ಬಿಡುಗಡೆಯ ಸನಿಹದಲ್ಲಿ ಆರ್‌ಇ ಮೆಟಿಯೋರ್ 350 ಬೈಕ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‍ಫೀಲ್ಡ್ ತನ್ನ ಮೆಟಿಯೋರ್ 350 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ರಾಯಲ್ ಎನ್‌ಫೀಲ್ಡ್ ಮೆಟಿಯೋರ್ 350 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಬೈಕುಗಳಲ್ಲಿ ಒಂದಾಗಿದೆ.

ಬಿಡುಗಡೆಯ ಸನಿಹದಲ್ಲಿರುವ ಆರ್‌ಇ ಮೆಟಿಯೋರ್ 350 ಬೈಕ್

ಯೂಟ್ಯೂಬ್ ಚಾನೆಲ್ ಬುಲೆಟ್ ಗುರು ರಾಯಲ್ ಎನ್‌ಫೀಲ್ಡ್ ಮೆಟಿಯೋರ್ 350 ಬೈಕಿನ ಹಲವು ಮಾಹಿತಿಗಳನ್ನು ಬಹಿರಂಗಪಡಿಸಿದೆ. ಇದರ ಪ್ರಕಾರ ಹೊಸ ರಾಯಲ್ ಎನ್‌ಫೀಲ್ಡ್ ಮೆಟಿಯೋರ್ 350 ಬೈಕ್ 2140 ಎಂಎಂ ಉದ್ದ, 1140 ಎಂಎಂ ಎತ್ತರ, ಸೀಟ್ ಎತ್ತರ 765 ಎಂಎಂ, ಗ್ರೌಂಡ್ ಕ್ಲಿಯರೆನ್ಸ್ 170 ಎಂಎಂ ಮತ್ತು ವ್ಹೀಲ್ ಬೇಸ್ 1400 ಎಂಎಂ ಆಗಿದೆ. ಈ ಬೈಕಿಗೆ 3 ವರ್ಷಗಳ ವಾರಂಟಿಯನ್ನು ನೀಡಿದ್ದಾರೆ.

ಬಿಡುಗಡೆಯ ಸನಿಹದಲ್ಲಿರುವ ಆರ್‌ಇ ಮೆಟಿಯೋರ್ 350 ಬೈಕ್

ರಾಯಲ್ ಎನ್‌ಫೀಲ್ಡ್ ಮೆಟಿಯೋರ್ 350 ಬೈಕ್ ದುಂಡಗಿನ ಆಕಾರದ ಹ್ಯಾಲೊಜೆನ್ ಹೆಡ್‌ಲ್ಯಾಂಪ್ ಅನ್ನು ಹೊಂದಿರುತ್ತದೆ. ನಿರೀಕ್ಷೆಯಂತೆ ಪೂರ್ಣ ಎಲ್ಇಡಿ ಯುನಿಟ್ ಅಲ್ಲ, ಆದರೆ ಹೆಡ್‌ಲ್ಯಾಂಪ್‌ನ ಸುತ್ತ ಎಲ್ಇಡಿ ರಿಂಗ್ ಹೊಂದಿರುತ್ತದೆ.

ಬಿಡುಗಡೆಯ ಸನಿಹದಲ್ಲಿರುವ ಆರ್‌ಇ ಮೆಟಿಯೋರ್ 350 ಬೈಕ್

ಹೊಸ ರಾಯಲ್ ಎನ್‍ಫೀಲ್ಡ್ ಮೆಟಿಯೋರ್ 350 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.65 ಲಕ್ಷಗಳಾಗಿರಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಬೈಕ್ ಫೈರ್‌ಬಾಲ್, ಸ್ಟೆಲ್ಲಾರ್ ಮತ್ತು ಸೂಪರ್‌ನೊವಾ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ.

