ಅನಾವರಣವಾಯ್ತು ಹೊಸ ಕವಾಸಕಿ ಝಡ್1000 ಬೈಕ್

ಕವಾಸಕಿ ಕಂಪನಿಯು ತನ್ನ 2021ರ ಲೀಟರ್-ಕ್ಲಾಸ್ ನೇಕೆಡ್ ಝಡ್1000 ಬೈಕನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಾಗಿದೆ. ಹಿಂದಿನ ಮಾದರಿಗೆ ಹೋಲಿಸಿದರೆ 2021ರ ಕವಾಸಕಿ ಝಡ್1000 ಬೈಕಿನಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿಲ್ಲ.

ಅನಾವರಣವಾಯ್ತು ಹೊಸ ಕವಾಸಕಿ ಝಡ್1000 ಬೈಕ್

ಈ ಹೊಸ ಕವಾಸಕಿ ಝಡ್1000 ಬೈಕ್ ಹೊಸ ಬ್ಲ್ಯಾಕ್ ಬಣ್ಣದ ಆಯ್ಕೆಯನ್ನು ಹೊಂದಿದೆ. ಇದು ಸೈಡ್ ಫೇರಿಂಗ್, ಹೆಡ್‌ಲ್ಯಾಂಪ್ ಮತ್ತು ರೇರ್ ಫೇರಿಂಗ್‌ನಲ್ಲಿ ರೆಡ್ ಪಿನ್‌ಸ್ಟ್ರೈಪಿಂಗ್‌ನೊಂದಿಗೆ ಕೂಡಿದೆ. ಇನ್ನು ಈ ಹೊಸ ಬೈಕಿನ ಎರಡು ವ್ಹೀಲ್ ಗಳಲ್ಲಿ ರೆಡ್ ಪಿನ್‌ಸ್ಟ್ರೈಪ್ ಅನ್ನು ಸಹ ಹೊಂದಿದೆ. ಹೊಸ ಕವಾಸಕಿ ಝಡ್1000 ಬೈಕ್ ಕೇವಲ ಒಂದು ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ. ಹಿಂದಿನ ಮಾದರಿಯು ಬ್ಲ್ಯಾಕ್ ಮತ್ತು ಗ್ರೀನ್ ಬಣ್ಣಗಳನ್ನು ಒಳಗೊಂಡಿತ್ತು.

ಅನಾವರಣವಾಯ್ತು ಹೊಸ ಕವಾಸಕಿ ಝಡ್1000 ಬೈಕ್

ಹಿಂದಿನ ಮಾದರಿಯ ರೀತಿಯ ಬ್ಲ್ಯಾಕ್ ಮತ್ತು ಗ್ರೀನ್ ಬಣ್ಣಗಳ ಮಾದರಿ ಇನ್ನು ಮುಂದೆ ಲಭ್ಯವಿರುವುದಿಲ್ಲ. 2021ರ ಕವಾಸಕಿ ಝಡ್1000 ಬೈಕಿನಲ್ಲಿ ಹೊಸ ಬಣ್ಣದ ಆಯ್ಕೆಯನ್ನು ಹೊರತುಪಡಿಸಿ ಉಳಿದ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿಲ್ಲ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಅನಾವರಣವಾಯ್ತು ಹೊಸ ಕವಾಸಕಿ ಝಡ್1000 ಬೈಕ್

ಈ ಹೊಸ ಮಾದರಿಯಲ್ಲಿ ವಿಶಿಷ್ಟವಾದ ಟ್ವಿನ್-ಪಾಡ್ ಹೆಡ್‌ಲ್ಯಾಂಪ್ ಅನ್ನು ಒಳಗೊಂಡಿದ್ದು, ಇದು ಬೈಕಿಗೆ ಹೆಚ್ಚಿನ ಅಗ್ರೇಸಿವ್ ಲುಕ್ ಅನ್ನು ನೀಡಿದೆ. ಮಸ್ಕಲರ್ ಲುಕ್ ಹೊಂದಿರುವ ಫ್ಯೂಯಲ್ ಟ್ಯಾಂಕ್ ಮತ್ತು ಸ್ಲೀಕ್ ಟೇಲ್ ಸೆಕ್ಷನ್ ಹೊಂದಿದೆ.

