ಎಕ್ಸ್‌ಎಲ್ 100 ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದ ಟಿವಿಎಸ್

ಟಿವಿಎಸ್ ಮೋಟಾರ್ ಕಂಪನಿ ತನ್ನ ಬಿಎಸ್-6 ಎಕ್ಸ್‌ಎಲ್ 100 ಮೊಪೆಡ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದೀಗ ಟಿವಿಎಸ್ ಕಂಪನಿಯು ಬಿಎಸ್-6 ಎಕ್ಸ್‌ಎಲ್ 100 ಖರೀದಿಸುವ ಗ್ರಾಹಕರಿಗೆ ವಿಶೇಷ ಆಫರ್ ಅನ್ನು ಘೋಷಿಸಿದೆ.

ಎಕ್ಸ್‌ಎಲ್ 100 ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದ ಟಿವಿಎಸ್

ಹೊಸ ಖರೀದಿದಾರರನ್ನು ಆಕರ್ಷಿಸಲು ಕಂಪನಿಯು ಆರು ತಿಂಗಳ ಇಎಂಐ ಆಫರ್ ಅನ್ನು ನೀಡಿದೆ. ಗ್ರಾಹಕರು ಬಿಎಸ್-6 ಎಕ್ಸ್‌ಎಲ್ 100 ಮೊಪೆಡ್ ಅನ್ನು ಖರೀದಿಸಿದರೆ ಆರು ತಿಂಗಳು ಇಎಂಐ ಪಾವತಿಸುವ ಅಗತ್ಯವಿಲ್ಲ. ಆರು ತಿಂಗಳ ನಂತರ ಪಾವತಿಸಬೇಕಾಗುತ್ತದೆ. ಈ ಆಫರ್ ಗಳು ಮುಂದಿನ ತಿಂಗಳು ಜುಲೈ 31ರವರೆಗೆ ಲಭ್ಯವಿರುತ್ತದೆ. ಈ ವಿಶೇಷ ಯೋಜನೆಯ ಸಾಲದ ಮೊತ್ತ ಶೇ.75 ಆಗಿರುತ್ತದೆ.

ಎಕ್ಸ್‌ಎಲ್ 100 ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದ ಟಿವಿಎಸ್

ಬಿಎಸ್-6 ಟಿವಿಎಸ್ ಎಕ್ಸ್‌ಎಲ್ 100 ಮಾದರಿಯನ್ನು ಹೆವಿ ಡ್ಯೂಟಿ ಐ-ಟಚ್‌ಸ್ಟಾರ್ಟ್, ಡ್ಯೂಟಿ ಐ-ಟಚ್‌ಸ್ಟಾರ್ಟ್ ಮತ್ತು ಕಂಫರ್ಟ್ ಐ-ಟಚ್‌ಸ್ಟಾರ್ಟ್ ಎಂಬ ಮೂರು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಲಾಗಿತ್ತು.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಎಕ್ಸ್‌ಎಲ್ 100 ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದ ಟಿವಿಎಸ್

ಹೊಸ ಎಕ್ಸ್‌ಎಲ್ 100 ಮಾದರಿಯಲ್ಲಿ 99.7 ಸಿಸಿ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್‍ನೊಂದಿಗೆ ಫ್ಯೂಯಲ್ ಇಂಜೆಕ್ಷನ್ ಅನ್ನು ಹೊಂದಿದೆ.ಈ ಎಂಜಿನ್‍ 6,000 ಆರ್‌ಪಿಎಂನಲ್ಲಿ 4.4 ಬಿಹೆಚ್‌ಪಿ ಪವರ್ ಮತ್ತು 3,500 ಆರ್‌ಪಿಎಂನಲ್ಲಿ 6.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಎಕ್ಸ್‌ಎಲ್ 100 ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದ ಟಿವಿಎಸ್

ಬಿಎಸ್-4 ಎಂಜಿನ್ ಕೂಡ ಇದೆ ರೀತಿಯ ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುತ್ತದೆ. ವಿಶೇಷವೆಂದರೆ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದರು ಪವರ್ ಮತ್ತು ಟಾರ್ಕ್ ಅಂಕಿ ಅಂಶವು ಕಡಿಮೆಯಾಗಿಲ್ಲ. ಹೊಸ ಎಕ್ಸ್‌ಎಲ್ 100 ಮಾದರಿಯಲ್ಲಿ ಫ್ಯೂಯಲ್ ಇಂಜೆಕ್ಷನ್ ಹೊಂದಿರುವುದರಿಂದ ಇದರ ಮೈಲೇಜ್ ಕೂಡ ಹೆಚ್ಚಿಸುತ್ತದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಎಕ್ಸ್‌ಎಲ್ 100 ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದ ಟಿವಿಎಸ್

