ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಟಿವಿಎಸ್ ಜೂಪಿಟರ್ ಸ್ಕೂಟರ್
ಟಿವಿಎಸ್ ಮೋಟಾರ್ ಕಂಪನಿಯು ಸದ್ದಿಲ್ಲದೆ ಬಿಎಸ್-6 ಜೂಪಿಟರ್ ಸ್ಕೂಟರ್ ಬೆಲೆಯನ್ನು ಹೆಚ್ಚಿಸಲಾಗಿದೆ. ಈ ಹೊಸ ಜೂಫಿಟರ್ ಸ್ಕೂಟರ್‌ನ ಎಲ್ಲಾ ರೂಪಾಂತರಗಳ ಬೆಲೆಗಳನ್ನು ರೂ.651ರವರೆಗೆ ಹೆಚ್ಚಿಸಲಾಗಿದೆ.

ಇದೀಗ ಈ ಬಿಎಸ್-6 ಜೂಪಿಟರ್ ಸ್ಕೂಟರ್ ಪ್ರಾರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.62,062 ಗಳಾಗಿದೆ. ಟಿವಿಎಸ್ ಕಂಪನಿಯು ಜೂಫಿಟರ್ ಸ್ಕೂಟರ್‌ನ ‘ಸ್ಟ್ಯಾಂಡರ್ಡ್, ಝಡ್ಎಕ್ಸ್ ಕ್ಲಾಸಿಕ್ ಮತ್ತು ಸ್ಟ್ಯಾಂಡರ್ಡ್ ಝಡ್ಎಕ್ಸ್ ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇದರಲ್ಲಿ ಬೇಸ್ ರೂಪಾಂರದ ಬೆಲೆಯನ್ನು ರೂ.613 ರವರೆಗೆ ಹೆಚ್ಚಿಸಿದರೆ, ಟಾಪ್ ಸ್ಪೆಕ್ ಕ್ಲಾಸಿಕ್ ರೂಪಾಂತರದ ಬೆಲೆಯನ್ನು ರೂ.651ವರೆಗೆ ಬೆಲೆಯನ್ನು ಹೆಚ್ಚಿಸಲಾಗಿದೆ.

ಜೂಪಿಟರ್ ಸ್ಕೂಟರ್ ಫ್ಯೂಲ್ ಇಂಜೆಕ್ಷಡ್ 109ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಈ ಎಂಜಿನ್ 7.3 ಬಿಹೆಚ್‍ಪಿ ಪವರ್ ಮತ್ತು 8.4 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಬಿಎಸ್-6 ಟಿವಿಎಸ್ ಜೂಪಿಟರ್ ಮಾದರಿಯು ಈಗ ಬ್ರಾಂಡ್‌ನ ಇಟಿ ಫೈ ಅಂದರೆ ಇಕೋಥ್ರಸ್ಟ್ ಫ್ಯೂಯಲ್ ಇಂಜೆಕ್ಷನ್ ತಂತ್ರಜ್ಞಾನವನ್ನು ಹೊಂದಿದೆ. ಇದು ಕಂಪನಿಯು ಹೊಸದಾಗಿ ಅಭಿವೃದ್ಧಿಪಡಿಸಿದ ಇಟಿ-ಫೈ ಹಾಗೂ ಆರ್‌ಟಿ-ಫೈ ಎಂಬ ಫೈ ತಂತ್ರಜ್ಞಾನದ ಭಾಗವಾಗಿದೆ.

ಮೊದಲ ಆವೃತ್ತಿಯಾದ ಇಟಿ ಫೈ ಹೆಚ್ಚಿನ ರಿಫೈನ್‍ಮೆಂಟ್, ಸುಧಾರಿತ ಇಂಧನ ಆರ್ಥಿಕತೆ ಹಾಗೂ ಒಟ್ಟಾರೆ ಪರ್ಫಾಮೆನ್ಸ್ ಅನ್ನು ಒದಗಿಸುತ್ತದೆ. ಎರಡನೇಯದಾದ ಆರ್‍ಟಿ ಫೈ (ರೇಸ್ ಟ್ಯೂನ್ಡ್ ಫ್ಯೂಯಲ್ ಇಂಜೆಕ್ಷನ್) ಟೆಕ್ನಾಲಜಿಯು ಎಲ್ಲಾ ಪರಿಸ್ಥಿತಿಗಳಲ್ಲೂ ರೇಸಿಂಗ್ ಅನುಭವವನ್ನು ನೀಡುತ್ತದೆ.