ಅನಾವರಣವಾಯ್ತು ಹೊಸ ಕವಾಸಕಿ ಝಡ್1000 ಬೈಕ್

ಇನ್ನು ಹೊಸ ಬೈಕಿನ ಸೈಡ್ ಪ್ರೊಫೈಲ್ ಎರಡೂ ಬದಿಯಲ್ಲಿ ಇರಿಸಲಾದ ಟ್ವಿನ್-ಎಕ್ಸಾಸ್ಟ್ ಯುನಿಟ್ ಗಳು ಎದ್ದು ಕಾಣುತ್ತದೆ. ಈ ಬೈಕಿನಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್, ಟೈಲ್‌ಲ್ಯಾಂಪ್ ಮತ್ತು ಟರ್ನ್-ಸಿಗ್ನಲ್ ಇಂಡಿಕೇಟರ್ ಅನ್ನು ಹೊಂದಿದೆ. ಇದರೊಂದಿಗೆ ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಸಹ ಹೊಂದಿದೆ. ಇದು ರೈಡರಿಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಅನಾವರಣವಾಯ್ತು ಹೊಸ ಕವಾಸಕಿ ಝಡ್1000 ಬೈಕ್

ಭಾರತದಲ್ಲಿ ಬಿಡುಗಡೆಯಾಗಲಿರುವ 2021ರ ಕವಾಸಕಿ ಝಡ್1000 ಬೈಕಿನಲ್ಲಿ ಹಿಂದಿನ ಬಿಎಸ್-4 ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಬಹುದು, ಈ ಬೈಕಿನಲ್ಲಿ ಅದೇ ಲಿಕ್ವಿಡ್-ಕೂಲ್ಡ್, ಇನ್-ಲೈನ್ ನಾಲ್ಕು ಸಿಲಿಂಡರ್, 1043 ಸಿಸಿ ಡಿಒಹೆಚ್‌ಸಿ ಎಂಜಿನ್ ಅನ್ನು ಅಳವಡಿಸಬಹುದು.

ಅನಾವರಣವಾಯ್ತು ಹೊಸ ಕವಾಸಕಿ ಝಡ್1000 ಬೈಕ್

ಈ ಎಂಜಿನ್ 10,000 ಆರ್‌ಪಿಎಂನಲ್ಲಿ 140 ಬಿಹೆಚ್‌ಪಿ ಪವರ್ ಮತ್ತು 7,300 ಆರ್‌ಪಿಎಂನಲ್ಲಿ 111 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಫೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್-ಅಸಿಸ್ಟ್ ಕ್ಲಚ್‌ನೊಂದಿಗೆ ಜೋಡಿಸಲಾಗುತ್ತದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಅನಾವರಣವಾಯ್ತು ಹೊಸ ಕವಾಸಕಿ ಝಡ್1000 ಬೈಕ್

ಈ ಹೊಸ ಬೈಕಿನಲ್ಲಿ ಬ್ರೇಕಿಂಗ್ ಸಿಸ್ಟಂಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಅಳವಡಿಸಬಹುದು. ಇನ್ನು ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ 41 ಎಂಎಂ ಬಿಪಿಎಫ್ ಶೋವಾ ಫೋರ್ಕ್ ಮತ್ತು ಹಿಂಭಾಗದಲ್ಲಿ ಓಹ್ಲಿನ್ಸ್‌ನಿಂದ ಬ್ಯಾಕ್-ಲಿಂಕ್ ಮೊನೊ-ಶಾಕ್ ಸೆಟಪ್ ಅನ್ನು ಅಳವಡಿಸಿದೆ.

ಅನಾವರಣವಾಯ್ತು ಹೊಸ ಕವಾಸಕಿ ಝಡ್1000 ಬೈಕ್

ಕವಾಸಕಿಝಡ್1000 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಉತ್ತಮ ಲೀಟರ್-ಕ್ಲಾಸ್ ಪ್ರೀಮಿಯಂ ಬೈಕುಗಳಲ್ಲಿ ಒಂದಾಗಿದೆ. ಈ ಹೊಸ 2021ರ ಕವಾಸಕಿ ಝಡ್1000 ಬೈಕನ್ನು ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಾರೆ ಎಂದು ನಿರೀಕ್ಷಿಸುತ್ತೇವೆ.

Article Published On: Monday, August 3, 2020, 16:01 [IST]
English summary
2021 Kawasaki Z1000 Unveiled: Could Arrive In India Later This Year. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+