ದೇಶಾದ್ಯಂತ ಮಾರಾಟ ಕೇಂದ್ರಗಳನ್ನು ತೆರೆಯಲಿದೆ ರಿವೋಲ್ಟ್

ಪುಣೆ ಮೂಲದ ಎಲೆಕ್ಟ್ರಿಕ್ ಬೈಕ್ ತಯಾರಕ ಕಂಪನಿಯಾದ ರಿವೋಲ್ಟ್ ಇಂಟೆಲಿಕಾರ್ಪ್ ದೇಶಾದ್ಯಂತವಿರುವ ತನ್ನ ಮಾರಾಟ ಕೇಂದ್ರಗಳನ್ನು ವಿಸ್ತರಿಸಲು ಮುಂದಾಗಿದೆ. ಮಾರ್ಚ್ ತಿಂಗಳ ಕೊನೆಯ ವೇಳೆಗೆ ಅಹಮದಾಬಾದ್, ಹೈದರಾಬಾದ್, ಮುಂಬೈ ಹಾಗೂ ಚೆನ್ನೈಗಳಲ್ಲಿ ಈ ಕೇಂದ್ರಗಳನ್ನು ತೆರೆಯಲಿದೆ.

ದೇಶಾದ್ಯಂತ ಮಾರಾಟ ಕೇಂದ್ರಗಳನ್ನು ತೆರೆಯಲಿದೆ ರಿವೋಲ್ಟ್

ರಿವೋಲ್ಟ್ ಕಂಪನಿಯು ತನ್ನ ಸರಣಿಯಲ್ಲಿ ಆರ್‍‍ವಿ 300 ಹಾಗೂ ಆರ್‍‍ವಿ 400 ಬೈಕ್‍‍ಗಳನ್ನು ಬಿಡುಗಡೆಗೊಳಿಸಿ ಮಾರಾಟ ಮಾಡುತ್ತಿದೆ. ಸದ್ಯಕ್ಕೆ ಈ ಬೈಕ್‍‍ಗಳನ್ನು ಪುಣೆ ಹಾಗೂ ದೆಹಲಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಫೆಬ್ರವರಿ 29ರಂದು ಅಹಮದಾಬಾದ್‍‍ನಲ್ಲಿ ಮಾರಾಟ ಕೇಂದ್ರವನ್ನು ತೆರೆಯಲಾಗುವುದು.

ದೇಶಾದ್ಯಂತ ಮಾರಾಟ ಕೇಂದ್ರಗಳನ್ನು ತೆರೆಯಲಿದೆ ರಿವೋಲ್ಟ್

ಹೈದರಾಬಾದ್‍‍ನಲ್ಲಿ ಮಾರ್ಚ್ 2ರಂದು, ಚೆನ್ನೈನಲ್ಲಿ ಮಾರ್ಚ್ 5ರಂದು ಹಾಗೂ ಮುಂಬೈನಲ್ಲಿ ಮಾರ್ಚ್ ಕೊನೆಯ ವೇಳೆಗೆ ಹೊಸ ಮಾರಾಟ ಕೇಂದ್ರಗಳನ್ನು ತೆರೆಯಲಾಗುವುದು. ರಿವೋಲ್ಟ್ ಕಂಪನಿಯು ಈ ಬೈಕ್‍‍ಗಳ ಉತ್ಪಾದನೆಯನ್ನು ಸಹ ಹೆಚ್ಚಿಸಿದೆ.

