ಬಿಎಸ್-6 ಟ್ವಿನ್ ಬೈಕುಗಳ ವಿತರಣೆ ಆರಂಭಿಸಿದ ರಾಯಲ್ ಎನ್‍ಫೀಲ್ಡ್

ಚೆನ್ನೈ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‍ಫೀಲ್ಡ್ ತನ್ನ ಜನಪ್ರಿಯ ಮಾದರಿಗಳಾದ ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿ‍ಟಿ 650 ಬೈಕುಗಳನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದೀಗ ರಾಯಲ್ ಎನ್‍‍ಫೀಲ್ಡ್ ಕಂಪನಿಯು ಈ ಟ್ವಿನ್ ಬೈಕುಗಳ ವಿತರಣೆಯನ್ನು ಪ್ರಾರಂಭಿಸಿದೆ.

ಬಿಎಸ್-6 ಟ್ವಿನ್ ಬೈಕುಗಳ ವಿತರಣೆ ಆರಂಭಿಸಿದ ರಾಯಲ್ ಎನ್‍ಫೀಲ್ಡ್

ರಾಯಲ್ ಎನ್‍ಫೀಲ್ಡ್ ಕಂಪನಿಯು ಟ್ವಿನ್ ಬೈಕ್‍ಗಳ ಹಿಂದಿನ ಮಾದರಿಗಿಂತ ಹೊಸ ಬೈಕ್ ಮಾದರಿಗಳಿಗೆ ರೂ.10 ಸಾವಿರದವರೆಗೆ ಹೆಚ್ಚಿಸಿದೆ. ರಾಯಲ್ ಎ‍ನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.65 ಲಕ್ಷಗಳಾಗಿದೆ. ಇನ್ನೂ ಕಾಂಟಿನೆಂಟಲ್ ಜಿ‍ಟಿ 650 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.80 ಲಕ್ಷಗಳಾಗಿದೆ. ಈ ಬೈಕ್‍‍ಗಳಿಗಾಗಿ ರೂ.10 ಸಾವಿರ ಪಾವತಿಸಿ ಬುಕ್ಕಿಂಗ್ ಮಾಡಬಹುದಾಗಿದೆ.

ಬಿಎಸ್-6 ಟ್ವಿನ್ ಬೈಕುಗಳ ವಿತರಣೆ ಆರಂಭಿಸಿದ ರಾಯಲ್ ಎನ್‍ಫೀಲ್ಡ್

ಹೊಸ ಬಿಎಸ್-6, 650 ಟ್ವಿನ್ ಬೈಕ್‍‍ಗಳಲ್ಲಿ ಕಾಸ್ಮೆಟಿಕ್ ನವೀಕರಣಗಳನ್ನು ಮಾಡಿಲ್ಲವಾದರೂ, ರಾಯಲ್ ಎನ್‍‍ಫೀಲ್ಡ್ ಮಾಲೀಕರಿಗೆ ಬೇಕಾದರೆ ಡೀಲರ್‍‍‍ಗಳು ಮಾರ್ಪಾಡು ಮಾಡಿ ಕೊಡುತ್ತಾರೆಂಬ ನಿರೀಕ್ಷೆಗಳಿವೆ.

ಬಿಎಸ್-6 ಟ್ವಿನ್ ಬೈಕುಗಳ ವಿತರಣೆ ಆರಂಭಿಸಿದ ರಾಯಲ್ ಎನ್‍ಫೀಲ್ಡ್

ಈ ಬೈಕಿನ ಇಂಜಿನ್ ಸಾಮರ್ಥ್ಯ ಮತ್ತು ಹಲವಾರು ವೈಶಿಷ್ಟ್ಯಗಳಿಂದ ಕೂಡಿರುವ ಕಾರಣ ದೇಶಿಯ ಮಾರುಕಟ್ಟೆ ಗ್ರಾಹಕರು ಈ ಬೈಕ್‍‍ಗೆ ಫಿದಾ ಆದರು. ಎರಡೂ ಬೈ‍ಕ್‍‍ಗಳು ಪ್ಯಾರೆಲೆಲ್ ಟ್ವಿನ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿವೆ.

