ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ರಾಯಲ್ ಎನ್‍ಫೀಲ್ಡ್ 650ಸಿಸಿ ಕ್ರೂಸರ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‍ಫೀಲ್ಡ್ ತನ್ನ ಹೊಸ 650ಸಿಸಿ ಕ್ರೂಸರ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈ ಹೊಸ ರಾಯಲ್ ಎನ್‍ಫೀಲ್ಡ್ 650ಸಿಸಿ ಕ್ರೂಸರ್ ಬೈಕ್ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ರಾಯಲ್ ಎನ್‍ಫೀಲ್ಡ್ 650ಸಿಸಿ ಕ್ರೂಸರ್

ರಾಯಲ್ ಎನ್‌ಫೀಲ್ಡ್ ಕಂಪನಿಯು ಬೊಬರ್ ಶೈಲಿಯ 650ಸಿಸಿ ಕ್ರೂಸರ್ ಬೈಕನ್ನು ಅಭಿವೃದ್ದಿ ಪಡಿಸುತ್ತಿದೆ. ಇಐಸಿಎಂಎ 2018ರಲ್ಲಿ ಪ್ರದರ್ಶಿಸಲಾದ ಕೆಎಕ್ಸ್ ಬಾಬರ್ ಕಾನ್ಸೆಪ್ಟ್ ಅನ್ನು ಆಧರಿಸಿ ಈ ಬೈಕನ್ನು ತಯಾರಿಸಲಾಗುತ್ತಿದೆ ಎಂದು ವರದಿಗಳಾಗಿದೆ. ತಮಿಳುನಾಡಿನ ಚೆನ್ನೈನ ರಾಯಲ್ ಎನ್‌ಫೀಲ್ಡ್ ಉತ್ಪಾದನಾ ಘಟಕದಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಪೆರುಂಗಲತೂರ್‌ನಿಂದ ತಂಬರಂ ಹೆದ್ದಾರಿಯಲ್ಲಿ ಹೊಸ 650ಸಿಸಿ ಕ್ರೂಸರ್ ಬೈಕ್ ಸ್ಪಾಟ್ ಟೆಸ್ಟ್ ನಡೆಸಿದೆ. ಈ ಹೊಸ ಬೈಕ್ ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರಗಳನ್ನು ರಶ್ಲೇನ್ ಬಹಿರಂಗಪಡಿಸಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ರಾಯಲ್ ಎನ್‍ಫೀಲ್ಡ್ 650ಸಿಸಿ ಕ್ರೂಸರ್

ಸ್ಪೈ ಚಿತ್ರಗಳಲ್ಲಿ ಈ ಹೊಸ ಬೈಕಿನಲ್ಲಿ (ಯುಎಸ್ಡಿ) ಅಪ್-ಸೈಡ್-ಡೌನ್ ಫ್ರಂಟ್ ಫೋರ್ಕ್, ಎರಡೂ ಬದಿಯಲ್ಲಿ ಇರಿಸಲಾದ ಟ್ವಿನ್ ಕ್ರೋಮ್ ಎಕ್ಸಾಸ್ಟ್, ಒಂದೇ ಪಾಡ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಅದರ ಪಕ್ಕದಲ್ಲಿ ಸಣ್ಣ ಕನ್ಸೋಲ್ ಅನ್ನು ಇರಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ರಾಯಲ್ ಎನ್‍ಫೀಲ್ಡ್ 650ಸಿಸಿ ಕ್ರೂಸರ್

ಈ ಕ್ರೂಸರ್ ಮಾದರಿಯಲ್ಲಿ ಫೈನಲ್ ಡ್ರೈವ್ ರೈಲ್ ಸಿಸ್ಟಂ ಬಗ್ಗೆ ಗೊಂದಲವೂ ಇತ್ತು. ಇದು ಹಾರ್ಲೆ-ಡೇವಿಡ್ಸನ್ ಬೈಕುಗಳಲ್ಲಿ ಕಂಡುಬರುವಂತೆ ಬೆಲ್ಟ್ ಡ್ರೈವ್ ಅನ್ನು ಹೊಂದಿರಬಹುದು ಎಂದು ಕೂಡ ಕೆಲವು ಊಹಪೋಹಗಳಿತ್ತು . ಆದರೆ ಹೊಸ ರಾಯಲ್ ಎನ್‌ಫೀಲ್ಡ್ ಕ್ರೂಸರ್ ಬೈಕಿನಲ್ಲಿ ಚೈನ್ ಡ್ರೈವ್ ಅನ್ನು ಬಳಸುತ್ತದೆ ಎಂದು ವೀಡಿಯೋದಲ್ಲಿ ಬಹಿರಂಗವಾಗಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ರಾಯಲ್ ಎನ್‍ಫೀಲ್ಡ್ 650ಸಿಸಿ ಕ್ರೂಸರ್