ಬಿಡುಗಡೆಯ ಸನಿಹದಲ್ಲಿರುವ ಆರ್‌ಇ ಮೆಟಿಯೋರ್ 350 ಬೈಕ್

ಇದರಲ್ಲಿ ಫೈರ್‌ಬಾಲ್ ರೂಪಾಂತರವು ಬ್ಲ್ಯಾಕ್ ಔಟ್ ಕಾಂಪೊನೆಟ್ಸ್, ಸಿಂಗಲ್ ಬಣ್ಣದ ಗ್ರಾಫಿಕ್ಸ್ ನೊಂದಿಗೆ ಫ್ಯೂಯಲ್ ಟ್ಯಾಂಕ್, ಬ್ಲ್ಯಾಕ್ ಎಂಜಿನ್ ಮತ್ತು ಬಣ್ಣದ ರಿಮ್ ಟೇಪ್ ಅನ್ನು ಹೊಂದಿದೆ. ಸ್ಟೆಲ್ಲಾರ್ ರೂಪಾಂತರದಲ್ಲಿ ಬ್ಯಾಡ್ಜ್‌ಗಳು, ಕ್ರೋಮ್ ಎಕ್ಸಾಸ್ಟ್, ಕ್ರೋಮ್ ಹ್ಯಾಂಡಲ್‌ಬಾರ್ ಮತ್ತು ಕ್ರೋಮ್ ಇಎಫ್‌ಐ ಕವರ್ ಅನ್ನು ಪಡೆಯುತ್ತದೆ. ಇದು ಬ್ಯಾಕ್ ರೆಸ್ಟ್ ಸಹ ಒಳಗೂಂಡಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಬಿಡುಗಡೆಯ ಸನಿಹದಲ್ಲಿರುವ ಆರ್‌ಇ ಮೆಟಿಯೋರ್ 350 ಬೈಕ್

ಇನ್ನು ಸೂಪರ್‌ನೊವಾ ಎಂಬ ರೂಪಾಂತರವು ಡ್ಯುಯಲ್-ಟೋನ್ ಬಣ್ಣದ ಆಯ್ಕೆಯನ್ನು ಹೊಂದಿದ್ದು, ಇದು ಪ್ರೀಮಿಯಂ ಸೀಟ್ ಫಿನಿಶಿಂಗ್, ವಿಂಡ್‌ಸ್ಕ್ರೀನ್ ಮತ್ತು ಕ್ರೋಮ್ ಇಂಡಿಕೇಟರ್ ಸಹ ಹೊಂದಿದೆ.

ಬಿಡುಗಡೆಯ ಸನಿಹದಲ್ಲಿರುವ ಆರ್‌ಇ ಮೆಟಿಯೋರ್ 350 ಬೈಕ್

ಹೊಸ ರಾಯಲ್ ಎನ್‌ಫೀಲ್ಡ್ ಮೆಟಿಯೋರ್ 350 ಬೈಕ್, ಫೈರ್‌ಬಾಲ್ ಯೆಲ್ಲೋ, ಫೈರ್‌ಬಾಲ್ ರೆಡ್, ಸ್ಟೆಲ್ಲಾರ್ ರೆಡ್ ಮೆಟಾಲಿಕ್, ಸ್ಟೆಲ್ಲಾರ್ ಬ್ಲ್ಯಾಕ್ ಮ್ಯಾಟ್, ಸ್ಟೆಲ್ಲಾರ್ ಬ್ಲೂ ಮೆಟಾಲಿಕ್, ಸೂಪರ್‌ನೊವಾ ಬ್ರೌನ್ ಬ್ರೌನ್ ಡ್ಯುಯಲ್-ಟೋನ್ ಮತ್ತು ಸೂಪರ್‌ನೊವಾ ಬ್ಲೂ ಡ್ಯುಯಲ್-ಟೋನ್ ಎಂಬ ಏಳು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಬಿಡುಗಡೆಯ ಸನಿಹದಲ್ಲಿರುವ ಆರ್‌ಇ ಮೆಟಿಯೋರ್ 350 ಬೈಕ್

ಈ ಹೊಸ ರಾಯಲ್ ಎನ್‍ಫೀಲ್ಡ್ ಮೆಟಿಯೋರ್ 350 ಬೈಕ್ ಭಾರತದಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಈ ಬೈಕಿನಲ್ಲಿ ಎರಡು ಡಿಸ್‌ಪ್ಲೇಯನ್ನು ಹೊಂದಿರುವ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿರುವುದು ಬಹಿರಂಗವಾಗಿದೆ. ಇದರಲ್ಲಿ ಟ್ರಿಪ್ಪರ್ ನ್ಯಾವಿಗೇಷನ್ ಸಿಸ್ಟಂ ಅನ್ನು ಕೂಡ ಹೊಂದಿರಲಿದೆ.

