ಬಿಎಸ್-6 ಜಾರಿಗೂ ಮುನ್ನ ಬಿಎಸ್-4 ಬೈಕ್‌ಗಳನ್ನು ಸಂಪೂರ್ಣವಾಗಿ ಮಾರಾಟಗೊಳಿಸಿದ ರಾಯಲ್ ಎನ್‌ಫೀಲ್ಡ್

ಕರೋನಾ ವೈರಸ್ ಭೀತಿಯ ನಡುವೆಯೂ ಭಾರತೀಯ ಆಟೋ ಉದ್ಯಮದಲ್ಲಿ ಬಹುದೊಡ್ಡಬದಲಾವಣೆಗೆ ಸಾಕ್ಷಿಯಾಗುತ್ತಿದ್ದು, ಎಪ್ರಿಲ್ 1ರಿಂದ ಬಿಎಸ್-6 ಎಮಿಷನ್ ನಿಯಮವು ಕಡ್ಡಾಯವಾಗಿ ಜಾರಿಗೆ ಬರುತ್ತಿರುವುದು ಬಹುತೇಕ ಆಟೋ ಕಂಪನಿಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ಬಿಎಸ್-6 ಜಾರಿಗೂ ಮುನ್ನ ಬಿಎಸ್-4 ಬೈಕ್‌ಗಳನ್ನು ಸಂಪೂರ್ಣವಾಗಿ ಮಾರಾಟಗೊಳಿಸಿದ ರಾಯಲ್ ಎನ್‌ಫೀಲ್ಡ್

ಬಿಎಸ್-6 ನಿಯಮದಿಂದಾಗಿ ಎಪ್ರಿಲ್ 1ರಿಂದಲೇ ಬಿಎಸ್-4 ವಾಹನಗಳ ಮಾರಾಟ ಮತ್ತು ನೋಂದಣಿಯು ಸಂಪೂರ್ಣವಾಗಿ ನಿಷೇಧಗೊಳ್ಳಲಿದ್ದು, ಈ ಹಿನ್ನಲೆಯಲ್ಲಿ ಆಟೋ ಕಂಪನಿಗಳು ಹೊಸ ನಿಯಮ ಜಾರಿಗೆ ಮುನ್ನ ಭಾರೀ ಪ್ರಮಾಣದ ಆಫರ್‌ಗಳೊಂದಿಗೆ ಮಾರಾಟ ನಡೆಸಿದ್ದವು. ಆದರೆ ಕರೋನಾ ವೈರಸ್ ನಿಯಂತ್ರಣತಕ್ಕಾಗಿ ವಾಣಿಜ್ಯ ವ್ಯಾಪರವು ಸಂಪೂರ್ಣವಾಗಿ ಸ್ತಬ್ಧಗೊಂಡಿದ್ದು, ಏಪ್ರಿಲ್ 1ರ ನಂತರ ಮಾರಾಟ ಮಾಡಲು ಸಾಧ್ಯವಿಲ್ಲದ ಬಿಎಸ್-4 ವಾಹನಗಳು ಆಟೋ ಕಂಪನಿಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ಬಿಎಸ್-6 ಜಾರಿಗೂ ಮುನ್ನ ಬಿಎಸ್-4 ಬೈಕ್‌ಗಳನ್ನು ಸಂಪೂರ್ಣವಾಗಿ ಮಾರಾಟಗೊಳಿಸಿದ ರಾಯಲ್ ಎನ್‌ಫೀಲ್ಡ್

ಈ ನಡುವೆ ಕೆಲವೇ ಕೆಲವು ಕಂಪನಿಗಳು ಮಾತ್ರವೇ ನಿಗದಿತ ಅವಧಿಯೊಳಗೆ ಬಿಎಸ್-4 ಸ್ಟಾಕ್ ವಾಹನಗಳನ್ನು ಮಾರಾಟವನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದ್ದು, ರಾಯಲ್ ಎನ್‌ಫೀಲ್ಡ್ ಬಹುತೇಕ ಬೈಕ್ ಮಾದರಿಗಳನ್ನು ಈಗಾಗಲೇ ಬಿಎಸ್-6 ಎಂಜಿನ್‌ನೊಂದಿಗೆ ಮಾರಾಟ ಮಾಡುತ್ತಿದೆ.

ಬಿಎಸ್-6 ಜಾರಿಗೂ ಮುನ್ನ ಬಿಎಸ್-4 ಬೈಕ್‌ಗಳನ್ನು ಸಂಪೂರ್ಣವಾಗಿ ಮಾರಾಟಗೊಳಿಸಿದ ರಾಯಲ್ ಎನ್‌ಫೀಲ್ಡ್

ಡೆಡ್‌ಲೈನ್‍ಗೆ ಇನ್ನು 4 ತಿಂಗಳು ಬಾಕಿ ಇರುವಾಗಲೇ ಬಿಎಸ್-4 ವಾಹನಗಳ ಉತ್ಪಾದನೆಯಲ್ಲಿ ಗಣನೀಯ ಇಳಿಕೆ ಮಾಡಿದ್ದ ರಾಯಲ್ ಎನ್‌ಫೀಲ್ಡ್ ಬೇಡಿಕೆ ತಕ್ಕಂತೆ ಮಾತ್ರವೇ ಅಲ್ಪ ಪ್ರಮಾಣದಲ್ಲಿ ಸ್ಟಾಕ್ ಮಾಡಿಕೊಂಡಿತ್ತು.

ಬಿಎಸ್-6 ಜಾರಿಗೂ ಮುನ್ನ ಬಿಎಸ್-4 ಬೈಕ್‌ಗಳನ್ನು ಸಂಪೂರ್ಣವಾಗಿ ಮಾರಾಟಗೊಳಿಸಿದ ರಾಯಲ್ ಎನ್‌ಫೀಲ್ಡ್

ಕಳೆದ ಫೆಬ್ರುವರಿ ತಿಂಗಳಲ್ಲಿ ಬಹುತೇಕ ಬೈಕ್ ಮಾದರಿಗಳನ್ನು ಬಿಎಸ್-6 ಎಂಜಿನ್‌ನೊಂದಿಗೆ ಉನ್ನತೀಕರಿಸಿದ್ದ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಬಿಎಸ್-4 ಮಾದರಿಗಳ ಸ್ಟಾಕ್ ಪ್ರಮಾಣವನ್ನು ಆಕರ್ಷಕ ಆಫರ್‌ಗಳೊಂದಿಗೆ ಸಂಪೂರ್ಣ ಮಾರಾಟಗೊಳಿಸಿದ್ದು, ಇದೀಗ ಬಿಎಸ್-6 ವಾಹನಗಳನ್ನು ಮಾತ್ರವೇ ಮಾರಾಟ ಮಾಡುತ್ತಿದೆ. ಹಳೆಯ ಮಾದರಿಗಿಂತಲೂ ಹೊಸ ಬೈಕ್‌ಗಳ ಬೆಲೆಯಲ್ಲಿ ಸಾಕಷ್ಟು ಹೆಚ್ಚಳವಾಗಿದ್ದರೂ ಸಹ ಗ್ರಾಹಕರು ಬಿಎಸ್-6 ಖರೀದಿಗೆ ಆದ್ಯತೆ ನೀಡುತ್ತಿದ್ದು, ನಿಗದಿತ ಅವಧಿಯೊಳಗೆ ಬಿಎಸ್-4 ವಾಹನಗಳನ್ನು ಮಾರಾಟಗೊಳಿಸಿ ಇದೀಗ ಹೊಸ ಬೈಕ್‌ಗಳ ಮೇಲೆ ಹೆಚ್ಚು ಗಮನಹರಿಸಿದೆ.

ಬಿಎಸ್-6 ಜಾರಿಗೂ ಮುನ್ನ ಬಿಎಸ್-4 ಬೈಕ್‌ಗಳನ್ನು ಸಂಪೂರ್ಣವಾಗಿ ಮಾರಾಟಗೊಳಿಸಿದ ರಾಯಲ್ ಎನ್‌ಫೀಲ್ಡ್

ಇನ್ನು ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹೊಸ ಬೈಕ್‌ಗಳ ಉತ್ಪಾದನೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಶೀಘ್ರದಲ್ಲೇ ಮತ್ತೊಂದು ಹೊಸ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಬಿಎಸ್-6 ಜಾರಿಗೂ ಮುನ್ನ ಬಿಎಸ್-4 ಬೈಕ್‌ಗಳನ್ನು ಸಂಪೂರ್ಣವಾಗಿ ಮಾರಾಟಗೊಳಿಸಿದ ರಾಯಲ್ ಎನ್‌ಫೀಲ್ಡ್

ಬಿಎಸ್-6 ನಿಯಮದಂತೆ ಹೊಸ ಬೈಕ್‌ಗಳ ಉತ್ಪಾದನೆ ಮಹತ್ವದ ನಿರ್ಧಾರ ಪ್ರಕಟಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹಿಮಾಲಯನ್ ಬೈಕ್ ಹೊರತುಪಡಿಸಿ ಇನ್ನುಳಿದ 500ಸಿಸಿ ಸಾಮರ್ಥ್ಯ ಬೈಕ್ ಮಾರಾಟವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ಬಿಎಸ್-6 ಜಾರಿಗೂ ಮುನ್ನ ಬಿಎಸ್-4 ಬೈಕ್‌ಗಳನ್ನು ಸಂಪೂರ್ಣವಾಗಿ ಮಾರಾಟಗೊಳಿಸಿದ ರಾಯಲ್ ಎನ್‌ಫೀಲ್ಡ್

ಹಾಗೆಯೇ 350 ಸಿಸಿ ಕ್ಲಾಸಿಕ್ ಬೈಕ್ ಮಾದರಿಗಳ ಮೇಲೆ ಹೆಚ್ಚಿನ ಗಮನಹರಿಸಲಾಗುತ್ತಿದ್ದು, ಇದಕ್ಕಾಗಿ ಮತ್ತಷ್ಟು ಹೊಸ ಬೈಕ್ ಉತ್ಪನ್ನಗಳನ್ನು ಬಿಡುಗಡೆಗಾಗಿ ನಿರ್ಧರಿಸಿರುವ ಆರ್‌ಇ ಕಂಪನಿಯು ಹಂಟರ್ ಎನ್ನುವ ಹೊಸ ಬೈಕ್ ಮಾದರಿಯೊಂದರ ಬಿಡುಗಡೆಗಾಗಿ ಸಿದ್ದತೆ ನಡೆಸಿದೆ.

ಬಿಎಸ್-6 ಜಾರಿಗೂ ಮುನ್ನ ಬಿಎಸ್-4 ಬೈಕ್‌ಗಳನ್ನು ಸಂಪೂರ್ಣವಾಗಿ ಮಾರಾಟಗೊಳಿಸಿದ ರಾಯಲ್ ಎನ್‌ಫೀಲ್ಡ್

ಹಂಟರ್ ಬೈಕ್ ಮಾದರಿಯು ಆರ್‌ಇ ಉತ್ಪಾದನೆಯ ಉಳಿದೆಲ್ಲಾ ಕ್ಲಾಸಿಕ್ ಬೈಕ್ ಮಾದರಿಗಳಿಂತಲೂ ವಿಭಿನ್ನವಾದ ವಿನ್ಯಾಸ ಹೊಂದಿದ್ದು, ಸ್ಟ್ರೀಟ್ ಬೈಕ್ ಡಿಸೈನ್‌ನೊಂದಿಗೆ ಅಲಾಯ್ ವೀಲ್ಹ್ ಸೇರಿದಂತೆ ಹಲವು ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗುತ್ತಿದೆ.

ಬಿಎಸ್-6 ಜಾರಿಗೂ ಮುನ್ನ ಬಿಎಸ್-4 ಬೈಕ್‌ಗಳನ್ನು ಸಂಪೂರ್ಣವಾಗಿ ಮಾರಾಟಗೊಳಿಸಿದ ರಾಯಲ್ ಎನ್‌ಫೀಲ್ಡ್

ಹೊಸ ಬೈಕ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಕ್ಲಾಸಿಕ್ 350 ಮಾದರಿಯ ಎಂಜಿನ್ ಅನ್ನೇ ಪಡೆದುಕೊಂಡಿದ್ದು, ಹೊಸ ಬೈಕಿನಲ್ಲಿ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿದೆ.

Most Read Articles

Kannada
English summary
Royal Enfield BS4 models sold out. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X