ಬಿಡುಗಡೆಯಾಗಲಿದೆ 2020ರ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕ್

ಟ್ರಯಂಫ್ ಕಂಪನಿಯು ತನ್ನ ದುಬಾರಿ 2020ರ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಟ್ರಯಂಫ್ ಕಂಪನಿಯು ಇದೇ ತಿಂಗಳ 25ರಂದು ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ.

ಬಿಡುಗಡೆಯಾಗಲಿದೆ 2020ರ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕ್

ಹೊಸ ಮಿಡ್ ಸರಣಿಯ ಈ ಸ್ಪೋರ್ಟ್ಸ್ ಬೈಕ್ ರಿವೈಸ್ ಮಾಡಲಾದ ಡಿಸೈನ್ ಆಕ್ಸೆಸರೀಸ್, ಆಫ್ ರ್‍ಯಾಕ್ ಟೆಕ್ನಾಲಜಿ ಹಾಗೂ ಮಿಡ್ ಸರಣಿಯ ಬಿ‍ಎಸ್ 6 ಎಂಜಿನ್‍ ಅನ್ನು ಹೊಂದಿದೆ. ಟ್ರಯಂಫ್ ಆರ್‍ಎಸ್ ಬೈಕ್, ರಾಕೆಟ್ 3 ಬೈಕಿನ ನಂತರ ಟ್ರಯಂಫ್ ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸುತ್ತಿರುವ ಎರಡನೇ ಬೈಕ್ ಆಗಿದೆ. ಟ್ರಯಂಫ್ ಕಂಪನಿಯ ಐಷಾರಾಮಿ ಬೈಕುಗಳಲ್ಲಿ ಹೊಸ ಸ್ಟ್ರೀಟ್ ಟ್ರಿಪಲ್ ಆರ್ಎಸ್ ಕೂಡ ಒಂದಾಗಿದೆ.

ಬಿಡುಗಡೆಯಾಗಲಿದೆ 2020ರ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕ್

ಮಾರುಕಟ್ಟೆಯಲ್ಲಿರುವ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‍‍ಎಸ್ ಬೈಕಿನ ಬೆಲೆಯು ರೂ.11.13 ಲಕ್ಷಗಳಾಗಿದೆ. ಬಿ‍ಎಸ್ 6 ಎಂಜಿನ್ ಹೊಂದಿರುವ ಹೊಸ ಬೈಕ್, ಮಾರುಕಟ್ಟೆಯಲ್ಲಿರುವ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕಿಗಿಂತ ಹೆಚ್ಚು ರಗಡ್ ಲುಕ್ ಅನ್ನು ಹೊಂದಿದೆ.

ಬಿಡುಗಡೆಯಾಗಲಿದೆ 2020ರ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕ್

2020ರ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕ್, ಇಂಟಿಗ್ರೇಟೆಡ್ ಟ್ವಿನ್ ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್ ಹಾಗೂ ಇಂಟಿಗ್ರೇಟೆಡ್ ಡಿ‍ಆರ್‍ಎಲ್‍‍ಗಳನ್ನು ಹೊಂದಿದೆ. ಟ್ರಯಂಫ್ ಕಂಪನಿಯು ಈ ಬೈಕಿನ ಬಾಡಿ ಪ್ಯಾನೆಲ್, ರೇರ್ ಸೀಟ್‍‍ಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ.

ಬಿಡುಗಡೆಯಾಗಲಿದೆ 2020ರ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕ್

ಈ ಬದಲಾವಣೆಗಳಿಂದ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕ್ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಟ್ರಯಂಫ್ ಕಂಪನಿಯು ಈ ಬೈಕಿನ ಟಿ‍ಎಫ್‍‍ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍ನಲ್ಲಿ ಹೊಸ ಗ್ರಾಫಿಕ್ಸ್ ಗಳನ್ನು ಅಳವಡಿಸಲಿದೆ.

ಬಿಡುಗಡೆಯಾಗಲಿದೆ 2020ರ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕ್

ಈ ಹೊಸ ಬೈಕಿನಲ್ಲಿ ಬ್ಲೂಟೂಥ್ ಸೇರಿದಂತೆ ಹಲವಾರು ಫೀಚರ್‍‍ಗಳಿರಲಿವೆ. ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕಿನಲ್ಲಿ 765 ಸಿಸಿಯ ಇನ್‍‍ಲೈನ್ ಎಂಜಿನ್ ಅಳವಡಿಸಲಾಗಿದೆ.

ಬಿಡುಗಡೆಯಾಗಲಿದೆ 2020ರ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕ್

ಈ ಎಂಜಿನ್ ಅನ್ನು ಟ್ರಯಂಫ್ ಕಂಪನಿಯ ಮೋಟೊ 2 ಎಂಜಿನ್ ಅಪ್‍‍ಗ್ರೇಡ್ ಮಾಡುತ್ತಿರುವ ತಂಡವು ತಯಾರಿಸಿದೆ. ಈ ಬೈಕ್ ಹೊಸದಾದ ಎಕ್ಸಾಸ್ಟ್ ಸಿಸ್ಟಂ ಅನ್ನು ಹೊಂದಿದೆ.

ಬಿಡುಗಡೆಯಾಗಲಿದೆ 2020ರ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕ್

ಈ ಬೈಕಿನಲ್ಲಿರುವ ಎಂಜಿನ್ 123 ಬಿ‍ಹೆಚ್‍‍ಪಿ ಪವರ್ ಹಾಗೂ 79 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಟ್ರಯಂಫ್ ಎಂಜಿನಿಯರ್‍‍ಗಳು ಈ ಬೈಕಿನಲ್ಲಿರುವ ರಿಸೆಷನ್ ಸೈಕಲ್ ಅನ್ನು 7%ನಷ್ಟು ಕಡಿಮೆಗೊಳಿಸಿದ್ದಾರೆ

ಬಿಡುಗಡೆಯಾಗಲಿದೆ 2020ರ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕ್

ಇದರಿಂದಾಗಿ ಬೈಕ್ ಸವಾರನು ಲೊ ಹಾಗೂ ಮಿಡ್ ಎಂಬ ಎರಡು ವಿಧದ ಸೈಲೆನ್ಸರ್ ಸೌಂಡ್ ಅನ್ನು ಪಡೆಯಬಹುದು. ಮಾರುಕಟ್ಟೆಯಲ್ಲಿರುವ ಬಿಎಸ್ 4 ಬೈಕಿನಲ್ಲಿ ಅಪ್‍‍ಶಿಫ್ಟ್ ಇದ್ದರೆ, ಹೊಸ ಬೈಕಿನಲ್ಲಿ ಅಪ್ ಅಂಡ್ ಡೌನ್ ಕ್ವಿಕ್ ಶಿಫ್ಟರ್ ಅನ್ನು ಅಳವಡಿಸಲಾಗಿದೆ. ಈ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಬೈಕ್‍ಗಳಲ್ಲಿ ಒಂದಾಗಿದೆ.

Most Read Articles

Kannada
English summary
Triumph Street Triple RS 2020 India Launch On March 25. Read in Kannada.
Story first published: Friday, March 20, 2020, 11:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X