ದೇಶಾದ್ಯಂತ ಮಾರಾಟ ಕೇಂದ್ರಗಳನ್ನು ತೆರೆಯಲಿದೆ ರಿವೋಲ್ಟ್

ಆರ್‍‍ವಿ 400 ಬೈಕಿನ ವೇಟಿಂಗ್ ಪಿರಿಯಡ್ ಅನ್ನು ಐದು ತಿಂಗಳುಗಳಿಂದ 90 ದಿನಗಳಿಗೆ ಇಳಿಸಲಾಗಿದೆ. ಈ ಬೈಕ್ ಹೆಚ್ಚಿನ ಸಂಖ್ಯೆಯ ಬೇಡಿಕೆಯನ್ನು ಹೊಂದಿದೆ. ರಿವೋಲ್ಟ್ ಆರ್‍‍‍ವಿ 300 ಬೈಕಿನಲ್ಲಿ 2.7 ಕಿ.ವ್ಯಾನ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ.

ದೇಶಾದ್ಯಂತ ಮಾರಾಟ ಕೇಂದ್ರಗಳನ್ನು ತೆರೆಯಲಿದೆ ರಿವೋಲ್ಟ್

ಈ ಬ್ಯಾಟರಿಯು 60 ವೋಲ್ಟ್ ಪವರ್ ಅನ್ನು ಉತ್ಪಾದಿಸುತ್ತದೆ. ಪೂರ್ತಿಯಾಗಿ ಚಾರ್ಜ್ ಆದ ನಂತರ ಇಕೋ ಮೋಡ್‍‍ನಲ್ಲಿ 180 ಕಿ.ಮೀಗಳವರೆಗೆ ಚಲಿಸುತ್ತದೆ. ಈ ಬ್ಯಾಟರಿಯು ಮೂರು ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ. ಚಾರ್ಜಿಂಗ್ ಸ್ಟೇಷನ್‍‍ಗಳಲ್ಲಿ ಈ ಬ್ಯಾಟರಿಯನ್ನು ಬದಲಿಸಿಕೊಳ್ಳಬಹುದು.

ದೇಶಾದ್ಯಂತ ಮಾರಾಟ ಕೇಂದ್ರಗಳನ್ನು ತೆರೆಯಲಿದೆ ರಿವೋಲ್ಟ್

ಆರ್‍‍ವಿ 300 ಬೈಕ್ - ನಾರ್ಮಲ್, ಇಕೊ, ಸ್ಪೋರ್ಟ್ ಎಂಬ ಮೂರು ವಿಧದ ರೈಡಿಂಗ್ ಮೋಡ್‍‍ಗಳನ್ನು ಹೊಂದಿದೆ. ಈ ಬೈಕಿನಲ್ಲಿ ಜಿಯೊ ಫೆನ್ಸಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, 4 ಜಿ ಕನೆಕ್ಟಿವಿಟಿ, 6 ವೇ ಅಡ್ಜಸ್ಟಬಲ್ ಫುಟ್ ಪೆಗ್ ಹಾಗೂ ರಿಜನರೇಟಿವ್ ಬ್ರೇಕಿಂಗ್ ಸಿಸ್ಟಂಗಳನ್ನು ಅಳವಡಿಸಲಾಗಿದೆ.

ದೇಶಾದ್ಯಂತ ಮಾರಾಟ ಕೇಂದ್ರಗಳನ್ನು ತೆರೆಯಲಿದೆ ರಿವೋಲ್ಟ್

ರಿವೋಲ್ಟ್ ಆರ್‍‍ವಿ 300 ಬೈಕ್ ಅನ್ನು ಪ್ರತಿ ತಿಂಗಳು ರೂ.2,999 ಪಾವತಿಸುವ ಮೂಲಕ ಖರೀದಿಸಬಹುದು. ಇದರಲ್ಲಿ ಅನ್‍‍ಲಿಮಿಟೆಡ್ ಬ್ಯಾಟರಿ ಸ್ವಿಚಿಂಗ್, ಮೂರು ವರ್ಷಗಳ ಅನ್‍‍ಲಿಮಿಟೆಡ್ ಮೆಂಟೆನೆನ್ಸ್, ಇನ್ಶೂರೆನ್ಸ್ ಹಾಗೂ ಪ್ರಾಡಕ್ಟ್ ವಾರಂಟಿಗಳು ಸೇರಿವೆ.

