ದೀಪಾವಳಿ ಆಫರ್: ಒಕಿನಾವ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಕಂಪನಿಯಾಗಿರುವ ಒಕಿನಾವ ತನ್ನ ವಿವಿಧ ಮಾದರಿಯ ಸ್ಕೂಟರ್ ಖರೀದಿ ಮೇಲೆ ಹಲವಾರು ಆಫರ್‌ಗಳನ್ನು ಘೋಷಣೆ ಮಾಡಿದ್ದು, ಹೊಸ ಆಫರ್‌ಗಳನ್ನು ದೀಪಾವಳಿ ಸಂಭ್ರಮಕ್ಕಾಗಿ ನೀಡಲಾಗುತ್ತಿದೆ.

ದೀಪಾವಳಿ ಆಫರ್: ಒಕಿನಾವ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್

ದಸರಾ ನಂತರ ದೀಪಾವಳಿ ಸಂಭ್ರಮ ವೇಳೆ ಗರಿಷ್ಠ ಪ್ರಮಾಣದ ಹೊಸ ವಾಹನಗಳ ಮಾರಾಟದ ನೀರಿಕ್ಷೆಗಳಿದ್ದು, ವಿವಿಧ ಆಟೋ ಉತ್ಪಾದನಾ ಕಂಪನಿಗಳು ಆಕರ್ಷಕ ಆಫರ್‌ಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿವೆ. ಇದೀಗ ಒಕಿನಾವ ಕಂಪನಿಯು ಕೂಡಾ ವಿವಿಧ ಸ್ಕೂಟರ್ ಮಾದರಿಗಳ ಖರೀದಿ ಮೇಲೆ ಕ್ಯಾಶ್ ಕೂಪನ್ ಮತ್ತು ಆಯ್ದ ಗ್ರಾಹಕರಿಗೆ ಲಕ್ಕಿ ಡ್ರಾ ಪರಿಚಯಿಸಿದ್ದು, ಗ್ರಾಹಕರು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಗರಿಷ್ಠ ಉಳಿತಾಯ ಮಾಡಬಹುದಾಗಿದೆ.

ದೀಪಾವಳಿ ಆಫರ್: ಒಕಿನಾವ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್

ಒಕಿನಾವ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಎಂಟ್ರಿ ಲೆವಲ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಾದ ಲಿಡ್ ಆ್ಯಸಿಡ್ ಬ್ಯಾಟರಿ ಪ್ರೇರಣೆಯ ರಿಡ್ಜ್ 30 ಜೊತೆಗೆ ಹೈ ಎಂಡ್ ಮಾದರಿಯಾಗಿ ಲೀಥಿಯಂ-ಅಯಾನ್ ಬ್ಯಾಟರಿ ಪ್ರೇರಿತ ಐ-ಪ್ರೈಸ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಮಾರಾಟ ಮಾಡುತ್ತಿದೆ.

ದೀಪಾವಳಿ ಆಫರ್: ಒಕಿನಾವ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್

ಪ್ರತಿ ಸ್ಕೂಟರ್ ಮಾದರಿಯ ಮೇಲೂ ಗ್ರಾಹಕರಿಗೆ ರೂ. 6 ಸಾವಿರ ಕ್ಯಾಶ್ ಕೂಪನ್ ನೀಡಲಾಗುತ್ತಿದ್ದು, 10 ಗ್ರಾಹಕರು ಲಕ್ಕಿ ಡ್ರಾ ಪಡೆದುಕೊಳ್ಳಲಿದ್ದಾರೆ. ಅಕ್ಟೋಬರ್ 24ರಿಂದ ನವೆಂಬರ್ 15ರ ಅವಧಿಯಲ್ಲಿ ಸ್ಕೂಟರ್ ಖರೀದಿಸುವ ಗ್ರಾಹಕರು ಹೊಸ ಆಫರ್‌ಗೆ ಅರ್ಹರಾಗಿದ್ದು, ಅಕ್ಟೋಬರ್ 24ರಂದು ಲಕ್ಕಿ ಡ್ರಾ ಗ್ರಾಹಕರಿಗೆ ವಿಶೇಷ ಉಡುಗೊರೆ ಸಿಗಲಿದೆ.

ದೀಪಾವಳಿ ಆಫರ್: ಒಕಿನಾವ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್

ಲಕ್ಕಿ ಡ್ರಾ ಪಡೆದುಕೊಳ್ಳುವ 10 ಗ್ರಾಹಕರಲ್ಲಿ ಮೊದಲ ಗ್ರಾಹಕನಿಗೆ ಕಂಪನಿಯ ಲೋ ಸ್ಪೀಡ್ ಸ್ಕೂಟರ್ ಮಾದರಿಯಾದ ಆರ್ 30 ಗೆಲ್ಲುವ ಅವಕಾಶ ನೀಡಿದ್ದು, ಇನ್ನುಳಿದ ಒಂಬತ್ತು ಗ್ರಾಹಕರಿಗೆ ಟಿವಿ, ಪ್ರಿಡ್ಜ್, ಒವೆನ್, ಮೊಬೈಲ್ ಸೇರಿದಂತೆ ವಿವಿಧ ಬಹಮಾನಗಳು ದೊರಲಿವೆ.

