ಜನಪ್ರಿಯ ಬಿಎಸ್-6 ಸ್ಪೋರ್ಟ್ ಬೈಕಿನ ಬೆಲೆ ಹೆಚ್ಚಿಸಿದ ಟಿವಿಎಸ್
ಟೆವಿಎಸ್ ಮೋಟಾರ್ ಕಂಪನಿಯು ತನ್ನ ಬಿಎಸ್-6 ಸ್ಪೋರ್ಟ್ ಬೈಕನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಗೊಳಿಸಲಾಗಿತ್ತು. ಇದೀಗ ಟಿವಿಎಸ್ ಕಂಪನಿಯು ಈ ಹೊಸ ಟಿವಿಎಸ್ ಸ್ಪೋರ್ಟ್ ಬೈಕಿನ ಬೆಲೆಯನ್ನು ಹೆಚ್ಚಿಸಿದೆ.

ಈ ಹೊಸ ಟಿವಿಎಸ್ ಸ್ಪೋರ್ಟ್ ಬೈಕನ್ನು ಪ್ರಾರಂಭಿಕ ಬೆಲೆ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.51,750 ಗಳಲ್ಲಿ ಬಿಡುಗಡೆಗೊಳಿಸಿದ್ದರು. ಇದೀಗ ಈ ಬಿಎಸ್-6 ಸ್ಪೋರ್ಟ್ ಬೈಕಿನ ಬೆಲೆಯನ್ನು ರೂ.750ರವರೆಗೆ ಬೆಲೆ ಹೆಚ್ಚಿಸಲಾಗಿದೆ. ಹೊಸ ಟಿವಿಎಸ್ ಸ್ಪೋರ್ಟ್ ಬೈಕನ್ನು ಕಿಕ್-ಸ್ಟಾರ್ಟ್ ಮತ್ತು ಸೆಲ್ಫ್-ಸ್ಟಾರ್ಟ್ ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಿದ್ದರು.

ಇದರಲ್ಲಿ ಕಿಕ್ ಸ್ಟಾರ್ಟ್ ಮತ್ತು ಸೆಲ್ಫೆ-ಸ್ಟಾರ್ಟ್ ರೂಪಾಂತರದ ಬೆಲೆಯನ್ನು ಕೂಡ ರೂ.750ರವರೆಗೆ ಬೆಲೆ ಹೆಚ್ಚಿಸಲಾಗಿದೆ. ಹೊಸ ಟಿವಿಎಸ್ ಸ್ಪೋರ್ಟ್ ಬೈಕಿನಲ್ಲಿ ಬಿಎಸ್-6, 109.7 ಸಿಸಿ, ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಈ ಎಂಜಿನ್ 8.17 ಬಿಹೆಚ್‌ಪಿ ಪವರ್ ಮತ್ತು 8.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸ ಟಿವಿಎಸ್ ಸ್ಪೋರ್ಟ್ ಬೈಕಿನಲ್ಲಿ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿದೆ. ಈ ಹೊಸ ಟಿವಿಎಸ್ ಸ್ಪೋರ್ಟ್ ಬೈಕು ಹಿಂದಿನ ಬಿಎಸ್-4 ಮಾದರಿಗೆ ಹೋಲಿಸಿದರೆ ಶೇ.15 ರಷ್ಟು ಹೆಚ್ಚಿನ ಮೈಲೇಜ್ ಅನ್ನು ನೀಡುತ್ತದೆ.

ಹಿಂದಿನ ಬಿಎಸ್-4 ಟಿವಿಎಸ್ ಸ್ಪೋರ್ಟ್ ಬೈಕಿನಲ್ಲಿ 99.7 ಸಿಸಿ ಎಂಜಿನ್ ಅನ್ನು ಅಳವಡಿಸಿದ್ದರು. ಈ ಎಂಜಿನ್ 7.27 ಬಿಹೆಚ್‌ಪಿ ಪವರ್ ಮತ್ತು 7.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಈ ಬೈಕಿನಲ್ಲಿ ಹೊಸ ಎಂಜಿನ್ ಅನ್ನು ಅಳವಡಿಸಲಾಗಿದೆ.
MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಟಿವಿಎಸ್ ಕಂಪನಿಯು ತನ್ನ ಹೊಸ ಸ್ಪೋರ್ಟ್ ಬೈಕಿನಲ್ಲಿ ಎಂಜಿನ್ ನಲ್ಲಿ ಮಾತ್ರ ಬದಲಾವಣೆ ಮಾಡಲಾಗಿದೆ. ಆದರೆ ಈ ಬೈಕಿನ ವಿನ್ಯಾಸದಲ್ಲಿ ಅಥವಾ ಇತರ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಹೊಸ ಟಿವಿಎಸ್ ಸ್ಪೋರ್ಟ್ ಬೈಕ್ ಐದು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಇದು ವಾಲ್ಕೆನೊ ರೆಡ್, ಮೆರೆಕ್ಯೂರಿ ಗ್ರೇ, ಬ್ಲ್ಯಾಕ್ ಜೊತೆ ರೆಡ್, ರೆಡ್ ಮತ್ತು ವೈಟ್ ಜೊತೆ ಪರ್ಪಲ್ ಬಣ್ಣಗಳ ಆಯ್ಕೆಯಾಗಿದೆ.
MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಇದರೊಂದಿಗೆ ಟಿವಿಎಸ್ ಮೋಟಾರ್ ತನ್ನ ಬಿಎಸ್-6 ಟಿವಿಎಸ್ ರೇಡಿಯಾನ್ ಬೈಕನ್ನು ಪ್ರಾರಂಭಿಕ ಬೆಲೆ ರೂ.58,992ಗಳಲ್ಲಿ ಬಿಡುಗಡೆಗೊಳಿಸಿದ್ದರು. ಇದೀಗ ಹೊಸ ಟಿವಿಎಸ್ ರೇಡಿಯಾನ್ ಬೈಕಿನ ಎಲ್ಲಾ ರೂಪಾಂತರಗಳ ಬೆಲೆಯನ್ನು ರೂ,750 ರಷ್ಟು ಹೆಚ್ಚಿಸಲಾಗಿದೆ.

ಹೊಸ ಟಿವಿಎಸ್ ಸ್ಪೋರ್ಟ್ ಬೈಕಿನಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಈ ಬೈಕಿನಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಐದು ಹಂತದ ಅಡ್ಜೆಸ್ಟಬಲ್ ರೇರ್ ಶಾಕ್ ಅಬ್ಸಾರ್ಬರ್ ಅನ್ನು ಹೊಂದಿದೆ. ಇನ್ನು ಆಂಕರಿಂಗ್ ಪವರ್ 130 ಎಂಎಂ ಫ್ರಂಟ್ ಮತ್ತು 110 ಎಂಎಂ ರೇರ್ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.


Click it and Unblock the Notifications