ಬಿಎಸ್ 6 ಎಂಜಿನ್ ಹೊಂದಿರುವ ಟಿವಿಎಸ್ ಜೂಪಿಟರ್ ಕ್ಲಾಸಿಕ್, ಇಟಿ ಫೈ ಟೆಕ್ನಾಲಜಿಯನ್ನು ಹೊಂದಿದ ಮೊದಲ ಸ್ಕೂಟರ್ ಆಗಿದೆ. ಬಿಎಸ್ 6 ಎಂಜಿನ್ ಅಪ್‌ಡೇಟ್‌ನೊಂದಿಗೆ ಇತರ ಎಲ್ಲ ಮಾದರಿಗಳಲ್ಲೂ ಈ ಟೆಕ್ನಾಲಜಿಯನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಲಾಗುವುದು.
MOST READ: ಜನಪ್ರಿಯ ಬಿಎಸ್-6 ಸ್ಪೋರ್ಟ್ ಬೈಕಿನ ಬೆಲೆ ಹೆಚ್ಚಿಸಿದ ಟಿವಿಎಸ್

ಹೊಸ ಟೆಕ್ನಾಲಜಿಯನ್ನು ಹೊಂದಿರುವ ಜೂಪಿಟರ್ ಕ್ಲಾಸಿಕ್ ಹಳೆಯ ಮಾದರಿಗಳಿಗಿಂತ 15%ನಷ್ಟು ಹೆಚ್ಚಿನ ಫ್ಯೂಯಲ್ ಎಫಿಶಿಯನ್ಸಿ ನೀಡುತ್ತದೆ. ಈ ಅಪ್‍ಡೇಟ್‍ಗಳ ಹೊರತಾಗಿ, ಹೊಸ ಟಿವಿಎಸ್ ಜುಪಿಟರ್ ಬಿಎಸ್ 6 ಸ್ಕೂಟರ್ ಅನ್ನು ಈಗ ಇಂಡಿ ಬ್ಲೂ ಎಂಬ ಹೊಸ ಬಣ್ಣದಲ್ಲಿ ಮಾರಾಟ ಮಾಡಲಾಗುತ್ತದೆ.
MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಟಿವಿಎಸ್ ಜೂಪಿಟರ್ ಕ್ಲಾಸಿಕ್ ಇಟಿ ಫೈ ಚಾಲನಾ ಸಾಮರ್ಥ್ಯ, ಸುಗಮತೆ ಮತ್ತು ಇಂಧನದ ಒಟ್ಟಾರೆ ಪರ್ಫಾಮೆನ್ಸ್ ಅನ್ನು ಹೆಚ್ಚಿಸುತ್ತದೆ. ಟಿವಿಎಸ್ ಜೂಪಿಟರ್ ಕ್ಲಾಸಿಕ್ ಇಟಿ ಫೈ ಅನುಕೂಲಕರ ಮುಂಭಾಗದ ಮೊಬೈಲ್ ಫೋನ್ ಕ್ಯೂಬಿ, ಯುಎಸ್‌ಬಿ ಚಾರ್ಜರ್ ಹಾಗೂ ಹೊಸ ಟಿಂಟೆಡ್ ವೀಸರ್ ಅನ್ನು ಹೊಂದಿದೆ.

ಜೂಪಿಟರ್ ಸ್ಕೂಟರ್ ದೇಶಿಯ ಮಾರುಕಟ್ಟೆಯಲ್ಲಿರುವ ಟಿವಿಎಸ್ ಕಂಪನಿಯ ಜನಪ್ರಿಯ ಸ್ಕೂಟರ್‍ಗಳಲ್ಲಿ ಒಂದಾಗಿದೆ. ಜೂಪಿಟರ್ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ 5 ಜಿ ಹಾಗೂ ಹೀರೋ ಪ್ಲೆಶರ್ 110 ಸ್ಕೂಟರ್‍ಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications