ಬಹಿರಂಗವಾಯ್ತು ಬಿಎಸ್-6 ರಾಯಲ್ ಎನ್‍ಫೀಲ್ಡ್ ಬುಲೆಟ್ 350 ಬೈಕಿನ ದರ
ರಾಯಲ್ ಎನ್‍ಫೀಲ್ಡ್ ಕಂಪನಿಯು ತನ್ನ ಹೊಸ ಬುಲೆಟ್ 350 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ. ಇದೀಗ ರಾಯಲ್ ಎನ್‍ಫೀಲ್ಡ್ ಕಂಪನಿಯು ಬಿಎಸ್-6 ಬುಲೆಟ್ 350 ಬೈಕಿನ ಬೆಲೆಯು ಬಹಿರಂಗವಾಗಿದೆ.

ರಾಯಲ್ ಎನ್‍ಫೀಲ್ಡ್ ಕಂಪನಿಯು ಬಿಎಸ್-6 ಬುಲೆಟ್ 350 ಬೈಕಿನ ಬುಕ್ಕಿಂಗ್ ಅನ್ನು ಇತ್ತೀಚೆಗೆ ಆರಂಭಿಸಿದ್ದರು. ಬಿಎಸ್-6 ರಾಯಲ್ ಎನ್‍ಫೀಲ್ಡ್ ಬುಲೆಟ್ 350 ಬೈಕ್‍ಗಾಗಿ ರೂ.10,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದುದಾಗಿದೆ. ಹೊಸ ಬುಲೆಟ್ 350 ಬೈಕನ್ನು ಬಿಎಸ್-6 ಮಾಲಿನ್ಯ ನಿಯಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಅದನ್ನು ಹೊರತುಪಡಿಸಿ ಇತರೆ ಯಾವುದೇ ಪ್ರಮುಖ ಬದಲಾವಣೆಗನ್ನು ಮಾಡಲಾಗಿಲ್ಲ.

ಈ ಹೊಸ ಬೈಕಿನಲ್ಲಿ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ ಬೈಕಿನಲ್ಲಿರುವ ಮಾದರಿಯ ಎಂಜಿನ್ ಅನ್ನು ಅಳವಡಿಸಲಿದೆ. ಕ್ಲಾಸಿಕ್ 350 ಬೈಕಿನಲ್ಲಿರುವ 346 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‍ನಂತೆಯೇ ಎಲೆಕ್ಟ್ರಾನಿಕ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಈ ಹೊಸ ಬೈಕಿನಲ್ಲಿ ಅಳವಡಿಸಲಿದೆ.

ಅದರೆ ಬುಲೆಟ್ ಬೈಕಿನಲ್ಲಿರುವ ಎಂಜಿನ್ 19.3 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಕ್ಲಾಸಿಕ್ 350 ಬೈಕಿನ ಎಂಜಿನ್‍ಗೆ ಹೋಲಿಸಿದರೆ 0.71 ಬಿಹೆಚ್‍ಪಿ ಪವರ್ ಕಡೆಮೆ ಉತ್ಪಾದಿಸುತ್ತದೆ.

ಟಾರ್ಕ್ ಅಂಕಿ ಅಂಶದಲ್ಲಿ ಯಾವುದೇ ಬದಲಾವಣೆಗಳು ಇಲ್ಲ, ಅದೇ 28 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಬಿಎಸ್-6 ರಾಯಲ್ ಎನ್‍ಫೀಲ್ಡ್ ಬುಲೆಟ್ 350 ಬೈಕ್ ಅನ್ನು ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಳಿಸಲಿದೆ.

ಬಿಎಸ್-6 ರಾಯಲ್ ಎನ್‍ಫೀಲ್ಡ್ ಬುಲೆಟ್ 350 ಬೈಕಿನ ಎಕ್ಸ್ ಸ್ಟ್ಯಾಂಡರ್ಡ್ ಆವೃತ್ತಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.28 ಲಕ್ಷಗಳಾಗಿದೆ.

ಇನ್ನು ಬುಲೆಟ್ ಎಕ್ಸ್ ಕಿಕ್‍ಸ್ಟಾರ್ಟ್ ಮತ್ತು ಸೆಲ್ಫ್-ಸ್ಟಾರ್ಟ್ ರೂಪಾಂತರಗಳ ಬೆಲೆಯು ಕ್ರಮವಾಗಿ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.22 ಲಕ್ಷ ಮತ್ತು ರೂ.1.37 ಲಕ್ಷಗಳಾಗಿದೆ. ಬಿಎಸ್-4 ಬುಲೆಟ್ 350 ಮಾದರಿಗಳಿಗೆ ಹೋಲಿಸಿದರೆ ಸುಮಾರು ರೂ.6,000 ದಿಂದ ರೂ.7,000 ಗಳವರೆಗೆ ಬೆಲೆಯನ್ನು ಹೆಚ್ಚಿಸಲಾಗಿದೆ.

ಬಿಎಸ್-6 ರಾಯಲ್ ಎನ್‍ಫೀಲ್ಡ್ ಬೈಕ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಟ್ವಿನ್ ರೇರ್ ಶಾಕ್ ಅಬ್ಸಾರ್ಬರ್ ಅನ್ನು ಹೊಂದಿರಲಿದೆ. ಈ ಬೈಕಿನಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬಹುದು. ಸುರಕ್ಷತೆಗಾಗಿ 280 ಎಂಎಂ ಫ್ರಂಟ್ ಡಿಸ್ಕ್ ಮತ್ತು 153 ಎಂಎಂ ಡ್ರಮ್ ಬೈಕ್ ಅನ್ನು ಹೊಂದಿರಲಿದೆ. ಸಿಂಗಲ್ ಚಾನೆಲ್ ಎಬಿಎಸ್ ಸ್ಟ್ಯಾಡಂರ್ಡ್ ಆಗಿ ಅಳವಡಿಸುತ್ತದೆ.

ಕಳೆದ ತಿಂಗಳಲ್ಲಿ ರಾಯಲ್ ಎನ್‍ಫೀಲ್ಡ್ ಬೈಕ್‍ಗಳ ಮಾರಾಟದಲ್ಲಿ ಶೇ.2ರಷ್ಟು ಹೆಚ್ಚಾಗಿತ್ತು . ಹೆಚ್ಚಿನ ಗ್ರಾಹಕರನ್ನು ಗಮನಸೆಳೆಯಲು ತಮ್ಮ ಜನಪ್ರಿಯ ಮಾದರಿಗಳನ್ನು ಬಿಎಸ್-6 ಆವೃತ್ತಿಯಲ್ಲಿ ಬಿಡುಗಡೆಗೊಳಿಸುತ್ತಿದೆ.


Click it and Unblock the Notifications