ದೇಶಾದ್ಯಂತ ಮಾರಾಟ ಕೇಂದ್ರಗಳನ್ನು ತೆರೆಯಲಿದೆ ರಿವೋಲ್ಟ್

ಮೂರು ವರ್ಷಗಳ 4 ಜಿ ಕನೆಕ್ಟಿವಿಟಿಗಾಗಿ ರೂ.5,000 ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. ರಿವೋಲ್ಟ್ ಆರ್‍‍ವಿ 400 ಬೈಕಿನಲ್ಲಿ 3.24 ಕಿ.ವ್ಯಾನ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಬ್ಯಾಟರಿಯು 72 ವೋಲ್ಟ್ ಪವರ್ ಉತ್ಪಾದಿಸುತ್ತದೆ.

ದೇಶಾದ್ಯಂತ ಮಾರಾಟ ಕೇಂದ್ರಗಳನ್ನು ತೆರೆಯಲಿದೆ ರಿವೋಲ್ಟ್

ಬ್ಯಾಟರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ ಈ ಬೈಕ್ 150 ಕಿ.ಮೀಗಳವರೆಗೆ ಚಲಿಸುತ್ತದೆ. ಈ ಬ್ಯಾಟರಿಯು ನಾಲ್ಕುವರೆ ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ. ಆರ್‍‍ವಿ 400 ಬೈಕ್ ಸಹ ನಾರ್ಮಲ್, ಇಕೊ ಹಾಗೂ ಸ್ಪೋರ್ಟ್ ಎಂಬ ವಿವಿಧ ರೈಡಿಂಗ್ ಮೋಡ್‍‍ಗಳನ್ನು ಹೊಂದಿದೆ.

ದೇಶಾದ್ಯಂತ ಮಾರಾಟ ಕೇಂದ್ರಗಳನ್ನು ತೆರೆಯಲಿದೆ ರಿವೋಲ್ಟ್

ಈ ಬೈಕಿನಲ್ಲಿ ಜಿಯೊ ಫೆನ್ಸಿಂಗ್, ಆರ್ಟಿಫಿಶಿಯಲ್ ಎಕ್ಸಾಸ್ಟ್ ನೋಟ್ ಸಿಸ್ಟಂ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಿಸ್ಟಂ, ರಿಯಲ್ ಟೈಂನಲ್ಲಿ ಬ್ಯಾಟರಿಯ ಬಳಕೆ, ಸ್ಮಾರ್ಟ್‍‍ಫೋನ್ ಅಪ್ಲಿಕೇಶನ್, ಟೂ ವೇ ಅಡ್ಜಸ್ಟಬಲ್ ಫುಟ್ ಪೆಗ್ ಹಾಗೂ 4 ಜಿ ಕನೆಕ್ಟಿವಿಟಿಗಳಿವೆ.

ದೇಶಾದ್ಯಂತ ಮಾರಾಟ ಕೇಂದ್ರಗಳನ್ನು ತೆರೆಯಲಿದೆ ರಿವೋಲ್ಟ್

ಮೈ ರಿವೋಲ್ಟ್ ಸ್ಮಾರ್ಟ್‍‍ಫೋನ್ ಅಪ್ಲಿಕೇಶನ್ ಟ್ರಿಪ್ ಮಾನಿಟರ್, ಜಿಯೊ ಫೆನ್ಸಿಂಗ್, ಲೊಕೆಟ್ ಯುವರ್ ಬೈಕ್ ಫೀಚರ್ ಹಾಗೂ ಎಕ್ಸಾಸ್ಟ್ ನೋಟ್‍‍ಗಳಿಗಾಗಿ ಪ್ರಿ ಲೋಡ್ ಮಾಡಲಾದ ಸೌಂಡ್‍ಗಳನ್ನು ಹೊಂದಿದೆ. ಆರ್‍‍ವಿ 400 ಬೈಕ್ ಅನ್ನು ಬೇಸ್ ಹಾಗೂ ಪ್ರೀಮಿಯಂ ಎಂಬ ಎರಡು ವಿಧದ ಸಬ್‍‍ಸ್ಕ್ರಿಪ್ಷನ್ ಮೂಲಕ ಖರೀದಿಸಬಹುದು.