ಬಿಡುಗಡೆಯ ಸನಿಹದಲ್ಲಿರುವ ಆರ್‌ಇ ಮೆಟಿಯೋರ್ 350 ಬೈಕ್

ಇದರಲ್ಲಿ ಕ್ಲಾಕ್, ಫ್ಯೂಯಲ್ ಗೇಜ್, ಓಡೋಮೀಟರ್ ಮತ್ತು ಟ್ರಿಪ್ ಮೀಟರ್‌ನಂತಹ ಮಾಹಿತಿಯನ್ನು ಪ್ರದರ್ಶಿಸಿದರೆ, ಮತ್ತೊಂದು ಟಿಎಫ್‌ಟಿ ಯುನಿಟ್ ನಲ್ಲಿ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಮಾಹಿತಿಯನ್ನು ನೀಡುತ್ತದೆ. ಈ ಡಿಜಿಟಲ್ ಕ್ಲಸ್ಟರ್ ಅನ್ನು ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಬಹುದಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಈ ಬೈಕಿನಲ್ಲಿ 346 ಸಿಸಿ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಫ್ರಿ ಕ್ಯಾಟಲಿಕ್ ಕರ್ನವಾಟರ್ ಅನ್ನು ಎಕ್ಸಾಸ್ಟ್ ಸಿಸ್ಟಂನೊಂದಿಗೆ ಜೋಡಿಸಲಾಗಿದೆ. ಈ ಎಂಜಿನ್ ಉತ್ತಮ ಇಂಧನ ಧಕ್ಷತೆಯನು ಹೊಂದಿದೆ.

ಬಿಡುಗಡೆಯ ಸನಿಹದಲ್ಲಿರುವ ಆರ್‌ಇ ಮೆಟಿಯೋರ್ 350 ಬೈಕ್

ಬಿಎಸ್ 6 ಕ್ಲಾಸಿಕ್ 350 ಎಂಜಿನ್ಗೆ ಹೋಲಿಸಿದರೆ ಸುಮಾರು 0.4 ಬಿಹೆಚ್‌ಪಿ ಪವರ್ ಹೆಚ್ಚಾದರೆ, 1 ಎನ್‌ಎಂ ಟಾರ್ಕ್ ಕಡಿಮೆಯಾಗಿದೆ. ಎಂಜಿನ್‌ನಂತೆಯೇ, ಕ್ಲಚ್ ಮತ್ತು ಗೇರ್ ಬಾಕ್ಸ್ ಸಿಸ್ಟಂ ಅನ್ನು ಸಹ ಹೊಸದಾಗಿ ಅಭಿವೃದ್ಧಿಪಡಿಸಲಾಗಿದೆ.

ಬಿಡುಗಡೆಯ ಸನಿಹದಲ್ಲಿರುವ ಆರ್‌ಇ ಮೆಟಿಯೋರ್ 350 ಬೈಕ್

ರಾಯಲ್ ಎನ್‌ಫೀಲ್ಡ್ ಮೆಟಿಯೋರ್ 350 ಬೈಕ್ ಥಂಡರ್‌ಬರ್ಡ್ ಎಕ್ಸ್ 350 ಮಾದರಿಯ ರೆಟ್ರೂ-ಅರ್ಬನ್ ಕ್ರೂಸರ್ ವಿನ್ಯಾಸವನ್ನು ಹೊಂದಿದೆ. ಈ ಹೊಸ ರಾಯಲ್ ಎನ್‍ಫೀಲ್ಡ್ ಮೆಟಿಯೋರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Article Published On: Friday, September 18, 2020, 12:12 [IST]
English summary
RE Meteor 350 Dimensions Leak – Ground Clearance, Warranty, Accessories. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+