ದೀಪಾವಳಿ ಆಫರ್: ಒಕಿನಾವ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್

ಇನ್ನು ದೇಶಾದ್ಯಂತ 350ಕ್ಕೂ ಹೆಚ್ಚು ಅಧಿಕೃತ ಮಾರಾಟ ಮಳಿಗೆಗಳನ್ನು ಹೊಂದಿರುವ ಒಕಿನಾವ ಕಂಪನಿಯು 2020-21ರ ಆರ್ಥಿಕ ವರ್ಷದ ಅಂತ್ಯಕ್ಕೆ 500 ಶೋರೂಂ ತೆರೆಯುವ ಗುರಿಹೊಂದಿದ್ದು, ಒಕಿನಾವ ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸದ್ಯ ರಿಡ್ಜ್ 30, ರಿಡ್ಜ್, ಪ್ರೈಸ್, ಆರ್30, ಲೈಟ್, ರಿಡ್ಜ್ ಪ್ಲಸ್, ಪ್ರೈಸ್ ಪ್ರೊ ಮತ್ತು ಐ-ಪ್ರೈಸ್ ಪ್ರೊ ಪ್ಲಸ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ.

ದೀಪಾವಳಿ ಆಫರ್: ಒಕಿನಾವ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್

ಒಕಿನಾವ ಕಂಪನಿಯು ಇವಿ ವಾಹನಗಳಿಗೆ ಗರಿಷ್ಠ ಭದ್ರತೆ ಒದಗಿಸಲು ಹೊಸ ಫೀಚರ್ಸ್‌ವುಳ್ಳ ಮೊಬೈಲ್ ಅಪ್ಲಿಕೇಶನ್ ಅಭಿವೃದ್ದಿಗೊಳಿಸಿರುವುದು ಹೊಸ ಸ್ಕೂಟರ್‌ಗಳಿಗೆ ಗರಿಷ್ಠ ಭದ್ರತೆ ಒದಗಿಸಿದ್ದು, 'ಇಕೋ' ಮೊಬೈಲ್ ಅಪ್ಲಿಕೇಶನ್ ಅನ್ನು ಹೈ ಎಂಡ್ ಮಾದರಿಯ ಇವಿ ಸ್ಕೂಟರ್ ಮಾದರಿಗಳಾದ ಐಪ್ರೈಸ್ ಮತ್ತು ರಿಡ್ಜ್‌ನಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ದೀಪಾವಳಿ ಆಫರ್: ಒಕಿನಾವ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್

ಗ್ಲೂಗಲ್ ಮ್ಯಾಪ್ ಮೂಲಕ ಇವಿ ಸ್ಕೂಟರ್ ನಿಲುಗಡೆಯನ್ನು ಖಾತ್ರಿಪಡಿಸಿಕೊಳ್ಳುವಲ್ಲದೆ ಫೈಂಡ್ ಮೈ ಸ್ಕೂಟರ್ ಫಂಕ್ಷನ್ ಬಳಸಿಕೊಳ್ಳಬಹುದಾಗಿದ್ದು, ಸುರಕ್ಷಿತ ಪಾರ್ಕಿಂಗ್ ಸೌಲಭ್ಯಕ್ಕಾಗಿ ಇದು ಸಾಕಷ್ಟು ಸಹಕಾರಿಯಾಗಿದೆ.

ದೀಪಾವಳಿ ಆಫರ್: ಒಕಿನಾವ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್

ಹಾಗೆಯೇ ಸ್ಕೂಟರ್ ಕಳ್ಳತನದ ಸಂದರ್ಭದಲ್ಲಿ ಇಕೋ ಮೊಬೈಲ್ ಅಪ್ಲಿಕೇಶನ್ ಮೂಲಕ ಸ್ಕೂಟರ್ ಎಂಜಿನ್ ಅನ್ನು ಇಮ್‌ಮೊಬಿಲೈಸರ್ ಮಾಡಬಹುದಾಗಿದ್ದು, ಈ ಸೌಲಭ್ಯದಿಂದ ಸ್ಕೂಟರ್ ಕಾರ್ಯನಿರ್ವಹಣೆ ಸಾಧ್ಯವಾಗದೆ ಕಳ್ಳತನ ಯತ್ನಕ್ಕೆ ಬ್ರೇಕ್ ಹಾಕುವುದಲ್ಲದೆ ಕೆಲವೇ ನಿಮಿಷಗಳಲ್ಲಿ ಸ್ಕೂಟರ್ ಇರುವ ಸ್ಥಳವನ್ನು ಟ್ರ್ಯಾಕ್ ಮಾಡಬಹುದಾಗಿದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ದೀಪಾವಳಿ ಆಫರ್: ಒಕಿನಾವ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್

ಹೊಸ ಅಪ್ಲಿಕೇಶನ್‌ನಲ್ಲಿ‘ಎಸ್‌ಒಎಸ್ ಮೆಸೇಜಿಂಗ್' ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಜಿಯೋಫೆನ್ಸ್ ವೈಶಿಷ್ಟ್ಯಯು ಕೂಡಾ ಈ ಅಪ್ಲಿಕೇಶನ್‌ನಲ್ಲಿರುವ ಪ್ರಮುಖ ಫೀಚರ್ಸ್ ಎನ್ನಬಹುದು. ಜಿಯೋಫೆನ್ಸ್ ಫೀಚರ್ಸ್ ಮೂಲಕ ಬಳಕೆದಾರರು ಒಂದು ನಿರ್ದಿಷ್ಟ ಪ್ರದೇಶವನ್ನು ಗುರುತಿಸಬಹುದಾಗಿದ್ದು, ಗುರುತು ಮಾಡಿರುವ ಪ್ರದೇಶದಿಂದ ವಾಹನ ಹೊರಹೊದರೆ ತಕ್ಷಣವೇ ಮಾಲೀಕನ್ನು ಎಚ್ಚರಿಸುವಂತಹ ಫೀಚರ್ಸ್‌ಗಳು ಒಕಿನಾವ ಸ್ಕೂಟರ್‌ನಲ್ಲಿವೆ.

More from DriveSpark

Article Published On: Tuesday, October 27, 2020, 13:47 [IST]
English summary
Okinawa Introduced Gift Voucher For Electric Scooter Bookings. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+