ಈ ಹೊಸ ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಉದ್ದವಾದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಜೊತೆಗೆ ಎರಡು ಕಡೆಗಳಲ್ಲಿ ಫೆಂಡರ್‌ಗಳು, ದುಂಡಗಿನ ಆಕಾರದ ಹೆಡ್‌ಲೈಟ್, ಟೈಲ್ ಲೈಟ್‌ಗಳು ಮತ್ತು ಟರ್ನ್-ಸಿಗ್ನಲ್ ಇಂಡಿಕೇಟರ್ ಅನ್ನು ಹೊಂದಿದೆ. ಇನ್ನು ಬೈಕಿನಲ್ಲಿ ರೈಡರ್ ಮತ್ತು ಪಿಲಿಯನ್ ಗಾಗಿ ಸ್ಪ್ಲಿಟ್-ಸೀಟ್‌ಗಳನ್ನು ಅಳವಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ರಾಯಲ್ ಎನ್‍ಫೀಲ್ಡ್ 650ಸಿಸಿ ಕ್ರೂಸರ್

ಹೊಸ ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಯುಎಸ್ಡಿ ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಟ್ವಿನ್-ಶಾಕ್ ಸೆಟಪ್ ಅನ್ನು ಅಳವಡಿಸಿದೆ. ಯುಎಸ್ಡಿ ಫೋರ್ಕ್ ಸೆಟಪ್ ತನ್ನ ಬೈಕುಗಳಲ್ಲಿ ಬ್ರಾಂಡ್ನ ಮೊದಲ ಅನುಷ್ಠಾನವಾಗಲಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ರಾಯಲ್ ಎನ್‍ಫೀಲ್ಡ್ 650ಸಿಸಿ ಕ್ರೂಸರ್

ಇನ್ನು ಮುಂಬರುವ ಕ್ರೂಸರ್ ಮಾದರಿಯ ಎರಡು ಕಡೆಯಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಬಹುದು. ಇದು ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿ‍ಟಿ 650 ಬೈಕುಗಳಲ್ಲಿ ಕಂಡುಬರುವಂತೆಯೇ ಇರುತ್ತದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗುತ್ತದೆ. ಇನ್ನು ಈ ಬೈಕಿನಲ್ಲಿ ಅಲಾಯ್ ವ್ಹೀಲ್ ಮತ್ತು ಹಿಂಭಾಗದಲ್ಲಿ ಫ್ಯಾಟ್ ಸೆಕ್ಷನ್ ಟಯರ್ ಅನ್ನು ಒಳಗೊಂಡಿರುತ್ತದೆ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ರಾಯಲ್ ಎನ್‍ಫೀಲ್ಡ್ 650ಸಿಸಿ ಕ್ರೂಸರ್

ಇನ್ನು 650 ಟ್ವಿನ್ ಬೈಕುಗಳಲ್ಲಿ 649 ಸಿಸಿ ಏರ್ ಮತ್ತು ಆಯಿಲ್-ಕೂಲ್ಡ್, ಪ್ಯಾರೆಲಲ್-ಟ್ವಿನ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 47 ಬಿಹೆಚ್‌ಪಿ ಪವರ್ ಮತ್ತು 52 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇನ್ನು ಹೊಸ ಕ್ರೂಸರ್ ಮಾದರಿಯಲ್ಲಿ ಇದೇ ಎಂಜಿನ್ ಅನ್ನು ಅಳವಡಿಸಬಹುದು.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಹೊಸ ರಾಯಲ್ ಎನ್‍ಫೀಲ್ಡ್ 650ಸಿಸಿ ಕ್ರೂಸರ್

ಹೊಸ ಕ್ರೂಸರ್ ರಾಯಲ್ ಎನ್‍ಫೀಲ್ಡ್ ಬ್ರಾಂಡ್‌ನ ಹೊಸ ಮಾದರಿಯಾಗಿದೆ. ಈ ಹೊಸ ರಾಯಲ್ ಎನ್‍ಫೀಲ್ಡ್ 650 ಕ್ರೂಸರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹಾರ್ಲೆ-ಡೇವಿಡ್ಸನ್ ಸ್ಟ್ರೀಟ್ 750 ಮತ್ತು ಕವಾಸಕಿ ವಲ್ಕನ್ ಎಸ್ ಬೈಕುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Royal Enfield 650cc Cruiser Spotted Testing In Chennai. Read In kannada.
Story first published: Monday, August 31, 2020, 12:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X