟ್‍‍ಪಿಲೆನ್ 200 ಬೈಕ್ ಇತ್ತೀಚೆಗೆ ಪುಣೆ ಬಳಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಆದರೆ ಈ ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಹಸ್ಕ್​ವರ್ನಾ ಬೈಕುಗಳು

ಸ್ವಾರ್ಟ್‍‍ಪಿಲೆನ್ 250 ಮತ್ತು ವಿಟ್‌ಪಿಲೆನ್ 250 ಬೈಕುಗಳು ಕೆಟಿಎಂ 250 ಡ್ಯೂಕ್ ಅನ್ನು ಆಧರಿಸಿದಂತೆಯೇ, ಮುಂಬರುವ ಸ್ವಾರ್ಟ್‍‍ಪಿಲೆನ್ 401 ಮತ್ತು ವಿಟ್‌ಪಿಲೆನ್ 401 ಬೈಕ್‍‍ಗಳು 390 ಡ್ಯೂಕ್ ಮಾದರಿಯನ್ನು ಆಧರಿಸಿರಲಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಹಸ್ಕ್​ವರ್ನಾ ಬೈಕುಗಳು

ಕೆಟಿಎಂ 390 ಮಾದರಿಯ ಎಂಜಿನ್ ಅನ್ನು ಈ ಬೈಕ್‍‍ಗಳು ಹೊಂದಿರಲಿದೆ. ಹಸ್ಕ್​ವರ್ನಾ 401 ಬೈಕ್ 373 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಹೂಂದಿರಲಿದೆ. ಈ ಎಂಜಿನ್ 44 ಬಿ‍‍ಹೆಚ್‍‍ಪಿ ಪವರ್ ಮತ್ತು 37 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಹಸ್ಕ್​ವರ್ನಾ ಬೈಕುಗಳು

ಸ್ವಾರ್ಟ್‍‍ಪಿಲೆನ್ 401 ಮತ್ತು ವಿಟ್‌ಪಿಲೆನ್ 401 ಬೈಕ್‍‍ಗಳು ಡಬ್ಲ್ಯೂಪಿ ಯುಎಸ್ಡಿ ಫ್ರಂಟ್ ಫೋರ್ಕ್ಸ್, ರಿಯರ್ ಮೊನೊಶಾಕ್, ಬ್ರೇಕಿಂಗ್ ಸಿಸ್ಟಮ್, ಟ್ರೆಲ್ಲಿಸ್ ಫ್ರೇಮ್ ಮತ್ತು ಹಲವಾರು ಭಾಗಗಳು ಕೆಟಿಎಂ ಬೈಕಿನಿಂದ ಎರವಲು ಪಡೆಯಲಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಹಸ್ಕ್​ವರ್ನಾ ಬೈಕುಗಳು

ವಿಶೇಷವೆಂದರೆ ಹಸ್ಕ್​ವರ್ನಾದ ಸ್ವಾರ್ಟ್‍‍ಪಿಲೆನ್ 250 ಹಾಗೂ ವಿಟ್‍‍ಪಿಲೆನ್ 250 ಬೈಕ್‍‍ಗಳನ್ನು ಕೆಟಿಎಂ ಡ್ಯೂಕ್ 250 ಬೈಕಿನ ಆಧಾರದ ಮೇಲೆ ತಯಾರಿಸಲಾಗಿದೆ. ಈ ಎರಡೂ ಬೈಕ್‍‍ಗಳಲ್ಲಿ ಡ್ಯೂಕ್ 250 ಬೈಕಿನಲ್ಲಿರುವಂತಹ ಬಿಡಿಭಾಗ ಹಾಗೂ ಎಂಜಿನ್‍‍ಗಳನ್ನು ಅಳವಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಹಸ್ಕ್​ವರ್ನಾ ಬೈಕುಗಳು

ಇದರ ಜೊತೆಗೆ ಎರಡು ಬೈಕ್‍‍ಗಳು ಕೆಟಿಎಂ ಬೈಕ್‍‍ಗಳಂತೆ ವಿಶಿಷ್ಟವಾದ ಡಿಸೈನ್ ಫೀಚರ್‍‍ಗಳನ್ನು ಹೊಂದಿವೆ. ಸ್ವಾರ್ಟ್‍‍ಪಿಲೆನ್ 250 ಬೈಕ್ ಸ್ಕ್ರಾಂಬ್ಲರ್‍‍ನಂತಿದ್ದರೆ, ವಿಟ್‍‍ಪಿಲೆನ್ ಕೆಫೆ ರೇಜರ್ ಬೈಕಿನಂತಿದೆ. ಸ್ವಾರ್ಟ್‍‍ಪಿಲೆನ್ 250 ಬೈಕಿನಲ್ಲಿ ಡ್ಯುಯಲ್ ಪರ್ಪಸ್ ಟಯರ್‍‍ಗಳನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಹಸ್ಕ್​ವರ್ನಾ ಬೈಕುಗಳು

ಇನ್ನು ಹಸ್ಕ್​ವರ್ನಾ ಸ್ವಾರ್ಟ್‌ಪಿಲೆನ್ 250 ಹಾಗೂ ವಿಟ್‌ಪಿಲೆನ್ 250 ಬೈಕುಗಳು ಒಂದೇ ರೀತಿಯ ಬೆಲೆಗಳನ್ನು ಹೊಂದಿದೆ. ಅಲ್ಲದೇ ಈ ಎರಡು ಬೈಕುಗಳ ಬೆಲೆಯನ್ನು ಇತ್ತೀಚೆಗೆ ರೂ.1,790 ಗಳವರೆಗೆ ಹೆಚ್ಚಿಸಲಾಗಿದೆ. ಬೆಲೆ ಏರಿಕೆಯ ಬಳಿಕ ಈ ಸ್ವಾರ್ಟ್‌ಪಿಲೆನ್ 250 ಹಾಗೂ ವಿಟ್‌ಪಿಲೆನ್ 250 ಬೈಕುಗಳ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.1.86 ಲಕ್ಷಗಳಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಹಸ್ಕ್​ವರ್ನಾ ಬೈಕುಗಳು

ಹೊಸ ಹಸ್ಕ್​ವರ್ನಾ ಕಂಪನಿಯು ಮುಂದಿನ ವರ್ಷ ಭಾರತದಲ್ಲಿ ಸ್ವಾರ್ಟ್‍‍ಪಿಲೆನ್ 200, ಸ್ವಾರ್ಟ್‌ಪಿಲೆನ್ 401 ಮತ್ತು ವಿಟ್‌ಪಿಲೆನ್ 401 ಬೈಕುಗಳನ್ನು ಬಿಡುಗಡೆಗೊಳಿಸಲಿದೆ. ಹೊಸ ಹಸ್ಕ್​ವರ್ನಾ ಸ್ವಾರ್ಟ್‌ಪಿಲೆನ್ 401 ಮತ್ತು ವಿಟ್‌ಪಿಲೆನ್ 401 ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಬಜಾಜ ಡೋಮಿನಾರ್ 400 ಮತ್ತು ಬಿಎಂಡಬ್ಲ್ಯು ಜಿ 310 ಆರ್ ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Article Published On: Tuesday, December 29, 2020, 20:56 [IST]
English summary
Husqvarnas Coming Next Year. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+