ಈ ಮೊಪೆಡ್‍‍ಗಳ ಎರಡೂ ತುದಿಗಳಲ್ಲಿ ಡ್ರಮ್ ಬ್ರೇಕ್‌ಗಳು, ಮೆಂಟೆನೆನ್ಸ್ ಇಲ್ಲದ ಬ್ಯಾಟರಿ, ಅನಲಾಗ್ ಸ್ಪೀಡೋಮೀಟರ್, ಕಿಕ್ ಸ್ಟಾರ್ಟ್ ಹಾಗೂ ಬಲ್ಬ್-ಟೈಪ್ ಟರ್ನ್ ಸಿಗ್ನಲ್ ಇಂಡಿಕೇಟರ್‍‍ಗಳಿವೆ. ಟಿವಿಎಸ್ ಎಕ್ಸ್‌ಎಲ್ 100 ಸರಣಿಯ ಮೊಪೆಡ್‌ಗಳು 4.0 ಲೀಟರಿನ ಫ್ಯೂಯಲ್ ಟ್ಯಾಂಕ್ ಹೊಂದಿವೆ.

ಎಕ್ಸ್‌ಎಲ್ 100 ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದ ಟಿವಿಎಸ್

ಟಿವಿಎಸ್ ಮೋಟಾರ್ ಕಂಪನಿ ತನ್ನ ಟಿವಿಎಸ್ ಎಕ್ಸ್‌ಎಲ್ 100 ಸರಣಿಯ ಮೊಪೆಡ್‌ಗಳಿಗಾಗಿ ರೆಟ್ರೊ-ಫಿಟ್‌ಮೆಂಟ್ ಕಿಟ್ ಅನ್ನು ಕಳೆದ ವರ್ಷ ಬಿಡುಗಡೆಗೊಳಿಸಲಾಗಿತ್ತು. ಈ ರೆಟ್ರೊ ಫಿಟ್‍‍ಮೆಂಟ್ ಕಿಟ್‍‍ನ ಬೆಲೆಯು ರೂ.11,237ಗಳಾಗಿದೆ. ಈ ಕಿಟ್ ಎ‍ಆರ್‍ಎ‍ಐ ಪ್ರಮಾಣಪತ್ರವನ್ನು ಪಡೆದಿದೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಎಕ್ಸ್‌ಎಲ್ 100 ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದ ಟಿವಿಎಸ್

ವಯಸ್ಸಾದವರಿಗಾಗಿ ಹಾಗೂ ವಿಶೇಷ ಚೇತನರು ಸುಲಭವಾಗಿ ಪ್ರಯಾಣಿಸುವಂತೆ ಮಾಡಲು ಟಿವಿಎಸ್ ಕಂಪನಿಯು ಈ ಕಿಟ್ ಅನ್ನು ಬಿಡುಗಡೆಗೊಳಿಸಿದೆ. ಎಕ್ಸ್‌ಎಲ್ 100 ಸರಣಿಯ ಮೊಪೆಡ್‌ಗಳಿಗಾಗಿ ಹೊಸ ಆಡ್ ಆನ್ ಕಿಟ್‌ಗಳನ್ನು ಟಿವಿಎಸ್ ಮೋಟಾರ್ಸ್ ಸ್ವತಃ ತಾನೇ ವಿನ್ಯಾಸಗೊಳಿಸಿದ್ದು, ಅಭಿವೃದ್ಧಿಪಡಿಸಿದೆ.

ಎಕ್ಸ್‌ಎಲ್ 100 ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದ ಟಿವಿಎಸ್

ರೈತರ ಬಂಡಿ ಎಂದೇ ಖ್ಯಾತಿ ಪಡೆದಿರುವ ಹೊಸ ಎಕ್ಸ್‌ಎಲ್ 100 ಮೊಪೆಡ್ ಅನ್ನು ಖರೀದಿಸಲು ಗ್ರಾಹಕರಿಗೆ ಭರ್ಜರಿ ಆಫರ್ ಅನ್ನು ಟಿವಿಎಸ್ ಕಂಪನಿಯು ನೀಡಲಾಗಿದೆ. ಹೆಚ್ಚಿನ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಈ ಆಫರ್ ಅನ್ನು ಘೋಷಿಸಲಾಗಿದೆ.

More from DriveSpark

Article Published On: Thursday, June 4, 2020, 10:12 [IST]
English summary
TVS XL100 now available with an attractive EMI scheme. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+