ದೇಶಾದ್ಯಂತ ಮಾರಾಟ ಕೇಂದ್ರಗಳನ್ನು ತೆರೆಯಲಿದೆ ರಿವೋಲ್ಟ್

ಬೇಸ್ ಯೋಜನೆಯಲ್ಲಿ ಪ್ರತಿ ತಿಂಗಳು ರೂ.3,499ಗಳನ್ನು ಪಾವತಿಸಬೇಕಾಗುತ್ತದೆ. ಈ ಯೋಜನೆಯಲ್ಲಿ ಅನ್‍‍ಲಿಮಿಟೆಡ್ ಬ್ಯಾಟರಿ ಸ್ವಿಚಿಂಗ್, ಅನ್‍‍ಲಿಮಿಟೆಡ್ ಮೆಂಟೆನೆನ್ಸ್, ಇನ್ಶೂರೆನ್ಸ್ ಹಾಗೂ ಐದು ವರ್ಷಗಳ ಪ್ರಾಡಕ್ಟ್ ವಾರಂಟಿಗಳು ಸೇರಿವೆ. ಪ್ರೀಮಿಯಂ ಯೋಜನೆಯಲ್ಲಿ ಪ್ರತಿ ತಿಂಗಳು ರೂ.3,999 ಪಾವತಿಸಬೇಕಾಗುತ್ತದೆ.

ದೇಶಾದ್ಯಂತ ಮಾರಾಟ ಕೇಂದ್ರಗಳನ್ನು ತೆರೆಯಲಿದೆ ರಿವೋಲ್ಟ್

ಈ ಯೋಜನೆಯಲ್ಲಿ ಅನ್‍‍ಲಿಮಿಟೆಡ್ ಬ್ಯಾಟರಿ ಸ್ವಿಚಿಂಗ್, ಅನ್‍‍ಲಿಮಿಟೆಡ್ ಮೆಂಟೆನೆನ್ಸ್, ಇನ್ಶೂರೆನ್ಸ್, ಐದು ವರ್ಷಗಳ ಪ್ರಾಡಕ್ಟ್ ವಾರಂಟಿ, ಇಂಮೊಬೈಲೈಸರ್, ರಿಮೋಟ್ ಕೀ, ಪುಶ್ ಸ್ಟಾರ್ಟ್ ಬಟನ್, ಎಕ್ಸಾಸ್ಟ್ ನೋಟ್ ಸಿಮ್ಯೂಲೇಟರ್‍‍ಗಳಿವೆ.

ದೇಶಾದ್ಯಂತ ಮಾರಾಟ ಕೇಂದ್ರಗಳನ್ನು ತೆರೆಯಲಿದೆ ರಿವೋಲ್ಟ್

ಆರ್‍‍ವಿ 300 ಬೈಕ್ ಅನ್ನು ರೂ.1.11 ಲಕ್ಷ ಹಾಗೂ ಆರ್‍‍ವಿ 400 ಬೈಕ್ ಅನ್ನು ರೂ.1.30 ಲಕ್ಷ ಒಂದೇ ಬಾರಿಗೆ ಪಾವತಿಸಿಯೂ ಖರೀದಿಸಬಹುದು. ಈ ಬೆಲೆಗಳು ಭಾರತದ ಎಕ್ಸ್ ಶೋರೂಂ ದರಗಳಾಗಿವೆ.

More from DriveSpark

Article Published On: Wednesday, February 26, 2020, 15:08 [IST]
English summary
Revolt to add four new point of sales. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+