ಬಿಎಸ್-6 ಟ್ವಿನ್ ಬೈಕುಗಳ ವಿತರಣೆ ಆರಂಭಿಸಿದ ರಾಯಲ್ ಎನ್‍ಫೀಲ್ಡ್

ಇಂಟರ್‍‍ಸೆಪ್ಟೆರ್ 650 ಮತ್ತು ಕಾಂಟಿ‍ನೆಂಟಲ್ ಜಿಟಿ 650 ಎಂಬ ಎರಡು ಟ್ವಿನ್ ಬೈಕ್‍‍ಗಳು 649 ಸಿಸಿ ಏರ್/ಆಯಿಲ್ -ಕೂಲ್ಡ್ ಪ್ಯಾರೆಲೆಲ್-ಟ್ವಿನ್ ಎಂಜಿನ್ ಅನ್ನು ಹೊಂದಿವೆ. ಈ ಎಂಜಿನ್ 47 ಬಿ‍ಹೆಚ್‍ಪಿ ಪವರ್ ಮತ್ತು 52 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಎಸ್-6 ಟ್ವಿನ್ ಬೈಕುಗಳ ವಿತರಣೆ ಆರಂಭಿಸಿದ ರಾಯಲ್ ಎನ್‍ಫೀಲ್ಡ್

ಎಂಜಿನ್‍‍ನೊಂದಿಗೆ ಸ್ಟ್ಯಾಂಡರ್ಡ್ ಅಸಿಸ್ಟ್ ಕ್ಲಚ್‍‍‍ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಬೈಕ್ ಸವಾರರ ಸುರಕ್ಷತೆಗಾಗಿ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍‍ಗಳಲ್ಲಿ ಮೂಂಭಾಗದಲ್ಲಿ 320ಎಂಎಂ ಮತ್ತು ಹಿಂಭಾಗದಲ್ಲಿ 240ಎಂಎಂನ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದ್ದು, ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿವೆ.

ಬಿಎಸ್-6 ಟ್ವಿನ್ ಬೈಕುಗಳ ವಿತರಣೆ ಆರಂಭಿಸಿದ ರಾಯಲ್ ಎನ್‍ಫೀಲ್ಡ್

ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿ‍ನೆಂಟಲ್ ಜಿಟಿ 650 ಬೈಕುಗಳ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ಕ್ರಮವಾಗಿ ರೂ.2.51 ಲಕ್ಷ ಮತ್ತು ರೂ.2.93 ಲಕ್ಷಗಳಾಗಿವೆ. ಈ ಎರಡೂ ಬೈಕ್‍ಗಳು ಆಧುನಿಕ ಕ್ಲಾಸಿಕ್ ಲುಕ್ ಅನ್ನು ಹೊಂದಿವೆ.

ಬಿಎಸ್-6 ಟ್ವಿನ್ ಬೈಕುಗಳ ವಿತರಣೆ ಆರಂಭಿಸಿದ ರಾಯಲ್ ಎನ್‍ಫೀಲ್ಡ್

ಕಳೆದ ಬಾರಿ ರಾಯಲ್ ಎನ್‍‍ಫೀಲ್ಡ್ 650 ಸಿಸಿ ಬೈಕ್‍‍ಗಳಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಲಾಗಿತ್ತು. ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಟಲ್ ಜಿಟಿ 650 ಬೈಕ್‍‍ಗಳ ಹೆಡ್‍‍ಲೈ‍ಟ್‍‍ಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿತ್ತು.

ಬಿಎಸ್-6 ಟ್ವಿನ್ ಬೈಕುಗಳ ವಿತರಣೆ ಆರಂಭಿಸಿದ ರಾಯಲ್ ಎನ್‍ಫೀಲ್ಡ್

ಕಾಂಟಿನೆಂಟಲ್ ಜಿಟಿ 650 ಕೆಫೆ ರೇಸರ್ ವಿನ್ಯಾಸವನ್ನು ಆಧರಿಸಿದರೆ ಇನ್ನು ಇಂಟರ್‍‍ಸೆಪ್ಟರ್ 650 ಸ್ಕ್ರ್ಯಾಂಬ್ಲರ್ ಶೈಲಿಯ ವಿನ್ಯಾಸವನ್ನು ಆಧರಿಸಿದೆ. ಎರಡು ಬೈಕ್‍ಗಳು 41ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ 110ಎಂಎಂ ಟ್ವಿನ್ ಕಾಯಿಲ್-ಕವರ್, 650 ಟ್ವಿನ್ ಬೈಕ್‍ಗಳು 18 ಇಂಚಿನ 360 ಸ್ಪೋಕ್ ಅಲ್ಯುಮಿನಿಯಂ ಅಲಾಯ್ ವ್ಹೀಲ್‍‍ಗಳನ್ನು ಹೊಂದಿವೆ.

Most Read Articles

Kannada
English summary
Royal Enfield 650 Twins BS6 deliveries start – Prices up by Rs 10k. Read in Kannada
Story first published: Friday, January 31, 2020, 15:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X