ಬಿಎಸ್-6 ಎಕ್ಸ್‌ಎಲ್ 100 ಮೊಪೆಡ್ ಬೆಲೆ ಹೆಚ್ಚಿಸಿದ ಟಿವಿಎಸ್

ಟಿವಿಎಸ್ ಮೋಟಾರ್ ಕಂಪನಿ ತನ್ನ ಬಿಎಸ್-6 ಎಕ್ಸ್‌ಎಲ್ 100 ಮೊಪೆಡ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದೀಗ ಟಿವಿಎಸ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಎಸ್-6 ಟಿವಿಎಸ್ ಎಕ್ಸ್‌ಎಲ್ 100 ಮೊಪೆಡ್ ಬೆಲೆಯನ್ನು ಹೆಚ್ಚಿಸಿದೆ.

ಬಿಎಸ್-6 ಎಕ್ಸ್‌ಎಲ್ 100 ಮೊಪೆಡ್ ಬೆಲೆ ಹೆಚ್ಚಿಸಿದ ಟಿವಿಎಸ್

ಬಿಎಸ್-6 ಟಿವಿಎಸ್ ಎಕ್ಸ್‌ಎಲ್ 100 ಮೊಪೆಡ್‌ನ ಎಲ್ಲಾ ರೂಪಾಂತರಗಳ ಮೇಲೆ ರೂ.1,000 ರವರೆಗೆ ಬೆಲೆಯನ್ನು ಹೆಚ್ಚಿಸಲಾಗಿದೆ. ಟಿವಿಎಸ್ ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಬಿಎಸ್-6 ಟಿವಿಎಸ್ ಎಕ್ಸ್‌ಎಲ್ 100 ಮೊಪೆಡ್‌ನ ಹೊಸ ಬೆಲೆಯನ್ನು ಅಪ್‍ಡೇಟ್ ಮಾಡಿದ್ದಾರೆ. ಬಿಎಸ್-6 ಟಿವಿಎಸ್ ಎಕ್ಸ್‌ಎಲ್ 100 ಮೊಪೆಡ್‌ನ ಬೇಸ್-ಸ್ಪೆಕ್ ಬೆಲೆ ರೂ.44,294, ಮಿಡ್-ಸ್ಪೆಕ್ ಹೆವಿ-ಡ್ಯೂಟಿ ಸ್ಪೆಷಲ್ ಬೆಲೆಯು ರೂ.45,304ಗಳಾದರೆ ಟಾಪ್-ಸ್ಪೆಕ್ ಕಂಫರ್ಟ್ ರೂಪಾಂತರದ ಬೆಲೆಯು ರೂ.46,114ಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ.

ಬಿಎಸ್-6 ಎಕ್ಸ್‌ಎಲ್ 100 ಮೊಪೆಡ್ ಬೆಲೆ ಹೆಚ್ಚಿಸಿದ ಟಿವಿಎಸ್

ಬೆಲೆಯ ಏರಿಕೆಯ ನಡುವೆ ಟಿವಿಎಸ್ ಕಂಪನಿಯು ಹೊಸ ಖರೀದಿದಾರರನ್ನು ಆಕರ್ಷಿಸಲು ಆರು ತಿಂಗಳ ಇಎಂಐ ಆಫರ್ ಅನ್ನು ನೀಡಿದೆ. ಗ್ರಾಹಕರು ಬಿಎಸ್-6 ಎಕ್ಸ್‌ಎಲ್ 100 ಮೊಪೆಡ್ ಅನ್ನು ಖರೀದಿಸಿದರೆ ಆರು ತಿಂಗಳು ಇಎಂಐ ಮರುಪಾವತಿಸುವ ಅಗತ್ಯವಿಲ್ಲ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಟಿವಿಎಸ್ ರೇಡಿಯಾನ್ ಬೈಕ್

ಬಿಎಸ್-6 ಎಕ್ಸ್‌ಎಲ್ 100 ಮೊಪೆಡ್ ಬೆಲೆ ಹೆಚ್ಚಿಸಿದ ಟಿವಿಎಸ್

ಆರು ತಿಂಗಳ ನಂತರ ಪಾವತಿಸಬೇಕಾಗುತ್ತದೆ. ಈ ಆಫರ್ ಗಳು ಮುಂದಿನ ತಿಂಗಳು ಜುಲೈ 31ರವರೆಗೆ ಲಭ್ಯವಿರುತ್ತದೆ. ಈ ವಿಶೇಷ ಯೋಜನೆಯ ಸಾಲದ ಮೊತ್ತ ಶೇ.75 ಆಗಿರುತ್ತದೆ.

