ಕಾಂಬೋಡಿಯಾದಲ್ಲೂ ಮಾರಾಟ ಮಳಿಗೆ ತೆರೆದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಕಂಪನಿಯು ಆಗ್ನೇಯ ಏಷ್ಯಾದಲ್ಲಿರುವ ಕಾಂಬೋಡಿಯಾ ದೇಶದ ಮಾರುಕಟ್ಟೆಯನ್ನು ಪ್ರವೇಶಿಸುವ ಮೂಲಕ ತನ್ನ ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಿದೆ. ಚೆನ್ನೈ ಮೂಲದ ರಾಯಲ್ ಎನ್‌ಫೀಲ್ಡ್ ಕಂಪನಿಯು ಕಾಂಬೋಡಿಯಾದಲ್ಲಿ ಟಿಎಫ್ ಮೋಟಾರ್ಸ್ ಅನ್ನು ತನ್ನ ಅಧಿಕೃತ ವಿತರಕರಾಗಿ ನೇಮಕ ಮಾಡಿದೆ.

ಕಾಂಬೋಡಿಯಾದಲ್ಲೂ ಮಾರಾಟ ಮಳಿಗೆ ತೆರೆದ ರಾಯಲ್ ಎನ್‌ಫೀಲ್ಡ್

ಕಂಪನಿಯು ಈ ವರ್ಷದ ಜೂನ್‌ನಲ್ಲಿ ಕಾಂಬೋಡಿಯಾದ ರಾಜಧಾನಿಯಲ್ಲಿ ತನ್ನ ಮೊದಲ ಪ್ರಮುಖ ಶೋರೂಂ ಅನ್ನು ತೆರೆದಿತ್ತು. ಈ ಹೊಸ ರಾಯಲ್ ಎನ್‌ಫೀಲ್ಡ್ ಶೋರೂಂ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಬುಲೆಟ್ 500, ಕ್ಲಾಸಿಕ್ ಸರಣಿ, ಇಂಟರ್‌ಸೆಪ್ಟರ್ 650 ಹಾಗೂ ಕಾಂಟಿನೆಂಟಲ್ ಜಿಟಿ 650 ಬೈಕ್ ಗಳನ್ನು ಮಾರಾಟ ಮಾಡುತ್ತಿದೆ.

ಕಾಂಬೋಡಿಯಾದಲ್ಲೂ ಮಾರಾಟ ಮಳಿಗೆ ತೆರೆದ ರಾಯಲ್ ಎನ್‌ಫೀಲ್ಡ್

ಕಾಂಬೋಡಿಯಾದಲ್ಲಿ ಕಾಂಟಿನೆಂಟಲ್ ಜಿಟಿಯ ಬೈಕ್ ಗಳ ಬೆಲೆ 6,431 ಡಾಲರ್ ಗಳು ಅಂದರೆ ಸುಮಾರು ರೂ.4.82 ಲಕ್ಷಗಳಾದರೆ, ಬುಲೆಟ್ ಬೈಕಿನ ಬೆಲೆ 5,099 ಡಾಲರ್ ಅಂದರೆ ಸುಮಾರು ರೂ.3.82 ಲಕ್ಷಗಳಾಗಿದೆ. ಬೈಕ್ ಗಳ ಹೊರತಾಗಿ ರಾಯಲ್ ಎನ್‌ಫೀಲ್ಡ್ ಶೋರೂಂಗಳಲ್ಲಿ ಕಂಪನಿಯ ಪ್ರೊಟೆಕ್ಟಿವ್ ರೈಡಿಂಗ್ ಗೇರ್, ಆಕ್ಸೆಸರಿಸ್, ಉಡುಪು ಹಾಗೂ ಇನ್ನಿತರ ಸರಕುಗಳನ್ನು ಮಾರಾಟ ಮಾಡಲಾಗುತ್ತದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ಕಾಂಬೋಡಿಯಾದಲ್ಲೂ ಮಾರಾಟ ಮಳಿಗೆ ತೆರೆದ ರಾಯಲ್ ಎನ್‌ಫೀಲ್ಡ್

ಆಗ್ನೇಯ ಏಷ್ಯಾದ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯ ಬೇಡಿಕೆಯು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. 2019ರಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಹೊಸ ಅಸೆಂಬ್ಲಿ ಯುನಿಟ್ ಅನ್ನು ಥೈಲ್ಯಾಂಡ್‌ನ ಹೊರಗೆ ಅಂದರೆ ಭಾರತದಲ್ಲಿ ಆರಂಭಿಸಿತ್ತು.

ಕಾಂಬೋಡಿಯಾದಲ್ಲೂ ಮಾರಾಟ ಮಳಿಗೆ ತೆರೆದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಕಂಪನಿಯು ವಿಯೆಟ್ನಾಂ, ಮಲೇಷ್ಯಾ, ಫಿಲಿಪೈನ್ಸ್, ಇಂಡೋನೇಷ್ಯಾ ಹಾಗೂ ದಕ್ಷಿಣ ಕೊರಿಯಾ ಮಾರುಕಟ್ಟೆಗಳಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದೆ. ಕಾಂಬೋಡಿಯಾ ಮಾರುಕಟ್ಟೆಯು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಚೀನಾದ ಕಂಪನಿಗಳು ಪ್ರಾಬಲ್ಯವನ್ನು ಹೊಂದಿವೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕಾಂಬೋಡಿಯಾದಲ್ಲೂ ಮಾರಾಟ ಮಳಿಗೆ ತೆರೆದ ರಾಯಲ್ ಎನ್‌ಫೀಲ್ಡ್

ಕಾಂಬೋಡಿಯಾದಲ್ಲಿ ಪ್ರೀಮಿಯಂ ಬೈಕ್ ಗಳು ಇನ್ನೂ ಅಂಬೆಗಾಲಿಡುತ್ತಿವೆ. ಕವಾಸಕಿ ಹಾಗೂ ಡುಕಾಟಿಯಂತಹ ಕಂಪನಿಗಳು ಈ ಮಾರುಕಟ್ಟೆಯಲ್ಲಿ ಸೀಮಿತ ಪ್ರಮಾಣದ ಯಶಸ್ಸನ್ನು ಕಂಡಿವೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಮಧ್ಯಮ ಮಾರುಕಟ್ಟೆ ಸೆಗ್ ಮೆಂಟಿನಲ್ಲಿ ಬೈಕುಗಳನ್ನು ಬಿಡುಗಡೆಗೊಳಿಸುವ ಮೂಲಕ ಯಶಸ್ಸನ್ನು ಪಡೆಯಲು ಮುಂದಾಗಿದೆ.

ಕಾಂಬೋಡಿಯಾದಲ್ಲೂ ಮಾರಾಟ ಮಳಿಗೆ ತೆರೆದ ರಾಯಲ್ ಎನ್‌ಫೀಲ್ಡ್

ಕಾಂಬೋಡಿಯಾದಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಮಾತ್ರವಲ್ಲದೇ ಭಾರತದ ದ್ವಿಚಕ್ರ ವಾಹನ ತಯಾರಕ ಕಂಪನಿಗಳಾದ ಟಿವಿಎಸ್ ಹಾಗೂ ಬಜಾಜ್ ಆಟೋ ಸಹ ಅಸ್ತಿತ್ವದಲ್ಲಿವೆ.

Most Read Articles

Kannada
English summary
Royal Enfield company started its operations in Cambodia. Read in Kannada.
Story first published: Thursday, July 9, 2020, 14:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X