ಬಿಎಸ್-6 ಎಕ್ಸ್‌ಎಲ್ 100 ಮೊಪೆಡ್ ಬೆಲೆ ಹೆಚ್ಚಿಸಿದ ಟಿವಿಎಸ್

ಬಿಎಸ್-6 ಟಿವಿಎಸ್ ಎಕ್ಸ್‌ಎಲ್ 100 ಮಾದರಿಯನ್ನು ಹೆವಿ ಡ್ಯೂಟಿ ಐ-ಟಚ್‌ಸ್ಟಾರ್ಟ್, ಡ್ಯೂಟಿ ಐ-ಟಚ್‌ಸ್ಟಾರ್ಟ್ ಮತ್ತು ಕಂಫರ್ಟ್ ಐ-ಟಚ್‌ಸ್ಟಾರ್ಟ್ ಎಂಬ ಮೂರು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಲಾಗಿತ್ತು.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಟಿವಿಎಸ್ ಜೂಪಿಟರ್ ಸ್ಕೂಟರ್

ಬಿಎಸ್-6 ಎಕ್ಸ್‌ಎಲ್ 100 ಮೊಪೆಡ್ ಬೆಲೆ ಹೆಚ್ಚಿಸಿದ ಟಿವಿಎಸ್

ಹೊಸ ಎಕ್ಸ್‌ಎಲ್ 100 ಮಾದರಿಯಲ್ಲಿ 99.7 ಸಿಸಿ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್‍ನೊಂದಿಗೆ ಫ್ಯೂಯಲ್ ಇಂಜೆಕ್ಷನ್ ಅನ್ನು ಹೊಂದಿದೆ.ಈ ಎಂಜಿನ್‍ 6,000 ಆರ್‌ಪಿಎಂನಲ್ಲಿ 4.4 ಬಿಹೆಚ್‌ಪಿ ಪವರ್ ಮತ್ತು 3,500 ಆರ್‌ಪಿಎಂನಲ್ಲಿ 6.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಎಸ್-6 ಎಕ್ಸ್‌ಎಲ್ 100 ಮೊಪೆಡ್ ಬೆಲೆ ಹೆಚ್ಚಿಸಿದ ಟಿವಿಎಸ್

ಬಿಎಸ್-4 ಎಂಜಿನ್ ಕೂಡ ಇದೆ ರೀತಿಯ ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುತ್ತದೆ. ವಿಶೇಷವೆಂದರೆ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದರು ಪವರ್ ಮತ್ತು ಟಾರ್ಕ್ ಅಂಕಿ ಅಂಶವು ಕಡಿಮೆಯಾಗಿಲ್ಲ. ಹೊಸ ಎಕ್ಸ್‌ಎಲ್ 100 ಮಾದರಿಯಲ್ಲಿ ಫ್ಯೂಯಲ್ ಇಂಜೆಕ್ಷನ್ ಹೊಂದಿರುವುದರಿಂದ ಇದರ ಮೈಲೇಜ್ ಕೂಡ ಹೆಚ್ಚಿಸುತ್ತದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಬಿಎಸ್-6 ಎಕ್ಸ್‌ಎಲ್ 100 ಮೊಪೆಡ್ ಬೆಲೆ ಹೆಚ್ಚಿಸಿದ ಟಿವಿಎಸ್

ಈ ಮೊಪೆಡ್‍‍ಗಳ ಎರಡೂ ತುದಿಗಳಲ್ಲಿ ಡ್ರಮ್ ಬ್ರೇಕ್‌ಗಳು, ಮೆಂಟೆನೆನ್ಸ್ ಇಲ್ಲದ ಬ್ಯಾಟರಿ, ಅನಲಾಗ್ ಸ್ಪೀಡೋಮೀಟರ್, ಕಿಕ್ ಸ್ಟಾರ್ಟ್ ಹಾಗೂ ಬಲ್ಬ್-ಟೈಪ್ ಟರ್ನ್ ಸಿಗ್ನಲ್ ಇಂಡಿಕೇಟರ್‍‍ಗಳಿವೆ. ಟಿವಿಎಸ್ ಎಕ್ಸ್‌ಎಲ್ 100 ಸರಣಿಯ ಮೊಪೆಡ್‌ಗಳು 4.0 ಲೀಟರಿನ ಫ್ಯೂಯಲ್ ಟ್ಯಾಂಕ್ ಹೊಂದಿವೆ.

ಬಿಎಸ್-6 ಎಕ್ಸ್‌ಎಲ್ 100 ಮೊಪೆಡ್ ಬೆಲೆ ಹೆಚ್ಚಿಸಿದ ಟಿವಿಎಸ್

ರೈತರ ಬಂಡಿ ಎಂದೇ ಖ್ಯಾತಿ ಪಡೆದಿರುವ ಹೊಸ ಎಕ್ಸ್‌ಎಲ್ 100 ಮೊಪೆಡ್ ಅನ್ನು ಖರೀದಿಸಲು ಗ್ರಾಹಕರಿಗೆ ಭರ್ಜರಿ ಆಫರ್ ಅನ್ನು ಟಿವಿಎಸ್ ಕಂಪನಿಯು ನೀಡಲಾಗಿದೆ. ಇದರ ನಡುವೆ ಬೆಲೆಯನ್ನು ಕೂಡ ಏರಿಸಲಾಗಿದೆ.

Article Published On: Wednesday, June 10, 2020, 10:23 [IST]
English summary
TVS XL100 BS6 Moped Prices Increased Across Variants. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+